ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶಗಳು ಸೆಮಿ ಫೈನಲ್ ಪ್ರವೇಶಿಸಿವೆ.
ಇದರ ಬೆನ್ನಲ್ಲೇ ಬಾಂಗ್ಲಾದೇಶದ ಕೆಲ ಕಿಡಿಗೇಡಿ ಅಭಿಮಾನಿಗಳು ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿ ಚಿತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾರೆ.
ವಿವಾದಿತ ಚಿತ್ರ :-
ಈ ಚಿತ್ರದಲ್ಲಿ ಹುಲಿಗೆ ಬಾಂಗ್ಲಾದೇಶದ ಭಾವುಟ ಹೊದಿಸಿ, ನಾಯಿಯೊಂದಕ್ಕೆ ಭಾರತದ ತ್ರಿವರ್ಣ ಧ್ವಜವನ್ನು ಹೊಂದಿಸಲಾಗಿದೆ. ಅಂತೆಯೇ ನಾಯಿಯನ್ನು ಹುಲಿ ಅಟ್ಟಾಡಿಸುತ್ತಿರುವಂತೆ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿ ಬಿಟ್ಟಿದ್ದಾರೆ. ಇದೀಗ ಈ ವಿವಾದಿತ ಚಿತ್ರ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಬಾಂಗ್ಲಾದೇಶದ ಕಿಡಿಗೇಡಿ ಅಭಿಮಾನಿಗಳು ಕೀಟಲೆ ಇದೆ ಮೊದಲಲ್ಲ, ಈ ಹಿಂದೆಯೂ ಸಹ ಧೋನಿ ರುಂಡವನ್ನು ಬಾಂಗ್ಲಾದೇಶ ಬೌಲರ್ ಒಬ್ಬ ಹಿಡಿದಿರುವ ರೀತಿ ಚಿತ್ರ ಬಿಡಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು.
ಅಲ್ಲಿಗೂ ಸುಮ್ಮನಿರದ ಬಾಂಗ್ಲಾದೇಶದ ಸ್ಥಳೀಯ ಪತ್ರಿಕೆಯೊಂದು ಭಾರತೀಯ ಕ್ರಿಕೆಟ್ ಆಟಗಾರರ ಅರ್ಧ ತಲೆ ಬೋಳಿಸಿ ಚಿತ್ರ ಪ್ರಕಟಿಸಿತ್ತು, ಬಾಂಗ್ಲಾ ಕ್ರಿಕೆಟಿಗನೋರ್ವ ಭಾರತೀಯ ಕ್ರಿಕೆಟಿಗರ ತಲೆ ಬೋಳಿಸಿದ ರೀತಿಯಲ್ಲಿ ಚಿತ್ರ ಪ್ರಕಟಿಸಿ ವಿವಾದಕ್ಕೀಡಾಗಿತ್ತು. ವ್ಯಾಪಕ ವಿರೋಧದ ಬಳಿಕ ಆ ಚಿತ್ರವನ್ನು ಪತ್ರಿಕೆ ತೆಗೆದು ಹಾಕಿತ್ತು.
ಇದೀಗ ಮತ್ತೊಮ್ಮೆ ಕಿಡಿಗೇಡಿ ಬಾಂಗ್ಲಾದೇಶ ಅಭಿಮಾನಿಗಳು ಮತ್ತೆ ಭಾರತದ ಗೌರವಕ್ಕೆ ಧಕ್ಕೆ ತರುವಂತಹ ಚಿತ್ರ ಬಿಡಿಸಿ ಭಾರತೀಯರನ್ನು ಕೆಣಕಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದ ಅನೇಕ ಭಾಷೆಗಳಲ್ಲಿ ಮೂಡಿ ಬರುತ್ತಿರುವ ‘ಬಿಗ್ ಬಾಸ್’ ಜನಪ್ರಿಯ ರಿಯಾಲಿಟಿ ಶೋ ಆಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ಕನ್ನಡದಲ್ಲಿ ಕಿಚ್ಚ ಸುದೀಪ್ ಯಶಸ್ವಿಯಾಗಿ ಬಿಗ್ ಬಾಸ್ ನಿರೂಪಣೆ ಮಾಡಿದ್ದಾರೆ. ತಮಿಳುನಲ್ಲಿ ಖ್ಯಾತ ನಟ ಕಮಲ್ ಹಾಸನ್ ಬಿಗ್ ಬಾಸ್ ನಿರೂಪಣೆ ಯಶಸ್ವಿಯಾಗಿ ಮಾಡಿದ್ದಾರೆ. ತೆಲುಗಿನಲ್ಲಿಯೂ ‘ಬಿಗ್ ಬಾಸ್’ ಮೊದಲ ಸೀಸನ್ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಖ್ಯಾತ ನಟ ಜೂನಿಯರ್ ಎನ್.ಟಿ.ಆರ್. ನಿರೂಪಣೆ ಮಾಡಿದ್ದರು. ತೆಲುಗಿನಲ್ಲಿ ಬದಲಾಗಲಿದ್ದಾರೆ ಬಿಗ್’ಬಾಸ್ ನಿರೂಪಕ… ಈಗಾಗಲೇ ತೆಲುಗಿನ ಬಿಗ್ಬಾಸ್ ರಿಯಾಲಿಟಿ ಶೋಅನ್ನು…
ಪಣಜಿ, ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್ಟಿ ಮಂಡಳಿ ಕೆಫೀನ್ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು ಇಳಿಸಿದೆ. ಜಿಎಸ್ಟಿ ಮಂಡಳಿ ಸಭೆಯ ಬಳಿಕ ಶುಕ್ರವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಒಂದು ರಾತ್ರಿ ತಂಗಲು 1 ಸಾವಿರ ರೂ.ವರೆಗಿನ ಹೋಟೆಲ್ ಕೋಣೆಗಳ ಬಾಡಿಗೆ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು…
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು ಬಾಹ್ಯಾಕಾಶದಲ್ಲೇ ಲೈವ್ ಸ್ಯಾಟೆಲೈಟ್ ವೊಂದನ್ನು ಹೊಡೆದುರುಳಿಸುವ ಮೂಲಕ ಅತ್ಯಂತ ಅಪರೂಪದ ಸಾಧನೆಯೊಂದನ್ನು ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಧ್ಯಾಹ್ನ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 300 ಕಿ.ಮೀ ದೂರದಲ್ಲಿರುವ ಉಪಗ್ರಹವನ್ನು ಭಾರತ ಇಂದು ಹೊಡೆದು ಹಾಕಿದೆ. ಒಟ್ಟು ಮೂರು ನಿಮಿಷದಲ್ಲಿ ಉಪಗ್ರಹ ಪ್ರತಿರೋಧಿ ಕ್ಷಿಪಣಿ ಪ್ರಯೋಗದ ಮಿಶನ್ ಶಕ್ತಿ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಮೂಲಕ ಅಮೆರಿಕ, ರಷ್ಯಾ, ಚೀನಾದ ಬಳಿಕ ಈ…
ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಬಸವ ಪೀಠದ ಅಧ್ಯಕ್ಷೆ 74 ವರ್ಷದ ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಬೆಂಗಳೂರಿನ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3.30ಕ್ಕೆ ಲಿಂಗೈಕ್ಯರಾಗಿದ್ದಾರೆ. ವಯೋ ಸಹಜ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮಾತೆ ಮಹಾದೇವಿ ಅವರು…
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ. ಅವರು ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಎಐಸಿಸಿ ಕಚೇರಿಯಲ್ಲಿ ಸಿಡಬ್ಲೂಸಿ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ ಯಾವುದೇ ತೊಂದರೆ ಇಲ್ಲ. ಕುಮಾರಸ್ವಾಮಿ ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸಿಎಂ ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ. ಸಭೆಯಲ್ಲಿ ರಾಜ್ಯದ ಸೋಲಿನ ಬಗ್ಗೆ ಚರ್ಚೆ ಮಾಡಲಾಗುವುದು. ಪಾರ್ಟಿ ಫೋರಂನಲ್ಲಿ…
ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಪೂಜೆ ಆದ ನಂತರ ಸಾಮಾನ್ಯವಾಗಿ ಪ್ರಸಾದವನ್ನು ಕೊಡುತ್ತಾರೆ. ಜೊತೆಗೆ ಹೂ ಅಥವಾ ಹೂವಿನ ಮಾಲೆಯನ್ನು ಸಹ ಕೊಡುತ್ತಾರೆ. ಪೂಜಾರಿಗಳು ಪ್ರಸಾದದ ರೂಪದಲ್ಲಿ ಕೊಟ್ಟ ಹೂವನ್ನು ಭಕ್ತರು ಸ್ವಿಕಾರ ಮಾಡುತ್ತಾರೆ. ಆದರೆ ಹೀಗೆ ಕೊಟ್ಟ ಹೂವನ್ನು ಏನು ಮಾಡಬೇಕೆಂದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹಾಗಾದ್ರೆ ಪ್ರಸಾದದ ರೂಪದಲ್ಲಿ ಸಿಕ್ಕ ಹೂವನ್ನು ಏನು ಮಾಡಬೇಕು..? ದೂರದ ಊರುಗಳಿಗೆ ಹೋಗಿದ್ದರೆ, ಅಲ್ಲಿನ ದೇವಸ್ಥಾನದಲ್ಲಿ ಸಿಕ್ಕ ಹೂಗಳು ಮನೆಗೆ ಬರುವ ಮೊದಲೇ ಬಾಡಿರುತ್ತದೆ. ಸಾಮಾನ್ಯವಾಗಿ ಬಾಡಿದ ಹೂಗಳನ್ನು ಮನೆಯಲ್ಲಿ…