ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಾವೆಲ್ಲಾ ಬ್ಯಾಟರಿ ಚಾಲಿತ ಬೈಕ್ಗಳನ್ನು ಹಾಗೂ ಕಾರುಗಳನ್ನು ನೋಡಿದ್ದೇವೆ. ಆದ್ರೆ, ಬ್ಯಾಟರಿ ಚಾಲಿತ ಹೃದಯ ಇದೆ ಅಂದ್ರೆ ನೀವು ನಂಬತೀರಾ..? ಹೌದು ಇದು ನಿಜಕ್ಕೂ ಹೌಹಾರುವಂತಹ ವಿಷಯ. 4 ವರ್ಷದ ಬಾಲಕನಿಗೆ ಬ್ಯಾಟರಿ ಮೂಲಕ ಹೃದಯದ ಬಡಿತ ನಡೆಯುತ್ತಿರುವ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

ನಿಜಕ್ಕೂ ಇದೊಂದು ರೀತಿಯಲ್ಲಿ ವಿಚಿತ್ರ ಅನಿಸಿದ್ರೂ ಸತ್ಯ. ದಾಂಡೇಲಿ ಮೂಲದ ಪ್ರಕಾಶ ಹಾಗೂ ಅಶ್ವಿನಿ ದಂಪತಿಯ 4 ವರ್ಷದ ಬಾಲಕನಿಗೆ ಇಂತಹದೊಂದು ಆಪರೇಷನ್ ಮಾಡಲಾಗಿದೆ. ನಾಲ್ಕು ವರ್ಷದ ಈ ಬಾಲಕ ಹೃದಯ ಸಂಬಂದಿ ಕಾಯಿಲೆಯಿಂದ ಬಳಲುತ್ತಿದ್ದ. ಧಾರವಾಡದ ಎಸ್‌ಡಿಎಂ ನಾರಾಯಣ ಹೃದಯಾಲಯದ ವೈದ್ಯರು ಯಶಸ್ವಿ ಚಿಕಿತ್ಸೆ ಮಾಡಿದ್ದು, ಬ್ಯಾಟರಿ ಮೂಲಕ ಬಾಲಕನ ಹೃದಯಕ್ಕೆ ಚಾಲನೆ ನೀಡಿದ್ದಾರೆ. ಹೃದಯಕ್ಕೆ ಅಳವಡಿಸಿರುವ ಬ್ಯಾಟರಿಯಿಂದ ಬಾಲಕನ ಹೃದಯ ಚಾಲನೆಯಲ್ಲಿದೆ. ವೈದ್ಯ ಅರುಣ ಬಬಲೇಶ್ವರ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ..

ಹೃದಯ ಬಡಿತ ನಿಮಿಷಕ್ಕೆ 100ಕ್ಕಿಂತ ಅಧಿಕ ಇರುವಲ್ಲಿ ಈ ಬಾಲಕನ ಹೃದಯ ಬಡಿತ ಕೆವಲ 39 ಇತ್ತು. ಹೀಗಾಗಿ ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ಪೋಷಕರಿಗೆ ಬೆಂಗಳೂರಿನಲ್ಲಿ ತೋರಿಸಿ ಎಂದು ಹೇಳಿದ್ದರು ವೈದ್ಯರು. ಖುದ್ದು ಎಸ್‌ಡಿಎಂ ನಾರಾಯಾಣ ಹೃದಯಾಲಯದ ವೈದ್ಯರ ಬಳಿ ಬಂದಾಗ, ಬಿಪಿಎಲ್ ಕಾರ್ಡ್ ಮೇಲೆ ಉಚಿತವಾಗಿ 4 ವರ್ಷದ ಬಾಲಕ ಅಮೊಘನಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಬಾಲಕ ಎಲ್ಲರಂತೆ ಈಗ ಆರೋಗ್ಯವಾಗಿದ್ದಾನೆ. ಇನ್ನು ಈ ರೀತಿಯಾಗಿ ಶಸ್ತ್ರ ಚಿಕೆತ್ಸೆ ಮಾಡಿದ ಬಳಿಕ ಸುಮಾರು 10 ವರ್ಷಕ್ಕೊಮ್ಮೆ ಈ ರೀತಿಯಾಗಿ ಹೃದಯಕ್ಕೆ ಅಳವಡಿಸಿರುವ ಬ್ಯಾಟರಿಯನ್ನು ಬದಲಾಯಿಸಬೇಕಾಗಿದೆ. ಅದಕ್ಕೆ ಬಾಲಕನ ಪೋಷಕರು ಕೂಡ ತಯಾರಾಗಿದ್ದಾರೆ. ವೃತ್ತಿಯಲ್ಲಿ ಗೌಂಡಿ ಕೆಲಸ ಮಾಡಿಕೊಂಡಿರುವ ದಾಂಡೇಲಿ ಮೂಲದ ಪ್ರಕಾಶ ವೈದ್ಯರಿಗೆ ಧನ್ಯವಾದ ಹೇಳಿದ್ದಾರೆ.

ಬಾಲಕ ಸದ್ಯಕ್ಕೆ ಆರೋಗ್ಯವಾಗಿದ್ದು, ಎಲ್ಲರಂತೆ ಓಡಾಡಿಕೊಂಡು ಇದ್ದಾನೆ. ಬಡ ದಂಪತಿಗಳು ಹಣದ ಖರ್ಚು ಜಾಸ್ತಿ ಆಗುತ್ತೆ ಎಂದು ಹಾಗೆ ಬಿಟ್ಟಿದ್ದರೆ, ಮುಂದಿನ ದಿನಗಳಲ್ಲಿ ಬಾಲಕನ ಆರೋಗ್ಯಕ್ಕೆ ಸಮಸ್ಯೆಯಾಗುತ್ತಿತ್ತು. ಆದ್ರೆ ಅವೆಲ್ಲಾ ಸಮಸ್ಯೆಗಳನ್ನು ನಾರಾಯಾಣ ಹೃದಯಾಲಯದ ವೈದ್ಯರು ದೂರ ಮಾಡಿ, ಬಾಲಕನಿಗೆ ಮತ್ತೊಮ್ಮೆ ಮರುಜೀವ ಕೊಟ್ಟಂತೆ ಆಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಗುಜರಾತ್ ಚುನಾವಣಾ ಪ್ರಚಾರದ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ವಿಶೇಷ ಪ್ರಸಂಗ ನಡೆದಿದೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ಪೈರಸಿ ಸಿನಿಮಾದ ನೋಡದೇ, ಚಿತ್ರಮಂದಿರಗಳಿಗೆ ಹೋಗಿ ಚಿತ್ರ ವೀಕ್ಷಣೆ ಮಾಡಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ನಮ್ಮ ಹಾರ್ಡ್ ವರ್ಕ್ ಪರಿಗಣಿಸಿ ಸಿನಿಮಾವನ್ನು ಥಿಯೇಟರ್ ಗಳಲ್ಲಿ ವೀಕ್ಷಣೆ ಮಾಡಿರೋದು ನಿಮ್ಮ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಚಿತ್ರದ ಪೈರಸಿ ಬಗ್ಗೆ ಖಡಕ್ ಟ್ವೀಟ್ ಮಾಡಿದ್ದ ಸುದೀಪ್, ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ…
ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರೆಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ, ಭಾರತದಲ್ಲಿ ಕೂಡ ಇದೆ ತರಹದ ಹಲವಾರು ಪದ್ದತಿಗಳು ವಿವಿಧ ಪ್ರದೇಶಗಳಲ್ಲಿ ಲಭ್ಯವಿದೆ. ಇಷ್ಟಕ್ಕೂ ಈ ಹಸ್ತದ ರೇಖೆಗಳನ್ನು ಗುರುತಿಸಿ ಹೇಳುವ ಪದ್ದತಿಯನ್ನು ಹಲವರು ನಂಬುತ್ತಾರೆ, ಇನ್ನು ಕೆಲವರು ಬೊಗಳೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ಇದು ಅವರವರ ಅನುಭವ ಹಾಗು…
ಸಮಾಜ ಸೇವೆ ಮಾಡುವುದು ಅಂದರೆ ಅಷ್ಟೊಂದು ಸುಲಭದ ಮಾತಲ್ಲ ಯಾಕೆಂದರೆ. ಮಾನವ ಬುದ್ದಿ ಜೀವಿಯಾಗಿದ್ದರು ಕೆಲವೊಂದು ಸಾರಿ ಬುದ್ದಿ ಇಲ್ಲದ ರೀತಿಯಲ್ಲಿ ವರ್ತಿಸುತ್ತಾನೆ ಅಂತ ಜನಗಳ ಮದ್ಯೆ ಒಂದು ಕೆಲಸವನ್ನು ಮಾಡ ಬೇಕೆಂದರೆ ಸುಲಭದ ಕೆಲಸ ಆಗಿರುವುದಿಲ್ಲ.ಅಲ್ಲದೆ ಒಂದು ಯಶಸ್ಸು ಕಾಣ ಬೇಕೆಂದರೆ ಅದರ ಹಿಂದಿನ ಕಷ್ಟಗಳು ಅನುಭವಿಸುವವರಿಗೆ ಮಾತ್ರ ಗೊತ್ತಿರುತ್ತದೆ.
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಸಾಮಾನ್ಯವಾಗಿಮಧ್ಯಾಹ್ನ ಊಟ ಮಾಡಿದ ಬಳಿಕಸ್ವಲ್ಪ ನಿದ್ರೆ ಮಾಡಬೇಕು ಎಂದುಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಊಟವಾದ ತಕ್ಷಣವೇಮಲಗಿದರೆ ಆಗ ಜೀರ್ಣಕ್ರಿಯೆ ಮೇಲೆಪರಿಣಾಮ ಬೀರುವುದು ಮತ್ತು ಆಹಾರವು ಜೀರ್ಣವಾಗದೆಹಾಗೆ ಇರುವುದು.ಹೊಟ್ಟೆ ತುಂಬಾ ಊಟ ಮಾಡಿದ ಬಳಿಕ ನಮಗನಿಸುವುದು ನಿದ್ರೆ ಮಾಡಬೇಕು ಎಂದು. ಅದು ಮಧ್ಯಾಹ್ನವೇ ಆಗಿರಬಹುದು ಅಥವಾ ರಾತ್ರಿಯ ಊಟವೇ ಆಗಿರಬಹುದು. ಯಾಕೆಂದರೆ ಹೊಟ್ಟೆ ಭಾರವಾದ ಕೂಡಲೇ ದೇಹದಲ್ಲಿ ಜಡತ್ವ ತುಂಬುವುದು. ಇದು ನಿದ್ರೆಗೆ ಜಾರುವಂತೆ ಮಾಡುವುದು. ಆದರೆ ಊಟವಾದ ತಕ್ಷಣವೇ ಮಲಗುವುದು ಸರಿಯಾದ ಕ್ರಮವಲ್ಲ ಮತ್ತು ಇದು ಆರೋಗ್ಯದ…