Animals

ಯಾವುದೀ ಮುಧೋಳ ನಾಯಿ? ಏನೀದರ ಸ್ಪೆಷಾಲಿಟಿ? ಇಲ್ಲಿದೆ ನೋಡಿ ಮಾಹಿತಿ

502

ಮುಧೋಳ ಹೌಂಡ್ / ಮುಧೋಲ್ ಹೌಂಡ್, ಇದನ್ನು ಮರಾಠಾ ಹೌಂಡ್, ಪಾಶ್ಮಿ ಹೌಂಡ್ ಮತ್ತು ಕ್ಯಾಥೆವಾರ್ ಡಾಗ್ ಎಂದೂ ಕರೆಯುತ್ತಾರೆ, ಇದು ಭಾರತದಿಂದ ದೃಷ್ಟಿಗೋಚರ ತಳಿಯಾಗಿದೆ.

ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಷನಲ್ ಕೆನಲ್ ಕ್ಲಬ್ (ಐಎನ್‌ಕೆಸಿ) ಈ ತಳಿಯನ್ನು ವಿವಿಧ ತಳಿಗಳ ಹೆಸರಿನಲ್ಲಿ ಗುರುತಿಸುತ್ತವೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದರೆ, ಐಎನ್‌ಕೆಸಿ ಮುಧೋಲ್ ಹೌಂಡ್ ಹೆಸರನ್ನು ಬಳಸುತ್ತದೆ

ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣ ಮುಧೋಳ ಎಂಬ ಊರಿನ ಹೆಸರನ್ನು ಈ ನಾಯಿ ಪಡೆದುಕೊಂಡಿದೆ. ಈ ತಳಿಯನ್ನು ದೇಶದ್ಯಾಂತ ವಿವಿಧ ಹೆಸರನಿಂದ ಕರೆಯಲಾಗುತ್ತದೆ. ಬಾಂಬೆ ಪ್ರೆಸಿಡೆನ್ಸಿ ಕೊನೆಯ ರಾಜ, ಮಾಲೋಜಿರಾವ್ ಘೋರ್ಪಾಡೆ, ಯುಕೆಗೆ ಭೇಟಿ ನೀಡಿದಾಗ ಕಿಂಗ್ ಜಾರ್ಜ್ Vಗೆ ಉಡುಗೆರೆಯಾಗಿ ಕೊಟ್ಟಿ ಎರಡು ನಾಯಿಮರಿಗಳಿಗೆ  ಮುಧೋಲ್ ಹೌಂಡ್ಸ್  ಎಂದು ನಾಮಕರಣ ಮಾಡಿದ್ದರಂತೆ.

13 ವರ್ಷಗಳಷ್ಷು ಅಯಸ್ಸು ಹೊಂದಿರುವ ಈ ತಳಿಯ ನಾಯಿಗಳು ಭಾರತೀಯ ಹವಾಮಾನಕ್ಕಾಗಿ ಹೇಳಿ ಮಾಡಿಸಿದಂತಿದೆ.

ಸಣ್ಣ  ತಲೆ, ಸಪೂರ ದೇಹ ಹೊಂದಿದ್ದು ಎತ್ತರವಾಗಿರುವುದು ಈ ನಾಯಿಗಳು ವಿಶಿಷ್ಟತೆ. ತನ್ನ ಮಾಲೀಕರಿಗೆ ತೀವ್ರ ನಿಷ್ಠ ತೋರಿಸುವ ಮುಧೋಳ ನಾಯಿಗಳು ಮಾಲೀಕ  ಅಪಾಯದಲ್ಲಿದ್ದಾನೆ ಎಂದು ಭಾವಿಸಿದರೆ ಅಪರಿಚಿತರ ಮೇಲೆ ದಾಳಿ ಸಹ ಮಾಡಲು ಹಿಂಜರಿಯೋಲ್ಲ. ಮುಧೋಳ  ಬ್ರೀಡ್‌ ನಾಯಿಗಳಲ್ಲಿ ಕಂಡುಬರುವ ಸಾಮಾನ್ಯ ರೋಗವೆಂದರೆ ಚರ್ಮಕ್ಕೆ ಸಂಬಂಧಿಸಿದ್ದು.

ತೆಳು ಚರ್ಮದ ಈ ತಳಿ ಚಳಿಗೆ ಚಿಲ್‌ ಬೈಟ್‌ಗೆ ಗುರಿಯಾಗುವಂತೆ, ಸುಡು ಬೇಸಿಗೆಯಲ್ಲಿ ಸನ್‌ ಬರ್ನ್‌‌ಗೆ ಸಹ ಗುರಿಯಾಗುಬಹುದು. ಕಣ್ಗಾವಲು ಮತ್ತು ಬಾರ್ಡರ್‌ ಪ್ರೋಟೆಕ್ಷನ್‌ಗಾಗಿ ಮುಧೋಳ ನಾಯಿಗಳನ್ನು ಬಳಸುವ ಇಚ್ಛೆಯನ್ನು ಭಾರತೀಯ ಸೇನೆ ವ್ಯಕ್ತಪಡಿಸಿದೆಮೀರತ್‌ನಲ್ಲಿರುವ ಸೈನ್ಯದ ರಿಮೌಂಟ್ ಪಶುವೈದ್ಯಕೀಯ ದಳದಲ್ಲಿ ಪರೀಕ್ಷೆಗೆ ಆರು ಮುಧೋಳ ನಾಯಿಗಳನ್ನು ಪಡೆದುಕೊಂಡಿದೆ.

2005ರಲ್ಲಿ ಭಾರತ ಸರಕಾರ ಈ ತಳಿಯನ್ನು ಗುರುತಿಸಿ, ಮುಧೋಳ ಶ್ವಾನದ ಚಿತ್ರವನ್ನೊಳಗೊಂಡ 5 ರೂ. ಮುಖಬೆಲೆಯ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತ್ತು

About the author / 

Chethan Mardalu

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ