ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬೇವು ಬೆಲ್ಲದ ಆರೋಗ್ಯ ಪ್ರಯೋಜನಗಳು ಗೊತ್ತಾದ್ರೆ ನಿಜಕ್ಕೂ ಅಚ್ಚರಿಪಡುವಿರಿ!ಹಿಂದೂ ಕ್ಯಾಲೆಂಡರ್ ಪ್ರಕಾರ ಯುಗಾದಿ ಹೊಸ ವರ್ಷದ ದಿನವಾಗಿದೆ ಹಾಗೂ ಪವಿತ್ರ ಸಮಯ ಎಂದು ಪರಿಗಣಿಸಲ್ಪಡುತ್ತದೆ. ಕರ್ನಾಟಕದಲ್ಲಿ ಈ ಹಬ್ಬಕ್ಕೆ ಯುಗಾದಿ ಎಂದೂ ಮಹಾರಾಷ್ಟ್ರದಲ್ಲಿ ಗುಡಿ ಪಾವ್ಡಾ ಎಂಬ ಹೆಸರಿನಿಂದಲೂ ಆಚರಿಸಲಾಗುತ್ತದೆ. ಹಬ್ಬದ ವಿಶೇಷವಾಗಿ ಬೇವು ಮತ್ತು ಬೆಲ್ಲದ ಮಿಶ್ರಣವನ್ನು ಸಾಂಕೇತಿಕವಾಗಿ ಸೇವಿಸಲಾಗುತ್ತದೆ. ತಮಿಳುನಾದು ಮತ್ತು ಆಂಧ್ರಪ್ರದೇಶದಲ್ಲಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ ಹಾಗೂ ಸುಖ ದುಃಖದ ಸಂಕೇತಗಳಾಗಿ ಬೇವು ಬೆಲ್ಲವನ್ನು ಹಂಚಲಾಗುತ್ತದೆ. ಬೇವು ರುಚಿಯಲ್ಲಿ ಕಹಿ ಮತ್ತು ಬೆಲ್ಲ ಸಿಹಿಯಾಗಿದ್ದರೂ ಗುಣವನ್ನು ಪರಿಗಣಿಸಿದಾಗ ಇವೆರಡೂ ಆರೋಗ್ಯ ಮತ್ತು ಸೌಂದರ್ಯ ಕಾಪಾಡುವ ಮತ್ತು ವೃದ್ದಿಸುವ ಗುಣಗಳನ್ನು ಹೊಂದಿವೆ. ಬನ್ನಿ, ಇವುಗಳ ಪ್ರಯೋಜನಗಳ ಬಗ್ಗೆ ಅರಿಯೋಣ:

ಬೇವು
ಬೇವಿನಲ್ಲಿ ಎರಡು ವಿಧಗಳಿವೆ. ಕರಿಬೇವು ಮತ್ತು ಕಹಿಬೇವು. ಅಡುಗೆಯ ಒಗ್ಗರಣೆಗೆ ಕರಿಬೇವು ಬಳಕೆಯಾದರೆ ಔಷಧೀಯ ರೂಪದಲ್ಲಿ ಕಹಿಬೇವು ಬಳಸಲಾಗುತ್ತದೆ. ಸಾಮಾನ್ಯವಾಗಿ ಕಹಿಬೇವು ಕರಿಬೇವಿಗಿಂತಲೂ ಹೆಚ್ಚು ಕಹಿಯಾಗಿರುತ್ತದೆ. ಹಬ್ಬದ ಸಂಭ್ರವನ್ನು ಹಂಚಿಕೊಳ್ಳಲು ಬಳಸುವ ಬೇವು ಕಹಿಬೇವು ಆಗಿರುತ್ತದೆ. ಕಹಿಬೇವಿನಲ್ಲಿ ಹಲವಾರು ಸೌಂದರ್ಯ ವರ್ಧಕ ಗುಣಗಳಿವೆ. ವಿಶೇಷವಾಗಿ ಮೊಡವೆಗಳು, ಕಪ್ಪುತಲೆ ಅಥವಾ ಬ್ಲಾಕ್ ಹೆಡ್ ಗಳು, ಸೂಕ್ಷ್ಮ ಗೆರೆಗಳು, ತಲೆಹೊಟ್ಟು, ತಲೆಗೂದಲು ಉದುರುವುದು ಮೊದಲಾದ ತೊಂದರೆಗಳಿಗೆ ಕಹಿಬೇವು ಉತ್ತಮ ಔಷಧಿಯಾಗಿದೆ.
ಅಚ್ಚರಿಗೊಳಿಸುವ ಬೇವಿನ ರಸದ ಆರೋಗ್ಯ ಪ್ರಯೋಜನಗಳು.
ಅಲ್ಲದೇ ಕಹಿಬೇವು ಹಲವಾರು ಚರ್ಮದ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರವಾಗಿದೆ. ಚಿಕ್ಕ ಮಕ್ಕಳಿಗೆ ಕಾಡುವ ಸಿಡುಬು ಅಥವಾ ಸ್ಮಾಲ್ ಪಾಕ್ಸ್ ಸೋಂಕಿನಿಂದ ಮೈ ಎಲ್ಲಾ ಚಿಕ್ಕ ಚಿಕ್ಕ ಗುಳ್ಳೆಗಳು ಎದ್ದಿದ್ದರೆ ಇದಕ್ಕೆ ಚಿಕಿತ್ಸೆಯಾಗಿ ಕಹಿಬೇವನ್ನು ಕುದಿಸಿದ ನೀರಿನಲ್ಲಿ ಸ್ನಾನ ಮಾಡಿಸುವ ಮೂಲಕ ಉರಿ ಕಡಿಮೆಯಾಗುತ್ತದೆ ಹಾಗೂ ಶೀಘ್ರವೇ ಗುಣವಾಗುತ್ತದೆ. ಅಲ್ಲದೇ ಕಹಿಬೇವು ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣವನ್ನೂ ಹೊಂದಿದ್ದು ಇದರ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಉತ್ತಮಗೊಳ್ಳುತ್ತದೆ.

ಬೇವಿನ ಆರೋಗ್ಯವರ್ಧಕ ಗುಣಗಳು ಕೆಲವಾರು ಕಾಯಿಲೆಗಳ ಚಿಕಿತ್ಸೆಗೆ ನೆರವಾಗುತ್ತದೆ ಎಂದು ನಂಬಲಾಗಿದೆ. ಉದಾಹರಣೆಗೆ ರ್‍ಹೂಮಟಾಯ್ಡ್ ಸಂಧಿವಾತ, ಕೀಲೂರ ಅಥವಾ ಕೀಲುಗಳು ಊದಿ ಕೆರಳುವ ರೋಗ, ಬೆನ್ನುನೋವು, ಸ್ನಾಯುಗಳ ನೋವು ಮೊದಲಾದವುಗಳ ಚಿಕಿತ್ಸೆಗೆ ಕಹಿಬೇವನ್ನು ಬಳಸಲಾಗುತ್ತದೆ.
ಬೆಲ್ಲ
ಬಿಳಿ ಸಕ್ಕರೆ ಆಧುನಿಕ ಐದು ವಿಷಗಳಲ್ಲಿ ಒಂದು ಎಂದು ಈಗಾಗಲೇ ಸಾಬೀತುಗೊಂಡಿದ್ದು ಆರೋಗ್ಯ ಕಾಳಜಿ ಉಳ್ಳವರು ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸ ತೊಡಗಿದ್ದಾರೆ. ನೋಡಲಿಕ್ಕೆ ಸಕ್ಕರೆಯಂತೆ ಬಿಳಿ ಇಲ್ಲ ಮತ್ತು ಬಳಸುವಾಗ ಅಂಟಂಟು ಆಗಿರುತ್ತದೆ ಎಂಬ ಒಂದೇ ಋಣಾತ್ಮಕ ಗುಣವನ್ನು ಮರೆತರೆ ಬೆಲ್ಲ ಸಕ್ಕರೆಗೆ ಪರ್ಯಾಯವಾಗಲು ಎಲ್ಲಾ ಗುಣಗಳನ್ನೂ ಪಡೆದಿದೆ. ಬೆಲ್ಲವನ್ನೂ ಕಬ್ಬಿನಿಂದಲೇ ತಯಾರಿಸಲಾಗುತ್ತದೆ, ಆದರೆ ಸಕ್ಕರೆಯನ್ನು ತಯಾರಿಸುವಾಗ ಹಲವಾರು ಕೃತಕ ರಾಸಾಯನಿಕಗಳು, ಸುಟ್ಟ ಮೂಳೆಗಳು (bone char) ಮೊದಲಾದವುಗಳನ್ನು ಹಾಕಿ ಬೆಳ್ಳಗಾಗಿಸಲಾಗುತ್ತದೆ. ಆದರೆ ಬೆಲ್ಲ ಕೇವಲ ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿರುವ ಕಾರಣ ಆರೋಗ್ಯಕರವಾಗಿದೆ.
ಬೆಲ್ಲದ ಸೇವನೆಯಿಂದ ಪಡೆಯುವ ಪ್ರಯೋಜನಗಳು.
ಬೆಲ್ಲ ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಕಾರಣ ಸಕ್ಕರೆಯಂತೆ ರಕ್ತದಲ್ಲಿನ ಸಕ್ಕರೆಯ ಮಟ್ಟಗಳನ್ನು ಥಟ್ಟನೇ ಏರಿಸುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಮಲಬದ್ದತೆ ಆಗದಂತೆ ಕಾಪಾಡುತ್ತದೆ. ಸಕ್ಕರೆಯನ್ನು ತಯಾರಿಸುವಾಗ ಅತಿಯಾದ ಬಿಸಿಯ ಕಾರಣ ಇದರ ಕೆಲವಾರು ಪೋಷಕಾಂಶಗಳು ಮತ್ತು ಖನಿಜಗಳು ನಷ್ಟಗೊಂಡಿರುತ್ತವೆ. ಬೆಲ್ಲದಲ್ಲಿ ಹೀಗಾಗದೇ ನೈಸರ್ಗಿಕ ಪೋಷಕಾಂಶಗಳು ಮತ್ತು ಖನಿಜಗಳು. ಉಳಿದುಕೊಳ್ಳುತ್ತವೆ. ಅಲ್ಲದೇ ನೈಸರ್ಗಿಕ ಲವಣಗಳೂ ಉಳಿದುಕೊಂಡಿರುತ್ತವೆ. ಶ್ವಾಸಕೋಶ, ಶ್ವಾಸನಾಳ, ಅನ್ನನಾಳ ಹೊಟ್ಟೆ ಮತ್ತು ಕರುಳುಗಳನ್ನು ಸ್ವಚ್ಛಗೊಳಿಸಲು ನೆರವಾಗುತ್ತದೆ. ಸಕ್ಕರೆಗೆ ಹೋಲಿಸಿದರೆ ಸೇವನೆಯ ಬಳಿಕ ಎದುರಾಗುವ ಆಮ್ಲೀಯತೆ ನಗಣ್ಯ ಮಟ್ಟದಲ್ಲಿರುತ್ತದೆ.

ಬೆಲ್ಲ ಸಂಯುಕ್ತ ಕಾರ್ಬೋಹೈಡ್ರೇಟುಗಳನ್ನು ಹೊಂದಿರುವ ಮೂಲಕ ಈ ಗುಣ ಇಲ್ಲದ ಸಕ್ಕರೆಗಿಂತ ಭಿನ್ನವಾಗಿದೆ. ಜೀರ್ಣಗೊಳ್ಳಲು ಹೆಚ್ಚಿನ ಸಮಯ ತೆಗೆದುಕೊಳ್ಳಲು ಇದೇ ಕಾರಣ. ಪರಿಣಾಮವಾಗಿ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಮಲಬದ್ದತೆಯಾಗದಂತೆ ಕಾಪಾಡುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಮ್ಮ ಭಾರತದಲ್ಲಿ ಸುಧಾರಣೆಯಾಗುವುದು ತುಂಬಾನೇ ಇದೆ ಆದರೆ ಕೆಲವರು ಮಾತ್ರ ಅದನ್ನು ಸ್ವೀಕರಿಸಿ ಅದರ ಪಾಲನೆಯನ್ನು ಮಾಡುತ್ತಾರೆ. ಇನ್ನು ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿಯೇ ಬದುಕುವ ಮಂದಿ ಹೆಚ್ಚು. ಸಮಾಜ ಸುಧಾರಣೆ ಮಾಡುವವರ ಸಂಖ್ಯೆ ಕಡಿಮೆ.
ಈ ಕಪ್ಪು ಬಣ್ಣದ ಕೋಳಿಗಳು ಶುಭ ಸೂಚಕ ಹಾಗೂ ಲೈಂಗಿಕ ಬಯಕೆ ವೃದ್ಧಿ.? ಜತೆಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ಭಾವನೆ ಜನರಲ್ಲಿದೆ. ರಕ್ತ, ಮಾಂಸ
ಸೇರಿದಂತೆ ಪ್ರತಿಯೊಂದೂ ಕಪ್ಪು ಬಣ್ಣದಿಂದ ಕೂಡಿರುವ ಖಡಕನಾತ ಕೋಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೆಸರಘಟ್ಟದ ಕೇಂದ್ರೀಯ ಕುಕ್ಕುಟ ಅಭಿವೃದ್ಧಿ ಕೇಂದ್ರ (ಸಿಪಿಡಿಒ)ವು ಖಡಕನಾತ ಕೋಳಿಯ ಫಾರಂ ತೆರೆಯಲು ಉದ್ದೇಶಿಸಿದೆ.
ರಿಯಾಲಿಟಿ ಶೋ ‘ಬಿಗ್ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ‘ಬಿಗ್ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ….
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಚಿತ್ರಮಂದಿರಕ್ಕೆ ಅಪ್ಪಳಿಸಲು ತಯಾರಾಗಿದೆ. ಈಗಾಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ‘ಚಕ್ರವರ್ತಿ’ ಅಭಿಮಾನಿಗಳಲ್ಲಿ ಈಗೊಂದು ಗೊಂದಲ ಕಾಡುತ್ತಿದೆ.[‘ಬಾಹುಬಲಿ’ ಮೀರಿಸಿದ ದರ್ಶನ್ ‘ಚಕ್ರವರ್ತಿ’] ಗಾಂಧಿನಗರದಲ್ಲಿ ‘ಚಕ್ರವರ್ತಿ’ ಚಿತ್ರಕ್ಕೆ ಯಾವುದು ಪ್ರಮುಖ ಚಿತ್ರಮಂದಿರವೆಂಬುದು ಈಗ ಪ್ರಶ್ನೆಯಾಗಿದೆ. ಸದ್ಯ, ದರ್ಶನ್ ಸಿನಿಮಾಗಳ ನೆಚ್ಚಿನ ಚಿತ್ರಮಂದಿರಗಳಲ್ಲಿ ಸುದೀಪ್ ಅಭಿನಯದ ‘ಹೆಬ್ಬುಲಿ’ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಪ್ರದರ್ಶನವಾಗುತ್ತಿದೆ. ಹೀಗಿರುವಾಗ ‘ಚಕ್ರವರ್ತಿ’ಯ ಎಂಟ್ರಿ ಎಲ್ಲಿ ಎಂಬುದು ಕುತೂಹಲ…
ಸರ್ಕಾರವು ಈಗಾಗಲೇ ಆರೋಗ್ಯ ಭಾಗ್ಯ,ಶಾದಿ ಭಾಗ್ಯ,ಜ್ಯೋತಿ ಭಾಗ್ಯ ಅನ್ನ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಜನರಿಗೆ ಕೊಟ್ಟಿದೆ.ಈಗ ಇದಕ್ಕೆ ಮತ್ತೊಂದು ಭಾಗ್ಯ ಸೇರ್ಪಡೆಯಾಗಿದೆ.
ಭಾರತ ಮತ್ತು ಚೀನಾಗಳ ನಡುವಿನ ರಾಜಕೀಯ ಪರಿಸ್ತಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು ಯುದ್ದದ ಕಾರ್ಮೋಡದ ಛಾಯೆ ಉಭಯ ದೇಶಗಳ ಮೇಲೆ ಕಾಡುತ್ತಿದೆ.