ಸುದ್ದಿ

ಮದ್ಯ ಪ್ರಿಯರಿಗೊಂದು ಶಾಕಿಂಗ್ ಸುದ್ದಿ : ಆನ್ ಲೈನ್ ಮದ್ಯ ಮಾರಾಟಕ್ಕೆ ಹೈಕೋರ್ಟ್ ಬ್ರೇಕ್…!

24

ಆನ್ ಲೈನ್ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತಾದರೂ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರಿಂದ ಹಿಂದೆ ಸರಿದಿತ್ತು.

ಇದರ ಮಧ್ಯೆ ಚೆನ್ನೈ ಮೂಲದ ಹಿಪ್ ಬಾರ್ ಪ್ರೈವೇಟ್ ಲಿಮಿಟೆಡ್, ಡಿಜಿಟಲ್ ವಾಲೆಟ್ ಮೂಲಕ ಆನ್ ಲೈನ್ ಲಿಕ್ಕರ್ ವೆಡಿಂಗ್ ಗೆ ಅನುಮತಿ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ಇದೀಗ ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್. ಸುಜಾತ ಅವರಿದ್ದ ಏಕಸದಸ್ಯ ಪೀಠ, ಆನ್ ಲೈನ್ ಮೂಲಕ ಮದ್ಯ ಸರಬರಾಜು ಮಾಡುವುದು ಅಕ್ರಮ ಹಾಗೂ ಅಬಕಾರಿ ನಿಯಮಗಳಡಿ ಅದಕ್ಕೆ ಅವಕಾಶವೂ ಇಲ್ಲ ಎಂದು ತೀರ್ಪು ನೀಡಿದೆ.

ಕರ್ನಾಟಕ ಅಬಕಾರಿ ಕಾಯ್ದೆ ಪ್ರಕಾರ ಲೈಸೆನ್ಸ್ ಹೊಂದಿರುವವರು ಮಾತ್ರ ನಿಗದಿಪಡಿಸಿದ ಸಮಯದಲ್ಲಿ ಮದ್ಯವನ್ನು ಮಾರಾಟ ಮಾಡಬಹುದಾಗಿದ್ದು, ಆದರೆ ಆನ್ ಲೈನ್ ಮದ್ಯ ಮಾರಾಟಕ್ಕೆ ಅವಕಾಶ ನೀಡಿದರೆ ದಿನದ 24 ಗಂಟೆಯೂ ವಹಿವಾಟು ನಡೆಸಬಹುದಾಗಿದೆ. ಹಾಗಾಗಿ ಇದಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಹುಳುಕು ಹಲ್ಲಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು.

    ಹುಳುಕು ಹಲ್ಲಿನ ಸಮಸ್ಯೆ ದೊಡ್ಡೋರಿಂದ ಚಿಕ್ಕವರವರೆಗೆ ಇದ್ದೆ ಇರುತ್ತದೆ ಈ ಸಮಸ್ಯೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಮನೆಯಲ್ಲಿಯೇ ಇದೆ ಮನೆಮದ್ದು ಇದನ್ನು ಹೇಗೆ ಬಳಸಿ ಇದರ ಅನುಕೂಲತೆಯನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಇಲ್ಲಿ ನೋಡಿ. ಇತ್ತೀಚಿಗೆ ಮಕ್ಕಳು ಹೆಚ್ಚು ಸಿಹಿ ತಿನ್ನೋದು ಅಥವಾ ಚಾಕೊಲೇಟ್ ತಿನ್ನುವುದು ಅಭ್ಯಾಸವಾಗಿದೆ. ಅದನ್ನು ತಿನ್ನುವುದು ಹೆಚ್ಚಾದಂತೆ ಹಲ್ಲುಗಳು ಕೂಡ ಹುಳುಕು ಆಗುತ್ತವೆ. ಆದ್ದರಿಂದ ಕೆಲಸಂದರ್ಭದಲ್ಲಿ ನಾವು ಹಲ್ಲನ್ನೇ ತೆಗೆಸಿ ಬಿಡುತ್ತೇವೆ. ಆದ್ದರಿಂದ ಅದಕ್ಕಿಂತ ನಿಮ್ಮ ಮನೆಯಲ್ಲಿ ಇವೆ ಈ ಸಮಸ್ಯೆಗೆ ಮದ್ದು….

  • ಸಿನಿಮಾ

    ರಾಜಕಾರಣದ ಕುರಿತು ಪತ್ರ ಬರೆದ ಅಪ್ಪು.! ಆ ಪತ್ರದಲ್ಲಿ ಏನಿದೆ ಗೊತ್ತಾ..?

    ನಾನು ಒಬ್ಬ ನಟನಾಗಿ ಕಲೆಯ ಜೊತೆ ಗುರುತಿಸಿಕೊಳುತ್ತೇನೆ ಹೊರತು ರಾಜಕಾರಣದ ಜೊತೆಗಲ್ಲ. ದೇವೇಗೌಡರ ಕುಟುಂಬ ಹಾಗೂ ಅಂಬಿ ಕುಟುಂಬ ನಮ್ಮ ಕುಟುಂಬ ಹಾಗೆ. ಇಬ್ಬರೂ ನಮ್ಮ ಹಿತೈಷಿಗಳೇ ಆಗಿದ್ದು, ಇಬ್ಬರಿಗೂ ಒಳ್ಳೆಯದಾಗಲಿ ಎಂದು ನಟ ಪುನೀತ್ ರಾಜ್‍ಕುಮಾರ್ ಹೇಳಿದ್ದಾರೆ. ಮಾಜಿ ಸಚಿವ ಅಂಬರೀಶ್ ಪತ್ನಿ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇವರ ಜೊತೆಯಾಗಿ ದರ್ಶನ್ ಮತ್ತು ಯಶ್ ನಿಂತಿದ್ದಾರೆ. ಕನ್ನಡ ಚಿತ್ರರಂಗ ಸುಮಲತಾಗೆ ಬೆಂಬಲ ಕೊಡುತ್ತಿದೆ ಎಂಬ ಸುದ್ದಿ…

  • ಜ್ಯೋತಿಷ್ಯ

    ಈ ಸ್ಥಿತಿಯಲ್ಲಿ ಹಲ್ಲಿ ಕಾಣಿಸಿಕೊಂಡರೆ ಏನಾಗುತ್ತೆ ಗೊತ್ತಾ..?

    ಕೆಲವೊಂದು ಜೀವ ಜಂತುಗಳು ನಮ್ಮ ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಮುನ್ಸೂಚನೆ ನೀಡುತ್ತವೆ. ಇದಕ್ಕೆ ಹಲ್ಲಿ ಕೂಡ ಹೊರತಾಗಿಲ್ಲ. ಹಲ್ಲಿ ಏನು ಮಾಡಿದ್ರೆ ಶುಭ? ಏನು ಮಾಡಿದ್ರೆ ಅಶುಭ? ಹಲ್ಲಿ ಯಾವ ಸ್ಥಿತಿಯಲ್ಲಿ ಕಾಣಬಾರದು ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆಯೊಳಗೆ ಪ್ರವೇಶ ಮಾಡುವಾಗ ಹಲ್ಲಿ ಕಂಡ್ರೆ ಶುಭ. ಆದ್ರೆ ಗೃಹಪ್ರವೇಶದ ದಿನ ಸತ್ತ ಹಲ್ಲಿ ಕಣ್ಣಿಗೆ ಬೀಳಬಾರದು. ಸತ್ತ ಹಲ್ಲಿ ಕಾಣಿಸಿಕೊಂಡ್ರೆ ಅವಶ್ಯವಾಗಿ ಪೂಜೆ ಮಾಡಿ ನಂತ್ರವೇ ಹೊಸ ಮನೆ ಪ್ರವೇಶ ಮಾಡಬೇಕು. ಸತ್ತ ಹಲ್ಲಿಗಳು…

  • ಸುದ್ದಿ

    ಸ್ವಾತಂತ್ರ್ಯ ಬಂದು 72 ವರ್ಷಗಳಾದರೂ ಈ ಗ್ರಾಮಕ್ಕಿಲ್ಲ ವಿದ್ಯುತ್, ಆದರೆ ವಿದ್ಯುತ್ ಬಿಲ್ಮಾತ್ರ ತಲುಪುತ್ತದೆ, ಹೇಗೆ ಗೊತ್ತಾ, ಇದನ್ನೊಮ್ಮೆ ಓದಿ,.!

    ಸ್ವಾತಂತ್ರ್ಯಪಡೆದ 72 ವರ್ಷಗಳಾದರೂ ಬಲರಾಂಪುರ್ ಜಿಲ್ಲೆಯ ಗ್ರಾಮಕ್ಕೆ ವಿದ್ಯುತ್ತಲುಪಿಲ್ಲ. ಆದರೆ ವಿದ್ಯುತ್ ಬಿಲ್ಮಾತ್ರ ತಲುಪಿದೆ. ಈ ಗ್ರಾಮಸ್ಥರು ರಾತ್ರಿವೇಳೆ ಲ್ಯಾಂಟರ್ನ್ ಮತ್ತು ಧಿಬ್ರಿಗಳನ್ನು ಬಳಸುತ್ತಾರೆ.ಇದು ಬಿಜೆಪಿ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮತ್ತು ಪ್ರಸ್ತುತ ರಾಜ್ಯಸಭಾ ಸಂಸದ ರಾಮ್‌ವಿಚಾರ್ನೇತಮ್‌ಗೆ ಸೇರಿದ ಗ್ರಾಮವಾಗಿದೆ. ರಾಜ್ಯಸಭಾ ಸಂಸದ ರಾಮ್‌ವಿಚಾರ್ ನೇತಮ್ಅವರ ಮನೆ ಇಲ್ಲಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ ಎಂದು ಪತ್ರಿ ಪಾರಿಗ್ರಾಮಸ್ಥರು ಹೇಳುತ್ತಾರೆ. ಇಲ್ಲಿಯವರೆಗೆ ವಿದ್ಯುತ್‌ ನೀಡುವ ಬಗ್ಗೆ ಕೇವಲ ಭರವಸೆ ದೊರೆತಿದೆ ಅಷ್ಟೇ, ಆದರೆ ವಿದ್ಯುತ್ಮಾತ್ರ ತಲುಪಿಲ್ಲ ಎಂದು ಅವರು…

  • ಸುದ್ದಿ

    ಜಗತ್ತನ್ನ ಆಳಲು ಸಿದ್ದವಾಗಿವೆ ಟೆಕ್ನಾಲಜಿ ಕಂಪನಿಗಳು…!

    ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು? ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ…

  • ಉದ್ಯೋಗ, ಉಪಯುಕ್ತ ಮಾಹಿತಿ

    ವಿಮಾನ ಗಗನಸಖಿಯರ ಸಂಬಳ ಎಷ್ಟು ಗೊತ್ತಾ.? ಹಲವರಿಗೆ ತಿಳಿದಿಲ್ಲ ಈ ಮಾಹಿತಿ ನೋಡಿ.

    ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪಯಣ ಮಾಡಬೇಕೆಂಬ ಅಸೆ ಎಲ್ಲರಿಗೂ ಕೂಡ ಇರುತ್ತದೆ, ಗಗನದಲ್ಲಿ ಒಮ್ಮೆ ಪ್ರಯಾಣ ಬೆಳೆಸಿ ಆ ಮಧುರ ಕ್ಷಣವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ ಕೂಡ ಪ್ರತಿಯೊಬ್ಬರಿಗೆ ಇರುತ್ತದೆ. ನಮ್ಮ ದೇಶದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಪರ್ಕ ಬೆಳೆಸಲು ಅದು ಕೂಡ ಕಡಿಮೆ ಅವಧಿಯಲ್ಲಿ ಈ ದೂರ ಕ್ರಮಿಸಲು ವಿಮಾನಯಾನ ಬಹು ಲಾಭಕರ. ಕೇವಲ ಪ್ರಯಾಣಿಕರು ಮಾತ್ರವಲ್ಲ ಸರಕುಗಳು ಕೂಡ ಸಾಗುತ್ತವೆ ಈ ಯಾನದಲ್ಲಿ, ಇನ್ನು ವಿಮಾನ ಎಂದಾಗ ನೆನಪಾಗುವುದು ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರ…