ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮತ್ಸ್ಯಕನ್ಯೆ ಸಿಕ್ಕಿದ್ದಾಳೆ ಎನ್ನುವ ಫೋಟೋಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಇದನ್ನು ನಂಬುವುದು ತುಂಬಾ ಕಷ್ಟದ ಕೆಲಸ. ಆದರೆ ಕೆಲವೊಮ್ಮೆ ಇಂತಹ ಘಟನೆಗಳನ್ನು ನಂಬಲೇಬೇಕಾಗುವುದು. ಯಾಕೆಂದರೆ ಮಹಿಳೆಯೊಬ್ಬಳು ಮತ್ಸ್ಯಶಿಶುವಿಗೆ ಜನ್ಮ ನೀಡಿದ ಸುದ್ದಿಯಿದು. ಇದನ್ನು ನೀವು ಕೂಡ ಕೇಳಿರಬಹುದು.
ಮಹಿಳೆಯು ಗರ್ಭಿಣಿಯಾಗಿದ್ದಾಗ ಯಾವುದೇ ರೀತಿಯ ಔಷಧಿ ತೆಗೆದುಕೊಳ್ಳದೆ, ವೈದ್ಯರ ಸಲಹೆ ಪಡೆಯದೇ ಇರುವುದೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ. ಭಾರತದಲ್ಲಿ ಇಂತಹ ಮತ್ಸ್ಯಶಿಶು ಹುಟ್ಟಿದರೆ ಏನಾಗಬಹುದು ಎಂದು ನೀವೊಮ್ಮೆ ಯೋಚಿಸಿ.
ಮತ್ಸ್ಯಶಿಶುವು ಕೊಲ್ಕತ್ತಾದಲ್ಲಿ ಜನಿಸಿದೆ. ಒಂದಕ್ಕೊಂದು ಅಂಟಿಕೊಂಡಿರುವ ಕಾಲುಗಳು ಇರುವ ಮಗುವಿಗೆ ಮಹಿಳೆಯು ಜನ್ಮ ನೀಡಿದಾಗ ವೈದ್ಯರು ಕೂಡ ಒಂದು ಕ್ಷಣ ನಿಬ್ಬೆರಗಾದರು. ಇದು ತುಂಬಾ ಅಪರೂಪದಲ್ಲಿ ಅಪರೂಪದ ಪ್ರಕರಣವೆಂದು ಹೇಳಲಾಗುತ್ತದೆ.
ಈ ವಿಚಿತ್ರಕ್ಕೆ ವೈದ್ಯಕೀಯ ಲೋಕದಲ್ಲಿ `ಮೆರ್ಮೆಡ್ ಸಿಂಡ್ರಾಮ್’ ಅಥವಾ `ಸಿರೆನೊಮೆಲಿಯಾ’ ಎಂದು ಕರೆಯಲಾಗುತ್ತದೆ. ಇದು ಭಾರತದಲ್ಲಿ ನಡೆದಿರುವ ಎರಡನೇ ಘಟನೆ ಮತ್ತು ವಿಶ್ವದಲ್ಲೇ ಐದನೇಯದ್ದು ಎಂದು ವರದಿಗಳು ಹೇಳಿವೆ.
ಮಗುವಿನ ಲಿಂಗ ಪತ್ತೆ ಮಾಡಲು ಸಾಧ್ಯವಾಗಲಿಲ್ಲವೆಂದು ತಿಳಿದುಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ಮಗು ಹುಟ್ಟುವುದು ತುಂಬಾ ಅಪರೂಪದಲ್ಲಿ ಅಪರೂಪ. ಬೆಳವಣಿಗೆಯಾಗದ ಮೂತ್ರಪಿಂಡದ ಕುಳಿಗಳು ಮತ್ತು ಬೆರೆತುಕೊಂಡಿರುವ ಕಾಲುಗಳಿಂದಾಗಿ ಮಗುವಿನ ಲಿಂಗ ಪತ್ತೆ ಸಾಧ್ಯವಾಗಿಲ್ಲ. ಮಗು ಜನಿಸಿದ ನಾಲ್ಕು ಗಂಟೆಗಳಲ್ಲಿ ಮೃತಪಟ್ಟಿದೆ ಎಂದು ವರದಿಗಳು ತಿಳಿಸಿವೆ.
ಗರ್ಭದಲ್ಲಿರುವ ಮಗುವಿಗೆ ತಾಯಿಯಿಂದ ಸರಿಯಾದ ಪೋಷಕಾಂಶಗಳು ಸಿಗದೆ ಇರುವುದು ಮತ್ತು ರಕ್ತಸಂಚಾರ ಸರಿಯಾಗಿ ಆಗದೆ ಇದ್ದರೆ ಮಗುವಿನಲ್ಲಿ ಇಂತಹ ವಿಕಲತೆಗಳು ಕಂಡುಬರುವುದು. ಇಂತಹ ಮಗುವು ಬದುಕಿ ಉಳಿಯುವುದಿಲ್ಲ. ಹೆಚ್ಚಿನ ಸಮಯದಲ್ಲಿ ಗರ್ಭಪಾತ ಮಾಡಿಸಲಾಗುತ್ತದೆ ಎಂದು ವೈದ್ಯರು ವಿವರಿಸಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ಅತೀ ದೊಡ್ಡ ಹನುಮಂತನಿಗೆ ಭರ್ಜರಿ ಸ್ವಾಗತ ಮಾಡಿ, ಬೀಳ್ಕೊಟ್ಟ ಸೂಲಿಬೆಲೆ ಗ್ರಾಮಸ್ತರು. ಹೌದು, ಭಾರತದ ಅತೀ ಎತ್ತರದ, 62 ಅಡೀ ಇರುವ ಹನುಮನ ಏಕಶಿಲಾವಿಗ್ರಹವನ್ನು ಕೋಲಾರದಿಂದ ಬೆಂಗಳೂರಿಗೆ ಸಾಗಿಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿರುವಂತದ್ದೆ. ಹನುಮನಿಗೆ ಅಭೂತಪೂರ್ವ ಸ್ವಾಗತ ಬೆಂಗಳೂರಿನ ಹೆಚ್’ಬಿಆರ್ ಬಡಾವಣೆಯ ಕಾಚರಕನಹಳ್ಳಿಯ ಶ್ರೀ ಕೋದಂಡರಾಮಸ್ವಾಮಿ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆಗಾಗಿ ಸಿದ್ದವಾಗಿದ್ದ 62 ಅಡಿ ಎತ್ತರದ, 750 ಟನ್ ತೂಕದ ವೀರಾಂಜನೇಯ ಸ್ವಾಮಿಯ ವಿಗ್ರಹವನ್ನು, 300 ಚಕ್ರಗಳ ಬೃಹತ್ ವಾಹನದಲ್ಲಿ ಸಾಗಿಸಲಾಗುತ್ತಿದೆ. ಮಾರ್ಗ ಮಧ್ಯ ತೊಂದರೆಯಾದರೂ, ಆ…
ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.
ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.
ಹೊಸ ತಲೆಮಾರಿನ ಸಂಗೀತ ಸಂಯೋಜಕ ಗಾಯಕರಲ್ಲಿ ರಘು ದೀಕ್ಷಿತ್ ಅವರದು ಒಂದು ವಿಶಿಷ್ಟ ಸ್ಥಾನ. ಕನ್ನಡದ ಇಂಟರ್ ನ್ಯಾಷನಲ್ ರಾಕ್ ಸ್ಟಾರ್’ ಆಗುವ ಮೂಲಕ ವಿಶ್ವದಾದ್ಯಂತ ಕನ್ನಡ ಕೀರ್ತಿ ಪತಾಕೆ ಹಾರಿಸಿದ್ದಾರೆ.ಇವರು ನಮ್ಮ ಕನ್ನಡದ ಹೆಮ್ಮೆ ಅಂತ ಹೇಳಿದ್ರೆ ತಪ್ಪಾಗಲಾರದು.ಇಂತಹ ಮಹಾನ್ ಸಾಧಕ ಬೆಳೆದು ಬಂದದ್ದೆ ಒಂದು ರೋಚಕ… ರಘು ದೀಕ್ಷಿತ್ ವೈಯುಕ್ತಿಕ ಜೀವನದ ಬಗ್ಗೆ… ನವೆಂಬರ್ 11, 1974ರಂದು, ಮಹಾರಾಷ್ಟ್ರದ ನಾಸಿಕ್’ನಲ್ಲಿ, ರಘು ದೀಕ್ಷಿತ್’ರವರ ಜನನವಾಯಿತು.ಇವರ ಪೂರ್ತಿ ಹೆಸರು ರಘುಪತಿ ದ್ವಾರಕನಾಥ್ ದೀಕ್ಷಿತ್ ಎಂದು. ತಂದೆ ದಿವಂಗತ ಕೆ.ವಿ.ದ್ವಾರಕನಾಥ್…
ಉಪೇಂದ್ರ ಅವರ ಮಾತು ನಿಜಕ್ಕೂ ಸತ್ಯ? ಲೇಖನ ಓದಿ
ರಿಪಬ್ಲಿಕ್ ಆಫ್ ಇಂಡಿಯಾ ಚಾನೆಲ್ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿ ಟ್ವೀಟ್ ಮಾಡಿರುವ ಪ್ರಕಾರ 2019ಕ್ಕೆ ಭಾರತ ಬಿಜೆಪಿಮಯವಾಗಲಿದೆಯಾ? ಹಾಗೂ ಭಾರತದ ಜನರಿಗೆ ಜಿಯೋ ಮಾತ್ರ ಆಪ್ಷನ್ ಆಗುತ್ತಾ?