ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮಂಡಿನೋವು ಬಂದರೆ ಚಿಕಿತ್ಸೆ ಜತೆಗೆ ಆಹಾರಕ್ರಮದ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣಮುಖರಾಗಬಹುದು. ಇಲ್ಲಿ ಮಂಡಿ ನೋವು ಕಡಿಮೆ ಮಾಡುವ 9 ಆಹಾರಗಳ ಬಗ್ಗೆ ಹೇಳಿದ್ದೇವೆ, ಇವುಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸಿ ಆರೋಗ್ಯ ಮರಳಿ ಪಡೆಯಿರಿ.ಮಧ್ಯ ವಯಸ್ಸು ದಾಟುತ್ತಿದ್ದಂತೆ ಮಂಡಿ ನೋವು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಡೆಂಗೆ, ಚಿಕನ್ಗುನ್ಯಾ ಈ ರೀತಿಯ ಕಾಯಿಲೆಗಳು ಬಂದಾಗ ಕೂಡ ಮಂಡಿ ನೋವಿನ ಸಮಸ್ಯೆ ಕಾಡುವುದು.
ಮಂಡಿ ನೋವಿನ ಸಮಸ್ಯೆ ಬಂದಾಗ ಚಿಕಿತ್ಸೆ ಜತೆ ಡಯಟ್ ಕಡೆ ಗಮನ ನೀಡಿದರೆ ಬೇಗನೆ ಈ ಸಮಸ್ಯೆಯಿಂದ ಗುಣಮುಕ್ತರಾಗಬಹುದು.

ಮಂಡಿ ನೋವು ಕಡಿಮೆಮಾಡುವಲ್ಲಿ ಈ ಆಹಾರಗಳು ಪರಿಣಾಮಕಾರಿ:
ಪಾಲಾಕ್ : ನಿಮ್ಮ ದಿನನಿತ್ಯದ ಆಹಾರದಲ್ಲಿ ಪಾಲಾಕ್ ಸೇರಿಸಿ. ಪಾಲಾಕ್ ಸಂಧಿವಾತ, ಮಂಡಿ ನೋವು ಕಡಿಮೆ ಮಾಡುವಲ್ಲಿ ಸಹಕಾರಿ.
ಮೀನು : ಸಾಲಮೋನ್, ತುನ ಈ ಮೀನಿನಲ್ಲಿರುವ ಎಣ್ಣೆಯಂಶ ಹಾಗೂ ಒಮೆಗಾ 3 ಕೊಬ್ಬಿನಂಶ, ಫ್ಯಾಟಿ ಆ್ಯಸಿಡ್ ಇವುಗಳು ಮಂಡಿನೋವು ಕಡಿಮೆ ಮಾಡುವಲ್ಲಿ ಸಹಕಾರಿ. ಇದರಲ್ಲಿ ಅತ್ಯಧಿಕ ವಿಟಮಿನ್ ಡಿ ಇದ್ದು, ಸಂಧಿವಾತ ಇರುವವರು ಮೀನನ್ನು ಡಯಟ್ನಲ್ಲಿ ಸೇರಿಸಿದರೆ ಒಳ್ಳೆಯದು.

ವೆಜ್ ತಿನ್ನುವವರು ಫಿಶ್ ಆಯಿಲ್ ತೆಗೆದುಕೊಳ್ಳುವ ಮೂಲಕ ಮಂಡಿನೋವು ಕಡಿಮೆ ಮಾಡಿಕೊಳ್ಳಬಹುದು.
ಡ್ರೈ ಫ್ರೂಟ್ಸ್ : ವಾಲ್ನಟ್, ಪಿಸ್ತಾ, ಬಾದಾಮಿ ಇವುಗಳಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ, ವಿಟಮಿನ್ ಇ, ಪ್ರೊಟಿನ್ ಇವುಗಳು ಇದ್ದು ರೋಗ ನಿರೋಧಕ ಶಕ್ತಿ ಹೆಚ್ಚುವುದು, ಅಲ್ಲದೆ ಡ್ರೈ ಫ್ರೂಟ್ಸ್ನಲ್ಲಿರುವ ಒಮೆಗಾ 3 ಕೊಬ್ಬಿನಂಶ ಮಂಡಿನೋವು ಕಡಿಮೆ ಮಾಡುವಲ್ಲಿ ಸಹಕಾರಿ.
ಕೇಸರಿ : ಮಂಡಿನೋವು ಇರುವವರು ಹಾಲಿಗೆ ಕೇಸರಿ ಹಾಕಿ ತಿಂದರೆ ತುಂಬಾ ಒಳ್ಳೆಯದು. ಕೇಸರಿಯಲ್ಲಿ ಉರಿಊತ ಕಡಿಮೆ ಮಾಡುವ ಸಾಮರ್ಥ್ಯ ಇದೆ.

ಬ್ರೊಕೋಲಿ : ಬ್ರೊಕೋಲಿ ಸಲಾಡ್ ಜತೆ ತಿನ್ನಿ, ಮಂಡಿನೋವು ಇರುವವರು ತಮಮ್ ಡಯಟ್ನಲ್ಲಿ ಸೇರಿಸಬೇಕಾದ ಆಹಾರಗಳಲ್ಲಿ ಇದು ಕೂಡ ಒಂದು.
ಸಿಟ್ರಸ್ ಹಣ್ಣುಗಳು : ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಿಟ್ರಸ್ ಹಣ್ಣುಗಳು ಪ್ರಯೋಜನಕಾರಿ. ದ್ರಾಕ್ಷಿ, ಕಿತ್ತಳೆ, ಕಿವಿ ಹಣ್ಣು ಇವುಗಳಲ್ಲಿ ವಿಟಮಿನ್ ಸಿ ಅಧಿಕವಿದೆ.

ಚೆರ್ರಿ ಹಣ್ಣು : ಸಿಹಿಯಿಲ್ಲದ ಚೆರ್ರಿ ಜ್ಯೂಸ್ ಸಂಧಿವಾತ ಇರುವವರು ಕುಡಿಯುವುದು ಒಳ್ಳೆಯದು. ಇವುಗಳಲ್ಲಿರುವ anthocyanins ಅಂಶ ಉರಿ ಊತ ಕಡಿಮೆ ಮಾಡುವುದು.
ಬೆಳ್ಳುಳ್ಳಿ : ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಮಂಡಿ ನೋವು ಕಡಿಮೆ ಮಾಡುವಲ್ಲಿ ಸಹಕಾರಿ.
ರೆಡ್ ಬೀನ್ಸ್ : ರೆಡ್ ಬೀನ್ಸ್ನಲ್ಲಿ ವಿಟಮಿನ್ ಸಿ, ಪ್ರೊಟೀನ್, ಫಾಲಿಕ್ ಆಮ್ಲ, ಕಬ್ಬಿಣದಂಶ, ಮ್ಯಾಗ್ನಿಷಿಯಂ ಮತ್ತು ಪೊಟಾಷ್ಯಿಯಂ ಇವೆಲ್ಲಾ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಖಡಕ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆಂಬ ವದಂತಿ ಇಂದು ಬೆಳಗಿನಿಂದಲೂ ಹರಿದಾಡುತ್ತಿದ್ದು, ಇದೀಗ ಬಂದ ಮಾಹಿತಿಯಂತೆ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಖಚಿತವಾಗಿದೆ. ಐಜಿ-ಡಿಜಿಪಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿರುವ ಅಣ್ಣಾಮಲೈ, ಕಳೆದ ತಮ್ಮ ಹತ್ತು ವರ್ಷಗಳ ಸೇವಾವಧಿಯಲ್ಲಿ ಕುಟುಂಬದ ಜೊತೆಗೆ ಕಾಲ ಕಳೆಯಲು ಸಾಧ್ಯವಾಗದ ಕಾರಣ, ತಮ್ಮ ರಾಜೀನಾಮೆ ಸ್ವೀಕೃತಗೊಂಡ ಬಳಿಕ ಕುಟುಂಬ ಸದಸ್ಯರೊಂದಿಗೆ ಇರಲಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಣ್ಣಾಮಲೈ ರಾಜಕೀಯ…
ಇದು 2012ರಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ್ದ ಗುಜರಾತಿನ ಏಕಮಾತ್ರ ಮಹಿಳೆ ಎನಿಸಿದ್ದ ಕೋಮಲ್ ಗಣಾತ್ರ ಅವರ ಕಥೆ. ಅವರ ಬದುಕಿನ ಸಂಘರ್ಷ ನಮ್ಮ ನಿಮ್ಮ ಬದುಕಿನಂತೆಯೇ ಇದೆ, ನೋಡಿ 2008, ಆಗ ಕೋಮಲ್ ಗಣಾತ್ರ ಅವರಿಗೆ 26 ವರ್ಷ. ಮುಂದೆ ತಾನು ಕೂಡ ಸಮಾಜಕ್ಕೆ ದೊಡ್ಡ ವ್ಯಕ್ತಿಯಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ, ಆ ಸಮಯದಲ್ಲಿ ನ್ಯೂಜಿಲ್ಯಾಂಡ್ ನಲ್ಲಿ ನೆಲೆ ಕಂಡಿದ್ದ ಆನಿವಾಸಿ ಭಾರತೀಯ ತಾನು ಕೋಮಲ್ ಗಣಾತ್ರ ಅವರನ್ನು ಕೈ ಹಿಡಿಯುವುದಾಗಿ ಮನೆಯವರಿಂದ ಒತ್ತಡ ತಂದು ಕೊನೆಗೆ 2008ರಲ್ಲಿ…
ಉತ್ತರ ಕನ್ನಡ ಜೆಲ್ಲೆಯ ಭಟ್ಕಳ ತಾಲೂಕಿನ ತೆಂಗಿನಗುಡ್ಡೆ ಸರಕಾರಿ ಶಾಲೆಯ ಈ ಹುಡ್ಗಾ ನೀರಿನಲ್ಲಿ ಚಲಿಸುವ ಸೈಕಲ್ ಆವಿಷ್ಕಾರ ಮಾಡಿದ್ದು, ಈ ಚಿಕ್ಕ ವಯಸ್ಸಿನಲ್ಲಿಯೇ ಈತನ ಪ್ರತಿಭೆ ಮೆಚ್ಚವಂತದ್ದು.
ಕರ್ನಾಟಕದ ಹೆಮ್ಮೆಯ ಜೋಡಿ ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಲವ್ ಸ್ಟೋರಿಯನ್ನ ಸಿನಿಮಾ ಮಾಡೋಕ್ಕೆ ಬಾಲಿವುಡ್ನಲ್ಲಿ ವೇದಿಕೆ ಸಿದ್ಧವಾಗಿದೆ.ಈಗಾಗಲೆ ಚಿತ್ರಕ್ಕೆ ‘ಮೂರ್ತಿ’ ಎಂದು ಟೈಟಲ್ ಇಡಲಾಗಿದೆ. ಆದರೆ ಈಗ ಪ್ರೇಕ್ಷಕರಲ್ಲಿ ಸುಧಾ ಮೂರ್ತಿ ಪಾತ್ರದಲ್ಲಿಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಸುಧಾಮೂರ್ತಿ ಜೀವನವನ್ನು ತೆರೆಮೇಲೆ ತರುವ ಸಾಹಸಕ್ಕೆ ಕೈ ಹಾಕಿರುವುದು ಬಾಲಿವುಡ್ ನ ಖ್ಯಾತನಿರ್ದೇಶಕಿ ಅಶ್ವಿನಿ ಅಯ್ಯರ್ ತಿವಾರಿ. ಈಗಾಗಲೆ ಸ್ಕ್ರಿಪ್ಟ್ ಫೈನಲ್ ಮಾಡಿಕೊಂಡಿರುವ ಅಶ್ವಿನಿ ಪಾತ್ರಗಳ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅವರ…
ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ಹೋರಿಯೊಂದು ಮಹಿಳೆಯ ಮಂಗಳಸೂತ್ರವನ್ನು ನುಂಗಿರುವ ಘಟನೆ ನಡೆದಿದ್ದು, ಸಗಣಿಯ ಮೂಲಕ ಹೊರಬಾರದಿರುವುದರಿಂದ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆ ಮಹಾರಾಷ್ಟ್ರದ ಅಹಮದ್ನಗರ ಜಿಲ್ಲೆಯ ವಾಘಪುರ್ನಲ್ಲಿ ನಡೆದಿದ್ದು, ಹೋರಿಗಳ ಹಬ್ಬದ ವೇಳೆ ಈ ರೀತಿ ಸರವನ್ನು ಹೋರಿ ನುಂಗಿತ್ತು ಎನ್ನಲಾಗಿದೆ. ಆ.30ರಂದು ನಡೆದ ಹಬ್ಬದ ವೇಳೆ ರಾಸುಗಳಿಗೆ ಅಲಂಕಾರ ಮಾಡಲಾಗುತ್ತದೆ. ಈ ವೇಳೆ ಮಹಿಳೆಯ ಮನೆಯಲ್ಲಿದ್ದ ರಾಸುಗಳಿಗೂ ಅಲಂಕಾರ ಮಾಡಲಾಗಿತ್ತು. ಪೂಜೆ ಮಾಡುವ ವೇಳೆ ಕೊರಳಲ್ಲಿದ್ದ 1.5ಲಕ್ಷ ಮೌಲ್ಯದ ಮಂಗಳಸೂತ್ರ ಹೋರಿಯ ಕೊಂಬಿಗೆ…
ಟ್ಯಾಟೂ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ, ಈಗಿನ ಕಾಲದಲ್ಲಿ ಎಲ್ಲರಿಗೂ ಟ್ಯಾಟೂ ಹುಚ್ಚು ಹಾಗೆಯೇ ಇಲ್ಲೊಬ್ಬ ಮಾಡೆಲ್. ದೇಹವನ್ನು ಬಗೆಬಗೆಯಾಗಿ ಮಾರ್ಪಾಡು ಮಾಡಿ ಮಿಂಚುವುದೆಂದರೆ ಈಕೆಗೆ ಬಲು ಇಷ್ಟವಂತೆ. ಇದಕ್ಕಾಗಿಯೇ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದಳು . ಆದರೆ, ಇದೀಗ ಇದೇ ಹುಚ್ಚು ಇವಳನ್ನು ಮೂರು ವಾರಗಳ ಕಾಲ ದೃಷ್ಟಿಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ನ್ಯೂ ಸೌತ್ ವೇಲ್ಸ್ನ ಬಾಡಿ ಮಾಡಿಫಯರ್ ಅಂಬೇರ್ ಲೂಕ್ 24 ಎಂಬಾಕೆ ಈ ಸಂಕಷ್ಟ ಅನುಭವಿಸಿದ್ದವಳು. ಈಕೆ ತನ್ನ ದೇಹವನ್ನು…