ಉಪಯುಕ್ತ ಮಾಹಿತಿ

ಮನುಷ್ಯ ಸತ್ತ ನಂತರ ಮೂಗು ಮತ್ತು ಕಿವಿಗೆ ಹತ್ತಿಯನ್ನು ಇಡುತ್ತಾರೆ ಏಕೆ ಗೊತ್ತಾ.?ತಿಳಿಯಲು ಈ ಲೇಖನ ಓದಿ ಮತ್ತು ಶೇರ್ ಮಾಡಿ…

1724

ನಮ್ಮ ಕಣ್ಣ ಮುಂದಯೇ ಅನೇಕ ಚಿಕ್ಕ ಪುಟ್ಟ ವಿಷಯಗಳು ನಡೆಯುತ್ತಿರುತ್ತವೆ.ಅವನ್ನು ನೋಡಿಯೂ ನೋಡದಂತಯೂ ಇರುತ್ತೇವೆ.ಒಂದು ವೇಳೆ ಗಮನಿಸಿದರೂ ಸಹ ಅದರ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ನಾವು ಹೋಗುವುದಿಲ್ಲ.ಏಕೆ ಹೀಗೆ ಮಾಡುತ್ತಾರೆ ಎನ್ನುವ ಕಾರಣ ಗೊತ್ತಿಲ್ಲದಿದ್ರೂ ತಿಳಿದುಕೊಳ್ಳುವ ಯಾವುದೇ ಆಲೋಚನೆ ನಮ್ಮಲ್ಲಿ ಬರುವುದೇ ಇಲ್ಲ.

ಇಂತಹ ಅನೇಕ ಚಿಕ್ಕ ಪುಟ್ಟ ವಿಷಯಗಳಲ್ಲಿ ಸತ್ತ ದೇಹದ ಮೂಗಿಗೆ ಮತ್ತು ಕಿವಿಗೆ ಹತ್ತಿ ಇಡುವುದು.ಹೌದು ಹಿಂದೂ ಧರ್ಮದಲ್ಲಿ ಮನುಷ್ಯ ತೀರಿಕೊಂಡ ನಂತರ ಮೃತದೇಹದ ಕಿವಿ ಮತ್ತು ಮೂಗಿಗೆ ಹತ್ತಿ ಇಡುತ್ತಾರೆ. ಇದನ್ನು ಸತ್ತವರ ಮನೆಗೆ ಹೋದಾಗ ಎಲ್ಲರೂ ಗಮನಿಸಿಯೇ ಇರುತ್ತಾರೆ.ಆದರೆ ಅದನ್ನು ಏಕಾಗಿ ಮಾಡುತ್ತಾರೆ ಎಂದು ಯಾರು ಯೋಚಿಸುವುದಿಲ್ಲ, ಎಲ್ಲಿ ಒಂದ್ ಸಾರಿ ಕೇಳಿ ತಿಳಿಯೋಣ ಅನ್ನೋದು ಮಾಡಲ್ಲ.ಹಾಗಾದ್ರೆ ಇದರಲ್ಲಿ ಏನಿದೆ ಅಂತ ರಹಸ್ಯ ಮುಂದೆ ಓದಿ ತಿಲಿಯಿರಿ…

 

ಸತ್ತ ದೇಹದ ಮೂಗಿಗೆ ಹತ್ತಿ ಇಡೋದು ಈ ಕಾರಣಕ್ಕೆ…

ಮನುಷ್ಯನ ಮೃತದೇಹದ ಮೂಗಿಗೆ ಹತ್ತಿ ಇಡಲಾಗುತ್ತದೆ. ಕಿವಿಗೆ ಮಾತ್ರವಲ್ಲ ಮೂಗಿಗೂ ಇಡಲಾಗುತ್ತದೆ. ಆದರೆ ಬಹಳಷ್ಟು ಜನರಿಗೆ ಇದು ಯಾಕೆಂದು ಗೊತ್ತಿರುವುದಿಲ್ಲ.

ವಿಜ್ಞಾನಿಗಳು ಹೇಳೋ ಪ್ರಕಾರ ಮೃತದೇಹದ ಮೂಗು ಕಿವಿಯ ಮೂಲಕ ಕ್ರಿಮಿಕೀಟಗಳು ಒಳಸೇರಬಾರದೆನ್ನುವ ಕಾರಣಕ್ಕೆ ಮೂಗು ಮತ್ತು ಕಿವಿಗೆ ಹತ್ತಿ ಇಡುವುದಾಗಿ ಹೇಳುತ್ತಾರೆ. ಇಲ್ಲಿ ನಿಮಗೊಂದು ಪ್ರಶ್ನೆ ಕಾಡಬಹುದು..ಅಲ್ಲಾ ಮನುಷ್ಯ ಸತ್ತ ಮೇಲೆ ಯಾವ ಕ್ರಿಮಿ ಕೀಟ ಹೋದ್ರು ಏನು ಇದ್ರೆ ಏನು ಲಾಭ ಅಂತೀರಾ ಆಲ್ವಾ. ನೀವೂ ಅಂದುಕೊಂಡಿದ್ದು ನಿಜ.ಯಾಕಂದ್ರೆ ವಿಜ್ಞಾನಿಗಳು ಹೇಳುವುದನ್ನು ಒಪ್ಪಿಕೊಳ್ಳುವುದಾದರೆ ಮನುಷ್ಯ ಸತ್ತಮೇಲೆ ಕೀಟಗಳಿಂದ ಏನು ಮಾಡಲು ಸಾಧ್ಯ? ಎನ್ನುವ ಪ್ರಶ್ನೆ ಹುಟ್ಟುವುದಿಲ್ಲವೇ…

ಇದೆ ಬೇರೆಯೇ ಕಾರಣ…

ಸತ್ತ ವ್ಯಕ್ತಿಯ  ಮೂಗಿನಿಂದ ನೀರಿನಂತಹ ಒಂದು  ವಸ್ತು ಹೊರಗೆ ಬರುತ್ತದೆ. ಇದನ್ನು ತಡೆಯಲು ಅಥವಾ ಅದು ಅಲ್ಲಿಯೇ  ಬತ್ತಿ ಹೋಗುವಂತೆ ಮಾಡಲು ಮೃತದೇಹದ ಮೂಗಿಗೆ ಹತ್ತಿ ಇಡಲಾಗುತ್ತದೆ…

ಹಿಂದೂ ಧರ್ಮದ ಪ್ರಕಾರ…

ಮನುಷ್ಯ ಮೃತದೇಹದ ತೆರೆದುಕೊಂಡಿರುವ  ಭಾಗಗಳಾದ, ಬಾಯಿ, ಮೂಗು ಈ ಭಾಗಗಳಲ್ಲಿ ಚಿನ್ನದ ಚಿಕ್ಕ ತುಂಡನ್ನು ಇಡಲಾಗುತ್ತದೆ.ದೇಹದ ನವರಂದ್ರಗಳಲ್ಲಿ ಹೀಗೆ ಇಡುತ್ತಾರೆ.ಇದರಿಂದ ಸತ್ತ ದೇಹದ ಆತ್ಮಕ್ಕೆ ಶಾಂತಿ ಸಿಗುವುದರ ಜೊತೆಗೆ ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆ ಇದೆ. ಹೀಗಾಗಿ ಕಿವಿ ಮತ್ತು ಮುಗಿನ ತೂತುಗಳು ದೊಡ್ಡದಾಗಿರುವುದರಿಂದ ಚಿನ್ನದ ಸಣ್ಣ ಸಣ್ಣ ತುಕುಡುಗಳು ಬಿದ್ದು ಹೋಗಬಾರದೆಂದು ಹತ್ತಿಯನ್ನು ಇಡುತ್ತಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ