ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಒಮ್ಮೆ ಜಪಾನಿನ ಫುಕವೋಕಾ ಎನ್ನುವ ಊರಿನಲ್ಲಿ ನಾಲ್ಕು ರಸ್ತೆ ಕೂಡುವ ಸರ್ಕಲ್ ಕೂಡು ರಸ್ತೆ ಕುಸಿದು ಬಿದ್ದಿತ್ತು ! 98 ಅಡಿ ಉದ್ದ, 88 ಅಡಿ ಅಗಲ ಇದ್ದ ರಸ್ತೆ ಇದ್ದಕ್ಕಿದ್ದ ಹಾಗೆ ಕುಸಿದು ಹೋಗಿತ್ತು ,ಕುಸಿದದ್ದು ಎಂದರೆ ನಮ್ಮಲ್ಲಿನಂತೆ ಸಣ್ಣದಾಗಿ ಎರಡಡಿ ಕೆಳಕ್ಕಿಳಿದಿರಲಿಲ್ಲ ಬರೊಬ್ಬರಿ 50 ಅಡಿಯಷ್ಟು ಕೆಳಗೆ ಕುಸಿದು ಹೋಗಿತ್ತು !
ಈ ಭೂಕುಸಿತವು ಅವರಿಗೇನೂ ಹೊಸದಲ್ಲ ಏಕೆಂದರೆ ಎಂತೆತಹಾ ಭೂಕಂಪಗಳನ್ನು ಎದುರಿಸಿದವರಿಗೆ ಇದಾವ ಲೆಕ್ಕ , ಆದರೆ ಈ ಭೂ ಕುಸಿತ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿತು ಏಕೆಂದರೆ ಇದಕ್ಕೂ ಮೊದಲು ಇಂತಹುದೇ ಪರಿಸ್ಥಿತಿ ವಾಸಿಂಗ್ಟನ್ನಿನಲ್ಲಿಯೂ ಎದುರಾಗಿತ್ತು !
ಆದರೆ ಜಪಾನಿನವರು ಈ ಪರಿಸ್ಥಿತಿ ಎದುರಿಸಲು ಸಿದ್ಧವಾಗಿಯೇ ಇದ್ದರೇನೋ ಎಂಬಂತೆ ಕೆಲಸ ಶುರು ಮಾಡಿಬಿಟ್ಟರು ,ಅವರು ಬೇರೆ ದೇಶಗಳಂತೆ ಕುಸಿದ ಗುಂಡಿಯ ಮುಂದೆ ಕೂತು ಸಂತಾಪ ಸೂಚಿಸುವುದೋ ಅಥವಾ ಪರಿಸ್ಥಿತಿಯ ಅವಲೋಕನ ಹಾಗೂ ನೇರ ಮಾಹಿತಿ ಸಂಗ್ರಹಣೆಗೆ ಅಧಿಕಾರಿಗಳನ್ನು ಕಳುಹಿಸಿದ್ದೇವೆ ಎಂದು ಹೇಳಲೇ ಇಲ್ಲ .
ರಸ್ತೆ ಕುಸಿದ 17 ನಿಮಿಷದ ಒಳಗೆಯೇ ಹೈವೇ ಅಥೋರಿಟಿ ಮುಖ್ಯಾಧಿಕಾರಿ ಸ್ಥಳಕ್ಕೆ ಹಾಜರಾದ ಹಾಗೂ ಆತ ಅಲ್ಲಿಗೆ ಬರುವಷ್ಟರಲ್ಲಿಯೇ ಕುಸಿತವಾದಲ್ಲಿಗೆ ಗ್ಯಾಸ್ ಪೈಪ್ ಕೆಲಸಗಾರರು.ಆಪ್ಟಿಕಲ್ ಫೈಬರ್ ಕೆಲಸಗಾರರು ,ಒಳಚರಂಡಿ ಸರಿಪಡಿಸಲು ಕೆಲಸಗಾರರು.ವಿದ್ಯುತ್ ಕೆಲಸಗಾರರು ಎಲ್ಲರೂ ಹಾಜರಿದ್ದರು .
ಮುಂದಿನ ಕೆಲವೇ ಗಂಟೆಗಳಲ್ಲಿ ವಿದ್ಯುತ್.ಗ್ಯಾಸ್.ಡ್ರೈನೇಜ್.ಓ.ಎಫ್.ಸಿ. ಎಲ್ಲವನ್ನೂ ಅಸಾಮಾನ್ಯ ವೇಗದಲ್ಲಿ ಸರಿಪಡಿಸಿಬಿಟ್ಟರು . ಅದೇ ಸಮಯದಲ್ಲಿಯೇ ಸ್ಟೇಡಿಯಮ್ಮಿನಲ್ಲಿ ಹಾಕುವ ಫ್ಲಡ್ ಲೈಟ್ ಜೊಡಿಸುವಷ್ಟರಲ್ಲಿಯೇ ಜಪಾನಿನಲ್ಲಿಯೇ ತಯಾರಾದ ಆಧುನಿಕ ಜೆ.ಸಿ.ಬಿ ಹಾಗೂ ಟಿಲ್ಲರ್.ಟಿಪ್ಪರ್ .ಕ್ರೇನ್ ಗಳು ಹಾಜರಾದವು .
ಪ್ರತಿ ಮೂರು ಗಂಟೆಗೆ ಒಂದು ಟೀಮಿನ ಸಿಫ್ಟ್ ಬದಲಾವಣೆ ಮಾಡಲಾಗುತ್ತಿತ್ತು ! ಒಂದೇ ಒಂದು ಕ್ಷಣವನ್ನೂ ಅವರು ಟೀ ಕುಡಿಯುತ್ತಾ ಕಳೆಯಲೇ ಇಲ್ಲ .ಕೆಲಸ ಮುಗಿಸಿಯೇ ಬಿಟ್ಟರು ! ಅದೂ ಕೇವಲ 48 ಗಂಟೆಗಳ ಒಳಗೆಯೇ ರೋಡಿಗೆ ಟಾರು ಬಳಿದು.ಅಲ್ಲಲ್ಲಿ ಬಿಳಿ ನಾಮಗಳನ್ನೆಲ್ಲಾ ಹಚ್ಚಿ ಇಲ್ಲಿ ಈ ಮೊದಲು ಏನೂ ಆಗಿಯೇ ಇರಲಿಲ್ಲವೇನೋ ಎಂಬಂತೆ ಮನೆ ಕಡೆ ಹೊರಟರು.
ಸೈನಿಕರ ಕಾರ್ಯಾಚರಣೆಯಂತೆ ಹಗಲೂರಾತ್ರಿ ನೆಡೆದ ಆ ಕಾಮಗಾರಿ ಪ್ರಪಂಚದ ಹಲವು ಎಂಜನೀಯರುಗಳು ಆಶ್ಚರ್ಯಚಕಿತರಾಗುವಂತೆ ಮಾಡಿತು.ಈಗಲೂ ಸಹ ಹಲವು ವೆಬಸೈಟುಗಳು ಈ ಕೆಲಸಕ್ಕೆ 7 ದಿನ ತೆಗೆದುಕೊಂಡರು ಅಂತ ಬಡಕೊಳ್ಳುತ್ತಿದ್ದಾರೆ ಆದರೆ ಜಪಾನ್ ದೇಶದ ವೇಬಸೈಟುಗಳಲ್ಲಿ ಮಾತ್ರ ಅಧಿಕೃತ ಮಾಹಿತಿ ದೊರಕುತ್ತದೆ !
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಗಡಿ ಭಾಗದಲ್ಲಿ ಬೀಡುಬಿಟ್ಟಿದ್ದ ಉಗ್ರರ ನೆಲೆಯನ್ನು ಭಾರತೀಯ ವಾಯು ಸೇನೆ ಧ್ವಂಸಗೊಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ಗಾಗಿ ಮಿರಾಜ್-2000 ಹೆಸರಿನ 12 ಜೆಟ್ (ಐಎಎಫ್)ಗಳನ್ನು ಬಳಸಿಕೊಳ್ಳಲಾಗಿದೆ. ಉಗ್ರರ…
ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…
ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕೆಲ ನಾಯಕರು ಪಕ್ಷದ ಪರ ಭಾಷಣ ಮಾಡುವ ವೇಳೆ ನಾಲಿಗೆ ಹರಿಬಿಡ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಎತ್ತಿ ದವಡೆಗೆ ಹೊಡೆಯಿರಿ ಅಂತಾ ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಜನರಿಗೆ ಹಾಗೂ ರೈತರಿಗೆ ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆ ಏನಾಯ್ತು ಅಂತಾ ಪ್ರಶ್ನಿಸಿ, ಎಲ್ಲರೂ ದವಡೆಗೆ ಹೊಡೆಯಿರಿ ಅಂತಾ ಭಾಷಣ…
ಈಗ ಎಲ್ಲದಕ್ಕೂ ಒಂದೇ ಕಾರ್ಡ್ – ಅದುವೇ ಆಧಾರ್ ಕಾರ್ಡ್.ಸರ್ಕಾರ ಎಲ್ಲ ವ್ಯವಹಾರ ಮತ್ತು ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡುತ್ತಿರುವ ಸಂಗತಿ ನಮಗೆಲ್ಲ ತಿಳಿದಿದೆ. 12 ಅಂಕೆಗಳ ಆಧಾರ್ ನಂಬರ್ ಪ್ರತಿಯೊಬ್ಬ ಭಾರತೀಯನ ಗುರುತು ಹಾಗೂ ಹೆಮ್ಮೆಯ ಸಂಖ್ಯೆಯಾಗಿ ಮಾರ್ಪಟ್ಟಿದೆ
ಭಾನುವಾರ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಚಾಂಪಿಯನ್ಸ್ ಟ್ರೋಫಿ ಕೊನೆಯ ಲೀಗ್ ಪಂದ್ಯ ನೋಡಲು ಬಂದ ಉದ್ಯಮಿ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಭಾರತೀಯ ಪ್ರೇಕ್ಷಕರು ಹೀಯಾಳಿಸಿದ ಘಟನೆ ನಡೆದಿದೆ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನಸರಣಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಮುನ್ನ ಭಾರತ ಕ್ರಿಕೆಟ್ ತಂಡ& ದಕ್ಷಿಣ ಆಫ್ರಿಕಾ ತಂಡ ಪ್ರಕಟಗೊಂಡಿದೆ ಭಾರತ ಕ್ರಿಕೆಟ್ ತಂಡ(18 ಸದಸ್ಯರು) ಕೆ.ಎಲ್.ರಾಹುಲ್(ನಾಯಕ) ಜಸ್ಪ್ರೀತ್ ಬುಮ್ರಾ(ಉಪನಾಯಕ) ಶಿಖರ್ ಧವನ್ ಋತುರಾಜ್ ಗಾಯಕ್ವಾಡ್ ವಿರಾಟ್ ಕೊಹ್ಲಿ ಸೂರ್ಯ ಕುಮಾರ್ ಯಾದವ್ ಶ್ರೇಯಸ್ ಅಯ್ಯರ್ ವೆಂಕಟೇಶ್ ಅಯ್ಯರ್ ರಿಷಭ್ ಪಂತ್(ವಿ.ಕೀ) ಇಷಾನ್ ಕಿಷನ್ (ವಿ.ಕೀ) ಯಜುವೇಂದ್ರ ಚಹಲ್ ರವಿಚಂದ್ರನ್ ಅಶ್ವಿನ್ ವಾಷಿಂಗ್ಟನ್ ಸುಂದರ್ ಭುವನೇಶ್ವರ ಕುಮಾರ್ ದೀಪಕ್ ಚಹರ್ ಪ್ರಸಿದ್ಧ ಕೃಷ್ಣ ಶಾರ್ದೂಲ್ ಠಾಕೂರ್…