ಗ್ಯಾಜೆಟ್

ಫ್ಲಿಪ್‌ಕಾರ್ಟಿನಲ್ಲಿ ರೂ.799ಕ್ಕೆ ನೋಕಿಯಾ 3310 ಕ್ಲೋನ್ ಪೋನ್..!!!!

103

ನೋಕಿಯಾ 3310 ಫೋನಿಗೆ ರೂ.3310 ನೀಡಲು ಯಾರು ಮುಂದೆ ಬಂದಿಲ್ಲ. ಇದಕ್ಕಾಗಿಯೇ ಸದ್ಯ ಮಾರುಕಟ್ಟೆಗೆ ನೋಕಿಯಾ 3310 ಕ್ಲೋನ್ ಫೋನ್ ಬಂದಿದ್ದು, ಕೇವಲ ರೂ.799ಕ್ಕೆ ಮಾರಾಟವಾಗುತ್ತಿದೆ.
ಸದ್ಯ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದು, ಆರಂಭ ಎನ್ನುವಂತೆ ನೋಕಿಯಾ 3310 ಫೋನ್‌ ಅನ್ನು ರೀಲಾಂಚ್ ಮಾಡಿದ್ದು, ಹೊಸ ಮಾದರಿಯಲ್ಲಿ ಹೊಸ-ಹೊಸ ಆಯ್ಕೆಗಳೊಂದಿಗೆ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಆದರೆ ಈ ಫೋನ್ ಹೇಳಿಕೊಳ್ಳುವಷ್ಟು ಸದ್ದು ಮಾಡುತ್ತಿಲ್ಲ.

ಕಾರಣ ಒಂದು ಇದು ಆಫ್‌ ಲೈನ್ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಜನರಿಗೆ ಅಷ್ಟಾಗಿ ಈ ಫೋನ್ ಎಲ್ಲಿ ದೊರೆಯಲಿದೆ ಎಂಬುದರ ಕುರಿತು ಸರಿಯಾದ ಮಾಹಿತಿ ಇಲ್ಲ. ಇನ್ನೊಂದು ಕಾರಣ ಎಂದರೆ 5 ಸಾವಿರಕ್ಕೇ ಉತ್ತಮ ಸ್ಮಾರ್ಟ್‌ಫೋನ್ ದೊರೆಯುತ್ತಿರುವ ಕಾಲದಲ್ಲಿ ನೋಕಿಯಾ 3310 ಫೋನಿಗೆ ರೂ.3310 ನೀಡಲು ಯಾರು ಮುಂದೆ ಬಂದಿಲ್ಲ. ಇದಕ್ಕಾಗಿಯೇ ಸದ್ಯ ಮಾರುಕಟ್ಟೆಗೆ ನೋಕಿಯಾ 3310 ಕ್ಲೋನ್ ಫೋನ್ ಬಂದಿದ್ದು, ಕೇವಲ ರೂ.799ಕ್ಕೆ ಮಾರಾಟವಾಗುತ್ತಿದೆ.

ನೋಕಿಯಾ 3310 ಕ್ಲೋನ್ ಪೋನ್:-  ಚೀನಾ ಮೂಲದ ಕಂಪನಿಗಳು ಯಾವುದಾರು ಒಂದು ಬ್ರಾಂಡೆಡ್ ಕಂಪನಿಯ ಯಾವುದಾರು ಒಂದು ಫೋನ್ ಬಿಡುಗಡೆಯಾಗಿದೆ ಎಂದರೆ ಅದಕ್ಕೆ ಪ್ರತಿಯಾಗಿ ಪ್ರತಿರೂಪದ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರಲ್ಲಿ ಮುಂದಿವೆ. ಇದೇ ಮಾದರಿಯಲ್ಲಿ ಡ್ರಾಗೋ 3310 ಫೋನ್ ಮಾರುಕಟ್ಟೆಗೆ ಬಂದಿದೆ. ನೋಡಲು ನೋಕಿಯಾ 3310 ಫೋನ್ ಮಾದರಿಯಲ್ಲಿಯೇ ಇದೆ. ಅದುವೆ ಫ್ಲಿಪ್‌ಕಾರ್ಟಿನಲ್ಲಿ ಲಭ್ಯವಿದೆ.

ಎರಡು ಫೋನಿನ ನಡುವೆ ವ್ಯತ್ಯಾಸವೇ ಕಾಣುವುದಿಲ್ಲ:– ನೋಕಿಯಾ 3310 ಫೋನ್ ಮತ್ತು ಡ್ರಾಗೋ 3310 ಫೋನಿನ ನಡುವೆ ಯಾವುದೇ ವ್ಯತ್ಯಾಸವೂ ಮೊದಲನೇ ನೋಟಕ್ಕೆ ಕಾಣುವುದೇ ಇಲ್ಲ ಎನ್ನಬಹುದು. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಡ್ರಾಗೋ 3310 ಪೋನಿನಲ್ಲಿ ಹೆಡ್‌ಫೋನ್ ಜಾಕ್ ಮತ್ತು ಯುಎಸ್‌ಬಿ ಫೋರ್ಟ್ ಕೆಳಭಾಗದಲ್ಲಿದೆ. ಇದೇ ನೋಕಿಯಾ 3310 ಫೋನ್ ನಲ್ಲಿ ಯುಎಸ್‌ಬಿ ಮೇಲೆ ಹೆಡ್‌ಫೋನ್ ಜಾಕ್ ಕೆಳಭಾಗದಲ್ಲಿದೆ.

ಡ್ರಾಗೋ 3310 ಫೋನಿನ ವಿಶೇಷತೆ:- ಡ್ರಾಗೋ 3310 ಫೋನಿನಲ್ಲಿ 1.77 ಇಂಚಿನ ಡಿಸ್‌ಪ್ಲೇ ಇದೆ. ಅಲ್ಲದೇ 1MB RAM ಇದರಲ್ಲಿದೆ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ 8GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.. ಅಲ್ಲದೇ ಹಿಂಭಾಗದಲ್ಲಿ 0.3 MP ಕ್ಯಾಮೆರಾವನ್ನು ಕಾಣಬಹುದಾಗಿದೆ. ಜೊತೆಗೆ LED ಫ್ಲಾಷ್ ಸಹ ನೀಡಲಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇಶ-ವಿದೇಶ

    ಇದು ಜಗತ್ತಿನ ಅತ್ಯಂತ ಸೋಮಾರಿ ರಾಷ್ಟ್ರ..! ಆ ರಾಷ್ಟ್ರ ಯಾವುದು ಗೊತ್ತಾ?

    ನಾವು ಮನೆಗಳಲ್ಲಿ ಕೆಲಸ ಮಾಡದ, ಉದ್ಯೋಗ ಮಾಡದೆ ತಿಂದು ಕೆಲಸವಿಲ್ಲದೇ ತಿರುಗುವವರನ್ನು, ಸೋಮಾರಿ ಎಂದು ಮನೆಗಳಲ್ಲಿ ಹಾಸ್ಯ ಮಾಡುವುದುಂಟು. ಹೀಗೆ ಸೋಮಾರಿತನದಿಂದ ಇರುವವರು ಎಲ್ಲಾ ಕಡೆ ಸಿಗುತ್ತಾರೆ. ಅದಕ್ಕಾಗಿಯೇ ವಿಶ್ವವಿದ್ಯಾನಿಲಯವೊಂದು ವಿಶ್ವದ ಸೋಮಾರಿಗಳ ಬಗ್ಗೆ ಅಧ್ಯಯನ ನಡೆಸಿದ್ದು ಅದರ ವಿವರಣೆಯನ್ನು ಕೊಟ್ಟಿದೆ.

  • ಸುದ್ದಿ

    ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಬರೋಬ್ಬರಿ 50ಲಕ್ಷ ಹಣವನ್ನು ನೆರೆ ಸಂತ್ರಸ್ತರಿಗೆ ಕೊಟ್ಟ ಮಹಾನ್ ತಾಯಿ!ಮತ್ತೆ ಮಗಳ ಮದ್ವೆ ಹೇಗೆ?

     ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದಿಂದಾಗಿ ಆಸ್ತಿ ಪಾಸ್ತಿ, ಹಣದ ಜೊತೆಗೆ ಜನರ ಪ್ರಾಣ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಈ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದ ಸಾವಿರಾರು ಜನರಿಗೆ ಹಲವಾರು ಹಲವಾರು ರೀತಿಯಲ್ಲಿ ತಮ್ಮ ಕೈಲಾದಷ್ಟು ಮಾಡುತ್ತಿದ್ದಾರೆ.ಮುಂಬೈನ ಸುಮನ್ ರಾವ್ ಎನ್ನುವ ಮಹಿಳೆಯೊಬ್ಬಳು ತಮ್ಮ ಮಗಳ ಮದುವೆಗೋಸ್ಕರ ಕೂಡಿಟ್ಟಿದ್ದ ಹಣವನ್ನು ಸಂಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನರಿಗೋಸ್ಕರ ಕೊಡುವುದರ ಮುಖಾಂತರ ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ.    ಇದೆ ವರ್ಷ ಡಿಸೆಂಬರ್ ತಿಂಗಳಿನಲ್ಲಿ ತಮ್ಮ ಮಗಳ ಮದುವೆ ಮಾಡಬೇಕೆಂದು ೫೦ ಲಕ್ಷರೂ…

  • ಸುದ್ದಿ

    ರೈಲಿನ ಪ್ರಯಾಣದ ಮಧ್ಯೆ ಹೆರಿಗೆ ಮಾಡಿಸಿದ ಧರಣಿಗೆ ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರು.!

    ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ಎಂಬುವರು ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದವರು.  ಬೆಂಗಳೂರಿಗೆ ಪತಿ ಜೊತೆ ಹೊರಟಿದ್ದ ಗೀತಾ ಅವರಿಗೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು.‌ ಚಿತ್ತಾಪುರ ತಾಲೂಕು ನಾಲವಾರದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ, ಹಾಲಾಬಾಯಿ ಮತ್ತಿತರರು ಸುಲಭ ಹೆರಿಗೆ ಮಾಡಿಸಿದ್ದಾರೆ. ವಿಷಯ ತಿಳಿದ ಕಾರ್ಯಕರ್ತೆಯರು ಗೀತಾ ಅವರಿಗೆ ಸುಲಭ ಹೆರಿಗೆ ಮಾಡಿಸಿದರು.  ರಾಯಚೂರು…

  • ವಿಸ್ಮಯ ಜಗತ್ತು

    ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿದೆ ಎಂದು ನೀವು ನಂಬಲಾಗದ 05 ವಿಷಯಗಳನ್ನು ಎಲ್ಲಿವೆ..!ತಿಳಿಯಲು ಈ ಲೇಖನ ಓದಿ…

    ಪ್ರಕೃತಿಯಲ್ಲಿ ಅದ್ಭುತ ವಿಷಯಗಳು ನೀವು ಅಸ್ತಿತ್ವದಲ್ಲಿ ನಂಬುವುದಿಲ್ಲಪ್ರಕೃತಿ ಅನಿರೀಕ್ಷಿತವಾಗಿದೆ, ಅದು ಸುಂದರವಾಗಿರುತ್ತದೆ ಮತ್ತು ವಿಶ್ರಾಂತಿ ಪಡೆಯುಬಹುದು.ಈ ಜಗತ್ತು ಅದ್ಭುತಗಳಿಂದ ತುಂಬಿದೆ, ನಾವು ಎಲ್ಲೆಡೆಯೂ ಒಂದು ಮಂತ್ರವಿದ್ಯೆಯನ್ನು ನೋಡಬಹುದು. ಪ್ರಕೃತಿ ಅದ್ಭುತ ವಿಷಯಗಳಿಂದ ತುಂಬಿದೆ, ಅವುಗಳಲ್ಲಿ ಕೆಲವು ನಂಬಲಾಗದವು. 1.ಮಾಲ್ಡೋವ್ಸ್ನ ವಾಧೋವಿನ ಹೊಳೆಯುವ ಶೋರ್ಗಳು:- ಇದು ಒಂದು ಬೆಳಕಿನ ಪ್ರದರ್ಶನವೆಂದು ಕಂಡುಬರುತ್ತದೆ, ಅದು ನಂಬಲಾಗದದು. 2.ಕೈಲೂವಾ, ಹವಾಯಿನಲ್ಲಿ ಮಳೆಬಿಲ್ಲು ಗಮ್:- ಇದು ಸಾಮಾನ್ಯವಾಗಿ ರೇನ್ಬೋ ಯೂಕಲಿಪ್ಟಸ್ ಎಂದು ಕರೆಯಲ್ಪಡುವ ಒಂದು ಎತ್ತರದ ಮರವಾಗಿದೆ. 3.ದೆವ್ವದ ಮರಗಳು,ಪಾಕಿಸ್ತಾನ:- 2010 ರ ಪ್ರವಾಹದಿಂದಾಗಿ…

  • ಸುದ್ದಿ

    ಬಾಲಕನಿಂದ ಮೋದಿಯವರಿಗೆ 37ನೇ ಪತ್ರ….ಕಾರಣ ಏನು?

    ಉತ್ತರ ಪ್ರದೇಶದ ಕಾನ್ಪುರದಲ್ಲಿ 8ನೇ ತರಗತಿಯ ಬಾಲಕನೊಬ್ಬ ತನ್ನ ತಂದೆಯ ಕೆಲಸವನ್ನು ಮರಳಿ ಕೊಡಿಸುವಂತೆ ಪ್ರಧಾನಿ ಮೋದಿ ಅವರಿಗೆ ಬರೋಬ್ಬರಿ 37 ಪತ್ರವನ್ನು ಬರೆದಿದ್ದಾನೆ.13 ವರ್ಷದ ಈ ಬಾಲಕ 2016ರಿಂದ ಮೋದಿಗೆ ಪತ್ರಗಳನ್ನು ಬರೆಯುತ್ತಿದ್ದಾನೆ. ಇದುವರೆಗೆ 36 ಪತ್ರಗಳನ್ನು ಬರೆದಿದ್ದಾನೆ. ಆದರೆ ಪ್ರಧಾನಿ ಮೋದಿ ಅವರಿಂದ ಪತ್ರಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಸರ್ಥಕ್ ತ್ರಿಪಾಠಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವ ಬಾಲಕ. ಈತನ ತಂದೆ ಉತ್ತರ ಪ್ರದೇಶದಲ್ಲಿ ಸ್ಟಾಕ್ ಎಕ್ಸ್ ಚೇಂಜ್‍ನಲ್ಲಿ(ಯುಪಿಎಸ್‍ಇ)ಯಲ್ಲಿ ಕೆಲಸ ಮಾಡುತ್ತಿದ್ದರು….

  • ಸುದ್ದಿ

    ಖ್ಯಾತ ಸ್ಯಾಕ್ಸೋಫೋನ್ ವಾದಕ,ಪದ್ಮಶ್ರೀ ಪುರಸ್ಕೃತ ವಿಜೇತ ಕದ್ರಿ ಗೋಪಾಲನಾಥ್ ಇನ್ನಿಲ್ಲ …..

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಲನಾಥ್(70)​ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಕೆಲವು ತಿಂಗಳುಗಳಿಂದ ವಯೋಸಹಜ ಹೃದಯ ಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುರುವಾರ ಅವರಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣಿ ಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಆಕಾಶವಾಣಿ ‘ಎ’ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು…