ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಿಲಾಯನ್ಸ್ ಮಾಲೀಕತ್ವದ ಜಿಯೋ ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಕೇವಲ ಡೇಟಾ-ಉಚಿತ ಕರೆಗಳ ಸೇವೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲಿಲ್ಲ. ಇದರ ಬದಲಿಗೆ ಹೊಸ ಮಾದರಿಯ ಆಪ್ ಸೇವೆಗಳನ್ನು ನೀಡುವ ಮೂಲಕ ಹೊಸ ಹಾದಿಯನ್ನು ಟೆಲಿಕಾಂ ಕಂಪನಿಗಳಿಗೆ ತೋರಿಸಿಕೊಟ್ಟಿತ್ತು.
ಜಿಯೋ ಸಿನಿಮಾ ವೆಬ್ ವರ್ಜನ್ ಶುರುಮಾಡಿದೆ. ಈ ಮೂಲಕ ಇನ್ಮುಂದೆ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ನಲ್ಲಿ ಆನ್ಲೈನ್ ನ ಮೂಲಕ ಟಿವಿ ನೋಡಬಹುದಾಗಿದೆ. ಈವರೆಗೆ ಜಿಯೋ ಟಿವಿ ಕೇವಲ ಮೊಬೈಲ್ ಆ್ಯಪ್ ನಲ್ಲಿ ಮಾತ್ರ ಲಭ್ಯವಿತ್ತು. ಜಿಯೋ ಬಳಕೆದಾರರು ಅನೇಕ ದಿನಗಳಿಂದ ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಇದಕ್ಕೆ ಜಿಯೋ ಮನ್ನಣೆ ನೀಡಿದೆ.
ಜಿಯೋ ಟಿವಿ ಆ್ಯಪ್ ನಲ್ಲಿ ಏನಲ್ಲ ಲಭ್ಯವಿದೆಯೋ ಅದೆಲ್ಲ ಇನ್ಮುಂದೆ ಟಿವಿ ವೆಬ್ ವರ್ಜನ್ ನಲ್ಲಿಯೂ ಸಿಗಲಿದೆ. ಜಿಯೋ ಗ್ರಾಹಕರಿಗೆ ಎಸ್ಡಿ ಹಾಗೂ ಎಚ್ಡಿ ಚಾನೆಲ್ ಆಯ್ಕೆ ಕೂಡ ಸಿಗ್ತಿದೆ.
ಆಪ್ನಿಂದ ವೆಬ್ ಸೇವೆ:-
ಇದೇ ಕೆಲವು ದಿನಗಳ ಹಿಂದೆ ಜಿಯೋ ಸಿನಿಮಾ ಆಪ್ ಸೇವೆಯನ್ನು ವೆಬ್ನಲ್ಲಿಯೂ ನೋಡುವ ಅವಕಾಶವನ್ನು ತನ್ನ ಬಳಕೆದಾರರಿಗೆ ಮಾಡಿಟ್ಟಿದ್ದ ಜಿಯೋ, ಈ ಮೂಲಕ ತನ್ನ ಬಳಕೆದಾರರಿಗೆ ಹೊಸ ಅನುಭವನ್ನು ನೀಡಲು ಮುಂದಾಗಿತ್ತು. ಇದು ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿತ್ತು.
ಈಗ ಜಿಯೋ ಟಿವಿ ಸೇವೆ:
ಜಿಯೋ ಸಿನಿಮಾ ವೆಬ್ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡ ಹಿನ್ನಲೆಯಲ್ಲಿ ಜಿಯೋ ತನ್ನ ಲೈವ್ ಟಿವಿ ಆಪ್ ಸೇವೆಯನ್ನು ವೆಬ್ಗೆ ವಿಸ್ತರಿಸಿದ್ದು, ಈ ಮೂಲಕ ಮಿಲಿಯನ್ ಜಿಯೋ ಟಿವಿಯನ್ನು ವೆಬ್ ವರ್ಜಿನ್ ನಲ್ಲಿ ನೋಡಲು ನೀವು ಜಿಯೋ ಅಕೌಂಟ್ ಲಾಗಿನ್ ಆಗಬೇಕು. ಯಾವ ಗ್ರಾಹಕರ ಬಳಿ ಜಿಯೋ 4ಜಿ ಸಿಮ್ ಇದೆಯೋ ಅವರು ಇದರ ಲಾಭಪಡೆಯಬಹುದಾಗಿದೆ.
ಜಿಯೋ ವೆಬ್ ವರ್ಜನ್ ನಲ್ಲಿ ಕೂಡ 7 ದಿನಗಳ ಹಿಂದಿನ ವಿಷ್ಯಗಳನ್ನು ನೋಡಬಹುದಾಗಿದೆ. ನೆಚ್ಚಿನ ಕಾರ್ಯಕ್ರಮ ಮಿಸ್ ಆಗಿದ್ದಲ್ಲಿ. 7 ದಿನಗಳ ಒಳಗೆ ಜಿಯೋ ವೆಬ್ ವರ್ಜನ್ ನಲ್ಲಿಯೂ ಆ ಕಾರ್ಯಕ್ರಮ ನಿಮಗೆ ಸಿಗಲಿದೆ.
HD ಸೇವೆ:-
ಇದಲ್ಲದೇ ಜಿಯೋ ಲೈವ್ ಟಿವಿಯನ್ನು ಗ್ರಾಹಕರು ವೆಬ್ ಆವೃತ್ತಿಯಲ್ಲಿ HD ಗುಣಮಟ್ಟದಲ್ಲಿ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ. ಇದರಿಂದಾಗಿ ಗ್ರಾಹಕರು ತಮ್ಮ ಸ್ಮಾರ್ಟ್ ಟಿವಿಯಲ್ಲಿಯೂ ಈ ಸೇವೆಯನ್ನು ಪಡೆಯಬಹುದಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಭಿನಯ ಚತುರ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದಾರೆ. ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ರಂಗಭೂರ್ಮಿ ಕಲಾವಿದ ಹಿರಣ್ಣಯ್ಯ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೂಲದ 84 ವರ್ಷದ ಮಾಸ್ಟರ್ ಹಿರಣ್ಣಯ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಗುರುವಾರ ಬೆಳಗ್ಗೆ 8:30ರ ವೇಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಲಂಚಾವತರ ಮೂಲಕ ಮನೆಮಾತಾಗಿದ್ದ ಹಿರಣಯ್ಯ ಅನಾರೋಗ್ಯದಿಂದಾಗಿ ತೆರೆಯ ಹಿಂದೆ ಸರಿದಿದ್ದರು. ಫೆಬ್ರವರಿ 15, 1934ರಂದು ಮೈಸೂರಿನಲ್ಲಿ ಮಾಸ್ಟರ್ ಹಿರಣಯ್ಯ ಜನಿಸಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ….
ಬಿಳಿ ಕೂದಲನ್ನು ಮರೆಮಾಚಲು ಹೇರ್ ಕಲರ್ ಗಳನ್ನು ಬಳಸುತ್ತಾರೆ. ಇಂತಹ ಕಲರ್ ಗಳು ಅನೇಕರಿಗೆ ಚರ್ಮದ ಖಾಯಿಲೆ ಅಥವಾ ಇನ್ಯಾವುದೋ ಸಮಸ್ಯೆಯನ್ನು ತಂದೊಡ್ಡುತ್ತದೆ. ಹಾಗಾಗಿ ಅವುಗಳ ಬದಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಬಿಳಿ ಕೂದಲನ್ನು ಕಪ್ಪಾಗಿಸುವ ವಿಧಾನಗಳು ಇಲ್ಲಿವೆ. ಒಣಗಿದ ನೆಲ್ಲಿಕಾಯಿಯನ್ನು ಕೊಬ್ಬರಿ ಎಣ್ಣೆಯ ಜೊತೆ ಕುದಿಸಿ, ಅದು ತಣ್ಣಗಾದ ಮೇಲೆ ಅದನ್ನು ತಲೆಗೆ ಹಚ್ಚಬೇಕು. ವಾರಕ್ಕೆ ಎರಡು ಬಾರಿ ಹೀಗೆ ಮಾಡಿದಲ್ಲಿ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ. ತೆಂಗಿನೆಣ್ಣೆಯೊಡನೆ ನಿಂಬೆಹಣ್ಣಿನ ರಸವನ್ನು ಬೆರೆಸಿ ತಲೆಗೆ ಹಚ್ಚಿ….
ನಮ್ಮ ದೈನಂದಿನ ದಿನ ಪತ್ರಿಕೆಗಳಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ಫ್ಯಾನ್ಸಿ ನಂಬರ್ಗಳನ್ನು ಖರೀದಿಸುವ ಸುದ್ದಿಗಳನ್ನು ಓದಿರುತ್ತೇವೆ. ಆದರೇ, ಇಲ್ಲೊಬ್ಬ ಉದ್ಯಮಿ ತನ್ನ ದುಬಾರಿ ಸೂಪರ್ ಕಾರಿನ ಫ್ಯಾನ್ಸಿ ನಂಬರ್ ಪ್ಲೇಟ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರ ಬೆಲೆಯು ಕೇವಲ 132 ಕೋಟಿ ಎಂದು ಹೇಳಿಕೊಂಡಿದ್ದಾನೆ.ಹೌದು, ಬ್ರಿಟನ್ನಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ‘ಎಫ್1’ ನಂಬರ್ ಪ್ಲೇಟ್ಗೆ ಇದೀಗ ಭಾರೀ ಬೇಡಿಕೆ ಸೃಷ್ಠಿಯಾಗಿದೆ. ಈ ಹಿಂದೆ 2008ರಲ್ಲಿ ಕೇವಲ 4.5 ಕೋಟಿ ಬೆಲೆ ಹೊಂದಿದ್ದ ಎಫ್1 ನಂಬರ್ ಪ್ಲೇಟ್ಗಳು…
ಯಾರ ಮನೆಯಲ್ಲಿ ಇಲಿಗಳು ಇಲ್ಲ ಹೇಳಿ, ಇನ್ನು ಇಲಿಗಳ ಕಾಟ ಕೇವಲ ಮನೆಯಲ್ಲಿ ಮಾತ್ರವಲ್ಲೇ ಹೊಲ ಗದ್ದೆಗಳಲ್ಲಿ ಕೂಡ ಇರುತ್ತದೆ, ಹೌದು ಹೊಲ ಗದ್ದೆಗಳಲ್ಲಿ ಇಲಿಗಳ ಕಾಟ ಆರಂಭವಾಯಿತು ಅಂದರೆ ರೈತರಿಗೆ ದಿಕ್ಕೇ ತೋಚದಂತೆ ಆಗುತ್ತದೆ. ಇಲಿಗಳು ಇಲ್ಲಿ ಇರುತ್ತದೆಯೋ ಅಲ್ಲಿ ಸರ್ವಶನಾಶ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ, ಯಾಕೆ ಅಂದರೆ ಇಲಿಗಳು ಕಚ್ಚದ ವಸ್ತುಗಳೇ ಇಲ್ಲ. ಎಷ್ಟೇ ಗಟ್ಟಿ ವಸ್ತುವಾದರೂ ಅದನ್ನ ತೂತು ಮಾಡುವ ಶಕ್ತಿಯನ್ನ ಹೊಂದಿರುತ್ತದೆ ಇಲಿಗಳು, ಮನೆಯ ವಸ್ತುಗಳನ್ನ ಹಾಲು ಮಾಡುತ್ತದೆ ಮತ್ತು…
ಬೊಜ್ಜು ಕರಗಲು ಸರಳ ಯೋಗಾಸನವಾದ ಊರ್ಧ್ವ ಪ್ರಸಾರಿತ ಪಾದಾಸನದ ಅಭ್ಯಾಸ ಮಾಡಬಹುದು. ಊರ್ಧ್ವ ಎಂದರೆ ಮೇಲ್ಮುಖ, ಪ್ರಸಾರಿತ ಎಂದರೆ ವಿಸ್ತ್ರತ. ಪಾದ ಎಂದು ಕಾಲು ಮತ್ತು ಆಸನ ಎಂದರೆ ಯೋಗಭಂಗಿ. ಸಾಮಾನ್ಯ ಎಲ್ಲ ವಯಸ್ಸಿನವರು ಅಭ್ಯಾಸ ಮಾಡಬಹುದು. ಆರಂಭದಲ್ಲಿ ಹೊಸಬರು ಗೋಡೆಯ ಸಹಾಯ ತೆಗೆದುಕೊಳ್ಳಬಹುದು. ವಿಧಾನ: ನೆಲದ ಮೇಲೆ ಆರಾಮವಾಗಿ ವಿಶ್ರಾಂತಿ ಮಾಡಿ. ಆಮೇಲೆ ಕಾಲುಗಳು ಜೋಡಣೆ, ಕೈಗಳನ್ನು ತೊಡೆಯ ಪಕ್ಕದಲ್ಲಿ ಇರಿಸಿ. ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿದ್ದು, ಉಸಿರನ್ನು ತೆಗೆದುಕೊಳ್ಳುತ್ತ ನಿಧಾನವಾಗಿ ಎರಡೂ ಕಾಲುಗಳನ್ನು 30ರಿಂದ…
ಮನೆಗೆ ಪುಟ್ಟ ಕಂದ ಬರುತ್ತಿದೆ ಎಂದರೆ ಅದಕ್ಕಿಂತ ಸಂತೋಷದ ಕ್ಷಣ ಬೇರೆ ಯಾವುದಿದೆ ಹೇಳಿ..? ಮಗು ಹುಟ್ಟಿದಾಗಿನಿಂದ ಅದರ ಆಟ, ಪಾಠ, ನಗು, ಅಳು, ಚೇಷ್ಟೆ ಎಲ್ಲವನ್ನೂ ಕಣ್ತುಂಬಿಕೊಳ್ಳುವುದೇ ಚೆಂದ. ಅದರಲ್ಲೂ ಆಗ ತಾನೆ ಹುಟ್ಟಿದ ಮಗುವೊಂದು ತನ್ನ ಅಪ್ಪನನ್ನು ನೋಡಿ ಸ್ಮೈಲ್ ಮಾಡಿದರೆ….ಆ ಅನುಭವ ಹೇಗಿರುತ್ತದೆ ನೀವೇ ಊಹಿಸಿಕೊಳ್ಳಿ. ಅಂದಹಾಗೆ ಈ ಫೋಟೋ ಬ್ರೆಜಿಲ್ನ ನೌಕಾನೆಲೆಯಲ್ಲಿ ಕೆಲಸ ಮಾಡುತ್ತಿರುವ ಫ್ಲಾವಿಯೋ ಎಂಬ ಸೈನಿಕನ ಪುಟ್ಟ ಕುಟುಂಬದ್ದು. ಫ್ಲಾವಿಯೋ ಪತ್ನಿ ತಾರ್ಸಿಲಾ ಕಳೆದ ಆಗಸ್ಟ್ನಲ್ಲಿ ಹೆಣ್ಣು ಮಗುವಿಗೆ ಜನ್ಮ…