ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ಆರ್ಥಿಕತೆಯು ಸಹಜ ಸ್ಥಿತಿಗೆ ಬರಲು ಸರ್ಕಾರವು ಮೊದಲು ಜಿಎಸ್‌ಟಿಯನ್ನು ಸರಳ ಹಾಗೂ ಸುಧಾರಣೆ ಮಾಡಬೇಕು. ಗ್ರಾಮೀಣ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಂಡವಾಳ ಸೃಷ್ಟಿಯ ಸಾಲದ ಕೊರತೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಲಹೆ ನೀಡಿದ್ದಾರೆ. ಭಾರತವು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬ ಸತ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ವಲಯವಾರು ಚೂರು ಚೂರು ಗಮನ ನೀಡುವಂತಹ ರಾಜಕೀಯ ಬಂಡವಾಳವನ್ನು ವ್ಯರ್ಥ ಮಾಡುವ ಬದಲು ಅಥವಾ ಅಪನಗದೀಕರಣದಂತಹ ಶಾಶ್ವತ ಬ್ಲಂಡರ್‌ಗಳನ್ನು ಎಸಗುವ ಬದಲು ಈಗ ರಚನಾತ್ಮಕ ಸುಧಾರಣೆಯ ಮುಂದಿನ ಪೀಳಿಗೆಯನ್ನು ನಡೆಸಬೇಕಾದ ಹೊಣೆ ಸರ್ಕಾರದ ಮೇಲಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ನಾನು ಹಣಕಾಸು ಸಚಿವನಾಗಿದ್ದಾಗ ಮತ್ತು ಪ್ರಧಾನಿಯಾಗಿದ್ದಾಗ ನಮಗೆ ಸಂಪೂರ್ಣ ಬಹುಮತ ಸಿಕ್ಕಿರಲಿಲ್ಲ. ಈಗ ಮೋದಿ ಸರ್ಕಾರ ಸತತ ಎರಡು ಬಾರಿ ಬೃಹತ್ ಬಹುಮತದೊಂದಿಗೆ ಆಯ್ಕೆಯಾಗಿದೆ. ಹೀಗಿದ್ದರೂ ನಾವು 1991 ಮತ್ತು 2008ರಲ್ಲಿ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿದ್ದೆವು’ ಎಂದು ಅವರು ತಿಳಿಸಿದ್ದಾರೆ. ‘ದಿ ಬಿಜಿನೆಸ್ ಲೈನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮನಮೋಹನ್ ಸಿಂಗ್ ಅವರು ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ.
ಕಳವಳಕಾರಿಆರ್ಥಿಕ ಕುಸಿತ : ಭಾರತವು ಅತ್ಯಂತಕಳವಳಕಾರಿಯಾಗಿ ಆರ್ಥಿಕ ಕುಸಿತ ಅನುಭವಿಸುತ್ತಿದೆ.ಈ ಕುಸಿತ ಆರ್ಥಿಕತೆಯಪ್ರಮುಖ ವಲಯಗಳಿಗೆ ಭಾರಿ ಹೊಡೆತ ನೀಡಿದೆ.ಈ ಸಮಸ್ಯೆಗಳಿಗೆ ಸರ್ಕಾರವುಪಾರದರ್ಶಕ ರೀತಿಯಲ್ಲಿ ಪರಿಹಾರ ಹುಡುಕಲು ಮುಂದಾಗಬೇಕು.ಪರಿಣತರ ಸಲಹೆ ಪಡೆದುಕೊಳ್ಳಬೇಕು. ಮುಖ್ಯವಾಗಿಸರ್ಕಾರವು ಜನರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.ಜತೆಗೆ ಜಗತ್ತಿಗೆ ಸ್ಪಷ್ಟ ಸಂದೇಶ ರವಾನಿಸಬೇಕು.ದುರದೃಷ್ಟವಶಾತ್ ಮೋದಿ ಸರ್ಕಾರದಿಂದ ಅಂತಹಯಾವುದೇ ಪ್ರಯತ್ನ ಇದುವರೆಗೂ ನಡೆದಿರುವುದುಕಂಡಿಲ್ಲ ಎಂದು ಸಿಂಗ್ ಟೀಕಿಸಿದರು.
ಕೃಷಿಗೆ ಹೊಡೆತ ನೀಡಿದ ನೋಟ್ ರದ್ದತಿ : ಆರ್ಥಿಕತೆಯ ಪ್ರಮುಖ ಭಾಗಗಳು ಆರ್ಥಿಕಸಮಸ್ಯೆಗೆ ಸಿಲುಕಿವೆ. ಉದಾಹರಣೆಗೆ ಕೃಷಿ ವಲಯವು ಜಿಡಿಪಿಯ ಶೇ 15ರಷ್ಟು ಕೊಡುಗೆ ನೀಡುತ್ತದೆ. ಅದುಮುಖ್ಯವಾಗಿ ನಡೆಯುವುದು ನಗದು ರೂಪದಲ್ಲಿ. ಮುಖ್ಯವಾಗಿ ಅದು ತೆರಿಗೆ ರಹಿತವಾದದ್ದು. ಆದರೆ ಅಪಗನಗದೀಕರಣದಸಮಯದಲ್ಲಿ ನಗದು ಹಣವನ್ನು ಹಠಾತ್ತಾಗಿ ಹಿಂದಕ್ಕೆ ಪಡೆದುಕೊಂಡ ಪರಿಣಾಮ ಕೃಷಿ ಆರ್ಥಿಕತೆಗೆ ಹೊಡೆತಬಿದ್ದಿತು ಎಂದು ಸಿಂಗ್ ಅರೋಪಿಸಿದ್ದಾರೆ.
ಅಪನಗದೀಕರಣದ ಆತಂಕ ನಿಜವಾಗಿದೆ : ಅಪನಗದೀಕರಣದನಂತರದ ವರ್ಷದಲ್ಲಿ ಜಿಡಿಪಿಯಲ್ಲಿ ಕಾರ್ಪೊರೇಟ್ ಹೂಡಿಕೆಯ ಪ್ರಮಾಣ ಶೇ7.5ರಿಂದ ಶೇ 2.7ಕ್ಕೆ ಕುಸಿದಿದೆ.ಇದು 2010-11ರಲ್ಲಿ ಜಿಡಿಪಿಯ ಶೇ15ರಷ್ಟಿತ್ತು. ಇದರ ಅರ್ಥ, ಕೃಷಿಯಂತಹಅಸಂಘಟಿತ ವಲಯ ಮಾತ್ರವಲ್ಲ, ಸಂಘಟಿತವಲಯ ಕೂಡ ಅಪನಗದೀಕರಣದಿಂದ ಸಂಕಷ್ಟಕ್ಕೆಸಿಲುಕಿದೆ. ಸಣ್ಣ ಮತ್ತು ಮಧ್ಯಮಉದ್ದಿಮೆಗಳು ಅತ್ಯಂತ ಕೆಟ್ಟ ಹೊಡೆತತಿಂದಿವೆ. ಅಪನಗದೀಕರಣದ ನಿರ್ಧಾರದಿಂದ ಉಂಟಾಗುವ ಪರಿಣಾಮವು ದೀರ್ಘಾವಧಿಮತ್ತು ತೀವ್ರವಾಗಿರಲಿದೆ ಎಂಬ ನಮ್ಮ ಕಳವಳಸತ್ಯವಾಗಿದೆ.
ಜಿಎಸ್‌ಟಿಯ ಕಳಪೆ ಅನುಷ್ಠಾನ : ಅಪನಗದೀಕರಣದ ಆಘಾತದ ಬಳಿಕವೂ ಸರ್ಕಾರತರಾತುರಿಯಲ್ಲಿ ಜಿಎಸ್‌ಟಿ ಜಾರಿಮಾಡಿತ್ತು ಆರ್ಥಿಕತೆಗೆ ನೀಡಿದ ಮತ್ತೊಂದು ದೊಡ್ಡಪೆಟ್ಟು. ಜಿಎಸ್‌ಟಿ ಒಂದುರಚನಾತ್ಮಕ ಸುಧಾರಣೆ. ಯುಪಿಎ ಸರ್ಕಾರದ ಅವಧಿಯಲ್ಲಿಯೇಅದನ್ನು ಜಾರಿಗೆ ತರಲು ಪ್ರಯತ್ನಿಸಿದ್ದೆವು.ನಾವು ಸುಧಾರಣೆಯ ಬೆಂಬಲಿಗರು. ಆದರೆ, ಅದನ್ನು ತುಂಬಾಕೆಟ್ಟದಾಗಿ ಅಳವಡಿಸಲಾಯಿತು. ದೊಡ್ಡ ಕಂಪೆನಿಗಳು ಜಿಎಸ್‌ಟಿ ರಸೀದಿ ನೀಡಬಲ್ಲಪೂರೈಕೆದಾರರಿಂದ ಖರೀದಿ ಮಾಡಲು ಆದ್ಯತೆನೀಡಿದ್ದರಿಂದ ಸಣ್ಣ, ಅತಿ ಸಣ್ಣಮತ್ತು ಮಧ್ಯಮ ಉದ್ಯಮಗಳು ಸಂಕಷ್ಟಕ್ಕೆಸಿಲುಕಿದವು.
ಸಣ್ಣ ಮತ್ತು ಮಧ್ಯಮ ಉದ್ಯಮ ತತ್ತರ : ಜಿಎಸ್‌ಟಿ ಅಡಿಯಲ್ಲಿತೀರಾ ಕಡಿಮೆ ಪ್ರಮಾಣದಲ್ಲಿ ಅರ್ಹತೆಗಿಟ್ಟಿಸಿಕೊಳ್ಳುವ ಭಾರತದ ಸಣ್ಣ ಕಂಪೆನಿಗಳಿಗೆಹೂಡುವ ಬದಲು ಆಮದಿಗೆ ಆದ್ಯತೆನೀಡಲಾಯಿತು. ಇಡೀ ಪೂರೈಕೆಯ ಸರಪಳಿಯನ್ನೇತುಂಡರಿಸಲಾಯಿತು. ಈಗ ನಮ್ಮ ಮಾರುಕಟ್ಟೆಗಳಲ್ಲಿಚೀನಾದ ಆಮದು ವಸ್ತುಗಳೇ ತುಂಬಿವೆಎನ್ನುವುದು ನಮಗೆ ತಿಳಿದಿದೆ. ಇಷ್ಟಲ್ಲದೆತೆರಿಗೆ ಅಧಿಕಾರಿಗಳು ತೆರಿಗೆದಾರರಿಗೆ ಕಿರುಕುಳ ನೀಡುತ್ತಿರುವ ವರದಿಗಳೂಬಂದಿವೆ. ಜಿಎಸ್‌ಟಿಯ ಸಂಕೀರ್ಣ,ಬಹುಬಗೆಯ ತೆರಿಗೆಗಳು, ನಿರಂತರ ಬದಲಾಗುವ ಮತ್ತುಸೃಷ್ಟಿಯಾಗುವ ನಿಯಮಗಳು ಮುಂತಾದವು ಸಣ್ಣಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆಗಾಸಿಯುಂಟು ಮಾಡಿವೆ.
ಜಿಎಸ್‌ಟಿಯನ್ನು ಸರಳಗೊಳಿಸಿ: ಪ್ರಧಾನಿಮೋದಿ ಮತ್ತು ಅವರ ಸರ್ಕಾರವುತಮ್ಮ ‘ಶೀರ್ಷಿಕೆ ನಿರ್ವಹಣೆ’ಯ ಹವ್ಯಾಸದಿಂದ ಹೊರಬರಬೇಕು.ತನ್ನ ಆದ್ಯತೆಗಳಲ್ಲಿ ಮೊದಲನೆಯದಾಗಿ ಜಿಎಸ್‌ಟಿಯನ್ನು ಸರಳಮತ್ತು ಸುಧಾರಣೆ ಮಾಡಬೇಕಿದೆ. ಇದರಿಂದಆದಾಯ ಅಲ್ಪಾವಧಿಗೆ ನಷ್ಟವಾದರೂ ತೊಂದರೆಯಿಲ್ಲ. ಎರಡನೆಯದಾಗಿ ಗ್ರಾಮೀಣ ಬಳಕೆಯನ್ನು ವೃದ್ಧಿಸಲುಮತ್ತು ಕೃಷಿಯನ್ನು ಪುನರುಜ್ಜೀವನಗೊಳಿಸಲು ಸೂಕ್ತ ಮಾರ್ಗಗಳನ್ನು ಹುಡುಕಬೇಕು.ಮೂರನೆಯದಾಗಿ, ಬಂಡವಾಳ ಸೃಷ್ಟಿಗೆ ಎದುರಾಗಿರುವಸಾಲದ ಕೊರತೆಯನ್ನು ಬಗೆಹರಿಸಬೇಕು. ಇದು ಸಾರ್ವಜನಿಕವಲಯದ ಬ್ಯಾಂಕುಗಳುಮಾತ್ರವಲ್ಲ, ಎನ್‌ಬಿಎಫ್‌ಸಿಗಳನ್ನೂಉಳಿಸಬೇಕಿದೆ.
ರಫ್ತು ಮಾರುಕಟ್ಟೆ ಪ್ರಯೋಜನ ಬಳಸಿಕೊಳ್ಳಿ : ನಾಲ್ಕನೆಯದಾಗಿಜವಳಿ, ಆಟೋ, ಎಲೆಕ್ಟ್ರಾನಿಕ್ಸ್ ಮತ್ತುದುಬಾರಿಯಲ್ಲದ ಮನೆ ನಿರ್ಮಾಣದಂತಹ ಮುಖ್ಯಉದ್ಯೋಗ ಸೃಷ್ಟಿಯ ವಲಯಗಳನ್ನು ಸುಧಾರಣೆಮಾಡಬೇಕು. ಮುಖ್ಯವಾಗಿ ಎಂಎಸ್‌ಎಂಇಗಳಿಗೆ ಆದ್ಯತೆನೀಡಬೇಕು. ಐದನೆಯದಾಗಿ, ಅಮೆರಿಕ ಮತ್ತು ಚೀನಾನಡುವಿನ ವ್ಯಾಪಾರ ಸಮರದಿಂದಾಗಿ ತೆರೆದುಕೊಂಡಿರುವರಫ್ತು ಮಾರುಕಟ್ಟೆಯನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.ಕೊನೆಯದಾಗಿ, ಬೃಹತ್ ಮಟ್ಟದ ಸಾರ್ವಜನಿಕಮೂಲಸೌಕರ್ಯದ ಅಭಿವೃದ್ಧಿಗೆ ವಿಶ್ವಾಸಾರ್ಹ ಮಾರ್ಗಸೂಚಿಯನ್ನು ರೂಪಿಸಬೇಕು. ಇದರಲ್ಲಿ ಖಾಸಗಿ ಹೂಡಿಕೆಗೂಗಮನ ಹರಿಸಬೇಕು. ಇವುಗಳು ರಚನಾತ್ಮಕವಾಗಿ ಸುಧಾರಣೆಯಾಗಬೇಕು.ಇವೆಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸಿದರೆಮುಂದಿನ ಮೂರು ನಾಲ್ಕು ವರ್ಷಗಳಲ್ಲಿಯೇನಾವು ಅತ್ಯುತ್ತಮ ಬೆಳವಣಿಗೆಗೆ ಮರಳಬಹುದು ಎಂದು ಸಿಂಗ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ವಿಮಾನದಲ್ಲಿ ಪ್ರಯಾಣ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ ಆದರೆ ಕೆಲವರು ಆ ಕನಸನ್ನ ನನಸು ಮಾಡಿಕೊಂಡರೆ ಇನ್ನು ಕೆಲವರಿಗೆ ಅದೂ ಕನಸಾಗಿಯೇ ಉಳಿಯುತ್ತದೆ. ಹೌದು ವಿಮಾನದಲ್ಲಿ ಪ್ರಯಾಣ ಮಾಡಲು ನಮಗೆ ತುಂಬಾ ಹಣ ಬೇಕಾಗುತ್ತದೆ, ಶ್ರೀಮಂತರ ಬಳಿ ಹಣ ಇರುತ್ತದೆ ಆದ್ದರಿಂದ ಅವರು ವಿಮಾನದಲ್ಲಿ ಯಾವಾಗಲು ಪ್ರಯಾಣ ಮಾಡುತ್ತಾರೆ ಆದರೆ ಬಡವರ ಬಳಿ ಹಣ ಇರುವುದಿಲ್ಲ ಆದ್ದರಿಂದ ಅವರಿಗೆ ವಿಮಾನದ ಪ್ರಯಾಣದ ಕನಸನ್ನ ನನಸು ಮಾಡಿಕೊಳ್ಳಲು ಆಗುವುದಿಲ್ಲ. ಇನ್ನು ಭಾರತವನ್ನ ಹೊರತುಪಡಿಸಿ ಹೊರ ದೇಶಗಳಿಗೆ ವಿಮಾನದ…
ಮುಂಬೈ ಮೂಲದ 32 ಕಂಪನಿಗಳ ನಿರ್ವಾಹಕ ನಿರ್ದೇಶಕರಿಗೆ ಬಂಧನದಭೀತಿ ಎದುರಾಗಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದ ಈ 32 ಕಂಪನಿಗಳ ಉನ್ನತಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ರಹಿತ ವಾರಂಟ್ ಸೂಚಿಸಿದೆ . ಮೂರು ವರ್ಷಗಳ ಹಿಂದೆ ನೀಡಿದ ಆದೇಶವನ್ನು ಇವರು ಪಾಲಿಸಿಲ್ಲ ಎಂಬುದು ಇದಕ್ಕೆ ಮುಖ್ಯ ಕಾರಣವಾಗಿದೆ . ಮುಂಬೈ ಮೂಲದ ಕಂಪನಿಗಳಾದ ಅಕ್ಷರ್ ಮರ್ಸಾಂಟೈಲ್, ಬೀಟಾ ಟ್ರೇಡಿಂಗ್, ಅನ್ಶುಲ್ ಮೆರ್ಸಾಂಟೈಲ್, ಎವರ್ಫ್ರೇಮ್ ಟ್ರೇಡಿಂಗ್, ಹೈಝೋನ್ ಟ್ರೇಡಿಂಗ್, ಇನಾರ್ಬಿಟ್ ಟ್ರೇಡಿಂಗ್, ಲಕ್ಷ್ ಮರ್ಸಾಂಟೈಲ್, ಮ್ಯಾಜಿನೋಟ್ ಟ್ರೇಡಿಂಗ್, ಮಾಂಟ್ರಿಯಲ್…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(10 ಫೆಬ್ರವರಿ, 2019) ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ನೀವು ಅಪರೂಪಕ್ಕೆಭೇಟಿ ಮಾಡುವ…
ರಾಯ್ಪುರ್: ಸಿಆರ್‌ಪಿಎಫ್ ಯೋಧನೊಬ್ಬ ಪ್ರೇಯಸಿ ಮತ್ತು ಪತ್ನಿಯನ್ನು ಮರು ವಿವಾಹವಾಗುವ ಮೂಲಕ ಇಬ್ಬರನ್ನೂ ಏಕಕಾಲಕ್ಕೆ ಮದುವೆಯಾಗಿರುವ ಅಪರೂಪದ ಘಟನೆ ಛತ್ತೀಸ್‍ಗಢದ ಜಾಷ್ಪುರ್ ಜಿಲ್ಲೆಯ ಬಗ್ದೋಲ್ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಜಾಷ್ಪುರ್ ಮೂಲದ ಅನಿಲ್ ಪೈಕ್ರಾ ಇಬ್ಬರು ಮಹಿಳೆಯರನ್ನು ಮದುವೆಯಾದ ಸಿಆರ್‌ಪಿಎಫ್ ಯೋಧ. ಇವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿಆರ್‌ಪಿಎಫ್ ಯೋಧನಾಗಿ ಕಾರ್ಯನಿರ್ವಹಿಸುತ್ತಿದ್ದರು. ಅನಿಲ್ ಪೈಕ್ರಾ ನಾಲ್ಕು ವರ್ಷಗಳ ಹಿಂದೆ ತಮ್ಮ ಗ್ರಾಮದ ಪಕ್ಕದ ಗ್ರಾಮದ ಯುವತಿ ಜೊತೆ ಮದುವೆಯಾಗಿದ್ದರು. ಮದುವೆಯಾಗಿದ್ದರೂ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಯುವತಿಯನ್ನು…
ಬಹುತೇಕರು ಈಗಂತೂ ಕಂಪ್ಯೂಟರ್ನ ಮುಂದೆ ಕುಳಿತು ಬಿಟ್ಟರೆ ಎಲ್ಲವನ್ನೂ ಮರೆತು ಬಿಡುತ್ತಾರೆ.
ಇಡೀ ಭೂಮಿ ಕೌತುಗಳ ಆಗರ, ಭಾರತ ಹಾಗು ಇಲ್ಲಿನ ಹಿಂದೂ ಧರ್ಮವನ್ನು ಇಂದು ಇಡೀ ವಿಶ್ವದಾದ್ಯಂತ ಇರುವ ಬಹತೇಕ ದೇಶಗಳು ಸಂಶೋಧನೆ ಮಾಡುತಿದ್ದಾವೆ..! ಶ್ರೀ ಕೃಷ್ಣನ ದ್ವಾರಕೆಯ ಒಂದು ಪ್ರಾಂತ್ಯ ಸ್ಯಾಟಲೈಟ್ ನಿಂದ ನೋಡಿದರೆ ಕೃಷ್ಣನಿಗೆ ಪ್ರಿಯವಾದ ನವಿಲುಗರಿಯಂತೆಯೇ ಕಾಣುತ್ತದೆ. ಮಾನಸ ಸರೋವರ ಹೃದಯದ ಆಕಾರದಲ್ಲಿರುವುದು, ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಕುಮಾರ ಪರ್ವತ ಸರ್ಪಗಳ ಹೆಡೆಯನ್ನೇ ಹೋಲುವುದು.