ಸಿನಿಮಾ

‘ಬಾಹುಬಲಿ’ಗಿಂತುಲೂ “ಕುರುಕ್ಷೇತ್ರ” ಅದ್ದೂರಿ, ದರ್ಶನ್ ಫೋಟೋ ಸೃಷ್ಟಿಸಿದ ಸಂಚಲನ !!!

1470

ಕುರುಕ್ಷೇತ್ರ ಚಿತ್ರಕ್ಕೆ ಅಂತೂ ಚಾಲನೆ ಸಿಕ್ಕಿದೆ. ದರ್ಶನ್ ದುರ್ಯೋಧನನಾಗಿ ಬರಲಿದ್ದಾರೆ ಎನ್ನುವ ಮಾತೀಗ ನಿಜವಾಗಿದೆ. ಮುನಿರತ್ನ ನಿರ್ಮಾಣದ ಈ ಸಿನಿಮಾ ಯಾವಾಗ ಕೆಲಸ ಸೆಟ್ಟೇರಲಿದೆ ಎನ್ನುವ ಕುತೂಹಲ ಸಿನಿಪ್ರಿಯರನ್ನು ಕಾಡುತ್ತಿತ್ತು. ಮಲ್ಟಿ ಸ್ಟಾರ್ ಸಿನಿಮಾ ನಿಜಕ್ಕೂ ತಯಾರಾಗುತ್ತಾ ಅನ್ನುವ ಪ್ರಶ್ನೆ ಹಲವರಿಗಿತ್ತು. ಆ ಎಲ್ಲಾ ಪ್ರಶ್ನೆಗಳಿಗೂ ಮುನಿರತ್ನ ತಮ್ಮ ಕೆಲಸದ ಮುಖಾಂತರವೇ ಉತ್ತರ ಕೊಟ್ಟಿದ್ದಾರೆ.

ಹೈದರಾಬಾದಿನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ದರ್ಶನ್‌ ಫೋಟೊ ಶೂಟ್ ಮುಗಿದಿದೆ. ಸ್ಕ್ರೀನ್ ಟೆಸ್ಟ್ ಮತ್ತು ಡ್ರೆಸ್ ಟ್ರಯಲ್ ಕೆಲಸಗಳು ನೆರವೇರಿದೆ. ಎರಡು ದಿನ ದರ್ಶನ್ ಅಲ್ಲಿದ್ದು ಎಲ್ಲಾ ಪಾತ್ರಕ್ಕೆ ಬೇಕಾದ ಕಾಸ್ಟ್ಯೂಮ್‌ಗಳನ್ನು ಹಾಕಿಕೊಂಡು ಲುಕ್ ಹೇಗಿರತ್ತೆ ಅನ್ನೋ ಟೆಸ್ಟ್ ಮಾಡಿದ್ದಾರೆ. ಫೋಟೊ ಎಡಿಟಿಂಗ್ ಕೆಲಸ ಜೋರಾಗೇ ನಡೀತಿದೆ.

ದರ್ಶನ್ ದುರ್ಯೋಧನನಾಗಿ ಝಗಮಗಿಸಿದ್ದು ಬಾಹುಬಲಿ ಸಿನಿಮಾಕ್ಕೆ ಹಾಕಿದ್ದ ಸೆಟ್ ನಲ್ಲೆ. ಬಾಹುಬಲಿ ಇದಾಗಲೇ ಸಾವಿರ ಕೋಟಿ ಗಳಿಸಿ ಜಯಭೇರಿ ಬಾರಿಸಿರೋದ್ರಿಂದ ಅದೇ ಜಾಗದಲ್ಲಿ ಫೋಟೋ ಶೂಟ್ ಆರಂಭ ಮಾಡಿರೋ ಕುರುಕ್ಷೇತ್ರ ಗೆದ್ದು ಬರುತ್ತೆ ಅನ್ನೋ ನಂಬಿಕೆ ಚಿತ್ರ ತಂಡದ್ದು.

ಕಿಚ್ಚ ಸುದೀಪ್, ಯಶ್ ಕುರುಕ್ಷೇತ್ರಕ್ಕೆ ಕಾಲಿಡೋದು ನಿಜವೇ?

ಶಿವರಾಜ್ ಕುಮಾರ್, ಸುದೀಪ್, ಯಶ್ ಕುರುಕ್ಷೇತ್ರ ದಲ್ಲಿ ಮಿಂಚಲಿದ್ದಾರಾ ಅನ್ನುವ ಪ್ರಶ್ನೆಗೆ ಮಾತ್ರ ಇನ್ನೂ ಉತ್ತರ ಸಿಕ್ಕಿಲ್ಲ. ಮೂಲದ ಪ್ರಕಾರ ದಕ್ಷಿಣ ಭಾರತದ ನಟ ನಟಿಯರನ್ನು ಕರೆತರುವ ಯೋಜನೆ ಚಾಲ್ತಿಯಲ್ಲಿದೆಯಂತೆ. ಹಾಗೇನಾದರೂ ಆದ್ರೆ ಇಡೀ ದಕ್ಷಿಣ ಭಾರತವೇ ನೋಡುವ ಭರ್ಜರಿ ಸಿನಿಮಾ ಆಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣನಂಥ ಸೂಪರ್ ಹಿಟ್ ಸಿನಿಮಾ ಕೊಟ್ಟ ನಿರ್ದೇಶಕ ನಾಗಣ್ಣ ಕುರುಕ್ಷೇತ್ರದ ಚುಕ್ಕಾಣಿ ಹಿಡಿದಿದ್ದಾರೆ. ನಿರ್ಮಾಪಕ ಮುನಿರತ್ನ ಅಂದುಕೊಂಡಂತೆ ನಡೆದರೆ ಒಂದೆರಡು ತಿಂಗಳಲ್ಲಿ ಮಹೂರ್ತ ನೆರವೇರಲಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ