ರಾಜಕೀಯ

ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದ್ದೇಕೆ ಗೊತ್ತಾ ಕಾಂಗ್ರೆಸ್ ಪಕ್ಷದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್..?

210

ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ ವೈಖರಿಯನ್ನು ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೊಗಳಿದ್ದಾರೆ.

ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೈ ಶಾಸಕಿ ಮೋದಿ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೇದಿಕೆ ಮೇಲೆ ಮಾತನಾಡುತ್ತ ಬಹಳ ಜನ ರಾಜಕಾರಣಿಗಳನ್ನ ಕಳ್ಳರು, ಸುಳ್ಳರು, ಮೋಸಗಾರರು ಎಂದು ಕರೆಯುತ್ತಾರೆ. ಆದ್ರೆ ಎಲ್ಲಾ ರಾಜಕಾರಣಿಗಳು ಆ ಪಟ್ಟಿಗೆ ಸೇರುವುದಿಲ್ಲ. ಕೆಲವು ರಾಜಕಾರಣಿಗಳ ನಡೆಯನ್ನು, ಕೆಲಸವನ್ನು ಸುಳ್ಳು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ದೇಶಭಕ್ತಿಯನ್ನ ಯಾರಿಂದಲೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಅದೇ ರೀತಿಯಾಗಿ ಸಮಾಜಮುಖಿಯಾಗಿ, ಸಮಾಜದ ಪರವಾಗಿ ಹಾಗೂ ಸಮಾಜಕೋಸ್ಕರ ಹೋರಾಟ ಮಾಡುವ ಬಹಳಷ್ಟು ತ್ಯಾಗಮಯಿ ರಾಜಕಾರಣಿಗಳಿದ್ದಾರೆ. ಅವರಿಂದಲೇ ಅಲ್ಪ ಸ್ವಲ್ಪ ನ್ಯಾಯ ನಮ್ಮ ಬಡವರಿಗೆ ಹಾಗೂ ರೈತರಿಗೆ ಸಿಗುತ್ತಿದೆ. ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ್ದು ಸುಳ್ಳಲ್ಲ. ಅವರು ಯಾರಿಗೂ ಮೋಸ ಮಾಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಯೋಜನೆಗಳನ್ನ ಮರೆಯುವಂತಿಲ್ಲ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಈ ರೀತಿ ಹೇಳಿಕೆ ನೀಡಿರುವುದು ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಶಾಸಕಿ ಹೆಬ್ಬಾಳ್ಕರ್ ಮೋದಿಯನ್ನ ಹೊಗಳಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೈಕ್ ಚಾಲನೆ ಮಾಡಿಕೊಂಡು ‘ಸೆಲ್ಯೂಟ್’ ಮಾಡಿದ್ರೆ ಭಾರಿ ದಂಡ ಗ್ಯಾರಂಟಿ…!

    ಶಿಸ್ತುಪಾಲನೆ ವಿಚಾರದಲ್ಲಿ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದೆ ಇರುತ್ತದೆ. ಅದರಲ್ಲೂ ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವ ಸಂದರ್ಭದಲ್ಲಿ ಸೆಲ್ಯೂಟ್ ಹೊಡೆಯುವುದು ಪದ್ಧತಿಯಾಗಿದೆ. ಆದರೆ ಈಗ ಇದಕ್ಕೆ ಕೊಂಚ ಮಾರ್ಪಾಡು ತರಲು ಇಲಾಖೆ ಮುಂದಾಗಿದೆ. ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ಬೈಕ್ ಚಾಲನೆ ಮಾಡುವ ವೇಳೆ ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಪಡೆಯಬಾರದೆಂಬ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಾಗಿದ್ದು, ಇದನ್ನು ಉಲ್ಲಂಘಿಸಿದರೆ ಮೋಟಾರು ವಾಹನ ಕಾಯ್ದೆ ಅಡಿ 1000 ರೂ. ದಂಡದ ಜೊತೆಗೆ ಮೂರು ತಿಂಗಳವರೆಗೆ ಡಿಎಲ್ ಅಮಾನತುಗೊಳಿಸಲಾಗುತ್ತದೆ. ವಾಹನ ಚಾಲನೆ…

  • ಸುದ್ದಿ

    ವಯನಾಡಲ್ಲಿ 2ನೇ ದಿನ ರಾಹುಲ್ ರೋಡ್‍ಶೋ ಶುರು – ಶ್ರೀಲಂಕಾ ಹಾಗೂ ಮಾಲ್ಡೀವ್ಸ್ಗೆ ಮೋದಿ ಮೊದಲ ಪ್ರವಾಸ…..

    ಎರಡನೇ ಬಾರಿಗೆ, ಪ್ರಧಾನಿ ಆದ ಬಳಿಕ ಇದೇ ಮೊದಲ ಬಾರಿಗೆ ನರೇಂದ್ರ ಮೋದಿ ಇಂದು ವಿದೇಶ ಪ್ರವಾಸ ಆರಂಭಿಸಲಿದ್ದು ದ್ವೀಪರಾಷ್ಟ್ರ ಮಾಲ್ಡೀವ್ಸ್‍ಗೆ ಭೇಟಿ ನೀಡುತ್ತಿದ್ದಾರೆ.ಮಾಲ್ಡೀವ್ಸ್ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಿ, ಅಲ್ಲಿನ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ಸೊಲಿತ್ ಜೊತೆ ಮಾತುಕತೆ ನಡೆಸುತ್ತಾರೆ. ಭಾರತದ ನೆರವಿನಿಂದ ಶುರುವಾಗಿರುವ ಕಾಮಗಾರಿಗಳ ಉದ್ಘಾಟನೆಯ ಜೊತೆಗೆ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೂ ಮೋದಿ ಹಣಕಾಸು ನೆರವು ಘೋಷಿಸುವ ಸಾಧ್ಯತೆ ಇದೆ. ಮಾಲ್ಡೀವ್ಸ್‍ನಿಂದ ನಾಳೆ ದ್ವೀಪರಾಷ್ಟ್ರ ಶ್ರೀಲಂಕಾಕ್ಕೆ ಭೇಟಿ ನೀಡುತ್ತಾರೆ. ಈಸ್ಟರ್ ಸಂಡೆಯಂದು ನಡೆದಿದ್ದ…

  • ಸುದ್ದಿ

    ಹೀರೋ ಪಾತ್ರಕ್ಕೆ ಪ್ರಮೋಷನ್ ಪಡೆದ ಕಮಿಡಿಯನ್ ಚಿಕ್ಕಣ್ಣ…!

    ಶರಣ್ ಮತ್ತು ಕೋಮಲ್ ನಂತರ ಮತ್ತೊಬ್ಬ ಹಾಸ್ಯನಟ ಚಿಕ್ಕಣ್ಣ ಹೀರೋ ಆಗಿ ಬದಲಾಗುತ್ತಿದ್ದಾರೆ. ಉಪಮಾತಿ ಬ್ಯಾನರ್ ನಲ್ಲಿ ಚಿಕ್ಕಣ್ಣ ಹೀರೋ ಆಗಿ ನಟಿಸುತ್ತಿದ್ದಾರೆ. ರಾಬರ್ಟ್, ಮದಗಜ ನಿರ್ದೇಶಕ ಮಂಜು ಮಾಂಡವ್ಯ ಚಿಕ್ಕಣ್ಣ ನಟನೆಯ ಇನ್ನೂ ಹೆಸರಿಡದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಮೊದಲು ಭರತ ಬಾಹುಬಲಿ ಎಂಬ ಸಿನಿಮಾದಲ್ಲಿ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಜೊತೆಯಾಗಿ ನಟಿಸುತ್ತಿದ್ದಾರೆ,.ಇದೇ ಸಿನಿಮಾದಲ್ಲಿ ನಿರ್ದೇಶಕರಾಗಿದ್ದ ಮಂಜು ಮಾಂಡವ್ಯ ನಟನಾಗಿ ಪಾದಾರ್ಪಣೆ ಮಾಡಿದ್ದಾರೆ. 9 ವರ್ಷಗಳಿಂದ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳಲ್ಲಿ…

  • ಸುದ್ದಿ

    ಬಿಡುಗಡೆಯಾಯ್ತು BJP ಪಕ್ಷದ ಪ್ರಣಾಳಿಕೆ..ರೈತರಿಗೆ ಪಿಂಚಣಿ ಸೇರಿದಂತೆ ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ ಗೊತ್ತಾ.?

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಣಾಳಿಕೆ `ಸಂಕಲ್ಪ ಪತ್ರ’ ಬಿಡುಗಡೆ ಮಾಡಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರಣಾಳಿಕೆ ಬಿಡುಗಡೆ ಮಾಡುವ ಮೊದಲು ಸರ್ಕಾರ ಐದು ವರ್ಷಗಳಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದಿಟ್ಟರು. ಪ್ರಣಾಳಿಕೆಯಲ್ಲಿ ಬಿಜೆಪಿ ಎಲ್ಲ ವರ್ಗದ ಜನರನ್ನು ಖುಷಿಗೊಳಿಸುವ ಪ್ರಯತ್ನ ನಡೆಸಿದೆ. ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜೊತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಂ ಸೇರಿದಂತೆ ಅನೇಕ…

  • ಸಿನಿಮಾ

    ಟ್ರೊಲ್ ಪೇಜ್ ಗಳಿಗೆ ಆಗ ತುತ್ತಾಗಿದ್ದಅಗ್ನಿಶಾಕ್ಷಿ ಈಗ ಪುಟ್ಟಗೌರಿ ಧಾರಾವಾಹಿ

    ಗೌರಿಯನ್ನ ಅತಿ ಎತ್ತರದ ಬೆಟ್ಟದಿಂದ ತಳ್ಳಲಾಗಿದೆ. ಹೀಗೆ, ಬೆಟ್ಟದಿಂದ ಬಿದ್ದ ಗೌರಿ ಸಾಯಲೇ ಇಲ್ಲ. ಅಲ್ಲಿಂದ ಆದ ಅದ್ಭುತಗಳು ಒಂದೆರಡಲ್ಲ. ಇದನ್ನ ಕಂಡು ಟ್ರೋಲ್ ಪೇಜ್ ಗಳು ಪುಟ್ಟಗೌರಿಯನ್ನ ಟ್ರೋಲ್ ಮಾಡಿದ್ದಾರೆ.