ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಪ್ಪಾ ಅಂದ್ರೆ ಆಕಾಶ, ಅದ್ರಲ್ಲೂ ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅವರ ಬಾಳಲ್ಲಿನ ಮೊದಲ ಸೂಪರ್ ಹೀರೋ, ಮೊದಲ ಮೇಷ್ಟ್ರು. ಅಂತಹ ಅಪ್ಪ ದಿಢೀರನೇ ಅಗಲಿ ಹೋದಾಗ ಆಗುವ ವೇದನೆ ಯಾರ ಬದುಕಿಗೂ ಬೇಡ. ಹೀಗೆ ಬಾಳ ಹಾದಿಯಲ್ಲಿ ಮಗಳನ್ನು ತೊರೆದು ಹೋದ ಅಪ್ಪನನ್ನು ಸತತ ನಾಲ್ಕು ವರ್ಷ ಮಗಳು ನೆನೆದ ಭಾವುಕತೆಯೇ ತುಂಬಿ ತುಳುಕಿರುವ ಕಥೆಯಿದು. ಅಮೆರಿಕಾದ ಅರ್ಕನ್ಸಾಸ್ನ 23 ವರ್ಷದ ಚಾಸ್ತಿತ್ಯ ಪೀಟರ್ಸನ್ ಅನ್ನೋ ಯುವತಿ ನಾಲ್ಕು ವರ್ಷದ ಹಿಂದೆ ಅಂದ್ರೆ 2015ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.
ಅಂದಿನಿಂದಲೂ ಇಂದಿನವರೆಗೆ ಸತತವಾಗಿ ತನ್ನ ತಂದೆಯ ಹಳೆಯ ಮೊಬೈಲ್ ನಂಬರ್ಗೆ ಮೆಸೇಜ್ ಮಾಡುತ್ತಲೇ ಇದ್ದಳು. ತನ್ನ ದೈನಂದಿನ ಬದುಕಿನ ಬಗ್ಗೆ, ತಾನು ಪದವಿ ಗಳಿಸಿದ ಬಗ್ಗೆ, ಹಾಗೆಯೇ ಕ್ಯಾನ್ಸರ್ ಗೆದ್ದು ಬದುಕು ನೂಕುತ್ತಿರುವ ಬಗ್ಗೆ ಮೆಸೇಜ್ನಲ್ಲಿ ಹೇಳುತ್ತಾ ಅತ್ಯಂತ ಭಾವುಕ ಪತ್ರವೆನ್ನುವಂತೆ ತನ್ನ ತಂದೆಯೊಂದಿಗೆ ಏಕಮುಖಿ ಸಂವಹನ ನಡೆಸುತ್ತಿದ್ದಳು. ಆಕೆಯ ತಂದೆ ತೀರಿ ಹೋಗಿ ನಾಲ್ಕು ವರ್ಷ ಸಂದಿದ್ದವು. ಈ ಬಗ್ಗೆ ತೀವ್ರ ಭಾವುಕಳಾಗಿ ಒಂದು ಸಂದೇಶವನ್ನು ಕಳುಹಿಸಿದ್ದಳು.
‘ಹಲೋ ಡ್ಯಾಡ್, ಇದು ನಾನು, ನಾಳೆ ಮತ್ತೊಂದು ಭೀಕರ ದಿನದ ನೆನಪನ್ನು ನೆನಪಿಸಿಕೊಳ್ಳುವ ದಿನ, ನೀನು ನಮ್ಮನ್ನು ಅಗಲಿ ನಾಳೆಗೆ ನಾಲ್ಕು ವರ್ಷವಾಯ್ತು, ಈ ನಾಲ್ಕು ವರ್ಷ ಅನ್ನೋ ಪುಟ್ಟ ಸಮಯದಲ್ಲಿ ಬದುಕಿನಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೆದಿವೆ. ಈಗಾಗಲೇ ನಾನು ಹಲವು ಬಾರಿ ಹೇಳಿದಂತೆ ಗ್ರಾಜುಯೇಷನ್ ಮುಗಿಸಿದ್ದೇನೆ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದಿದ್ದೇನೆ. ಪ್ರೀತಿಯಲ್ಲಿ ಬಿದ್ದು ಹೃದಯವನ್ನು ಘಾಸಿ ಮಾಡಿಕೊಂಡಿದ್ದೇನೆ. ಆದ್ರೆ ಎಲ್ಲದಕ್ಕೂ ಎದೆಗೊಟ್ಟು ನಿಂತು ಗಟ್ಟಿ ಮಹಿಳೆಯಾಗಿ ಪರಿವರ್ತಿತಗೊಂಡಿದ್ದೇನೆ. ಕ್ಷಮಿಸು ನಿನಗೆ ನನ್ನ ಅತ್ಯವಶ್ಯಕತೆಯಿದ್ದಾಗ ನಾನು ನಿನ್ನ ಜೊತೆ ಇರಲಿಲ್ಲ. ಒಂದು ದಿನ ನಾವು ಜೊತೆಗೆ ಇರಲಿದ್ದೇವೆ ನನ್ನ ಸರದಿ ಬರೋವರೆಗೂ ಈ ಬದುಕಿನ ಆಟವನ್ನು ನೋಡಬೇಕಿದೆ ’
ಒಂದು ದೀರ್ಘವಾದ ಪತ್ರವನ್ನ ಚಾಸ್ತಿತ್ಯ ಬರೆದು ಒಂದು ನಿಟ್ಟುಸಿರು ಬಿಟ್ಟು, ಸಣ್ಣದಾಗಿ ಬಿಕ್ಕಳಿಸಿದ್ದಳೇನೋ..ಕೆಲವೇ ಗಂಟೆಗಳಲ್ಲಿ ಅದೇ ನಂಬರ್ನಿಂದ ಒಂದು ರಿಪ್ಲೈ ಬಂದದ್ದು ಚಾಸ್ತಿತ್ಯಳನ್ನ ಅಚ್ಚರಿಗೆ ನೂಕಿತ್ತು. ಈ ಕಡೆ ತಂದೆಯನ್ನು ಕಳೆದುಕೊಂಡ ಹತಭಾಗ್ಯಳಾದ ಚಾಸ್ತಿತ್ಯ ಮೆಸೇಜ್ ಮಾಡಿದ್ದರೇ. ಆ ಕಡೆಯಿಂದ ಮಗಳನ್ನು ಕಳೆದುಕೊಂಡ ತಂದೆಯ ಹೃದಯವೊಂದು ಚಾಸ್ತಿತ್ಯಳ ದೀರ್ಘ ಸಂದೇಶಕ್ಕೆ ಅಷ್ಟೇ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ರು.
‘ಹಲೋ ಸ್ವೀಟ್ ಹಾರ್ಟ್, ನಾನುನಿನ್ನ ತಂದೆಯಲ್ಲ, ಆದ್ರೆ ಕಳೆದ ನಾಲ್ಕುವರ್ಷಗಳಿಂದ ನಿನ್ನಿಂದ ನಾನು ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ.ನನ್ನ ಹೆಸರು ಬ್ರಾಡ್, ಆಗಸ್ಟ್2014ರಲ್ಲಿ ಕಾರ್ ಅಪಘಾತದಲ್ಲಿ ನಾನುನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಹತಾಶಗೊಂಡಿದ್ದನನ್ನನ್ನು ನಿನ್ನ ಸಂದೇಶಗಳು ಜೀವಂತವಾಗಿಟ್ಟಿವೆ.ಈ ನಾಲ್ಕು ವರ್ಷಗಳಲ್ಲಿನಿನ್ನೆಲ್ಲ ಏಳುಬೀಳುಗಳನ್ನು ನಾನು ನೋಡಿದ್ದೇನೆ. ಅನೇಕಬಾರಿ ನಿನಗೆ ಪ್ರತಿಕ್ರಿಯೆ ನೀಡಬೇಕುಅಂದುಕೊಂಡಿದ್ದೆ. ಆದ್ರೆ ನಿನ್ನ ಹೃದಯಚೂರಾದೀತು ಅಂತ ಆ ಧೈರ್ಯಮಾಡಲಿಲ್ಲ. ನೀನು ಅಸಾಮಾನ್ಯ ಯುವತಿಮಗು.
ನನ್ನ ಮಗಳು ಕೂಡನಿನ್ನಂತೆಯೇ ಇರಬೇಕು ಅಂತ ಬಯಸಿದ್ದೆ.ನಿನ್ನ ಪ್ರತಿದಿನದ ಸಮಾಚಾರಗಳಿಗೆ ಧನ್ಯವಾದ. ನನ್ನ ಮಗಳನ್ನು ಕಿತ್ತುಕೊಂಡದೇವರದ್ದು ತಪ್ಪಲ್ಲ ಅನ್ನೋ ಮನವರಿಕೆಮಾಡಿಕೊಟ್ಟಿದ್ದೀಯಾ. ದೇವರು ನಿನ್ನ ರೂಪದಲ್ಲಿನನಗೆ ನನ್ನ ಪುಟ್ಟ ದೇವತೆಯನ್ನುವಾಪಸ್ ನೀಡಿದ್ದಾನೆ. ಎಲ್ಲವೂ ಸರಿಯಾಗಲಿದೆ. ನಿನ್ನಬಗ್ಗೆ ಹೆಮ್ಮೆಯಿದೆ ನನಗೆ, ನಾಳೆಯೂ ನಿನ್ನಸಂದೇಶಗಳಿಗಾಗಿ ಕಾಯುವೇ ಅಂತ ಮೆಸೇಜ್ಮಾಡಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಬ್ಬ ವ್ಯಕ್ತಿಯನ್ನ ಸಮಾಜ ಉತ್ತಮ ವ್ಯಕ್ತಿಯಾಗಿ ನೋಡುವುದು ಆತನ ವರ್ತನೆ ಮತ್ತು ಮಾನವೀಯತೆ ಗುಣಗಳಿಂದ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಒಬ್ಬ ವ್ಯಕ್ತಿ ಅದೃಷ್ಟ ಬದಲಾವಣೆ ಆಗಲು ಜಾಸ್ತಿ ಸಮಯ ಕೂಡ ಬೇಕಾಗಿಲ್ಲ ಅನ್ನುವುದು ಇನ್ನೊಮ್ಮೆ ಸಾಭೀತಾಗಿದೆ. ಇನ್ನು ಅದೃಷ್ಟ ಅನ್ನುವುದು ಯಾವಾಗಲೂ ಒಂದೇ ರೀತಿಯಲ್ಲಿ ಇರುವುದಿಲ್ಲ ಮತ್ತು ಕೆಲವೊಮ್ಮೆ ಇರುವ ಅದೃಷ್ಟ ನಮ್ಮನ್ನು ದೂರ ಆದರೆ ಇನ್ನು ಕೆಲವು ಭಾರಿ ಅದೃಷ್ಟ ನಮ್ಮನ್ನ ಹುಡುಕಿಕೊಂಡು ಬರುತ್ತದೆ. ನಾವು ಹೇಳುವ ಈ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಫರ್ನಿಚರ್…
ಕರ್ನಾಕಟ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಳ ಮುಖ್ಯ ಪಾತ್ರವಾಯಿಸುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಯಾರಿಗೆ ವಿಜಯಲಕ್ಷ್ಮಿ ಒಲಿಯುವುದು ಎನ್ನುವುದೇ ಯಕ್ಷಪ್ರಶ್ನೆಯಾಗಿದೆ
ಒಂದೆಕರೆ ಕ್ಷಣದಲ್ಲೇ ಪರಿಹಾರ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮಗೆ ಕಷ್ಟಕರವಾದುದು ಏನೂ ಇಲ್ಲ. ಇಚ್ಛಾಬಲ ತೋರಿಸಿ, ಜೀವನದಲ್ಲಿ ಗೆದ್ದು ಬರುವ ಶಕ್ತಿ ಲಭ್ಯವಾಗಲಿದೆ. ಇದಕ್ಕೆ ಹಿನ್ನೆಲೆಯಾಗಿ ನಿಮ್ಮ ಕುಟುಂಬದವರ ಸಹಕಾರ ಮತ್ತು ಆಶೀರ್ವಾದ ಇರುತ್ತದೆ ಎಂಬುದನ್ನು ಮರೆಯದಿರಿ. …
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚೈತನ್ಯ ಪಿಯು ಕಾಲೇಜಿನಲ್ಲಿ ಮೊಬೈಲ್ ಬ್ಯಾನ್ ಮಾಡಿ ಕಾಲೇಜು ಆಡಳಿತ ಆದೇಶ ಹೊರಡಿಸಿತ್ತು. ಆ ಕಾಲೇಜು ಆವರಣದಲ್ಲಿ, ಕ್ಲಾಸ್ನಲ್ಲಿ ಮೊಬೈಲ್ ಬ್ಯಾನ್ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ಮಾತ್ರ ಉಪನ್ಯಾಸಕರ ಕಣ್ಣುತಪ್ಪಿಸಿ ಮೊಬೈಲ್ ಬಳಸುತ್ತಿದ್ದರು. ಇದು ಪ್ರಿನ್ಸಿಪಾಲ್ ಗಮನಕ್ಕೆ ಬಂದಿದ್ದೆ ತಡ ವಿದ್ಯಾರ್ಥಿಗಳ ಮೊಬೈಲ್ ಪುಡಿ ಪುಡಿಯಾಗಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೂ ಪಿಯು ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್ ಬಳಸುತ್ತಿದ್ದರು. ಇದನ್ನು ಗಮನಿಸಿದ…
ಯುಜೆಟ್ ಎಂಬ ಹೆಸರಿನ ಫೋಲ್ಡ್ ಮಾಡಬಹುದಾದ ಒಂದು ಅನನ್ಯ ಸ್ಕೂಟರನ್ನು ತರಲು ಸಿದ್ಧವಾಗಿದೆ. ಬ್ಯಾಟರಿ ಚಾಲಿತವಾದ ಈ ಸ್ಕೂಟರ್ ಪೂರ್ಣ ಚಾರ್ಜ್ ಮಾಡಿದ ನಂತರ 125 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ ಎಂದು ಕಂಪನಿ ಹೇಳಿದೆ. 2018 ರಲ್ಲಿ ಲಾಸ್ ವೇಗಾಸ್ನಲ್ಲಿ ಓಡುವ ಸ್ಕೂಟರ್ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋ (ಸಿಇಎಸ್) ಅನ್ನು ಯುಜೆಟ್ ಕಂಪನಿಯು ಪ್ರಾರಂಭಿಸಿದೆ.
ಇಂದು ಸೋಮವಾರ, 12/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…