ಮನರಂಜನೆ

ಬರುತ್ತಿದೆ ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ..!ನೀವೂ ಕೂಡ ಆಡಿಶನ್’ನಲ್ಲಿ ಭಾಗವಹಿಸಿ.ಎಲ್ಲಿ,ಹೇಗೆ ತಿಳಿಯಲು ಮುಂದೆ ಓದಿ…

610

ಕನ್ನಡ ಕಿರುತೆರೆಯ ಇತಿಹಾಸದಲ್ಲಿ, ಇತಿಹಾಸವನ್ನೇ ಸೃಷ್ಟಿಸಿದ್ದ, ಸುರ್ವಣ ವಾಹಿನಿಯ ಬಹುದೊಡ್ಡ ರಿಯಾಲಿಟಿ ಶೋ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಮತ್ತೆ ಬರ್ತಿದೆ.ಈ ಕಾರ್ಯಕ್ರಮ ಮೊದಲ ಬಾರಿಗೆ, 2008ರಲ್ಲಿ ಬಿಗ್ ಬಾಸ್ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬಂದಿತ್ತು. ಸುರ್ವಣ ವಾಹಿನಿಯ ಬಹುನಿರೀಕ್ಷಿತ ರಿಯಾಲಿಟಿ ಶೋ ಇದಾಗಿದ್ದು,ಈಗಾಗಲೇ 3 ಸೀಸನ್’ಗಳನ್ನೂ ಯಶಸ್ವಿಯಾಗಿ ಪೂರೈಸಿದ್ದು, ಈಗ ನಾಲ್ಕನೇ ಸೀಸನ್ ಆರಂಭವಾಗುತ್ತಿದೆ.

ಏನಿದು, ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಕಾರ್ಯಕ್ರಮ..?ಹೇಗೆ ನಡೆಯುತ್ತೆ..?

ಪ್ಯಾಟೆ ಹುಡುಗಿಯರು ಹಳ್ಳಿಗೆ ಹೋಗಿ, ಹಳ್ಳಿ ಜನರಂತೆ ಜೀವನ ನಡೆಸುವ ಕಾರ್ಯಕ್ರಮವೇ ಈ ರಿಯಾಲಿಟಿ ಶೋ.ಬೆಂಗಳೂರು ನಗರದಂತ ಸಿಟಿಯಲ್ಲಿ ಹುಟ್ಟಿ ಬೆಳೆದಿರುವ, ಹಳ್ಳಿ ಜೀವನದ ಗಂಧ ಗಾಳಿಯೇ ಗೊತ್ತಿಲ್ಲದಿರುವ ಯುವತಿಯರು, ಮೂರುವರೆ ತಿಂಗಳ ಕಾಲ ಹಳ್ಳಿಯಲ್ಲಿ ಹಳ್ಳಿಗರಂತೆ ಜೀವನ ನಡೆಸುವುದರ ಜೊತೆಗೆ, ವಿವಿಧ ಬಗೆಯ ಗೇಮ್ಗಳು,ಟಾಸ್ಕ್ ಗಳು ಎಲ್ಲದರಲ್ಲಿ ಭಾಗವಹಿಸಿ ಜಯಿಸಬೇಕಾಗುತ್ತದೆ.

ಭಾಗವಹಿಸಲು ಬೇಕಾದ ಅರ್ಹತೆ…

ಭಾಗವಹಿಸುವ ಯುವತಿಯರು 18-24 ವರ್ಷದೊಳಗಿನರವರಾಗಿರಬೇಕು.ಮೂಲ ಸಿಟಿಯಲ್ಲಿ ಹುಟ್ಟಿ ಬೆಳೆದವರಾಗಿರಬೇಕು.

ಆಡಿಷನ್ ಎಲ್ಲಿ..?

ಬೆಂಗಳೂರಿನ ಮಹಾರಾಣಿ ಅಮ್ಮಣ್ಣಿ ಕಾಲೇಜಿನಲ್ಲಿ ಫೆಬ್ರವರಿ 11 ರಂದು ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4’ ಆಡಿಷನ್ ಬೆಳಿಗ್ಗೆ 9 ಗಂಟೆಯಿಂದ ಶುರುವಾಗಲಿದ್ದು, ಆಡಿಷನ್ ನಲ್ಲಿ ಪಾಸ್ ಆದವರು ನೇರವಾಗಿ ಕಾರ್ಯಕ್ರಮಕ್ಕೆ ಆಯ್ಕೆಯಾಗಬಹುದಂತೆ.ಈಗಾಗಲೇ ಸುವರ್ಣ ವಾಹಿನಿಯಲ್ಲಿ ಶೋನ ಟ್ರೈಲರ್ ಪ್ರಸಾರವಾಗುತ್ತಿದ್ದು, ಇನ್ನೇನು ಸದ್ಯದಲ್ಲೇ ಶೋ ಪ್ರಾರಂಭವಾಗಲಿದೆ.

ನಿಮ್ಗೂ ಅವಕಾಶ ಸಿಗಬಹುದು…

2015ರಲ್ಲಿ ಕೊನೆಯ ಬಾರಿಗೆ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಪ್ರಸಾರವಾಗಿದ್ಡು,ಈಗಾಗಲೇ 3 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿರುವ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಕಾರ್ಯಕ್ರಮ ಈಗ ನಾಲ್ಕನೇ ಸೀಸನ್ ಆರಂಭವಾಗುತ್ತಿದೆ. ಇದಕ್ಕಾಗಿ ಆಡಿಶನ್ ಗೆ ಆಹ್ವಾನ ಮಾಡಲಾಗಿದ್ದು, ನೀವು ಕೂಡ ಭಾಗವಹಿಸುವ ಅವಕಾಶ ಸಿಕ್ಕಿದೆ.ಚಾನ್ಸ್ ಮಿಸ್ ಮಾಡ್ಕೋಬೇಡಿ.ಒಂದು ಬಾರಿ ಪ್ರಯತ್ನಿಸಿ ನೋಡಿ.

ನಿರೂಪಕ ಯಾರು..?

ಜನಪ್ರಿಯ ಈ ರಿಯಾಲಿಟಿ ಶೋ ಇನ್ನೂ ಆಡಿಶನ್ ಹಂತದಲ್ಲಿದ್ದು,ಸ್ಪರ್ದಿಗಳ ಆಯ್ಕೆ ನಂತರ ಶೋ ಪ್ರಸಾರದ ದಿನಾಂಕ ನಿಗದಿಯಾಗಲಿದೆ. ಹಿಂದಿನ ಶೋ ಗಳ ನಿರೂಪಕರಾಗಿ ಅಕುಲ್ ಬಾಲಾಜಿ ಮತ್ತು ಸಂತೋಷ್ ಭರ್ಜರಿಯಾಗಿ ನಡೆಸಿಕೊಟ್ಟಿದ್ದರು.ಆದ್ರೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ 4 ನಿರೂಪಕರು ಯಾರು ಎಂಬುದನ್ನು ಸುವರ್ಣ ವಾಹಿನಿ ಇನ್ನೂ ಬಹಿರಂಗಗೊಳಿಸಿಲ್ಲ.

 

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ