ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಬಟಾಣಿ ತಿಂದ್ರೆ ವಾಯು ಬರತ್ತೆ ಅನ್ನೋರೆಲ್ಲಾ ಇಲ್ಕೇಳಿ. ಬಟಾಣಿ ಗಿಡ ನಮ್ ದೇಶದಲ್ಲಿ ಹುಟ್ಟಿದಲ್ಲ. ಇದು ವಿಚಿತ್ರವಾಗಿರೋ ಗಿಡಗಳ ಸಾಲ್ನಲ್ಲಿ ಸೇರತ್ತೆ. ಆದ್ರೂ ಕೂಡಾ ಇದ್ರ ಉಪಯೋಗ ಇದ್ಯಲ್ಲಾ ಅದು ಒಂದೆರಡಲ್ಲ. ಇದ್ರಲ್ಲಿರೋ ಪಿಷ್ಟ ಇದ್ನ ಸಿಹಿಯಾಗಿರೋವಾಗೆ ಮಾಡ್ಸತ್ತೆ. ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರನ್ನ ಗುಣಪಡ್ಸತ್ತೆ.

ಅಷ್ಟಲ್ಲದೇ ಉರಿಯೂತಕ್ಕೆ ಸಂಬಂಧಿಸಿದ ಯಾವ್ದೇ ತರದ ತೊಂದ್ರೆ ಇದ್ರೆ ಇದ್ರಲ್ಲಿರೋ ಫೈಟೋ ನ್ಯುಟ್ರಿಯಂಟ್ಸ್ ಕಮ್ಮಿ ಮಾಡ್ಸತ್ತೆ. ಪ್ರೋಟೀನ್ ಮತ್ತೆ ನಾರಿನ ಅಂಶ ಸಕ್ಕತ್ತಾಗಿ ಇರೋದ್ರಿಂದ ಮಧುಮೇಹ ಕಾಯಿಲೆಯನ್ನ ಕಮ್ಮಿ ಮಾಡ್ಸತ್ತೆ.
ಇದೇ ತರ ಇನ್ನೂ 09 ಉಪಯೋಗಗಳಿದೆ
1. ಇದ್ರಲ್ಲಿರೋ ಪೌಷ್ಟಿಕಾಂಶಗಳು ಮಂಡಿ ನೋವು ಕಮ್ಮಿಮಾಡತ್ತೆ:-
ಬಟಾಣಿಗಳಲ್ಲಿ ಬೇರೆ ಬೇರೆ ತರದ ಬಟಾಣಿಗಳಿವೆ. ಫ್ಲಾವನೊಯ್ಡ್ ಗುಂಪಿನ ಬಟಾಣಿಗಳಲ್ಲಿ ಕ್ಯಟಾಚಿನ್ ಮತ್ತೆ ಎಪಿಕ್ಯಟಾಚಿನ್ ಅನ್ನೋ ಆಂಟಿ ಆಕ್ಸಿಡೆಂಟ್ ಇದೆಯಂತೆ.

ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ಮಿನ್ರಲ್, ಜಿಂಕ್, ಒಮೆಗಾ 3 ಫ್ಯಾಟಿ ಆಸಿಡ್, ಇದೆಲ್ಲದ್ರ ಭಂಡಾರಾನೇ ಬಟಾಣಿಗಳಲ್ಲಿ ಅಡ್ಗಿದೆಯಂತೆ. ಇದೆಲ್ಲದ್ರ ಸಹಾಯದಿಂದ ಮಧುಮೇಹ , ಹೃದಯದ ತೊಂದ್ರೆ , ಮಂಡಿ ನೋವ್ಗಳನ್ನ ಕಮ್ಮಿ ಮಾಡ್ತದಂತೆ.
2. ರಕ್ತದಲ್ಲಿರೋ ಸಕ್ಕರೆ ಪ್ರಮಾಣ ಕಮ್ಮಿ ಮಾಡತ್ತೆ:-
ರಕ್ತದಲ್ಲಿರೋ ಸಕ್ಕರೆ ಪ್ರಮಾಣವನ್ನ ಕಮ್ಮಿ ಮಾಡ್ಸಕ್ಕೆ ಬಟಾಣಿ ಒಂದೊಳ್ಳೆ ಆಹಾರ ಅಂತ ಕೆಲ್ವು ಆಹಾರ ತಜ್ಞರು ಹೇಳಿದ್ದನ್ನ ಕೇಳಿದ್ ನೆನಪಿದೆ. ಆದ್ರೆ ಹೇಗ್ ಕಮ್ಮಿ ಮಾಡ್ಸತ್ತೆ ಅಂತ ಗೊತ್ತಿರ್ಲಿಲ್ಲ.

ಇವಾಗ ಗೊತ್ತಾಗಿದ್ ಹೊಸ್ ವಿಷ್ಯ ಎನಂದ್ರೆ ಇದ್ರಲ್ಲಿರೋ ಪ್ರೋಟೀನ್ ಮತ್ತೆ ನಾರಿನ ಅಂಶ ಪಿಷ್ಟವನ್ನ ತುಂಡ್ಮಾಡಿ ಕಾರ್ಬೋಹೈಡ್ರೇಟ್ಸಗಳನ್ನ ಜೀರ್ಣಾಂಗವ್ಯೂಹದ ಕಡೆಗೆ ತಳ್ಳತ್ತೆ. ಈ ಕಾರ್ಬೋಹೈಡ್ರೇಟ್ಸಗಳು ರಕ್ತದಲ್ಲಿರೋ ಸಕ್ಕರೆಯ ಪ್ರಮಾಣಾನ ಕಡ್ಮೆ ಮಾಡ್ಸತ್ತೆ.
3. ಇದ್ರಲ್ಲಿರೋ ವಿಟಮಿನ್ ಬಿ ಅಂಶ ಹೃದಯ ಚನ್ನಾಗಿ ಕೆಲಸ ಮಾಡೋ ಹಾಗೆ ನೋಡ್ಕೊಳತ್ತೆ:-
ಹಾಳು ಮೂಳನ್ನೆಲ್ಲಾ ತಿಂದು ಹೊಟ್ಟೆ ಬರ್ಸಕೊಂಡು ಆಮೇಲೆ ನಿಧಾನವಾಗಿ ಬೇಡ್ದೇ ಇರೋ ಕೊಬ್ಬನ್ನ ಹೆಚ್ಸಿಕೊಂಡ್ರೆ ಹೃದಯದ ಕಾಯ್ಲೆ ಸಾಮಾನ್ಯ. ಬಟಾಣಿಯಲ್ಲಿರೋ ನಿಯಾಸಿನ್ ಅನ್ನೋ ಅಂಶ ಈ ಕೆಟ್ಟ್ ಕೊಬ್ಬನ್ನ ಕರ್ಗಸತ್ತೆ. ಇದ್ರ ಜೊತೆಗೆ ನಾನು ಸಾಥ್ ಕೊಡ್ತೀನಿ ಅಂತ ಒಮೆಗಾ 3 ಫ್ಯಾಟಿ ಆಸಿಡ್ ಬೇರೆ ಇದೆ. ಕೆಟ್ಟ್ ಕೊಬ್ಬಿನ ಜೊತೆ ಹೋಮೋ ಸಿಸ್ಟಿನ್ ಅನ್ನೋದ್ಬೇರೆ ಕೂಡ್ಕಂಡು ತುಂಬಾನೇ ತೊಂದ್ರೆ ಕೊಡತ್ತೆ.
4. ಆಂಟಿ ಆಕ್ಸಿಡೆಂಟ್ಸ್ ಸಹಾಯದಿಂದ ಹೊಟ್ಟೆ ಕ್ಯಾನ್ಸರ್ ಬರೋದನ್ನ ತಡೆಗಟ್ಟತ್ತೆ:-
ಒತ್ತಡ ಮತ್ತು ತಲೆಬಿಸಿ ಜಾಸ್ತಿ ಮಾಡ್ಕೊಳೋದ್ರಿಂದ ಕ್ಯಾನ್ಸರ್ ಬೆಳೀಬೋದು. ನಿಮ್ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಕಮ್ಮಿ ಇದ್ರೆ ಈ ಸಮಸ್ಯೆನಾ ಪರಿಹರ್ಸಕ್ಕೆ ಆಗಲ್ಲ.

ಆಗ್ಲೇ ಹೇಳ್ದಾಗೆ ಬಟಾಣಿ ಆಂಟಿ ಆಕ್ಸಿಡೆಂಟ್ಗಳ ಭಂಡಾರಾವೇ ಆಗಿರೋದ್ರಿಂದ ಹೊಟ್ಟೆ ಕ್ಯಾನ್ಸರ್ ಇಂದ ನಮ್ಮನ್ನ ಕಾಪಾಡತ್ತೆ.
5. ಬಟಾಣೀಲಿ ಕ್ಯಾಲೋರಿ ಕಮ್ಮಿ ಇರೋದ್ರಿಂದ ತೂಕ ಇಳಿಸ್ಕೊಳಕ್ಕೆ ಸಹಾಯ ಮಾಡತ್ತೆ:-
ಒಳ್ಳೆ ಪೋಷಕಾಂಶ ಮತ್ತೆ ಕಮ್ಮಿ ಕ್ಯಾಲೋರಿಯನ್ನ ಹೊಂದಿರೋ ಬಟಾಣಿ ನಿಮ್ ತೂಕ ಇಳ್ಸೋದ್ರಲ್ಲಿ ಅನುಮಾನಾನೇ ಇಲ್ಲ. ಒಂದು ಕಪ್ ಬಟಾಣಿಯಲ್ಲಿ ಸುಮಾರು 118 ಕ್ಯಾಲೋರಿಗಳು ಮಾತ್ರ ಇರತ್ತೆ. ಹಾಗೇ ನೀವ್ ಬಟಾಣಿ ತಿಂದಾದ್ಮೇಲೆ ಇನ್ನೇನ್ ತಿನ್ನೋಕೂ ಮನ್ಸ್ ಬರಲ್ಲ. ಯಾಕಂದ್ರೆ ನಿಮ್ ಹೊಟ್ಟೆ ಅದಾಗ್ಲೇ ತುಂಬಿರತ್ತೆ. ಬಟಾಣಿಗೆ ಸ್ವಲ್ಪ ಮಟ್ಟಿಗೆ ಉಪ್ಪನ್ನ ಹಾಕ್ಬಿಟ್ಟು ತಿಂದ್ರೆ ಸಕ್ಕತ್ತಾಗ್ ಶಕ್ತಿನೂ ಸಿಗತ್ತೆ.

6. ಇದ್ರಲ್ಲಿರೋ ನಾರಿನಂಶ ಹೊಟ್ಟೆ ಕಟ್ಕೊಳ್ದೆ ಇರೋ ಹಾಗೆ ನೋಡ್ಕೊಳತ್ತೆ:-
ಮಲಬದ್ದತೆ ಇದ್ಯಲ್ಲಾ… ಅದು ಎಲ್ಲಾ ಕಾಯ್ಲೆಗೂ ಇಲ್ ಜಾಗ ಇದೆ ಬಾರಪ್ಪಾ ಅನ್ನತ್ತೆ. ಬಟಾಣಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರೋದ್ರಿಂದ ಎಷ್ಟೋ ದಿನ್ಗಳಿಂದ ಕೂಡ್ಕಂಡಿರೋ ತ್ಯಾಜ್ಯಗಳನ್ನ ಹೊರ್ಗಹಾಕ್ಲಿಕ್ಕೆ ಸಹಾಯ ಮಾಡತ್ತೆ. ಹಾಗೇ ಬಟಾಣಿ ಜೀರ್ಣಾಂಗ ವ್ಯವಸ್ಥೆಗೆ ತುಂಬಾನೇ ಸಾಥ್ ಕೊಡೋದೂ ಇದಕ್ಕೆ ಕಾರಣ ಇರ್ಬೋದು.
7. ಕೂದಲಿನ ಅಂದ ಕಾಪಾಡೋಕೆ ಇದ್ರಲ್ಲಿರೋ ವಿಟಮಿನ್ ಬಿ ಸಹಾಯ ಮಾಡತ್ತೆ:-
ಬಟಾಣಿಯಲ್ಲಿರೋ ವಿಟಮಿನ್ ಬಿ , ಫೋಲೆಟ್ , ವಿಟಮಿನ್ ಬಿ 6 ಕೂದಲು ಬೇರಿನಿಂದ ಗಟ್ಟಿಯಾಗೋ ಹಾಗೆ ನೋಡ್ಕೊಳತ್ತೆ. ವಿಟಮಿನ್ ಸಿ ಅನ್ನೋದು ಕೂದ್ಲು ಉದ್ರದೇ ಇರೋ ಹಾಗೆ ಕಾಪಾಡತ್ತೆ.

8.ಆಗಾಗ ಹುಷಾರ್ ತಪ್ಪಿ ಬೀಳದೆ ಇರೋ ಹಾಗೆ ನೋಡ್ಕೊಳತ್ತೆ:-
ನಮ್ ದೇಹದಲ್ಲಿರೋ ವ್ಯಾಧಿ ಕ್ಷಮತ್ವ ನಿರ್ಧಾರ ಆಗೋದೇ ವಿಟಮಿನ್ ಎ ಮೂಲಕ. ಒಂದು ತಟ್ಟೇ ಬಟಾಣಿಯಲ್ಲಿ ಸುಮಾರು 22 % ವಿಟಮಿನ್ ಎ ನಮ್ ದೇಹಕ್ಕೆ ಸಿಗತ್ತಂತೆ. ಅದ್ಕೊಸ್ಕರ ಇಮ್ಯುನಿಟಿ ಇಲ್ಲಾಂತ ಕೊರಗ್ಬೇಡಿ. ಬಟಾಣಿ ತಿನ್ನಿ. ಉಸಿರಾಟದ ತೊಂದ್ರೆ ಆಗ್ದೆ ಇರಕ್ಕೂ ವಿಟಮಿನ್ ಎ ಬೇಕಾಗತ್ತೆ.
9. ಚರ್ಮ ಹೊಳಿಯೋ ಹಾಗೆ ಮಾಡಿ ಚಿಕ್ಕೋರ ತರ ಕಾಣೋಹಾಗೆ ಮಾಡತ್ತೆ:-

ನಮ್ ದೇಹದಲ್ಲಿ ಫ್ರೀ ರಾಡಿಕಲ್ ಅನ್ನೋ ಅಂಶ ಇಲ್ದೇ ಹೋಗಿದ್ರೆ ಬಿಸ್ಲು , ಚಳಿ , ಮಳೆಯಂತ ನಮ್ ಚರ್ಮ ಬೇಗನೇ ಸುಕ್ಕು ಗಟ್ತಿತ್ತು. ಬಟಾಣಿಯಲ್ಲಿರೋ ಆಂಟಿ ಆಕ್ಸಿಡೆಂಟ್ ಈ ಫ್ರೀ ರಾಡಿಕಲ್ಗಳ ಆಯಸ್ಸು ಮತ್ತು ಅದ್ರ ಶಕ್ತಿಯನ್ನ ಜಾಸ್ತಿ ಮಾಡ್ಸತ್ತೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಿಕ್ಷುಕನ ಮನೆಯಲ್ಲಿ 1.70 ಕೋಟಿಗಳ ಹಣ ಸಿಕ್ಕಿದೆ. ಮುಂಬೈ ಪಟ್ಟಣದಲ್ಲಿನ ಕೊಳಗೇರಿಗೆ ಸೇರಿದ ಭಿಕ್ಷುಕನಿಗೆ ತನ್ನವರು ಎಂಬುವರು ಯಾರೂ ಇಲ್ಲ. ಪ್ರತಿದಿನ ಭಿಕ್ಷೆ ಬೇಡುವುದು, ದೊರೆತ್ತದ್ದನ್ನು ತಿನ್ನುವುದು, ಬಂದದ್ದನ್ನು ಎತ್ತಿಡುವುದು…..ಇದೇ ಆತನ ದಿನನಿತ್ಯದ ಕೆಲಸವಾಗಿತ್ತು
ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಹಮ್ಮಿಕೊಳ್ಳಲಾಗಿತ್ತು. ಪ್ರತೀ ವರ್ಷ ಹಬ್ಬದಂತೆ ಆಚರಿಸುವ ಈ ದಿನವನ್ನ ಈ ಬಾರಿ ತುಂಬಾನೆ ವಿಶಿಷ್ಟವಾಗಿ ಆಚರಿಸಲಾಯಿತು. ಭಾರಿ ಮಳೆಯಿಂದಾಗಿ ದ್ವಾರಕವೇ ಮುಳುಗುತ್ತಿದ್ದಾಗ, ಶ್ರೀ ಕೃಷ್ಣ ತನ್ನ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟವನ್ನ ಎತ್ತಿ ಹಿಡಿದು, ದ್ವಾರಕೆಯ ಜನರನ್ನ ರಕ್ಷಿಸುತ್ತಾನೆ. ಅಂದಿನಿಂದ ಈ ದಿನದಂದು ಗೋವರ್ಧನಗಿರಿ ಪೂಜೆ ಮಾಡಲಾಗುತ್ತೆ. ಇನ್ನು ಪ್ರತೀ ವರ್ಷ ಈ ದಿನವನ್ನ ಸಂಭ್ರಮದಿಂದ ನಗರದ ಇಸ್ಕಾನ್ ದೇವಸ್ಥಾನದಲ್ಲಿ ಗೋವರ್ಧನ ಪೂಜೆ ಮಾಡಲಾಗಿದ್ದು ಈ ಬಾರಿ ಬಹಳ ವಿಶಿಷ್ಟವಾಗಿ…
ಹಿ೦ದೂ ಧರ್ಮವು ಜಗತ್ತಿನ ಅತ್ಯ೦ತ ಪುರಾತನವಾದ ಸನಾತನ ಧರ್ಮವಾಗಿದೆ. ವೈವಿಧ್ಯಮಯವಾದ ರೀತಿನೀತಿ, ಆಚರಣೆಗಳು, ಸ೦ಪ್ರದಾಯಗಳು, ಕಲ್ಪನೆಗಳು, ಇವೆಲ್ಲವುಗಳ ಸ೦ಯೋಜನೆಯಾಗಿರುವ ಹಿ೦ದೂ ಪದ್ಧತಿಯು ಎ೦ದೆ೦ದಿಗೂ ಅತ್ಯ೦ತ ರೋಮಾ೦ಚಕವಾಗಿರುವ ನ೦ಬಿಕೆಯಾಗಿದೆ.
ಕೈಯಲ್ಲಿ ಊಟ ಮಾಡುವುದು ನಮ್ಮ ಹಿಂದಿನ ಕಾಲದಿಂದಲೂ ರೂಡಿಯಲ್ಲಿದೆ, ಆದರೆ ಇದು ಕೇವಲ ರೂಡಿಯಲ್ಲ, ಇದು ನಮ್ಮ ಸಂಪ್ರದಾಯ. ಇತ್ತೀಚಿಗೆ ದೊಡ್ಡ ದೊಡ್ಡ ನಗರಗಳಲ್ಲಿ ಕೈಯಲ್ಲಿ ಊಟ ಮಾಡುವುದೇ ಮರೆಯಾಗಿದೆ. ಚಮಚಗಳನ್ನ ಬಳಕೆ ಮಾಡುವುದೇ ಹೆಚ್ಚಾಗಿದೆ. ಅನಿವಾರ್ಯವಾಗಿ ಕೈಯಲ್ಲಿ ತಿನ್ನುವವರು
ನಮ್ಮ ಗ್ರಾಮೀಣ ಜನರಿಗಾಗಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ ಸುಮಾರು 100 ಕ್ಕಿಂತ ಹೆಚ್ಚು ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ.
ಪಾಟ್ನಾದ ಯುವಕನೊಬ್ಬ ಫೇಸ್ಬುಕ್ ನಲ್ಲಿ ಸುಂದರ ಹುಡುಗಿಯ ಫೋಟೋ ನೋಡಿದ್ದಾನೆ. ಆಕೆ ಸೌಂದರ್ಯಕ್ಕೆ ಸೋತು ಮೊದಲು ರಿಕ್ವೆಸ್ಟ್ ಕಳುಹಿಸಿದ್ದಾನೆ. ಹುಡುಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾಳೆ. ನಿಧಾನವಾಗಿ ಇಬ್ಬರ ಮಧ್ಯೆ ಸ್ನೇಹ ಚಿಗುರಿದೆ. ನಂತ್ರ ಪ್ರೀತಿ ಶುರುವಾಗಿದೆ. ಇಬ್ಬರೂ ಹೊಸ ಪ್ರಪಂಚದಲ್ಲಿ ತೇಲಾಡಲು ಶುರು ಮಾಡಿದ್ದಾರೆ. ಗಂಟೆಗಟ್ಟಲೆ ಚಾಟ್ ಮಾಡ್ತಿದ್ದವರು ಹೊಸ ವರ್ಷ ಭೇಟಿಯಾಗಿ, ಮದುವೆಯಾಗುವ ನಿರ್ಧಾರ ಕೈಗೊಂಡಿದ್ದಾನೆ. ಹೊಸ ವರ್ಷದ ಮೊದಲ ದಿನ ಪಾರ್ಕ್ ಒಂದನ್ನು ನಿಗಧಿ ಮಾಡಿ ಅಲ್ಲಿ ಮೊದಲ ಭೇಟಿಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ….