ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತವು ಹಲುವು ಧರ್ಮ, ಜಾತಿಗಲಿರುವ ಒಂದು ರಾಷ್ಟ್ರ. ಇಲ್ಲಿ ಹಲವು ಹಬ್ಬಗಳನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಅದೇ ರೀತಿ ರಕ್ಷಾಬಂಧನ ಹಬ್ಬವನ್ನು ಭಾರತೀಯರು ಶ್ರಾವಣ ಮಾಸದಲ್ಲಿ ಆಚರಿಸುತ್ತಾರೆ. ಈ ಹಬ್ಬ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹತ್ವವನ್ನು ಹೊಂದಿದೆ. ರಕ್ಷಾಬಂಧನ ಸಹೋದರ-ಸಹೋದರಿಯರ ವಿಶ್ವಾಸದ ಹಬ್ಬವಾಗಿದೆ. ಹಿರಿಯರು ತಮ್ಮ ಸಹೋದರನ ಮುಂಗೈಗೆ ರಾಖಿಯನ್ನು ಕಟ್ಟಿ ಆರತಿ ಮಾಡಿ, ಸೋದರನ ಆಶೀರ್ವಾದವನ್ನು ಬೇಡುತ್ತಾರೆ. ತಂಗಿಯ ರಕ್ಷಣೆ ಅಣ್ಣನಿಂದ, ಅಣ್ಣನ ರಕ್ಷಣೆ ತಂಗಿಯಿಂದ ಎಂಬ ಪರಸ್ಪರ ಭ್ರಾತೃತ್ವದ ಭಾವನೆಯನ್ನು ದಟ್ಟ ಗೊಳಿಸುವ ಹಬ್ಬ ಇದಾಗಿದೆ.
ಸಂಬಂಧಗಳನ್ನು ಬೆಸೆಯುವ ರಕ್ಷಾಬಂಧನ ದಿನದಂದು ಸಹೋದರರು ಕೇವಲ ರಾಖಿಯನ್ನು ಕಟ್ಟಿಸಿಕೊಂಡು ಉಡುಗೊರೆ ಕೊಟ್ಟ ಮಾತ್ರಕ್ಕೆ ಅವರ ಕರ್ತವ್ಯ ಮುಗಿಯುವುದಿಲ್ಲ. ರಕ್ಷಾಬಂಧನ ಅರ್ಥ ಬಾಂಧವ್ಯ ಹಾಗೂ ರಕ್ಷೆ ಎಂದು. ರಾಖಿ ಕಟ್ಟಿಕೊಂಡ ಸಹೋದರು ಸದಾಕಾಲ ಸಹೋದರಿಯ ಬೆನ್ನ ಹಿಂದೆ ನಿಂತು ಆಕೆಯ ರಕ್ಷಣೆ ಮಾಡುವುದು ಆತನ ಕರ್ತವ್ಯವಾಗಿರುತ್ತದೆ. ರಕ್ಷಾ ಬಂಧನದ ಅರ್ಥವನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ತಮ್ಮ ಕರ್ತವ್ಯವನ್ನು ಪಾಲಿಸಿದರೆ ರಕ್ಷಾ ಬಂಧನದ ದಿನದ ಆಚರಣೆಗೆ ನಿಜಕ್ಕೂ ಅರ್ಥ ಸಿಕ್ಕಂತಾಗುತ್ತದೆ.
ರಕ್ಷಾಬಂಧನ ಹಬ್ಬದ ಮಹತ್ವ:-
ರಕ್ಷಾ ಬಂಧನಕ್ಕೂ ಇದೆ ಪೌರಾಣಿಕ ಹಿನ್ನಲೆ…
ಎಲ್ಲ ಹಬ್ಬಗಳಂತೆ ರಕ್ಷಾಬಂಧನ ಹಬ್ಬದ ಹಿಂದೆಯೂ ಇದೆ ಒಂದು ಪೌರಾಣಿಕ ಕತೆ. ರಕ್ಷಾಬಂಧನ ಆರಂಭವಾದ ಬಗ್ಗೆ ಹಲವು ಕಥೆಗಳೂ ಇವೆ. ಅದರಲ್ಲಿ ಪ್ರಮುಖವಾದದ್ದು ಕೃಷ್ಣ ಹಾಗೂ ದ್ರೌಪದಿಯ ಕಥೆ. ಶಿಶುಪಾಲನನ್ನು ವಧಿಸುವ ಸಂದರ್ಭದಲ್ಲಿ ಕೃಷ್ಣನು ತನ್ನ ಬೆರಳನ್ನು ಕುಯಿದುಕೊಂಡನು. ಆ ಸಂದರ್ಭದಲ್ಲಿ ದ್ರೌಪದಿ ತನ್ನ ವಸ್ತ್ರದ ತುಂಡನ್ನೇ ಹರಿದು ಅವನ ಬೆರಳಿಗೆ ಕಟ್ಟಿದಳು.
ಇದರಿಂದ ಭಾವಪರವಶನಾದ ಕೃಷ್ಣ ದ್ರೌಪದಿಯ ವಸ್ತ್ರದ ಒಂದೊಂದು ನೂಲಿನ ಋಣವನ್ನು ತೀರಿಸುತ್ತೇನೆ ಎಂದು ಮಾತುಕೊಟ್ಟ. ಅದರಂತೆಯೇ ಸದಾ ದ್ರೌಪದಿಯ ರಕ್ಷಣೆ ಮಾಡಿದ. ಕೃಷ್ಣ ಹಾಗೂ ದ್ರೌಪದಿಯ ಸಂಬಂಧವನ್ನು ಒಂದು ಆದರ್ಶ ಅಣ್ಣ ತಂಗಿಯರ ಸಂಬಂಧಕ್ಕೆ ಹೋಲಿಸುತ್ತಾರೆ. ಇನ್ನೊಂದು ಕಡೆ ಹಿಂದೆ ದೇವ ದಾನವರ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದಾನವ ಚಕ್ರವರ್ತಿ ಬಲಿಯ ಮುಂದೆ ದೇವೇಂದ್ರನ ಶಕ್ತಿ ಸಾಲದಾಗಿತ್ತು. ಅಂತಹ ಸಂದರ್ಭದಲ್ಲಿ ದೇವೇಂದ್ರನ ಪತ್ನಿ ಸಚಿ ಸಹಾಯಕ್ಕಾಗಿ ಮಹಾವಿಷ್ಣುವಿನ ಮೊರೆ ಹೋದಳು.
ಆಗ ವಿಷ್ಣು ಆಕೆಯ ಕೈಯಲ್ಲಿ ಒಂದು ಪವಿತ್ರವಾದ ದಾರವನ್ನು ಕೊಟ್ಟು ಅದನ್ನು ಇಂದ್ರನ ಕೈಗೆ ಕಟ್ಟಲು ಹೇಳಿದನು. ಸಚಿ ಅದನ್ನು ದೇವೇಂದ್ರನ ಕೈಗೆ ಕಟ್ಟಿ ಆತನ ವಿಜಯಕ್ಕಾಗಿ ಭಕ್ತಿಯಿಂದ ಪ್ರಾರ್ಥಿಸಿದಳು. ಕೊನೆಗೆ ದೇವೇಂದ್ರ ಪ್ರಬಲ ಎದುರಾಳಿ ಬಲಿಯನ್ನೇ ಮಣಿಸಿದ. ಹೀಗಾಗಿ ರಾಖಿಯನ್ನು ಕೇವಲ ಅಣ್ಣತಂಗಿಯರ ಮಧ್ಯೆ ಮಾತ್ರವಲ್ಲ ಯಾರದೇ ವಿಜಯಕ್ಕಾಗಿ ಅಥವಾ ಅವರ ರಕ್ಷಣೆಗಾಗಿ ಪ್ರಾರ್ಥಿಸಬೇಕಾದಾಗ ಕಟ್ಟುವ ರೂಢಿಯೂ ಇದೆ. ಹಾಗಾಗಿ ಅದನ್ನು ‘ರಕ್ಷೆ’ ಎನ್ನುತ್ತಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೆಂಗಳೂರು, ಜೂನ್ 7: ಬೆಂಗಳೂರಿನಲ್ಲಿ ಗುರುವಾರ ರಾತ್ರಿ ಸುರಿದ ಅರ್ಧಗಂಟೆ ಮಳೆಗೆ ವಿವಿಧೆಡೆ ಒಟ್ಟು 83 ಮರಗಳು ಧರೆಗುರುಳಿವೆ. ರಾಜರಾಜೇಶ್ವರಿನಗರ ಹಾಗೂ ಬಸವನಗುಡಿಯಲ್ಲಿ ಅತಿ ಹೆಚ್ಚು ಮರಗಳು ಬಿದ್ದಿದೆ ಅತಿ ಹೆಚ್ಚು ಹಾನಿಯೂ ಉಂಟಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎಲ್ಲಿ ನೋಡಿದರೂ ಮರ ಉರುಳಿರುವುದು, ಟ್ರಾನ್ಸ್ಫಾರ್ಮರ್ ವಾಹನಗಳ ಮೇಲೆ ಬಿದ್ದಿರುವುದು, ವಿದ್ಯುತ್ ಕಂಬಗಳು ಧರೆಗುರಳಿರುವುದು, ಟ್ರಾಫಿಕ್ ಜಾಮ್ ನೋಡಿ ಅರ್ಧ ಗಂಟೆ ಮಳೆ ಎಷ್ಟೊಂದು ಅವಾಂತರವನ್ನು ಸೃಷ್ಟಿಸಿದೆ. ಬಸವನಗಗುಡಿ, ಕೆಂಗೇರಿ, ರಾಜರಾಜೇಶ್ವರಿನಗರ, ಗಿರಿನಗರ ಪ್ರದೇಶದಲ್ಲಿ ಅತಿ ಹೆಚ್ಚು…
ಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ತಮ್ಮ ಬಹುದಿನದ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದೇ ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಅವರು ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಜೊತೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ಅವರು ಅಕ್ಕಪಕ್ಕದ ಮನೆಯವರಾಗಿದ್ದಾರೆ. ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಧ್ರುವ ಹುಟ್ಟುಹಬ್ಬದ…
ಕಣ್ಣೀರು ಹೆಣ್ಮಕ್ಕಳ ಅಸ್ತ್ರ ಅಂತಾರಲ್ಲಾ! ವಿಷ್ಯ ಏನಪ್ಪಾ ಅಂದ್ರೆ ಹೆಂಗಸ್ರು ಒಂದ್ ವರ್ಷಕ್ಕೆ ಸರಾಸರಿ 30 ರಿಂದ 64 ಸಲ ಕಣ್ಣೀರಿಡ್ತಾರಂತೆ. ಆದ್ರೆ ಗಂಡಸ್ರು 6 ರಿಂದ 17 ಸಲ ಅತ್ರೆ ಹೆಚ್ಚೆಚ್ಚು.
ಕಣ್ಣಿನ ಅಂದವನ್ನು ಕಾಡಿಗೆ ಹೆಚ್ಚಿಸುತ್ತದೆ. ಮಹಿಳೆಯರು ಕಾಡಿಗೆ ಹಚ್ಚಿಕೊಳ್ಳೋದು ಸಾಮಾನ್ಯ ಸಂಗತಿ. ಆದ್ರೆ ಕೆಲವರು ಮಕ್ಕಳ ಕಣ್ಣಿಗೂ ಕಾಡಿಗೆ ಹಚ್ಚುತ್ತಾರೆ. ದೃಷ್ಟಿ ತಾಗಬಾರದು ಎನ್ನುವ ಕಾರಣಕ್ಕೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚಲಾಗುತ್ತದೆ. ಆದ್ರೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚೋದು ಸುಲಭದ ಕೆಲಸವಲ್ಲ. ಕೆಲವೊಮ್ಮೆ ಮಕ್ಕಳ ಕಣ್ಣಿಗೆ ಕೈ ತಾಗುವುದುಂಟು. ಹಾಗೆ ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುವುದು ಸುರಕ್ಷಿತವಲ್ಲ. ಮಕ್ಕಳ ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಂತೆ ಕಣ್ಣಿನಿಂದ ನೀರು ಬರಲು ಶುರುವಾಗುತ್ತದೆ. ಇದು ಸೋಂಕಿನ ಅಪಾಯಕ್ಕೆ ಕಾರಣವಾಗುತ್ತದೆ. ಪ್ರತಿ ದಿನ…
ಮೊಟ್ಟೆ ಮೊದಲೋ ಕೋಳಿ ಮೊದಲೋ ಅಥವ ಮೊಟ್ಟೆ ಶಾಖಾಹಾರವೊ ಮಾಂಸಾಹಾರವೊ’ ಎನ್ನುವ ಚರ್ಚೆ ಬಹಳ ಹಿಂದಿನಿಂದಲೂ ಇದೆ. ಈ ಚರ್ಚೆಯ ಆಚೆಗೆ ಮೊಟ್ಟೆಯಲ್ಲಿರುವ ಪೌಷ್ಟಿಕಾಂಶಗಳು ಮನುಷ್ಯನಿಗೆ ಎಷ್ಟು ಉಪಯೋಗ ಅಥವ ಎಷ್ಟು ಹಾನಿಕರ ಎಂಬುದರ ಬಗ್ಗೆ ಒಂದು ನೋಟ.
ಈಗ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.. ಅದೇ ರೀತಿಯಾಗಿ ಪ್ಯಾನ್ ಕಾರ್ಡ್ ಕೂಡ ಕೆಲವೊಂದು ಕೆಲಸಗಳಿಗೆ ಕಡ್ಡಾಯ.. ಆ ಕೆಲಸಗಳು ಯಾವುದು?? ಇಲ್ಲಿದೆ ನೋಡಿ..