ಸುದ್ದಿ

14ನೇ ವಯಸ್ಸಿನಲ್ಲಿ ಮುಸುರೆ ತಿಕ್ಕುತ್ತಿದ್ದವ, 24ನೇ ವಯಸ್ಸಿಗೆ ಮರ್ಸಿಡೆಸ್ ಕಾರು ಖರೀದಿಸಿದ, ಮತ್ತೀಗ ಗೋವಾ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ..!

50

ಮಾರ್ಗೋವಾ: ಆ ಹುಡುಗ ತನ್ನ 14ನೇ ವಯಸ್ಸಿಗೆ ಮುಸುರೆ ತಿಕ್ಕುವ ಕೆಲಸ ಮಾಡಿಕೊಂಡಿದ್ದ. 24ನೇ ವಯಸ್ಸಿಗೆ ಮರ್ಸಿಡೆಸ್ ಕಾರು ಖರೀದಿಸಿ, ಪ್ರವಾಸೋದ್ಯಮದಲ್ಲಿ ಯಶಸ್ವಿ ಬ್ಯುಸಿನೆಸ್‌ಮ್ಯಾನ್ ಆಗಿ ಬೆಳೆದ ಆ ವ್ಯಕ್ತಿ ಈಗ ಗೋವಾ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ.

ಗುರುವಾರ ಫತೋರ್ಡಾದ ಡಾನ್ ಬಾಸ್ಕೊ ಕಾಲೇಜ್ ಆಫ್ ಎಂಜಿನಿಯರಿಂಗ್‌ನ, ಕಂಪ್ಯೂಟರ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಮುಂದೆ, ಚಿಂದಿ ಆಯುವ ಬದುಕಿಂದ ಆರಂಭವಾಗಿ- ಸಿರಿವಂತನಾಗಿ ಬೆಳೆದ ತಮ್ಮ ಬದುಕಿನ ಕಥೆಯನ್ನು ತೆರೆದಿಟ್ಟರು ಸಚಿವ ಮೈಕೆಲ್ ಲೋಬೊ . ಎರಡು ದಿನಗಳ ತಾಂತ್ರಿಕ ಕಾರ್ಯಕ್ರಮ ‘Inspirus 2K19‘ಉದ್ಘಾಟನಾ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಲೋಬೊ ಅವರ ಟೇಕ್ಅವೇ ಸಂದೇಶ ಹೀಗಿತ್ತು -“ನಿಮ್ಮ ಕನಸುಗಳನ್ನು ಅನುಸರಿಸಿ. ಎಷ್ಟು ಸಮಯ ತೆಗೆದುಕೊಂಡರೂ (ಅವುಗಳನ್ನು ಅರಿತುಕೊಳ್ಳಲು), ಅವುಗಳಿಂದ ವಿಮುಖರಾಗಬೇಡಿ”.

ಪುಟ್ಟ ವಯಸ್ಸಿನಲ್ಲಿ ತಾನು ಕಂಡ ದೈತ್ಯ ಕನಸುಗಳು ತನ್ನ ಜೀವನವನ್ನು ಹೇಗೆ ರೂಪಿಸಿದವು ಎಂಬುದರ ಕುರಿತು ಲೋಬೊ ಮಾತನಾಡಿದರು. ಹೊಟೇಲ್‌ನಲ್ಲಿ ಪಾತ್ರೆ ತಿಕ್ಕುವ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡ ಲೋಬೊ,”ನನಗೆ ಈಗಲೂ ನೆನಪಿದೆ, ಆಗ ನನಗೆ 14 ವರ್ಷ. ಒಬ್ಬ ಉದ್ಯಮಿ ಮರ್ಸಿಡಿಸ್‌ನಲ್ಲಿ ರೆಸ್ಟೋರೆಂಟ್‌ಗೆ ಬರುತ್ತಿದ್ದರು. ಆಗ ನಾನು ನನ್ನಲ್ಲೇ ಹೇಳಿಕೊಂಡೆ, ‘ಒಂದು ದಿನ ನಾನು ಸಹ ಇಂತಹ ಕಾರಿನ ಒಡೆಯನಾಗುತ್ತೇನೆ. ನಾನು ಬಹಳ ಚಿಕ್ಕ ವಯಸ್ಸಿನಲ್ಲೇ ಈ ಕನಸನ್ನು ಸಾಧಿಸಿದೆ.24 ನೇ ವಯಸ್ಸಿನಲ್ಲೇ ಮರ್ಸಿಡಿಸ್ ಖರೀದಿಸಿದೆ”.

ಎಸ್‌ಎಸ್‌ಸಿಯಲ್ಲಿದ್ದಾಗ ಕುಟುಂಬದ ಭಾರ ಹೊತ್ತ ನಾನು ಹೊಟೇಲ್‌ನಲ್ಲಿ ದುಡಿಯಲು ಆರಂಭಿಸಿದೆ. ಮೊದಲು ಪಾತ್ರೆ ತೊಳೆಯುವವನಾಗಿ, ಬಳಿಕ ವೇಟರ್, ಸ್ಟೀವಾರ್ಡ್‌,ನಂತರ ಸಹಾಯಕ ವ್ಯವಸ್ಥಾಪಕನಾಗಿ ಬೆಳೆಯುತ್ತ ಹೋದೆ. ಬಳಿಕ ನನ್ನದೇ ಆದ ನನ್ನ ಸ್ವಂತ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದೆ. ಇಂದು ನಾನು4-5 ರೆಸ್ಟೋರೆಂಟ್, ಹೋಟೆಲ್, ರೆಸಾರ್ಟ್‌ಗಳ ಮಾಲೀಕ ಹೊಂದಿದ್ದೇನೆ. ಶಾಸಕನಾಗುವ ಮೊದಲೇ ಇದೆಲ್ಲವನ್ನು ಸಂಪಾದಿಸಿದ್ದು”, ಎಂದು ಲೋಬೊ ಹೇಳಿದರು.

ಯುವ ಟೆಕ್ಕಿಗಳಿಗೆ ಲೋಬೊ ಅವರು ನೀಡಿದ ಉಪನ್ಯಾಸವು ಹಾಸ್ಯ ಮತ್ತು ವ್ಯಂಗ್ಯದ ರಸದೂತಣವಾಗಿತ್ತು. ಯಾವುದೇ ಮೂಲಭೂತ ಶೈಕ್ಷಣಿಕ ಪದವಿಯನ್ನು ಸಹ ಪಡೆಯದೆ ತಾನು ಯಶಸ್ಸನ್ನು ಸಾಧಿಸಿದ್ದೇನೆ ಎಂದು ಒಪ್ಪಿಕೊಂಡ ಲೋಬೊ,X, XI ಮತ್ತು XI ತರಗತಿಯನ್ನು ಎರಡನೇ ದರ್ಜೆಯಲ್ಲಿ ಪಾಸು ಮಾಡಿದೆ. ಅಗತ್ಯ ಹಾಜರಾತಿ ಇಲ್ಲದಿದ್ದುದರಿಂದ ಕೊನೆಯ ವರ್ಷದ ಪರೀಕ್ಷೆ ಬರೆಯಲು ನನ್ನ ಪ್ರಾಂಶುಪಾಲರು ನನಗೆ ಅವಕಾಶ ನೀಡಲಿಲ್ಲ. ಇಲ್ಲದಿದ್ದರೆ ನಾನು ಉತ್ತೀರ್ಣನಾಗಿರುತ್ತಿದ್ದೆ ಮತ್ತದು ಎರಡನೇ ದರ್ಜೆಯಲ್ಲಿಯೇ ಆಗಿರುತ್ತಿತ್ತು. ನಾನು ನಿಜಕ್ಕೂ ಬುದ್ಧಿವಂತ, ಶಿಕ್ಷಕರು ಹೇಳಿಕೊಟ್ಟಿದ್ದೆಲ್ಲ ನೇರವಾಗಿ ನನ್ನ ತಲೆಯೊಳಗೆ ಇಳಿಯುತ್ತಿತ್ತು ಎಂದಾಗ ವಿದ್ಯಾರ್ಥಿ ಸಮೂಹ ನಗೆಗಡಲಲ್ಲಿ ತೇಲಿತು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ

    ಮಹಾಲಕ್ಷ್ಮಿಯ ಹದಿನೆಂಟು ಪುತ್ರರ ಹೆಸರುಗಳು.

    ದೇವಸಖ – ಓಂ ದೇವಸಖಾಯ ನಮಃ, ಚಿಕ್ಲೀತ – ಓಂ ಚಿಕ್ಲೀತಾಯ ನಮಃ, ಆನಂದ – ಓಂ ಆನಂದಾಯ ನಮಃ ಕರ್ದಮ – ಓಂ ಕರ್ದಮಾಯ ನಮಃ , ಶ್ರೀಪ್ರದ – ಓಂ ಶ್ರೀಪ್ರದಾಯ ನಮಃ, ಜಾತವೇದ – ಓಂ ಜಾತವೇದಾಯ ನಮಃ, ಅನುರಾಗ – ಓಂ ಅನುರಾಗಾಯ ನಮಃ, ಸಂವಾದ – ಓಂ ಸಂವಾದಾಯ ನಮಃ, ವಿಜಯ – ಓಂ ವಿಜಯಾಯ ನಮಃ, ವಲ್ಲಭ – ಓಂ ವಲ್ಲಭಾಯ ನಮಃ, ಮದ – ಓಂ ಮದಾಯ…

  • ಸುದ್ದಿ

    ಗುಡ್ ನ್ಯೂಸ್ ; ಅಂತೂ ಇಂತು ರಾಜ್ಯಕ್ಕೆ ನೆರೆ ಪರಿಹಾರವನ್ನು ಘೋಷಿಸಿದ ಕೇಂದ್ರ ಸರ್ಕಾರ…!!

    ಕೇಂದ್ರ ಸರ್ಕಾರ ಅಂತೂ ಇಂತೂ ಕೊನೆಗೂ ರಾಜ್ಯಕ್ಕೆ ನೆರೆ ಪರಿಹಾರದ ಹಣ ಘೋಷಿಸಿದೆ. ಬಿಹಾರದ ಜತೆ ಕರ್ನಾಟಕಕ್ಕೂ ನೆರೆಪರಿಹಾರ ಹಣವನ್ನು ಇಂದು  [ಶುಕ್ರವಾರ] ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಪ್ರವಾಹ ಪೀಡಿತ ಬಿಹಾರ ಮತ್ತು ಕರ್ನಾಟಕ ರಾಜ್ಯಗಳಿಗೆ ಮಧ್ಯಂತರ ಪರಿಹಾರ ಹಣವನ್ನಾಗಿ ಬಿಹಾರಕ್ಕೆ 400 ಕೋಟಿ ರೂ. ಮತ್ತು  ಕರ್ನಾಟಕಕ್ಕೆ1200 ಕೋಟಿ ರೂ. ಅನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಶುಕ್ರವಾರ ಅನುಮತಿ ನೀಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್​ಡಿಆರ್​ಎಫ್​) ಒಟ್ಟು1813.75 ಕೋಟಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ಶುಭಫಲಗಳ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದು ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(28 ಏಪ್ರಿಲ್, 2019) ಇತ್ತೀಚಿಗೆ ನಿಮಗೆ ಹತಾಶೆಯೆನಿಸುತ್ತಿದ್ದಲ್ಲಿ – ಇಂದು ಸರಿಯಾದ…

  • ಸಿನಿಮಾ

    ಕೆಜಿಎಫ್ ಚಿತ್ರದ ಟ್ರೇಲರ್ ನೋಡಿ ತಮಿಳು ಖ್ಯಾತ ನಟ ವಿಜಯ್ ದಳಪತಿ ಹೇಳಿದ್ದೇನು ಗೊತ್ತಾ?

    ಕರ್ನಾಟಕ ಮಾತ್ರವಲ್ಲ ಇಡೀ ಭಾರತದಲ್ಲೇ ಕೆಜಿಎಫ್ ಚಿತ್ರ ಸದ್ದು ಮಾಡುತ್ತಿದೆ. ಈ ಚಿತ್ರ ಕನ್ನಡ, ಹಿಂದಿ, ತೆಲುಗು,ತಮಿಳು ಮತ್ತು ಮಲೆಯಳಂ ಭಾಷೆಗಳಲ್ಲಿ ಬಿಡುಗಡೆ ಗೊಳ್ಳಲಿದೆ. ಸದ್ಯ ಈ ಚಿತ್ರದ ಟ್ರೇಲರ್ ಎಲಾ ಭಾಷೆಗಳಲ್ಲೂ ಸಂಚಲನ ಸೃಷ್ಟಿಸಿದೆ. ಹಿಂದಿ ಆವೃತ್ತಿಯಲ್ಲಿ ಶಾರುಕ್ ಖಾನ್ ಅಭಿನಯದ ಝೀರೋ ಚಿತ್ರವನ್ನೇ ಹಿಂದಿಕ್ಕಿ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ಮೊದಲ ಸ್ಥಾನ ಪಡೆದಿತ್ತು. ಹೀಗೆ ಎಲ್ಲಾ ಭಾಷೆಯಲ್ಲೂ ಸದ್ದು ಮಾಡುತ್ತಿರುವ ಈ ಚಿತ್ರಕ್ಕೆ ನಟ ಪುನೀತ್ ರಾಜ್ ಕುಮಾರ್ ಸೇರಿದಂತೆ ಇತರೆ ಫಿಲ್ಮ್…

  • ಗ್ಯಾಜೆಟ್

    ಈಗ ಬರುತ್ತಿದೆ jio DTH ಬೇರೆ DTH ಸರ್ವಿಸ್ ಗಳಿಗೆ ಶುರುವಾಗಿದೆ ಭಯ..!ತಿಳಿಯಲು ಈ ಲೇಖನ ಓದಿ…

    ಜಿಯೋ ಸೆಟ್‌ ಟಾಪ್‌ ಬಾಕ್ಸ್‌ನ ಚಿತ್ರಗಳು ಈಗಾಗಲೇ ಮಾಧ್ಯಮಗಳಿಗೆ ಸೋರಿ ಹೋಗಿವೆ. ಜಿಯೋ ಸ್ಯಾಟಲೈಟ್‌ ಸೇವೆಯು 50ಕ್ಕೂ ಹೆಚ್ಚು ಎಚ್‌ಡಿ ಚ್ಯಾನಲ್‌ಗ‌ಳು ಸೇರಿದಂತೆ 300ಕ್ಕೂ ಹೆಚ್ಚು ಚ್ಯಾನಲ್‌ಗ‌ಳನ್ನು ಒಳಗೊಂಡಿರುತ್ತವೆ ಎನ್ನಲಾಗಿದೆ.