ಉಪಯುಕ್ತ ಮಾಹಿತಿ

ಯುವತಿಯೊಬ್ಬಳು ಫೇಸ್‍ಬುಕ್ ನಲ್ಲಿ ಚಾಟ್ ಮಾಡಿ ವಾಟ್ಸಪ್ ನಲ್ಲಿ ಸ್ಪೆಷಲ್ ದೋಖಾ ಕೊಟ್ಟಳು..!ತಿಳಿಯಲು ಈ ಲೇಖನ ಓದಿ..

187

ಆನ್‍ಲೈನ್ ನಲ್ಲಿ ಹುಡುಗಿ ಸಿಗುತ್ತಾಳೆ ಎಂದು ಹುಡುಗರು ಚಾಟ್ ಮಾಡುತ್ತಾ ಸ್ವಲ್ಪ ಯಾಮಾರಿದ್ರೂ ಲಕ್ಷ ಲಕ್ಷ ಹಣ ದೋಚುವವರು ಇದ್ದಾರೆ. ಇಂತಹ ಆನ್‍ಲೈನ್ ದೋಖಾ ಪ್ರಕರಣಗಳ ಉದಾಹರಣೆಗಳು ಸಾಕಷ್ಟಿದ್ದರೂ ಮತ್ತೆ ಕೆಲವರು ಆನ್‍ಲೈನ್ ನಲ್ಲಿ ಪರಿಚಯವಾದವರಿಂದ ಪದೇ ಪದೇ ಮೋಸ ಹೋಗುತ್ತಿರುತ್ತಾರೆ.

ಇಂತಹ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಬೆಂಗಳೂರಿನ ನಿವಾಸಿ ಆನಂದ್ ರಾವ್ ಆನ್‍ಲೈನ್ ನಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬರಿಂದ ಮೋಸ ಹೋಗಿದ್ದಾರೆ. ಫೇಸ್‍ಬುಕ್ ನಲ್ಲಿ ಪರಿಚಯವಾಗಿದ್ದ ಯುವತಿ ಚಾಟ್ ಮಾಡುತ್ತಾ ಆನಂದ್ ರಾವ್ ಸ್ನೇಹ ಸಂಪಾದಿಸಿದ್ದಾಳೆ. ಹೀಗೆ ಸ್ನೇಹ ವಾಟ್ಸಪ್ ನಲ್ಲಿಯೂ ಮುಂದುವರೆದು, ಹಲವು ದಿನಗಳವರೆಗೂ ಇಬ್ಬರೂ ಚಾಟ್ ಮಾಡಿಕೊಂಡಿದ್ದಾರೆ.

ಯುವತಿ ಇಂಗ್ಲೆಂಡ್ ನಿಂದ ಬೆಂಗಳೂರು ಬರುತ್ತಿದ್ದೇನೆ ಅಂತಾ ಆನಂದ್ ರಾವ್ ಗೆ ಮೆಸೇಜ್ ಹಾಕಿದ್ದಾಳೆ. ಸ್ವಲ್ಪ ಸಮಯದ ಬಳಿಕ ಯುವತಿ ತಾನು ದೆಹಲಿಗೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನನ್ನನ್ನು ಹಿಡಿದಿದ್ದಾರೆ ಅಂತಾ ಮೆಸೇಜ್ ಕಳುಹಿಸಿದ್ದಾಳೆ. ಕಸ್ಟಮ್ಸ್ ಅಧಿಕಾರಿಗಳು ಒಂದೂವರೆ ಲಕ್ಷ ರೂ. ಹಣ ನೀಡಿದ್ರೆ ನನ್ನನ್ನು ಬಿಡ್ತಾರೆ ಅಂತಾ ಸುಳ್ಳು ಹೇಳಿದ್ದಾಳೆ.

ಇತ್ತ ಗೆಳತಿ ತೊಂದರೆಯಲ್ಲಿ ಸಿಲುಕಿದ್ದಾಳೆ ಎಂದು ಆನಂದ್‍ರಾವ್ ಯುವತಿಯ ಖಾತೆಗೆ ಒಂದು ಲಕ್ಷದ ಐದು ಸಾವಿರ ರೂ. ಹಣ ಜಮಾ ಮಾಡಿದ್ದಾರೆ. ಹಣ ಖಾತೆಗೆ ಬಂದ ಕೂಡಲೇ ಯುವತಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದಾಳೆ.

ತಾನು ಮೋಸ ಹೋಗಿದ್ದೇನೆ ಎಂದು ಅರಿತ ಕೂಡಲೇ ಆನಂದ್‍ರಾವ್ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವತಿಯ ವಿರುದ್ಧ ದೂರು ದಾಖಲಿಸಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ