ಗ್ಯಾಜೆಟ್

ಮೊಬೈಲ್ ನಿರ್ಮಾಣ ಕಂಪೆನಿಗಳಲ್ಲಿ ನಡುಕ ಹುಟ್ಟಿಸಿದ ನೂತನ ಈ ಜಿಯೋ ಫೋನ್ ಬೆಲೆ!ಈ ಲೇಖನಿ ಓದಿ ಶಾಕ್ ಆಗ್ತೀರಾ…

2965

ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿ, ಟೆಲಿಕಾಂ ಕಂಪನಿಗಳ ಬೆವರಿಲಿಸಿದ್ದ, ಮುಖೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಕಂಪನಿ ಈಗ ಮತ್ತೊಂದು ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ.

ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯಲ್ಲಿ ‘ರಿಲಾಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಅತ್ಯಂತ ಕಡಿಮೆ ಬೆಲೆಯ ಫೀಚರ್ ಫೋನ್(4G VoLET)ನ್ನು  ಇದರ ಘೋಷಣೆ ಮಾಡುವ ಸಾಧ್ಯತೆಗಳಿವೆ.  ಈ ನೂತನ ಮೊಬೈಲ್ ಬೆಲೆ 500 ರೂಪಾಯಿ ಒಳಗೆ ಇರಲಿದ್ದು ಇದು ಮೊಬೈಲ್ ತಯಾರಿಕ ಕ್ಷೇತ್ರದಲ್ಲಿ ಮತ್ತೊಂದು ಬಿರುಗಾಳಿ ಎಬ್ಬಿಸಲಿದೆ.

ಜಿಯೋ ಫೀಚರ್ ಫೋನ್(4G VoLET)

ಜಿಯೋ ತನ್ನ ಈ ನೂತನ 4G ಫೋನ್ ಬೆಲೆ ಬಹಳ ಕಡಿಮೆ(500 ರೂಪಾಯಿ) ಇಡಲಿದೆ ಎನ್ನಲಾಗಿದೆ. 2G ಗ್ರಾಹಕರನ್ನು 4G ಗೆ  ಸೆಳೆಯಲು ಹೀಗೆ ಮಾಡಲಾಗಿದೆಯಂತೆ.

ಜಿಯೋ ತನ್ನ 4G ಭರ್ಜರಿ ಆಫರ್’ಗಳೊಂದಿಗೆ ಸಿಮ್ ಬಿಡುಗಡೆಗೊಳಿಸಿದ ಬಳಿಕವೂ ಗ್ರಾಹಕರು ಜಿಯೋ ಸಿಮ್ ಪಡೆದಿದ್ದರಾದರೂ ವೇಗ ತೀರಾ ಕಡಿಮೆಯಿತ್ತು. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನ್’ಗಳ ಬೆಲೆ ದುಬಾರಿ ಇದ್ದಿದ್ದು. ಇದೇ ಕಾರಣದಿಂದಾಗಿ ಜನರು 4G ಬಳಕೆ ಮಾಡಬೇಕೆಂದು ಜಿಯೋ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್’ಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲೇ ತನ್ನ ಜಿಯೋ ಸಿಮ್’ನಿಂದ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡಿದ್ದ ಕಂಪೆನಿ ಇದೀಗ ಮಗದೊಮ್ಮೆ ನೂತನ ಸ್ಮಾರ್ಟ್ ಫೋನ್’ನಿಂದ ಮೊಬೈಲ್ ಕಂಪೆನಿಗಳಲ್ಲಿ ಬಿರುಗಾಳಿ ಏಳಲಿದ್ದು, ಕಂಪನಿಗಳಲ್ಲಿ ನಡುಕ ಹುಟ್ಟಿಸುವುದಂತೂ ಸತ್ಯ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ