ಭವಿಷ್ಯ

ಮಂಗಳವಾರದ ನಿಮ್ಮ ರಾಶಿ ಭವಿಷ್ಯ, ನಿಮಗೆ ಮಂಗಳವಾಗಲಿದೆಯೇ ನೋಡಿ…

213

ಇಂದು ಮಂಗಳವಾರ, 27/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಮೇಷ:

ಇಂದು ನಿಮ್ಮ ವರ್ತನೆ ನಿಮ್ಮ ಕುಟುಂಬದವರಿಗೆ ಅಸಮಧಾನ ತರಬಹುದು. ಮದುವೆ ವಿಚಾರದಲ್ಲಿ ಅನುಕೂಲ. ಆಸ್ತಿಯ ಖರೀದಿಯ ಬಗ್ಗೆ ಮಾತುಕತೆ ಉಂಟಾಗುವುದು. ನಿಮ್ಮ ಪ್ರಯಾಣದ ಯೋಜನೆಗಳ ವೆಳಾಪಟ್ಟಿ ಕೊನೆಗಳಿಗೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ, ಹಣಕಾಸಿನ ಅನುಕೂಲತೆ ಕೂಡಿಬರಲಿದೆ.

ವೃಷಭ:-

ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಕೆಲಸಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ವ್ಯವಹಾರಸ್ಥರಿಗೆ ಸಾಧಾರಣ ಫಲ ಕಂಡುಬರುವುದು.  ಅನೇಕ ದಿನಗಳಿಂದ ಬಾಕಿ ಇರುವ ಕಾರ್ಯಗಳು ಪೂರ್ಣಗೊಳ್ಳುವವು.

ಮಿಥುನ:

ನಿಮ್ಮ ತಪ್ಪುಗಳನ್ನು ಎತ್ತಿ ತೋರಿಸಿ,ನಿಮ್ಮ ಬಾಯಿಂದಲೇ ನೀವು ಸತ್ಯವನ್ನು ಹೇಳಿ ಪೇಚಿಗೆ ಸಿಲುಕುವಂತೆ ಮಾಡುವರು. ಒದಗಿಬರುವ ಅವಕಾಶಗಳನ್ನು ಕೈ ಚೆಲ್ಲದೇ ಬಳಸಿಕೊಳ್ಳಿ. ಪ್ರಯಾಣ ಮಾಡುವಾಗ ವಾಹನಗಳ ಬಗ್ಗೆ ಎಚ್ಚರಿಕೆ ಅಗತ್ಯ.

ಕಟಕ :-

ದೂರದ ಪ್ರಯಾಣ ಹೋಗಬೇಕಾಗಿ ಬರಲಿದೆ. ಬಂಧುಗಳೊಂದಿಗೆ ಕಲಹ ಸಾಧ್ಯತೆ. ನೀವು ಯಾರಾದ್ದಾದರೂ ಜೊತೆಗಿದ್ದಾಗ, ಜಗಳಗಳು ಅನಿವಾರ್ಯ. ಮೂರ್ಖರ ಜತೆ ವಾದ ಮಾಡಿ ಪ್ರಯೋಜನವಿಲ್ಲ. ನೀವು ನಿಮ್ಮ ಸಂಗಾತಿಯ ಜೊತೆ ವಾದಕ್ಕೆ ಬೀಳಬಹುದು.

 ಸಿಂಹ:

ಮಕ್ಕಳ ವಿಷಯದಲ್ಲಿ ಹರ್ಷದಾಯಕ ವಾರ್ತೆಗಳನ್ನು ಕೇಳುವಿರಿ. ದೂರ ಪ್ರಯಾಣ ಸಾಧ್ಯತೆ. ದೊಡ್ಡವರ ಆಶೀರ್ವಾದದಿಂದ ನಿಮ್ಮ ಕಾರ್ಯಗಳು ಕೈಗೂಡುವವು. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ.

ಕನ್ಯಾ :-

ಗೃಹ ನಿರ್ಮಾಣ ಸಾಮಗ್ರಿಗಳ ವ್ಯಾಪಾರಸ್ಥರಿಗೆ ಲಾಭದ ನಿರೀಕ್ಷೆ. ಕುಟುಂಬ ಕಲಹದಿಂದ ಮನಸ್ಸಿಗೆ ಅಶಾಂತಿಯು ಉಂಟಾಗುವುದು. ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭ ತರುತ್ತವೆ. ನೌಕರಸ್ಥರಿಗೆ ನಿರಾಳತೆ ದೊರೆಯಲಿದೆ. ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ

ತುಲಾ:

ಹಿರಿಯರೊಂದಿಗೆ ವಾದ ವಿವಾದಗಳಿಗೆ ಮುಂದಾಗದಿರುವುದು ಒಳಿತು. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ಕೆಲಸದಲ್ಲಿನ ಒತ್ತಡಗಳು ಕಡಿಮೆಯಾಗಲಿವೆ. ಪ್ರಯಾಣದಲ್ಲಿ ಹೆಚ್ಚಿನ ಕಾರ್ಯಗಳು ನಡೆದರೂ ಸಮಾಧಾನ ಸಿಗಲಾರದು.

ವೃಶ್ಚಿಕ :-

ವ್ಯವಹಾರದಲ್ಲಿ ಕ್ಷಿಪ್ರ ನಿರ್ಧಾರದಿಂದಾಗಿ ಅಧಿಕ ಪ್ರಯೋಜನ. ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ಸಾಗುವವು.ನಿಮ್ಮ ನಿಜವಾದ ಪ್ರಯತ್ನವಿದ್ದಲ್ಲಿ ದೇವರು ಒಲಿಯುವನು.

ಧನಸ್ಸು:

ಗುತ್ತಿಗೆ ಕೆಲಸ ನಿರ್ವಹಿಸುವವರಿಗೆ ಹೆಚ್ಚಿನ ಕೆಲಸಗಳು ದೊರೆಯಲಿವೆ. ನ್ಯಾಯಾಲಯದ ಕೆಲಸಗಳು ನಿಮ್ಮ ಪರವಾಗಿ ತಿರುವು ಪಡೆಯಲಿವೆ.ನೀವು ಹಣ ಕೂಡಿಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ ನಿಮ್ಮ ಆಪತ್‌ ಕಾಲದಲ್ಲಿ ಯಾರೂ ನಿಮಗೆ ಸಹಾಯವನ್ನು ಮಾಡುವುದಿಲ್ಲ. ವಿಶ್ವಾಸದ ದುರುಪಯೋಗಕ್ಕೆ ಕಾರಣರಾಗದಿರಿ.

ಮಕರ :-

ಕೆಲಸ ಕಾರ್ಯಗಳು ಪ್ರಗತಿಪರವಾಗಿರುವುದರಿಂದಾಗಿ ಸಂತಸವನ್ನು ನೀಡುವವು. ಮನೆಯ ಕುಟುಂಬದ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ.ದಿನಸಿ ವ್ಯಾಪಾರಿಗಳಿಗೆ ಲಾಭ. ವಾಗಿ ಕೂಡಾ ಸಂತಸದ ವಾತಾವರಣ ನೆಮ್ಮದಿ ತರುತ್ತದೆ. ಅವಿವಾಹಿತರಿಗೆ ಸಿಹಿಸುದ್ಧಿ. ವ್ಯಾಪಾರ ವ್ಯವಹಾರಗಳನ್ನು ಜಾಗ್ರತೆಯಿಂದ ನಡೆಸಬೇಕಾಗುತ್ತದೆ.

ಕುಂಭ:-

ಚಿನ್ನಾಭರಣಗಳ ಖರೀದಿಗೆ ಉತ್ತಮ ದಿನ. ಮನೆಯಲ್ಲಿ ಪರಿಸ್ಥಿತಿ ಉತ್ತಮ ಗೊಂಡು ಸಂತೋಷದ ವಾತಾವರಣ ಮೂಡಲಿದೆ. ಮಾತಿನಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದು. ಸಾಂಸಾರಿಕವಾಗಿ ಧರ್ಮಪತ್ನಿಯ ಸಹಕಾರದಿಂದ ಹಾಗೂ ಸೂಕ್ತ ಸಲಹೆಗಳಿಂದ ಮುನ್ನಡೆ ತರುತ್ತದೆ.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಮೀನ:-

ಕ್ರೀಡಾಪಟುಗಳಿಗೆ ಹೆಸರು ಗಳಿಸುವ ಅವಕಾಶ. ಕೌಟುಂಬಿಕ ವಲಯದಲ್ಲಿ ಮುನ್ನಡೆ ಇರುತ್ತದೆ.ವಿದ್ಯಾರ್ಥಿಗಳು ಆಟಪಾಠಗಳಲ್ಲಿ ಪ್ರಗತಿ ಹೊಂದುವರು. ಆರ್ಥಿಕವಾಗಿ ತುಸು ಸಮಾಧಾನ ಸಿಗುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ