ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಲ್ಲೇಶ್ವರಂ ಸ್ಪೋರ್ಟ್ಸ್ ಫೌಂಡೇಷನ್ ಸಹಯೋಗದಲ್ಲಿ ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್ ರವರು ನಡೆಸುತ್ತಿರುವ ರಾಷ್ಟ್ರೀಯ ಮಟ್ಟದ 60ನೇ ಸೀನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಡಾ.ರಾಜ್ ಕುಮಾರ್ ಕಪ್ ಪಂದ್ಯಾವಳಿಗೆ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರು ತಮ್ಮ ಮಲ್ಲೇಶ್ಬರಂ ಸ್ಪೋರ್ಟ್ಸ್ ಫೌಂಡೇಷನ್ ಮೂಲಕ ಕೈ ಜೋಡಿಸಿದ್ದಾರೆ.. ಇವರಿಗೆ ಸಾಥ್ ನೀಡಿದ್ದಾರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ರವರು..

ಮಲ್ಲೇಶ್ವರಂನ ಶಾಸಕರಾದ ಡಾ.ಸಿ ಎನ್ ಅಶ್ವತ್ಥ್ ನಾರಯಾಣ್ ರವರು ಪ್ರತಿಭೆಗಳನ್ನು ಪ್ರೋತ್ಸಾಹಿಸುವುದರಲ್ಲಿ ಸದಾ ಮುಂದು.. ಈಗಾಗಲೇ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ, ಮಾಡುತ್ತಿರುವ ಇವರು ಇತ್ತೀಚೆಗೆ ರಾಜು ಕನ್ನಡ ಮೀಡಿಯಂ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿದ್ದನ್ನು ಕೂಡ ನಾವಿಲ್ಲಿ ನೆನೆಯಬಹುದು.. ಅದೇ ರೀತಿಯಾಗಿ ಈಗ ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೆ ಕೈ ಜೋಡಿಸುವುದರ ಮೂಲಕ ಅನೇಕ ಕ್ರೀಡಾಪಟುಗಳ ಪ್ರತಿಭೆ ಹೊರಬರಲು ಕಾರಣರಾಗಿದ್ದಾರೆ..

ಅಂತರಾಷ್ಟ್ರೀಯ ಮಟ್ಟದ ಬಾಕ್ಸರ್ ಗಳು ಬಾಗಿಯಾಗುವ ಈ ಚಾಂಪಿಯನ್ ಶಿಪ್ ಬಹಳ ವಿಶೇಷವೆನ್ನಬಹುದು.. ಹೌದು ಬೆಂಗಳೂರಿನಲ್ಲಿ ನಡೆಯುತ್ತಿರುವ 60ನೇ ಸೀನಿಯರ್ ನ್ಯಾಷನಲ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ವೈಯಾಲಿ ಕಾವಲ್ ಕೋದಂಡ ರಾಮಪುರ ಕಬಡ್ಡಿ ಮೈದಾನದಲ್ಲಿ ಜನವರಿ 24 ರಿಂದ 28 ನೇ ತಾರೀಖಿನ ವರೆಗೆ ಜರುಗುತ್ತಿದೆ.. ಒಟ್ಟು 10 ಕ್ಯಾಟಗರಿಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯ ಫೈನಲ್ ಮ್ಯಾಚ್ ಇದೇ 28 ರಂದು ನಡೆಯಲಿದೆ ಎಂದು ಬಾಕ್ಸಿಂಗ್ ಮಂಡಳಿ ತಿಳಿಸಿದೆ..

ದೇಶದಾದ್ಯಂತ ಒಟ್ಟು 30 ರಾಜ್ಯಗಳಿಂದಲೂ ತಂಡಗಳು ಆಗಮಿಸಿರುವುದರ ಜೊತೆಗೆ ನಮ್ಮ ಆರ್ಮಿಯ ಎರಡು ತಂಡಗಳು ಕೂಡ ಇದರಲ್ಲಿ ಭಾಗವಹಿಸಿವೆ..
ಈ ದೊಡ್ಡ ಮಟ್ಟದ ಚಾಂಪಿಯನ್ ಶಿಪ್ ಗೆ ನಮ್ಮ ಕನ್ನಡದ ಕಣ್ಮಣಿ ಡಾ.ರಾಜ್ ಕುಮಾರ್ ರವರ ಹೆಸರಿಟ್ಟಿರುವುದು ವಿಶೇಷವಾಗಿದೆ..

ಡಾ ರಾಜ್ ಕುಮಾರ್ ಕಪ್ ಪಂದ್ಯಾವಳಿಯ ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಮಲ್ಲೇಶ್ವರಂ ಶಾಸಕರಾದ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರು ಹಾಗೂ ನವರಸ ನಾಯಕ ಜಗ್ಗೇಶ್ ಅವರು ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದ್ದಾರೆ….

ತೊಂದರೆಯಲ್ಲಿರುವವರಿಗೆ ಸಹಾಯಹಸ್ತ ಚಾಚುತ್ತಾ ಸದಾ ಒಂದಿಲ್ಲೊಂದು ಪ್ರತಿಭೆಗಳನ್ನು ಹೊರ ತರುತ್ತಿರುವ ಡಾ.ಸಿ ಎನ್ ಅಶ್ವತ್ಥ್ ನಾರಾಯಣ್ ರವರಿಗೆ ಕನ್ನಡಿಗರ ಕಡೆಯಿಂದ ಧನ್ಯವಾದಗಳು..



ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮಾರಾಟ ಪ್ರಕ್ರಿಯೆ 2020ರ ಮಾರ್ಚ್ ತಿಂಗಳ ಒಳಗೆ ಪೂರ್ಣಗೊಳಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾಗಿ ಟೈಮ್ಸ್ ಅಫ್ ಇಂಡಿಯಾ ವರದಿ ಮಾಡಿದೆ. ನಿರ್ಮಲಾ ಸೀತಾರಾಮನ್ ಮಾತನಾಡಿ, ಸರ್ಕಾರದಿಂದ ನಡೆದ ಅಂತರರಾಷ್ಟ್ರೀಯ ರೋಡ್ ಷೋಗಳಲ್ಲಿ ಏರ್ ಇಂಡಿಯಾ ಖರೀದಿಗೆ ಹೂಡಿಕೆದಾರರು ‘ಸಾಕಷ್ಟು ಆಸಕ್ತಿ’ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಹಿಂದೆ ಏರ್ ಇಂಡಿಯಾ ಮಾರಾಟಕ್ಕೆ ಮುಂದಾದಾಗ ಹೂಡಿಕೆದಾರರಿಂದ ಸಕಾರಾತ್ಮಕವಾದ ಸ್ಪಂದನೆ ಬಂದಿರಲಿಲ್ಲ….
ಮಧ್ಯ ಪ್ರದೇಶದ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಕೆಗೆ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವುದು ಪತ್ತೆಯಾದ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದೆ. ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಮಕ್ಕಳು ಚರಂಡಿ ನೀರಿನಲ್ಲಿ ತಮ್ಮ ತಟ್ಟೆಗಳನ್ನು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ತಲೆ ತಗ್ಗಿಸುವಂತಹ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಮಾಕ್ರೋನಿಯಾ ಪ್ರದೇಶದಲ್ಲಿ ನಡೆದಿದೆ. ಮಕ್ಕಳಿಗೆ ಬಿಸಿಯೂಟವನ್ನು ಪೂರೈಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳೇ ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಎಲ್ಲಾ ನೈರ್ಮಲ್ಯ ಕ್ರಮಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು….
ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್‌ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು…
ಸಾಮಾಜಿಕ ಜಾಲತಾಣಗಳಲ್ಲಿ ಕಾಮುಕರು ಅಸಭ್ಯವಾಗಿ ಮೆಸೇಜ್ ಮಾಡಿ ಲೈಂಗಿಕವಾಗಿ ಕಿರುಕುಳ ನೀಡುತ್ತಿರುತ್ತಾರೆ. ಇಲ್ಲೊಬ್ಬ ಕಾಮುಕ ಒಂದು ರಾತ್ರಿಗೆ 2 ಲಕ್ಷ ಹಣ ಕೊಡುವೆ ಎಂದು ನಟಿಗೆ ಕಿರುಕುಳ ನೀಡಿದ್ದಾನೆ. ಮಲಯಾಳಂ ನಟಿ ಗಾಯತ್ರಿ ಅರುಣ್ ಅವರಿಗೆ ರೋಹನ್ ಕುರಿಯಾಕೋಸ್ ಎಂಬಾತ ಫೇಸ್‍ಬುಕ್ ನಲ್ಲಿ ಅಸಭ್ಯವಾಗಿ ಮೆಸೇಜ್ ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ. ಆದರೆ ನಟಿ ಕಾಮುಕನಿಗೆ ತಿರುಗೇಟು ಕೊಡುವ ಮೂಲಕ ಆತನ ಚಳಿ ಬಿಡಿಸಿದ್ದಾರೆ. ರೋಹನ್ ಕುರಿಯಾಕೋಸ್, “ಎರಡು ಲಕ್ಷ ರೂ. ಕೊಡುವೆ. ನನ್ನ ಜೊತೆ ಒಂದು…
ಪೊಲೀಸ್ ಮಹಿಳಾ ಸಿಬ್ಬಂದಿಯ ಮಾನಸಿಕ ಒತ್ತಡ ಕಡಿಮೆ ಮಾಡಲು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗರ್ಭಿಣಿಯರಿಗೆ ಪೊಲೀಸ್ ಠಾಣೆಯಲ್ಲಿ ಸೀಮಂತ ಮಾಡಿದ್ದಾರೆ. ಪೊಲೀಸರು ಗರ್ಭಿಣಿ ಸಿಬ್ಬಂದಿಗೆ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡುವ ಪ್ರಯತ್ನ ಮಾಡಿದ್ದು, ಠಾಣೆಯ ಎಲ್ಲಾ ಸಿಬ್ಬಂದಿ ಸೇರಿ ಶಾಸ್ತ್ರೋಕ್ತವಾಗಿ ಸೀಮಂತ ನೆರವೇರಿಸಿದ್ದಾರೆ. ಠಾಣೆಯ ಮಹಿಳಾ ಪೊಲೀಸ್ ಪೇದೆಯಾಗಿದ್ದ ಲಕ್ಷ್ಮೀ ಹಾಗೂ ಮತ್ತೊಬ್ಬ ಮಹಿಳಾ ಪೇದೆ ವೀರಮ್ಮ ಅವರಿಗೆ ಸೀಮಂತ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಕೆಲಸದ ಒತ್ತಡ, ಮಾನಸಿಕ…
ಜನರ ನಗದು ಚಲಾವಣೆಯನ್ನು ಸುಲಭವಾಗಿಸಲು 200 ರೂಪಾಯಿಯ ನೋಟುಗಳು ಸದ್ಯದಲ್ಲೇ ಚಲಾವಣೆಗೆ ಬರಲಿವೆ. 200 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.