ಸಂಬಂಧ

ಮದುವೆಯಾಗುವ ಹುಡುಗನಿಗೆ ಅಡುಗೆ ಬರುತ್ತಾ???ಶಾಕ್ ಆಗ್ಬೇಡಿ!ಮುಂದೆ ಓದಿ…..

268

ತಮ್ಮ ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ, ಸಾಮಾನ್ಯವಾಗಿ ಹುಡುಗನ ಮನೆಯವರು ಹುಡುಗಿಗೆ ಅಡುಗೆ ಮಾಡಲು ಬರುತ್ತಾ ಎಂದು ಪ್ರಶ್ನೆ ಕೇಳುವುದು ಸಾಮಾನ್ಯ.

ಹುಡುಗನ ಮನೆಯವರು ಹುಡುಗಿಗೆ ಚೆನ್ನಾಗಿ ಅಡುಗೆ ಮಾಡಲು ಬರಬೇಕು, ಮನೆ ಕೆಲಸ ಗೊತ್ತಿರಬೇಕು ಎಂದು ಬಯಸುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಯುವತಿಯರು ತಮ್ಮ ಸಂಗಾತಿಗೆ, ಮದುವೆಯಾಗುವವನಿಗೆ ಅಡುಗೆ ಮಾಡಲು ಬರುತ್ತದೆಯೇ ಎಂದು ಯೋಚಿಸುತ್ತಾರಂತೆ. ಹೀಗಂತ ಸಮೀಕ್ಷೆಯೊಂದು ತಿಳಿಸಿದೆ.

ಹೆಣ್ಣು-ಗಂಡುಗಳನ್ನು ಹೊಂದಾಣಿಕೆ ಮಾಡಿಕೊಡುವ ಸಂಸ್ಥೆಯಾದ ಶಾದಿ.ಕಾಂ ನಡೆಸಿದ ಸಮೀಕ್ಷೆ ಪ್ರಕಾರ, ಸಂಬಂಧದ ವಿಚಾರ ಬಂದಾಗ ಯುವತಿಯರು ಹುಡುಗನ ಬಗ್ಗೆ ಏನನ್ನು ತಿಳಿದುಕೊಳ್ಳಲು, ಹಾಗೂ ಯಾವುದಕ್ಕೆ ಒಪ್ಪಿಕೊಳ್ಳುತ್ತಾರೆ ಎಂದು ಅಧ್ಯಯನ ಮಾಡಿದೆ.

ಶಾದಿ.ಕಾಂ ನಡೆಸಿದ ಆನ್ ಲೈನ್ ಸಮೀಕ್ಷೆಯಲ್ಲಿ  ಸುಮಾರು     6,800 ಮಂದಿ ಪುರುಷರು ಮತ್ತು ಮಹಿಳೆಯರು ತಮ್ಮ ಮತ ಚಲಾವಣೆ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಶಾದಿ.ಕಾಂ ಮೂಲಕ ಮದುವೆ ಮಾಡಿಕೊಂಡ 25ರಿಂದ 34 ವರ್ಷ  ವಯಸ್ಸಿನ ಮದುವೆಯಾದ ಭಾರತೀಯರು ಇದರಲ್ಲಿ ಸೇರಿಕೊಂಡಿದ್ದಾರೆ.

ನಿಮ್ಮ ಭಾವೀ ಪತಿಗೆ ಓಕೆ ಅನ್ನಲು ನೀವು ಯಾವೆಲ್ಲಾ ಮೂರು ಗುಣಗಳನ್ನು ಅವರಲ್ಲಿ ಕಂಡು ಮೆಚ್ಚಿ ಮದುವೆ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ಶೇಕಡಾ 36 ಮಹಿಳೆಯರು, ನೀವು ಕೂಡು ಕುಟುಂಬದಲ್ಲಿ ಅಥವಾ ಒಬ್ಬರೇ ನೆಲೆಸಿದ್ದೀರಾ ಎಂದು ಕೇಳಿದ್ದೇವೆ ಎಂದಿದ್ದಾರೆ. ನೀವು ನನ್ನ ವೃತ್ತಿಗೆ ಬೆಂಬಲ ನೀಡುತ್ತೀರಾ ಎಂದು ಶೇಕಡಾ 30 ಯುವತಿಯರು ಕೇಳಿದ್ದಾರಂತೆ.

ಶೇಕಡಾ 26 ಯುವತಿಯರು ನಿಮಗೆ ಅಡುಗೆ ಮಾಡಲು ಬರುತ್ತಾ ಎಂದು ಭಾವಿ ಪತಿಯಲ್ಲಿ ಕೇಳಿದ್ದಾರಂತೆ. ಈ ಶೇಕಡಾವಾರು ಪ್ರಮಾಣ ಪುರುಷರ ವಿಚಾರ ಬಂದಾಗ ಸ್ವಲ್ಪ ಭಿನ್ನವಾಗಿದೆ. ಪುರುಷರು ತಮ್ಮ ಭಾವಿ ಪತ್ನಿಯಲ್ಲಿ ನೀವು ನಮ್ಮ ಕುಟುಂಬದ ಜೊತೆ ನೆಲೆಸಲು ಇಚ್ಛಿಸುತ್ತೀರಾ? ಎಂದು, ಶೇಕಡಾ 34 ಮಂದಿ ಮದುವೆ ನಂತರ ಕೆಲಸ ಮಾಡುವ ಯೋಚನೆಯಿದೆಯೇ ಎಂದು ಮತ್ತು ಕೇವಲ ಶೇಕಡಾ 19 ಮಂದಿ ಪುರುಷರು ಮಾತ್ರ ನಿಮಗೆ ಅಡುಗೆ ಮಾಡಲು ಬರುತ್ತಾ ಎಂದು ಕೇಳಿದ್ದಾರಂತೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಟ್ರಾಫಿಕ್ ಪೊಲೀಸ್ ಹಾಕಿದ ದುಬಾರಿ ದಂಡ ಕೇಳಿ ತನ್ನ ಬೈಕನ್ನೇ ಸುಟ್ಟ ಸವಾರ…!

    ಟ್ರಾಫ್ರಿಕ್ ನಿಯಮ ಉಲ್ಲಂಘಿಸಿ,  ದುಬಾರಿ ದಂಡ ಕಟ್ಟಲು ಸಾಧ್ಯವಾಗದೇ ಗೋಗೆರೆದ, ಮನವಿ ಮಾಡಿದ, ಪೊಲೀಸರಿಂದ ತಪ್ಪಿಸಿಕೊಂಡು ಹೋದ ಘಟನೆಗಳು ವರಿದಿಯಾಗಿದೆ. ಆದರೆ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ. ಹೆಲ್ಮೆಟ್ ಹಾಕದೆ, ಸಿಗ್ನಲ್ ನೋಡದೆ, ಒನ್ ವೇ, ಪಾರ್ಕಿಂಗ್ ಗಮನಿಸದೆ, ನಾವು ನಡೆದಿದ್ದೇ ದಾರಿ ಎಂದು ಸವಾರಿ ಮಾಡುತ್ತಿದ್ದ ವಾಹನ ಸವಾರರು ಇದೀಗ ಟ್ರಾಫಿಕ್ ನಿಯಮ ಪಾಲಿಸುವಂತಾಗಿದೆ. ಒಂದೆರಡು ಸಿಗ್ನಲ್ ಜಂಪ್ ಮಾಡಿದರೆ ಸಾಕು ದಂಡ 20,000 ರೂಪಾಯಿ ದಾಟಿರುತ್ತೆ. ಹೀಗೆ ನಿಯಮ…

  • ಸುದ್ದಿ

    1 ಗ್ರಾಂ ಮೀನಿಗೆ, 40 ನಿಮಿಷ ಆಪರೇಶನ್ ಮಾಡಿದ ವೈದ್ಯೆ ಸೋನ್ಯಾ ಮೈಲ್ಸ್, ಶಸ್ತ್ರಚಿಕಿತ್ಸೆಗೆ 8,800 ರೂ ಖರ್ಚು,.!

    ಇಂಗ್ಲೆಂಡ್, ವೈದ್ಯ ಲೋಕ ಅದೆಷ್ಟು ಮುಂದುವರೆದಿದೆ ಎಂದರೆ ಮಾನವನ ರೋಗಗಳಿಗೇನು? ಪ್ರಾಣಿ, ಜಲಚರಗಳ ರೋಗಗಳಿಗೂ ಇದೀಗ ವೈದ್ಯರು ಚಿಕಿತ್ಸೆ ನೀಡುತ್ತಾರೆ. 1 ಗ್ರಾಂ ಮೀನಿನ ಯಶಸ್ವಿ ಶಸ್ತ್ರ ಚಿಕಿತ್ಸೆ  ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಗೋಲ್ಡ್ ಫಿಶ್ ಹೊಟ್ಟೆಯಲ್ಲಿದ್ದ  ಟ್ಯೂಮರ್ ಹೊರ ತೆಗೆದ ವೈದ್ಯೆ ಸೋನ್ಯಾ ಮೈಲ್ಸ್  ಶಸ್ತ್ರಚಿಕಿತ್ಸೆಗೆ 8,800 ರೂ ಖರ್ಚು. ಅದರಂತೆ ಇಂಗ್ಲೆಂಡ್’ನ ಬ್ರಿಸ್ಟಸ್’ನ ವೈದ್ಯೆ ಸೋನ್ಯಾ ಮೈಲ್ಸ್ ಕೇವಲ 1 ಗ್ರಾಂ ತೂಕದ ಮೌಲಿ ಪ್ರಜಾತಿಯ ಗೋಲ್ಡ್ ಫಿಶ್’ಗೆ ಶಸ್ತ್ರ…

  • ದೇಗುಲ ದರ್ಶನ, ದೇವರು, ದೇವರು-ಧರ್ಮ

    ಪರಮಪೂಜ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ.

    ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳ 50 ಕೆ.ಜಿಯ ಬೆಳ್ಳಿ ವಿಗ್ರಹವನ್ನು ಇಂದು ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಹಳೇ ಮಠದಲ್ಲಿ ಬೆಳ್ಳಿ ವಿಗ್ರಹಕ್ಕೆ ಪೂಜೆ ಸಲ್ಲಿಸಲಾಯಿತು. ಸಿದ್ಧಗಂಗಾ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ, ಅಲ್ಲಿಂದ ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿತು. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ…

  • ಸುದ್ದಿ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಖರೀದಿಗೆ ಆನ್ ಲೈನ್ ವೆಬ್ಸೈಟ್ ಆರಂಭ….!

    ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ. ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್…

  • ಸುದ್ದಿ

    ‘ಮಿಸ್ ಸೌತ್ ಇಂಡಿಯಾ’ ಕಿರೀಟ ತನ್ನದಾಗಿಸಿಕೊಂಡ ಕಿರುತೆರೆ ನಟಿ ಕುಲವಧು ಧನ್ಯಾ….

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…

  • Information, karnataka, ಆರೋಗ್ಯ, ಜೀವನಶೈಲಿ

    ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು