ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಿಮ್ಮ ದೇಹ ತೂಕವನ್ನು ಬೇಗನೆ ಇಳಿಸಬೇಕೆಂದಿದ್ದರೆ ಬೆಳಗಿನ ಉಪಹಾರವನ್ನು ಬಿಟ್ಟುಬಿಡಿ. ಮಧ್ಯಾಹ್ನ ಊಟದ ವರೆಗೆ ಏನೂ ತಿನ್ನದೆ ಉಪವಾಸ ವಿದ್ದರೆ ಪ್ರತಿನಿತ್ಯ ಸುಮಾರು 350 ರಷ್ಟು ಕಡಿಮೆ ಕ್ಯಾಲೊರಿ ಆಹಾರ ಸೇವಿಸಬಹುದು ಮತ್ತು ಇದರಿಂದ ದೇಹದ ತೂಕವನ್ನು ಇಳಿಸಬಹುದು ಎಂದು ಅಧ್ಯಯನವೊಂದು ಹೇಳುತ್ತದೆ.
ನಾವು ಸೇವಿಸುವ ಆಹಾರದಲ್ಲಿ ಬೆಳಗಿನ ಉಪಹಾರ ಅತ್ಯಂತ ಪ್ರಮುಖ ಎಂಬ ಸಾಮಾನ್ಯ ನಂಬಿಕೆ ನಮ್ಮಲ್ಲಿದೆ. ಆದರೆ ಇಂದಿನ ಜೀವನಕ್ರಮದಲ್ಲಿ ಹಲವು ದೇಶಗಳಲ್ಲಿ ಮೂರರಲ್ಲಿ ಒಬ್ಬರು ಮಕ್ಕಳು ಮತ್ತು ವಯಸ್ಕರು ಬೆಳಗಿನ ಉಪಹಾರ ಸೇವಿಸುವುದಿಲ್ಲ ಎನ್ನುತ್ತಾರೆ ಅಧ್ಯಯನದ ಲೇಖಕ ಡಾ.ಕೀತ್ ಟೋಲ್ಫ್ರೆ.
ಉಪವಾಸ ಮಾಡುವ ಮೂಲಕ ದೇಹದ ತೂಕವನ್ನು ಇಳಿಸುವುದರಿಂದ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಇದರಿಂದ ಕಾಲ ಕ್ರಮೇಣ ವ್ಯಕ್ತಿಯು ಸೇವಿಸುವ ಆಹಾರದ ಕ್ಯಾಲೊರಿ ಪ್ರಮಾಣ ಕಡಿಮೆಯಾಗುತ್ತದೆಯಲ್ಲದೆ ಕೊಬ್ಬಿನ ಶೇಖರಣೆಯಲ್ಲಿ ತೊಡಗಿಸಿ ಕೊಂಡಿರುವ ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕಾ ದ ಲೌಬರೂ ಮತ್ತು ಬೆಡ್ಫೋಡ್ರೇಜೈರ್ ವಿಶ್ವವಿದ್ಯಾಲಯಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಅಧ್ಯಯನ ತಂಡ 11ರಿಂದ 15 ವರ್ಷದೊಳಗಿನ 4೦ ಹೆಣ್ಣು ಮಕ್ಕಳ ಮೇಲೆ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಭಾಗಿಯಾದವರು ಮೂರು ದಿನಗಳವರೆಗೆ ಬೆಳಗಿನ ಉಪಹಾರ ಸೇವಿಸಿರಲಿಲ್ಲ ಹಗುರವಾಗಿ ಹಾಲು, ಜ್ಯೂಸ್ ಇತ್ಯಾದಿಗಳನ್ನು ಮಾತ್ರ ಸೇವಿಸಿದ್ದರು. ಆದರೆ ಅವರ ದೈಹಿಕ ಚಟುವಟಿಕೆಗಳಲ್ಲಿ ಯಾವುದೇ ಕುಂಠಿತವಾಗಿರಲಿಲ್ಲ. ಅಲ್ಲದೆ ಬೆಳಗಿನ ಉಪಹಾರವನ್ನು ಬಿಡುವುದರಿಂದ ಇಡೀ ದಿನದಲ್ಲಿ ಸೇವಿಸುವ ಒಟ್ಟಾರೆ ಆಹಾರ ಪ್ರಮಾಣದಲ್ಲಿ 353 ಕ್ಯಾಲರಿಗಳಷ್ಟು ಕಡಿಮೆಯಾಗುತ್ತಿತ್ತು, ಇದರಿಂದ ದೇಹದ ತೂಕವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ.
ಸಾಮಾನ್ಯವಾಗಿ ಜನರು 115 ಕ್ಯಾಲೊರಿಗಳಷ್ಟು ಬೆಳಗಿನ ಉಪಹಾರದಿಂದ ಪಡೆದರೆ ಮಧ್ಯಾಹ್ನದ ಊಟವೊಂದ ರಿಂದಲೇ 468 ಕ್ಯಾಲೂರಿಗಳಷ್ಟು ಸಿಗುತ್ತದೆ. ಬೆಳೆಗಿನಉಪಹಾರ ಸೇವನೆಯನ್ನು ದೇಹದ ತೂಕ ನಿಯಂತ್ರಿಸುವಲ್ಲಿ ಪರಿಣಾಮಕಾರಿ ಯಾಗಿ ಬಳಸಬಹುದು ಎಂದು ಡಾ.ಟೊಲ್ಫ್ರಿ ಹೇಳುತ್ತಾರೆ. ಈ ಅಧ್ಯಯನ ನ್ಯೂಟ್ರಿಶನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅತ್ಯಮೂಲ್ಯ ನೈಸರ್ಗಿಕವಾಗಿ ದೊರೆಯುವ ‘ಕೀಡಾ ಜಾಡಿ’ ಅಥವಾ ಹಿಮಾಲಯನ್ ವಯಾಗ್ರಾಕ್ಕಾಗಿ ಉತ್ತರಾಖಂಡದ ಎರಡು ಗ್ರಾಮಗಳ ಜನರು ಕಿತ್ತಾಡಿದ್ದು ನಿಷೇಧಾಜ್ಞೆ ಜಾರಿಯಾಗಿದೆ.ನೈಸರ್ಗಿಕ ವಯಾಗ್ರಾ ಸಂಗ್ರಹಿಸುವ ವಿಚಾರವಾಗಿ ಪಿತೋರ್ಗಢ ಜಿಲ್ಲೆಯ ಬುಯಿ ಮತ್ತು ಪಾಟೋ ಗ್ರಾಮಗಳ ಜನರು ಜಗಳ ಮಾಡಿಕೊಂಡಿದ್ದಾರೆ. ವಯಾಗ್ರಾ ಬೆಳೆಯುವ ಪ್ರದೇಶ ನಮಗೆ ಸೇರಿದ್ದು ಎಂದು ಎರಡೂ ಗ್ರಾಮದವರು ಶಸ್ತ್ರಾಸ್ತ್ರ ಹಿಡಿದು ನಿಂತಿದ್ದಾರೆ. ಪಿತೋರ್ಗಢ ಜಿಲ್ಲೆಯ ಹಿಮಾಲಯ ಪ್ರದೇಶ ರಾಲಂ ಮತ್ತು ರಾಜರಾಂಘ ಬಗ್ಯಾಲ್ಸ್ ಹುಲ್ಲುಗಾವಲಿನಲ್ಲಿ ವಯಾಗ್ರಾ ಬೆಳೆಯುತ್ತಿದೆ. ಪರ್ವತದ ಎತ್ತರದಲ್ಲಿ ಬೆಳೆಯುವ ವಯಾಗ್ರಾವನ್ನು ಧಾರ್ಚುಲಾ ಮತ್ತು…
ನೀವು ಪಡಿತರಚೀಟಿ ಹೊಂದಿದ್ದರೆ ಈ ಸುದ್ದಿಯನ್ನು ತಪ್ಪದೆ ಓದಿ. ಅನಗತ್ಯವಾಗಿ ಪೂರೈಕೆ ಆಗುತ್ತಿರುವ ಪಡಿತರಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದು ಜೂನ್ 1ರಿಂದ ಎರಡು ತಿಂಗಳುಗಳ ಕಾಲ ಇ-ಕೆವೈಸಿ ವಿಧಾನದ ಮೂಲಕ ಆಧಾರ್ ದೃಢೀಕರಣ ವ್ಯವಸ್ಥೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ. ಇದರನ್ವಯ ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಎಲ್ಲ ಕುಟುಂಬ ಸದಸ್ಯರು ಬಯೋಮೆಟ್ರಿಕ್ ಕೊಡುವುದು ಕಡ್ಡಾಯವಾಗಿದೆ. ಯಾರು ಬಯೋಮೆಟ್ರಿಕ್ ನೀಡಿರುತ್ತಾರೋ ಅಂತಹವರ ಹೆಸರಿನಲ್ಲಿ ಮಾತ್ರ ಪಡಿತರ ವಿತರಿಸಲಾಗುತ್ತದೆ. ವೃದ್ಧರು, ಕುಷ್ಠರೋಗಿಗಳು, ವಿಶೇಷ ಚೇತನರು, ಎಂಡೋಸಲ್ಫಾನ್ ಸಂತ್ರಸ್ತರಿಗೆ ಇ –…
ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ತಯಾರಿ ಆಂಧ್ರಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಘೋಷಣೆ ಮಾಡಿದ್ದಾರೆ. ನಾಯ್ಡು ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ 10 ಸಾವಿರ ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ನೀಡಲಿದ್ದಾರಂತೆ. ಅಮರಾವತಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಾಯ್ಡು ಈ ಘೋಷಣೆ ಮಾಡಿದ್ದಾರೆ. ಹಣ ಮಹಿಳೆಯರಿಗೆ ಮೂರು ಹಂತದಲ್ಲಿ ಸಿಗಲಿದೆ. ಫೆಬ್ರವರಿಯಲ್ಲಿ ಮೊದಲ ಚೆಕ್ ವಿತರಣೆಯಾಗಲಿದೆ.ಮಹಿಳೆಯರಿಗೆ ಫೆಬ್ರವರಿಯಲ್ಲಿ 2500 ರೂಪಾಯಿ ಚೆಕ್ ಸಿಗಲಿದೆ. ಶೀಘ್ರವೇ ಸ್ಮಾರ್ಟ್ಫೋನ್ ನೀಡುವುದಾಗಿ ಅವರು…
ಬಿಜೆಪಿಯನ್ನು ಎದುರಿಸಲು ನಾನು ಉಪನಿಷದ್, ಭಗವದ್ಗೀತೆ ಓದ್ತಿದ್ದೇನೆ! ಹೀಗೆಂದು ಹೇಳಿರುವವರು ಬೇರಾರೂ ಅಲ್ಲ
ಮದುವೆಯ ಪರ್ಫೆಕ್ಟ್ ವಯಸ್ಸು ಯಾವುದು ಎಂಬುದರ ಬಗ್ಗೆ ಯಾವಾಗಲೂ ಪ್ರಶ್ನೆ ಮೂಡುತ್ತದೆ? ಅದಕ್ಕೆ ಸರಿಯಾದ ಉತ್ತರ ಇಲ್ಲಿವರೆಗೆ ಸಿಕ್ಕಿಲ್ಲ. ಕೆಲವೊಂದು ಸರ್ವೆಗಳು ಮದುವೆಯಾಗಲು ಸರಿಯಾದ ವಯಸ್ಸು 29 ಎನ್ನುತ್ತಾರೆ. ಆದರೆ ಒಬ್ಬೊಬ್ಬರ ಮದುವೆ ಒಂದೊಂದು ವಯಸ್ಸಿನಲ್ಲಿ ಆಗುತ್ತದೆ. ಕೆಲವರು 20 ರಿಂದ 30 ವರ್ಷದೊಳಗೆ ಮದುವೆಯಾದರೆ, ಇನ್ನೂ ಕೆಲವರು 30 ರಿಂದ 40 ವರ್ಷದೊಳಗೆ ಮದುವೆಯಾಗುತ್ತಾರೆ.
ಸ್ವಾತಂತ್ರ್ಯ ನಂತರದ ದೇಶದ ದೊಡ್ಡ ಮತ್ತು ಏಕರೂಪ ತೆರಿಗೆ ಎಂದು ಹೇಳಲಾಗಿರುವ (ಸರಕು ಮತ್ತು ಸೇವಾ ತೆರಿಗೆ)ಜಿಎಸ್ಟಿ ಜುಲೈ 1 ರಿಂದ ಜಾರಿಯಾಗಲಿದ್ದು, ಇದರಿಂದ ಯಾವ ಯಾವ ಸೇವೆಗಳ ಮೇಲೆ ಈ ತೆರಿಗೆ ಪ್ರಭಾವ ಬೀರಲಿದೆ