ಸಿನಿಮಾ

ರಾಜಮೌಳಿ ಮುಂದಿನ ಚಿತ್ರದಲ್ಲಿ ಕನ್ನಡದ ನಾಯಕ ನಟ! ಯಾರು ಗೊತ್ತೇ???

566

ಸಾವಿರಾರು ಕೋಟಿ ಹಣ ಗಳಿಕೆಯ ಜೊತೆ ವಿಶ್ವದಾದ್ಯಂತ ಅದ್ಭುತ ಯಶಸ್ಸು ಗಳಿಸಿದ ಬಾಹುಬಲಿ-2 ಚಿತ್ರದ ನಿರ್ದೆಶಕ ಎಸ್.ಎಸ್.ರಾಜಮೌಳಿ ತಮ್ಮ ಮುಂದಿನ ಚಿತ್ರಕ್ಕೆ ಸ್ಯಾಂಡಲ್’ವುಡ್ ಪವರ್ ಸ್ಟಾರ್ ಪುನೀತ್ ರಾಜ್’ಕುಮಾರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ.

ಈ ಗಾಳಿ ಸುದ್ದಿ ಹರಿದಾಡುತ್ತಿರುವುದು ನಮ್ಮ ಗಾಂಧಿನಗರದಲ್ಲಲ್ಲ. ಬದಲಾಗಿ ಹೈದರಾಬಾದ್’ನಲ್ಲಿ. ಅಲ್ಲಿನ ಮಾಧ್ಯಮಗಳಲ್ಲಿ ಇಂತಹ ವರದಿಗಳು ಪಸರಿಸುತ್ತಿವೆ. ಇಲ್ಲಿಯವರೆಗೂ ರಾಜಮೌಳಿ ತಮ್ಮ ಚಿತ್ರಗಳಲ್ಲಿ ಸೂಪರ್ ಸ್ಟಾರ್’ಗಳನ್ನು ಹಾಕಿಕೊಂಡು ನಿರ್ದೇಶಿಸಿರುವುದು ಕಡಿಮೆ. ಅದಕ್ಕೆ ಮರ್ಯಾದೆ ರಾಮಣ್ಣ, ಈಗ, ಬಾಹುಬಲಿ ಚಿತ್ರಗಳೆ ಸಾಕ್ಷಿ.

ರಾಜಮೌಳಿಯವರು ತಮ್ಮ ಮುಂದಿನ ಚಿತ್ರಕ್ಕೆ ಕನ್ನಡದ ಪುನೀತ್ ರಾಜ್’ಕುಮಾರ್ ಅವರನ್ನು ಹಾಕಿಕೊಂಡು ನಿರ್ದೇಶಿಸುತ್ತಾರೆ. ಈ ಚಿತ್ರದ ಬಜೆಟ್ 1 ಸಾವಿರ ಕೋಟಿ ರೂ ಒಳಗೊಂಡಿದೆ ಎಂಬುದು ಗಾಳಿಸುದ್ದಿಯ ಮಾತುಗಳು. ಆದರೆ ಯಾರೊಬ್ಬರಾಗಲಿ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದ ಕಾರಣ ಇದು ಹೆಚ್ಚಿನ ಮಹತ್ವ ಪಡೆದುಕೊಂಡಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ