ಸುದ್ದಿ

‘ಮೇಕಪ್ ಮಾಡದ ದೃಶ್ಯಗಳನ್ನೆ ಹೆಚ್ಚು ತೋರಿಸಿದ್ದಾರೆ’ ಎಂದ ಚೈತ್ರಾ ಹೇಳಿಕೆಗೆ ಸುದೀಪ್ ಗರಂ..!

31

ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯ ಎರಡನೇ ವಾರ ಚೈತ್ರಾ ವಾಸುದೇವನ್ ಎಲಿಮಿನೇಟ್ ಆದರು. ದೊಡ್ಮನೆಯಿಂದ ಚೈತ್ರಾ ಅವರನ್ನ ಹೊರಗೆ ಕರೆದ ಸುದೀಪ್ ವೇದಿಕೆ ಮೇಲೆ ಮಾತುಕತೆ ಮುಂದುವರಿಸಿದರು. ಈ ವೇಳೆ ಚೈತ್ರಾ ವಾಸುದೇವನ್ ಅವರಿಗೆ ತಮ್ಮ ಎರಡು ವಾರದ ಜರ್ನಿ ಕುರಿತು VT (ವಿಡಿಯೋ ದೃಶ್ಯ) ತೋರಿಸಲಾಯಿತು. ಈ ವಿಡಿಯೋ ನೋಡಿದ ಚೈತ್ರಾ ವಾಸುದೇವನ್’ ಮೇಕಪ್ ಇಲ್ಲದ ದೃಶ್ಯ ಹೆಚ್ಚು ತೋರಿಸಿದ್ದಾರೆ’ ಒಂದು ವಿಚಾರಕ್ಕೆ ಕಾಮೆಂಟ್ ಮಾಡಿದರು.

ಈ ಮಾತಿನಿಂದ ಬೇಸರಗೊಂಡ ಸುದೀಪ್ ಅವರು, ವೇದಿಕೆಯಲ್ಲೇ ಚೈತ್ರಾ ಅವರಿಗೆ ಕ್ಲಾಸ್ ತೆಗೆದುಕೊಂಡರು. ಅಷ್ಟಕ್ಕೂ, ಚೈತ್ರಾ ಹೇಳಿಕೆಯ ಬಗ್ಗೆ ಸುದೀಪ್ ಏನಂದ್ರು?ಈ ಹಿಂದಿನ ಆರು ಮತ್ತು ಈಗ ಏಳನೇ ಸಂಚಿಕೆ ಸೇರಿ, ಇದೇ ಮೊದಲ ಬಾರಿಗೆ ಮನೆಯಿಂದ ಹೊರಗೆ ಬಂದ ಸ್ಪರ್ಧಿಯೊಬ್ಬರು ಮೇಕಪ್ ಬಗ್ಗೆ ಮಾತನಾಡಿದ್ದಾರೆ. ಇದುವರೆಗೂ ವಿಡಿಯೋ ನೋಡಿದ ಬಹುತೇಕ ಎಲ್ಲರೂ ಕಣ್ಣೀರು ಹಾಕಿದ್ದರು. ತಮ್ಮ ಭಾವನೆ ತೋಡಿಕೊಂಡಿದ್ದರು. ಬಿಗ್ ಬಾಸ್ ಮನೆಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದರು. ಆದರೆ, ಚೈತ್ರಾ ಅವರು ‘ಮೇಕಪ್ ಇಲ್ಲದ ದೃಶ್ಯಗಳನ್ನ ಹೆಚ್ಚು ತೋರಿಸಿದ್ದಾರೆ’ ಎಂದು ಹೇಳಿದ್ದು, ಸುದೀಪ್ ಅವರ ಕೆರಳಿಸಿತು.

”ಚೈತ್ರಾ ಅವರೇ ಇದು ಸೀರಿಯಸ್ ನೋಟ್, This is not fair. ಇದುವರೆಗೂ ಮನೆಗೆ ಬಂದಿರುವ ಎಲ್ಲ ಸ್ಪರ್ಧಿಗಳಿಗೂ ಮೇಕಪ್ ಇಲ್ಲದೇ ತೋರಿಸಿದ್ದೀವಿ. ಅದನ್ನ ನೋಡಿ ಖುಷಿ ಪಡಬೇಕು. ಅದರಲ್ಲಿ ತಪ್ಪು ಕಂಡುಹಿಡಿಯುವುದನ್ನ ಏನು ಹೇಳಬೇಕು. ನಿಜವಾಗಲು ಅದು ತಪ್ಪಿಲ್ಲ. ಅದು ಬೆಳಿಗ್ಗೆ ಎದ್ದ ತಕ್ಷಣ ಬರುವ ಮುಗ್ದ ದೃಶ್ಯ” ಎಂದು ಮನವರಿಕೆ ಮಾಡಿಕೊಟ್ಟರು.ಸುದೀಪ್ ಅವರು ಈ ಮಾತು ಹೇಳುತ್ತಿದ್ದಂತೆ ಚೈತ್ರಾ ಕ್ಷಮೆ ಕೇಳಿದ್ರು.

ಬಳಿಕಯೂ ಕೂಲ್ ಆಗದ ಸುದೀಪ್ ”ಜೀವನದಲ್ಲಿ ಕೆಲವು ಸಲ ಮುಂದೆ ಹೋಗುವುದರಲ್ಲಿ ಸ್ವಲ್ಪ ತಡೆ ಸಿಕ್ಕಿದೆ ಅಂದ್ರೆ, ಎಲ್ಲಿ ಏನೋ ಒಂಚೂರು ಸಮಸ್ಯೆಯಾಗಿರುತ್ತೆ. ನೀವಾಗಿರಬಹುದು ಅಥವಾ ನಾನಾಗಿರಬಹುದು. ಇಲ್ಲಿಂದ ಮುಂದೆ ಬೆಳಿಯಬೇಕು ಅಂದುಕೊಂಡರೆ ಅದನ್ನ ನಾವು ತಿದ್ದಿಕೊಳ್ಳಬೇಕು. ಆಗ ಇನ್ನು ಮುಂದೆ ಹೋಗ್ತೀನಿ” ಎಂದು ಬುದ್ದಿ ಹೇಳಿದರು.ಈ ಮಧ್ಯೆ ವಿಟಿ ನೋಡಿ ಚೆನ್ನಾಗಿದೆ ಎಂದು ಹೇಳಿದೆ ಸರ್ ಎಂದಿದ್ದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಸುದೀಪ್ ”ಚೈತ್ರಾ ಅವರೇ ಸುಮ್ಮನೆ ಹೇಳಬೇಡಿ. ನಾನೇನು ಸುಮ್ಮನೆ 24 ವರ್ಷ ಇಂಡಸ್ಟ್ರಿಯಲ್ಲಿದ್ದು, ಇಲ್ಲಿ ಬಂದು ನಿಂತಿಲ್ಲ. ಇದನ್ನ ನಾನು ಬಹಳ ನೊಂದುಕೊಂಡು ಹೇಳುತ್ತಿದ್ದೇನೆ” ಎಂದು ಕಿಚ್ಚನ ಮಾತಿನಲ್ಲೆ ಪೆಟ್ಟು ಕೊಟ್ಟರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ವಿಚಿತ್ರ ಆದರೂ ಸತ್ಯ

    ಮಕ್ಕಳು ಹುಟ್ಟುವಾಗಲೆ ತಲೇಯಲ್ಲಿ ಕೂದಲು ಇರುತ್ತೆ ಯಾಕೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮಕ್ಕಳು ಹುಟ್ಟುವಾಗ ಅವರ ತಲೆಯಲ್ಲಿ ತುಂಬಾನೆ ಕೂದಲು ಇರುತ್ತದೆ, ಇಲ್ಲವಾದರೆ ಸ್ವಲ್ಪವೇ ಸ್ವಲ್ಪ ಕೂದಲು ಇರುತ್ತದೆ. ಆದರೆ ಯಾವುದೆ ಮಕ್ಕಳು ಹುಟ್ಟುವಾಗ ಬಕ್ಕ ತಲೆಯೊಂದಿಗೆ ಹುಟ್ಟಿರುವುದನ್ನು ನೋಡಿರೋದು ಕಡಿಮೆ.

  • ಸುದ್ದಿ

    SSLC ಫೇಲ್ ಆದವರಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ…

    ಇತ್ತೀಚೆಗಷ್ಟೇ S.S.L.C.ಪಲಿತಾಂಶ ಪ್ರಕಟವಗಿದ್ಧು ಪೇಲ್ ಆದ ವಿದ್ಯಾರ್ಥಿಗಳ ಪೂರಕ ಪರೀಕ್ಷೆ ಜೂನ್ 21 ರಿಂದ 28 ರವರೆಗೆ ನಡೆಯಲಿದೆ . ಮೇ 10 ಪೂರಕ ಪರೀಕ್ಷೆ ಕಟ್ಟಲು ಕೊನೆಯ ದಿನವಾಗಿದೆ. 200 ರೂ. ದಂಡ ಶುಲ್ಕದೊಂದಿಗೆ ಮೇ 15 ರ ವರೆಗೆ ಪೂರಕ ಪರೀಕ್ಷೆ ಕಟ್ಟಬಹುದಾಗಿದೆ.ಪೇಲ್ ಆಗಿರುವಂಥಹ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದವರು ಕೂಡ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತರ ಪತ್ರಿಕೆಗಳ ಛಾಯಾ ಪ್ರತಿ ಪಡೆಯಲು ಮೇ 13 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಛಾಯಾಪ್ರತಿಗೆ ಒಂದು…

  • ಜ್ಯೋತಿಷ್ಯ

    ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

    ನಿತ್ಯ ಭವಿಷ್ಯ………… ಮೇಷ ರಾಶಿ ನಿಮ್ಮ ಬುದ್ಧಿ ಚಾತುರ್ಯಕ್ಕೆ ಎಂತಹವರೂ ತಲೆ ಬಾಗುವರು. ಜೀವನದಲ್ಲಿನ ಕಷ್ಟಗಳ ಮೇಲೆ ಜಯ ಸಾಧಿಸುವಿರಿ. ಉತ್ತಮ ಸ್ನೇಹಿತರ ಬೆಂಬಲ ನಿಮಗೆ ದೊರೆಯುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ನಂಬಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಕ್ರಮೇಣ ತೊಂದರೆಗೆ ದಾರಿ ಆಗುವುದು. ವೃಷಭ ರಾಶಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು.  ದೂರದೂರಿನ ಬಂಧುಗಳಿಂದ ಕಿರಿಕಿರಿ ಮಾತುಗಳು ಎದುರಾಗುವ ಸಂಭವವಿದೆ. ನೀವು ಮಾಡದೇ ಇರುವ ತಪ್ಪಿಗೆ ಮುನಿಸಿಕೊಳ್ಳುವ ಸಂದರ್ಭವಿದೆ. ಇದಕ್ಕೆ ಹೆಚ್ಚಿನ…

  • ಸೌಂದರ್ಯ

    ತಲೆಹೊಟ್ಟಿನ ತಲೆನೋವಿಗೆ ಇಲ್ಲಿದೆ ಮನೆಮದ್ದು….

    ತಲೆಹೊಟ್ಟು ಎಲ್ಲ ರೀತಿಯ ವಯೋಮಾನದವರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಹಾಗೂ ಶ್ಯಾಂಪೂ ಗಳನ್ನು ಪ್ರಯೋಗ ಮಾಡಿದ್ರೂ ತಲೆಹೊಟ್ಟು ಹೋಗ್ತಾಯಿಲ್ಲ ಎನ್ನುವವರಿದ್ದಾರೆ

  • ವಿಸ್ಮಯ ಜಗತ್ತು

    ಈತ ಮಗುವಿಗೆ ಜನ್ಮ ನೀಡಿದ ಮೊದಲ ಬ್ರಿಟನ್ ಪುರುಷ!ಶಾಕ್ ಆಗ್ತೀರ…ಈ ಲೇಖನಿ ಓದಿ…

    ನೀವು ನಂಬಲೇಬೇಕು. ಈ ವಿಷಯ ಕೇಳಿದ್ರೆ ನಿಮಗೆ ಶಾಕ್ ಆಗಬಹುದು. ಮೊದಲಬಾರಿಗೆ ಬ್ರಿಟನ್ನಿನ 21 ರ ಹರೆಯದ ವ್ಯಕ್ತಿಯೊಬ್ಬ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾನೆ. ಇದರಿಂದ ಲಂಡನ್‌ನ ವ್ಯಕ್ತಿಯೊಬ್ಬ ಮಗುವಿಗೆ ಜನ್ಮ ನೀಡಿದ ಮೊದಲ ಪುರುಷ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ….

  • ರಾಜಕೀಯ

    ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದೇಕೆ ಗೊತ್ತಾ ಕಾಂಗ್ರೆಸ್ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?

    ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಗಳಿದ್ದಾರೆ. ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈ ಶಾಸಕಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತ ಬಹಳ ಜನ ರಾಜಕಾರಣಿಗಳನ್ನ ಕಳ್ಳರು, ಸುಳ್ಳರು, ಮೋಸಗಾರರು ಎಂದು ಕರೆಯುತ್ತಾರೆ. ಆದ್ರೆ ಎಲ್ಲಾ ರಾಜಕಾರಣಿಗಳು ಆ ಪಟ್ಟಿಗೆ ಸೇರುವುದಿಲ್ಲ. ಕೆಲವು ರಾಜಕಾರಣಿಗಳ ನಡೆಯನ್ನು, ಕೆಲಸವನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ…