ದೇಶ-ವಿದೇಶ

ಪೊಲೀಸ್ ಅಧಿಕಾರಿ ಮುಂದೆಯೇ, ಠಾಣಾಧಿಕಾರಿಯ ಸೀಟ್ನಲ್ಲಿ ಕುಳಿತ ಸ್ವಘೋಷಿತ ದೇವ ಮಹಿಳೆ..!

217

ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹಿಮ್ ಸಿಂಗ್ ಜೈಲು ಪಾಲಾಗಿದ್ದಾರೆ.ಇದರ ಬೆನ್ನಲ್ಲೇ ಸ್ವಯಂಘೋಷಿತ ದೇವ ಮಹಿಳೆಯೊಬ್ಬರು ಸಂಕಷ್ಟಕ್ಕೀಡಾಗಿದ್ದಾರೆ.

ಸ್ವಘೋಷಿತ ದೇವ ಮಹಿಳೆಯನ್ನು ಪೊಲೀಸ್ ಠಾಣೆಗೆ ಆಹ್ವಾನಿಸಿ ಆತ್ಮೀಯತೆಯಿಂದ ಸ್ವಾಗತಿಸಿ, ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿಗಳೇ ಆಕೆಗೆ ತನ್ನ ಸೀಟ್ ಅನ್ನು ಬಿಟ್ಟು ಕೊಟ್ಟಿರುವ ಫೋಟೋ ಇದೀಗ ವಿವಾದಕ್ಕೀಡಾಗಿದೆ.

ದೇಶದಾದ್ಯಂತ ಬಹು ಚರ್ಚೆಗೀಡಾಗಿರುವ ಸ್ವಯಂಘೋಷಿತ ದೇವಮಹಿಳೆ ರಾಧೆ ಮಾ ತನ್ನ ಫ್ಯಾಷನ್’ಗಳಿಗೆ ಫೇಮಸ್ಸು. ಇದೀಗ ಮುಖ್ಯ ಠಾಣಾಧಿಕಾರಿಯ ಸೀಟ್ನಲ್ಲೇ ಕುಳ್ಳಿರಿಸಿ ರಾಧೇ ಮಾಗೆ ಪೊಲೀಸ್ ಸಿಬ್ಬಂದಿ ಗೌರವಿಸಿದ ವಿಚಾರ ಬಹಿರಂಗಗೊಂಡಿದೆ.

ದೆಹಲಿಯ ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ರಾಧೆ ಮಾಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದರು. ಈ ಸಂದರ್ಭದಲ್ಲಿ ಠಾಣಾಧಿಕಾರಿ ಎದ್ದು ತನ್ನ ಕುರ್ಚಿಯಲ್ಲಿ ರಾಧೆ ಮಾಳನ್ನು ಕೂರಿಸಿ, ತಾನು ರಾಧೆ ಮಾ ಪಕ್ಕದಲ್ಲಿ ಕೈಮುಗಿದು ನಿಂತಿರುವ ಫೋಟೋ ವೈರಲ್ ಆಗಿದೆ.

ಕೌಟುಂಬಿಕ ಹಿಂಸೆ ಪ್ರಕರಣವೊಂದರಲ್ಲಿ ಆರೋಪ ಹೊತ್ತಿರುವ ರಾಧೆ ಮಾರ ತನಿಖೆಗೆಂದು ಸ್ಟೇಷನ್’ಗೆ ಆಗಮಿಸಿದ್ದರು. ಆದರೆ ಈ ಸಂದರ್ಭದಲ್ಲಿ ಠಾಣಾಧಿಕಾರಿಯೇ ರಾಧೆ ಮಾ ಪಕ್ಕದಲ್ಲೇ ನಿಂತು ಕೈಮುಗಿದು, ಕೆಂಪು ಶಲ್ಯ ಹೊದ್ದಿಸಿದ್ದಾರೆ.

ಸದ್ಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ವಿವಾದ ಸೃಷ್ಟಿಸಿವೆ.ರಾಧೆ ಮಾಳನ್ನು ಠಾಣೆಗೆ ಆಹ್ವಾನಿಸಿರುವ ಘಟನೆ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ. ರಾಧೆ ಮಾಗೆ ಖ್ಯಾತ ಸಿನಿಮಾ ನಿರ್ಮಾಪಕ, ನಿರ್ದೇಶಕ ಸುಭಾಶ್ ಘಾಯ್ ಸೇರಿದಂತೆ ಗಣ್ಯಾತೀ ಗಣ್ಯರ ಭಕ್ತರನ್ನು ಹೊಂದಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಸಿಎಂ ಯಡಿಯೂರಪ್ಪ ಮುಂದಿವೆ 2 ಸವಾಲುಗಳು…!

    ಬೆಂಗಳೂರು:  ಬಿಜೆಪಿ ಸರ್ಕಾರವೇನೋ ಅಸ್ಥಿತ್ವಕ್ಕೆ ಬಂದಿದೆ. ಆದರೆ, ನೂತನ ಸಿಎಂ ಯಡಿಯೂರಪ್ಪ ಈಗ ಪ್ರಮುಖ 2 ಸವಾಲುಗಳಿವೆ. ಒಂದು ಬಹುಮತಸಾಬೀತು, ಮತ್ತೊಂದು ಸಂಪುಟ ರಚನೆ. ಇದು ಬಿಜೆಪಿ ನಾಯಕರಲ್ಲೂ ತಳಮಳ ಸೃಷ್ಟಿಸಿದೆ. ಮುಂದಿನ ವಾರ ನೂತನ ಸರ್ಕಾರ ಬಹುಮತ ಸಾಬೀತು ಮಾಡುವ ಸಾಧ್ಯತೆ ಇದೆ. 4ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅಧಿಕಾರಕ್ಕೇರಿದ್ದಾರೆ. 14 ತಿಂಗಳ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನ ಬಳಿಕ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಬಹುಮತ ಸಾಬೀತು ಈಗ ಯಡಿಯೂರಪ್ಪ ಮುಂದಿರುವ…

  • govt

    ಮೇ 23 ರಂದು ಫಲಿತಾಂಶ, ಮೇ 24 ರಿಂದ ಹೊಸ ಸರ್ಕಾರ…..

    ನವದೆಹಲಿ: ಸುದೀರ್ಘವಾಗಿ ನಡೆದ ಲೋಕಸಭೆ ಚುನಾವಣೆ ಫಲಿತಾಂಶ ಮೇ 23 ರಂದು ಪ್ರಕಟವಾಗಲಿದೆ. ಕೊನೆ ಹಂತದ ಮತದಾನ ಮುಗಿದ ಬೆನ್ನಲ್ಲೇ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದು, ಎನ್.ಡಿ.ಎ. ಬಹುಮತ ಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 24 ರಂದು ಹೊಸ ಸರ್ಕಾರ ರಚನೆಗೆ ನಾಯಕರು ತಯಾರಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಎನ್.ಡಿ.ಎ. ಪಕ್ಷಗಳ ನಾಯಕರು ನಾಳೆ ದೆಹಲಿಗೆ ತೆರಳಿ ಸಭೆ ನಡೆಸಲಿದ್ದಾರೆ.ಪ್ರ ಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಬಿಜೆಪಿಯ ಹಿರಿಯ…

  • Health

    ಮಂಡಿ ಮತ್ತು ಕೀಲು ನೋವು ಕಡಿಮೆ ಮಾಡುವ 9 ಆಹಾರಗಳು ಯಾವುದು ಗೊತ್ತಾ ,..!

    ಮಂಡಿನೋವು ಬಂದರೆ ಚಿಕಿತ್ಸೆ ಜತೆಗೆ ಆಹಾರಕ್ರಮದ ಬಗ್ಗೆ ಗಮನ ಹರಿಸಿದರೆ ಬೇಗನೆ ಗುಣಮುಖರಾಗಬಹುದು. ಇಲ್ಲಿ ಮಂಡಿ ನೋವು ಕಡಿಮೆ ಮಾಡುವ 9 ಆಹಾರಗಳ ಬಗ್ಗೆ ಹೇಳಿದ್ದೇವೆ, ಇವುಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ ಆರೋಗ್ಯ ಮರಳಿ ಪಡೆಯಿರಿ.ಮಧ್ಯ ವಯಸ್ಸು ದಾಟುತ್ತಿದ್ದಂತೆ ಮಂಡಿ ನೋವು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಡೆಂಗೆ, ಚಿಕನ್‌ಗುನ್ಯಾ ಈ ರೀತಿಯ ಕಾಯಿಲೆಗಳು ಬಂದಾಗ ಕೂಡ ಮಂಡಿ ನೋವಿನ ಸಮಸ್ಯೆ ಕಾಡುವುದು. ಮಂಡಿ ನೋವಿನ ಸಮಸ್ಯೆ ಬಂದಾಗ ಚಿಕಿತ್ಸೆ ಜತೆ ಡಯಟ್‌ ಕಡೆ ಗಮನ ನೀಡಿದರೆ…

  • ಆಧ್ಯಾತ್ಮ

    ಹಿಂದೂ ಧರ್ಮದಲ್ಲಿ ಯಾರಾದ್ರು ಸತ್ತಾಗ ಕೇಶ ಮುಂಡನ ಮಾಡುತ್ತಾರೆ, ಏಕೆ ಗೊತ್ತಾ?

    ನಮ್ಮ ಹಿಂದೂ ಧರ್ಮದಲ್ಲಿ ಇರುವಷ್ಟು ಸಂಪ್ರದಾಯಗಳು ಬೇರೆ ಯಾವುದೇ ಧರ್ಮದಲ್ಲಿ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಹುಟ್ಟಿನಿಂದ ಸಾವಿನ ತನಕ ಹಿಂದೂಗಳು ಹಲವಾರು ರೀತಿಯ ಸಂಪ್ರದಾಯಗಳನ್ನು ಪಾಲಿಸಿಕೊಂಡು ಹೋಗುತ್ತಾರೆ. ಹುಟ್ಟಿದ ಮಗುವಿಗೆ ನಾಮಕರಣದಿಂದ ಹಿಡಿದು ಸತ್ತ ವ್ಯಕ್ತಿಗೆ ಪಿಂಡ ಬಿಡುವ ತನಕ ಪ್ರತಿಯೊಂದು ಸಂಪ್ರದಾಯಗಳು ಹಿಂದೂಗಳಲ್ಲಿ ಇದೆ.

  • ಸಿನಿಮಾ

    ರೊಬೋ-2.0 ಚಿತ್ರದ ಆ್ಯಮಿ ಜಾಕ್ಸನ್ ಫಸ್ಟ್ ಲುಕ್ ಬಿಡುಗಡೆ…! ತಿಳಿಯಲು ನೋಡಿ…

    ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ನಟಿಸುತ್ತಿರುವ 2.0 ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ 2.0 ಚಿತ್ರದ ಆ್ಯಮಿ ಜಾಕ್ಸನ್ ನ ಮೊದಲ ಲುಕ್ ಬಿಡುಗಡೆಯಾಗಿದೆ

  • ರಾಜಕೀಯ

    ಸಿದ್ದರಾಮಯ್ಯ ಮಣಿಸಲು ಕೋಲಾರ ಜನ ಶಪಥ! ಸಂಸದ ಮುನಿಸ್ವಾಮಿ

    ‘ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಅಷ್ಟೇ ಅಲ್ಲ, ಅವರ ನಾಯಕ ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ಬಂದರೂ ಭಯವಿಲ್ಲ. ಅವರನ್ನು ಸೋಲಿಸಿ ಮನೆಗೆ ಕಳುಹಿಸಲು ಕ್ಷೇತ್ರದ ಜನ ಶಪಥ ಮಾಡಿದ್ದಾರೆ! ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ವಕ್ಕಲೇರಿ ಗ್ರಾಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೇತೃತ್ವದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು. ‘ವರ್ತೂರು ಪ್ರಕಾಶ್‌ ಅಧಿಕಾರ ಇಲ್ಲದಿದ್ದರೂ ಕ್ಷೇತ್ರದ ಹಳ್ಳಿಹಳ್ಳಿಗೂ ಹೋಗಿ ಜನರ ಕಷ್ಟ ಆಲಿಸುತ್ತಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ. ಕೆಲಸ ಮಾಡುವವರಿಗೆ…