ಸುದ್ದಿ

ಬಾಲಿವುಡ್​ಗೆ ಸೈ ಕನ್ನಡಕ್ಕೆ ಜೈ: ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

28

‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ!

ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್‌ ಆಗಮನದ ಬಗ್ಗೆ ಸುದೀಪ್‌ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ ಬೇರೆ ಆವೃತ್ತಿಗಳ ಶೂಟಿಂಗ್‌ನಲ್ಲಿ ಬಿಜಿ ಆಗಿರುತ್ತೇವೆ. ಅವರಿಲ್ಲಿ ಬರಲು ಸಾಧ್ಯವಿಲ್ಲ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಆದರೆ, ಒಂದು ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದೇನೆಂದರೆ, ಕನ್ನಡದ ಬಿಗ್‌ಬಾಸ್‌ಗೆ ಸುದೀಪ್ ನಿರೂಪಕರಾದರೆ, ಹಿಂದಿ ಬಿಗ್‌ಬಾಸ್‌ಗೆ ಸಲ್ಮಾನ್‌ ನಿರೂಪಕರು. ಸದ್ಯ ಅವರ ಸಾರಥ್ಯದಲ್ಲೀಗ ಬಿಗ್‌ಬಾಸ್‌ ಸೀಸನ್ 13 ಆರಂಭಗೊಂಡಿದೆ. ಇಬ್ಬರಿಗೂ ಬಿಗ್‌ಬಾಸ್‌ ವೇದಿಕೆ ಹೊಸದೇನಲ್ಲ.

ಜತೆಗೆ ‘ದಬಾಂಗ್ 3’ ಚಿತ್ರದ ಮೂಲಕ ಸಲ್ಮಾನ್‌ ಖಾನ್‌ ಚೊಚ್ಚಲ ಬಾರಿಗೆ ಕನ್ನಡಕ್ಕೂ ಕಾಲಿಡಲಿದ್ದಾರೆ. ಹೌದು, ಆ ಚಿತ್ರ ಕನ್ನಡಕ್ಕೆ ಡಬ್ ಆಗಿ ಡಿ.20ಕ್ಕೆ ತೆರೆಕಾಣಲಿದೆ. ಅದರಲ್ಲಿ ಸಲ್ಮಾನ್‌ ಜತೆ ಸುದೀಪ್ ಕೂಡ ನಟಿಸಿದ್ದಾರೆ. ಒಂದುವೇಳೆ, ಸಲ್ಮಾನ್‌ ಕನ್ನಡ ಬಿಗ್‌ಬಾಸ್‌ಗೆ ಬಂದರೆ ಸಿನಿಮಾಕ್ಕೆ ಸಾಕಷ್ಟು ಲಾಭಗಳಿವೆ ಎಂಬುದು ಕನ್ನಡದ ಅಭಿಮಾನಿಗಳ ಲೆಕ್ಕಾಚಾರ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಭಾರತೀಯರಿಗೋಸ್ಕರವೇ ಮಾಡಿರುವ ಈ ಡಿಜಿಟಲ್ ಪಂಚಾಂಗದಲ್ಲಿ ಏನೆಲ್ಲಾ ಮಾಹಿತಿ ಇದೆ ಗೊತ್ತಾ..!

    ಡಿಜಿಟಲ್ ಭಾಷಾತಂತ್ರಜ್ಞಾನ ಪರಿಹಾರಗಳ ಮುಂಚೂಣಿಯ ರೆವೆರೀ ಲಾಂಗ್ವೇಜ್‌ ಟೆಕ್ನಾಲಜೀಸ್‌ ಇಂಡಿಕ್‌ ಕ್ಯಾಲೆಂಡರ್ ಎಂಬ ಸುಲಭ ಬಳಕೆಯ ಕ್ಯಾಲೆಂಡರ್‌ಆಪ್ ಬಿಡುಗಡೆ ಮಾಡಿದೆ. ರೆವೆರೀಯ ಇಂಡಿಕ್‌ ಕ್ಯಾಲೆಂಡರ್‌ಆಪ್ ಪ್ರಸ್ತುತ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು ಅವರ ಭಾಷೆ, ಸಂಸ್ಕೃತಿ, ಧಾರ್ಮಿಕತೆಗಳನ್ನು ಮೀರಿ ಭಾರತೀಯರಿಗೆಂದೇ ರೂಪಿಸಲಾಗಿದೆ.

  • ಜ್ಯೋತಿಷ್ಯ

    ಸೋಮವಾರ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸೋಮವಾರ, 16 ಏಪ್ರಿಲ್ 2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್  ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ06:06:55 ಸೂರ್ಯಾಸ್ತ18:46:52 ಹಗಲಿನ ಅವಧಿ12:39:56 ರಾತ್ರಿಯ ಅವಧಿ11:19:11 ಚಂದ್ರೋದಯ06:33:51 ಚಂದ್ರಾಸ್ತ19:10:54 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ…

  • ಸುದ್ದಿ

    ಸೇತುವೆ ಮೇಲಿಂದ ಬಸ್ ಪಲ್ಟಿ…..29 ಪ್ರಯಾಣಿಕರ ಮರಣ…..!

    ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಬಸ್ ವೊಂದು ಜಾರಿ ಹದಿನೈದು ಅಡಿ ಆಳದ ದೊಡ್ಡ ಮೋರಿಯಲ್ಲಿ ಬಿದ್ದ ಪರಿಣಾಮ ಇಪ್ಪತ್ತೊಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ನೂರಾ ಅರವತ್ತೈದು ಕಿ.ಮೀ. ಉದ್ದ ಎಕ್ಸ್ ಪ್ರೆಸ್ ಹೈವೆ ಉತ್ತರಪ್ರದೇಶದಲ್ಲಿ ನೋಯ್ಡಾ ಹಾಗೂ ಆಗ್ರಾದ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ.ರಾಜ್ಯ ರಸ್ತೆ ಸಾರಿಗೆ ಬಸ್ ಸ್ಕಿಡ್ ಆಗಿ 50 ಅಡಿ ಆಳದ ಚರಂಡಿಗೆ ಬಿದ್ದ ಪರಿಣಾಮ ಸ್ಥಳದಲ್ಲಿಯೇ 29 ಮಂದಿ ಪ್ರಯಾಣಿಕರು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಚಾಲಕ ನಿದ್ದೆ…

  • ಉಪಯುಕ್ತ ಮಾಹಿತಿ

    ನಿಮ್ಮ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹೊಸ ಟ್ರಿಕ್ಸ್..!ತಿಳಿಯಲು ಈ ಲೇಖನ ಓದಿ …

    ಹೆಚ್ಚಿನ ವಿಜ್ಞಾನಿಗಳು ಹೇಳುವಂತೆ ಶೌಚಾಲಯವು ರೋಗ ರುಜಿನಗಳ ತವರಾಗಿದೆ ಎಂದಾಗಿದೆ. ಆದ್ದರಿಂದ ನೀವು ಸ್ಥಳಕ್ಕೆ ಹೆಚ್ಚು ಆದ್ಯತೆ ನೀಡಿ ಸ್ವಚ್ಛಗೊಳಿಸಿದಂತೆ ನಿಮ್ಮ ಮನೆಯನ್ನು ರಕ್ಷಿಸಿಕೊಳ್ಳಬಹುದಾಗಿದೆ.

  • ಸುದ್ದಿ

    ‘ಮಿಸ್ ಸೌತ್ ಇಂಡಿಯಾ’ ಕಿರೀಟ ತನ್ನದಾಗಿಸಿಕೊಂಡ ಕಿರುತೆರೆ ನಟಿ ಕುಲವಧು ಧನ್ಯಾ….

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಕುಲವಧು’ ಧಾರಾವಾಹಿಯಲ್ಲಿ ಧನ್ಯಾ ಎಂದೇ ಖ್ಯಾತಿ ಪಡೆದಿರುವ ದೀಪಿಕಾ ಇತ್ತೀಚೆಗಷ್ಟೆ ‘ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019’ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ನಟಿ ದೀಪಿಕಾ ಅವರು ಈ ಬಗ್ಗೆ ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. ತಾವು ವಿನ್ನರ್ ಆದ ತಕ್ಷಣದ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಮತ್ತು ತಮ್ಮ ಗೆಳೆಯನಿಗೆ ಧನ್ಯವಾದ ತಿಳಿಸಿದ್ದಾರೆ. “ಮಿಸ್ ಸೌತ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ತುಂಬಾ ಸಂತೋಷವಾಗಿದೆ. ಅದರಲ್ಲೂ ನಾನು ‘ಮಿಸ್ ಸೌತ್ ಇಂಡಿಯಾ…

  • ಸಿನಿಮಾ

    ಚೀನಾದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸ್ಸಿದ ಭಾರತೀಯಾ ಸಿನಿಮಾ ಯಾವುದು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಬಾಲಿವುಡ್‌ನ ‘ಮಿಸ್ಟರ್ ಫರ್ಫೆಕ್ಟ್’ ಆಮಿರ್ ಖಾನ್ ಅಭಿ ನಯದ ‘ದಂಗಲ್’ ಚೀನಾದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ದಂಗಲ್ ಮೂಲಕ ಆಮಿರ್ ಖಾನ್ ದಿನಬೆಳಗಾಗುವುದರೊಳಗೆ ಚೀನಾದಲ್ಲಿ ಮನೆ ಮಾತಾಗಿದ್ದರು. ಇದೀಗ ಆಮಿರ್‌ಖಾನ್ ನಿರ್ಮಾಣದ ‘ಸೀಕ್ರೆಟ್ ಸೂಪರ್‌ಸ್ಟಾರ್’ ಕೂಡಾ ಚೀನಾದಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ.