Sports

ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಗೆದ್ದು ನೂತನ ಇತಿಹಾಸ ಸೃಷ್ಟಿಸಿದ ಪಿವಿ ಸಿಂಧೂ…!

22

ಭಾರತದ ಹೆಮ್ಮೆಯ ಪಿವಿ ಸಿಂಧೂ, ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ನೂತನ ಇತಿಹಾಸ ಬರೆದಿದ್ದಾರೆ. ಮಹಿಳಾ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಜಪಾನ್‌ನ ನಜೊಮಿ ಮಣಿಸಿ ವಿಶ್ವ ಚಾಂಪಿಯನ್‌ಶಿಪ್‌ಗೆ ಮುತ್ತಿಕ್ಕಿದರು, ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್‌ ತಾರೆ ಪಿವಿ ಸಿಂಧೂ, ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ಇತಿಹಾಸ ರಚಿಸಿದ್ದಾರೆ. ಅಲ್ಲದೆ ಬ್ಯಾಡ್ಮಿಂಟನ್‌ ವಿಶ್ವ ಸಾಮ್ರಾಜ್ಞಿಯಾದ ಭಾರತದ ಮೊದಲ ಆಟಗಾರ್ತಿಯೆನ್ನುವ ಚಾರಿತ್ರಿಕ ದಾಖಲೆಯನ್ನು ಬರೆದಿದ್ದಾರೆ. ಭಾನುವಾರ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ನಡೆದ ಫೈನಲ್ ಮುಖಾಮುಖಿಯಲ್ಲಿ ತಮ್ಮ ಬದ್ದ ವೈರಿ ಜಪಾನ್‌ನ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ21-7, 21-7ರ ಅಂತರದ ಗೆಲುವು ದಾಖಲಿಸಿ ಇತಿಹಾಸ ಪುಟ ಸೇರಿದ್ದಾರೆ. 

ಭಾರತದ ಬ್ಯಾಡ್ಮಿಂಟನ್ ಕಣ್ಮಣಿ ಪಿ.ವಿ ಸಿಂಧೂ, ಸತತವಾದ ಐದನೇ ಪ್ರಯತ್ನದಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.24ರ ಹರೆಯದ ಹೈದರಾಬಾದ್‌ ಆಟಗಾರ್ತಿ2017 ಮತ್ತು 2018ರ ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿ, ಪ್ರಶಸ್ತಿ ಸೆಣಸಾಟದಲ್ಲಿ ಸೋತು ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡಿದ್ದರು. ಅದರಲ್ಲೂ ವಿಶೇಷವಾಗಿ2017ರ ಫೈನಲ್‌ನಲ್ಲಿ ಜಪಾನ್‌ನ ನಜೊಮಿ ಒಕುಹರಾ ವಿರುದ್ಧ ಕೇವಲ ಎರಡು ಅಂಕಗಳ ಹಿನ್ನಡೆಯೊಂದಿಗೆ ಸೋತು ನಿರಾಸೆ ಅನುಭವಿಸಿದ್ದರು. ಜೀವಮಾನದಲ್ಲೇ ಅತ್ಯುನ್ನತ ಫಾರ್ಮ್‌ನಲ್ಲಿರುವ ಪಿವಿ ಸಿಂಧೂ, ಪಂದ್ಯದ ಆರಂಭದಿಂದಲೇ ಎದುರಾಳಿ ಮೇಲೆ ಪ್ರಹಾರ ಮಾಡ ತೊಡಗಿದರು. ಸಿಂಧೂ ಬಲವಾದ ಹೊಡೆತಕ್ಕೆ ಓಕುಹರಾ ಬಳಿ ಉತ್ತರವೇ ಇಲ್ಲ. ಇದರಿಂದಾಗಿ ಒಂದು ಹಂತದಲ್ಲಿ16-2ರ ಅಂತರದ ಮುನ್ನಡೆ ದಾಖಲಿಸಿದರು. ಅಲ್ಲದೆ ಮೊದಲ ಸುತ್ತನ್ನು21-7 ರ ಅಂತರದ ಸುಲಭವಾಗಿ ವಶಪಡಿಸಿಕೊಂಡರು. 

ನಿರ್ಣಾಯಕ ದ್ವಿತೀಯ ಸುತ್ತಿನಲ್ಲೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸಿಂಧೂ, ಎದುರಾಳಿಯ ಮೇಲೆ ನಿರಂತರ ಒತ್ತಡವನ್ನು ಹೇರುತ್ತಲೇ ಸಾಗಿದರು. ಹಿಂದಿನ ಪ್ರದರ್ಶನಕ್ಕೆ ಹೋಲಿಸಿದರೆ ಅನಗತ್ಯ ತಪ್ಪುಗಳಿಗೆ ಯಾವುದೇ ಆಸ್ಪದ ನೀಡದ ಸಿಂಧೂ, ತಮ್ಮ ಬಲವಾದ ಹೊಡೆತದಿಂದಲೇ ಎದುರಾಳಿ ಮೇಲೆ ಸವಾರಿ ಮಾಡಿದರು. ಹಾಗೆಯೇ ದ್ವಿತೀಯ ಸುತ್ತಿನಲ್ಲೂ ಒಂದು ಹಂತದಲ್ಲಿ16-4ರ ಮುನ್ನಡೆ ಗಳಿಸಿ ಪ್ರಶಸ್ತಿಯತ್ತ ಮುನ್ನಡೆದರು. ಅಂತಿಮವಾಗಿ ದ್ವಿತೀಯ ಗೇಮ್ 21-7ರ ಅಂತರದಲ್ಲಿ ವಶಪಡಿಸಿ ಚಿನ್ನದ ಹಾರವನ್ನುಕೊರಳಿಗೆ ಹಾಕಿಕೊಂಡರು. 

ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಚೆನ್‌ ಯು ಫಿ ಅವರನ್ನು21-7 ಮತ್ತು 21-14 ಗೇಮ್‌ಗಳಿಂದ ಮಣಿಸಿ ಅಂತಿಮ ಹಣಾಹಣಿಗೆ ವೇದಿಕೆ ನಿರ್ಮಿಸಿಕೊಂಡರು. ಇದರೊಂದಿಗೆ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸತತ 3ನೇ ಬಾರಿಗೆ ಫೈನಲ್‌ ಪ್ರವೇಶಿಸಿದ ವಿಶ್ವದ ಮೊದಲ ಆಟಗಾರ್ತಿಯೆನ್ನುವ ಹೆಗ್ಗಳಿಕೆಯನ್ನೂ ತಮ್ಮದಾಗಿಸಿಕೊಂಡರು. 2013ರ ಆವೃತ್ತಿಯಲ್ಲಿ ಸಿಂಧೂ ಕಂಚಿನ ಪದಕ ಜಯಿಸಿದ್ದರು. ಆಗ ಅವರಿಗೆ ಕೇವಲ 18 ವರ್ಷ. ಅದಾದ ಬಳಿಕ 2014ರ ಆವೃತ್ತಿಯಲ್ಲೂ ಕಂಚಿನ ಪದಕ ಗೆದ್ದಿದ್ದರು. ಇದರೊಂದಿಗೆ, ರಿಯೊ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಸಿಂಧೂ ಬಿಡಬ್ಲ್ಯುಎಫ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು 5 ಪದಕ (ಹಾಲಿ ಆವೃತ್ತಿಯದೂ ಸೇರಿ) ಗೆದ್ದಂತಾಗಿದೆ.

ಸಿಂಧೂ ಪ್ರಮುಖ ಸಾಧನೆಗಳು: 
ಒಲಿಂಪಿಕ್: 
2016 ರಿಯೋ ಡಿ ಜನೈರೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್) 
ವಿಶ್ವ ಚಾಂಪಿಯನ್‌ಶಿಪ್: 
2019 ಬಾಸೆಲ್: ಚಿನ್ನ ಪದಕ (ಮಹಿಳಾ ಸಿಂಗಲ್ಸ್) 
2018 ನಾನ್‌ಜಿಂಗ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್) 
2017 ಗ್ಲ್ಯಾಸ್ಗೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್) 
2014 ಕೊಪೆನ್‌ಹ್ಯಾಗನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್) 
2013 ಗುವಾಂಗ್‌ಝೌ: ಕಂಚಿನ ಪದಕ (ಮಹಿಳಾ ಸಿಂಗಲ್ಸ್) 
ಏಷ್ಯನ್ ಗೇಮ್ಸ್: 
2018 ಜಕಾರ್ತ-ಪ್ಯಾಲೆಮ್‌ಬ್ಯಾಂಗ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್) 
2014 ಇಂಚಿಯಾನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್) 
ಕಾಮನ್‌ವೆಲ್ತ್ ಗೇಮ್ಸ್: 
2018 ಗೋಲ್ಡ್ ಕೋಸ್ಟ್: ಚಿನ್ನದ ಪದಕ (ಮಿಶ್ರ ತಂಡ) 
2018 ಗೋಲ್ಡ್ ಕೋಸ್ಟ್: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್) 
2014 ಗ್ಲ್ಯಾಸ್ಗೋ: ಬೆಳ್ಳಿ ಪದಕ (ಮಹಿಳಾ ಸಿಂಗಲ್ಸ್) 
ಏಷ್ಯಾ ಚಾಂಪಿಯನ್‌ಶಿಪ್: 
2014 ಗಿಮ್ಚಿಯಾನ್: ಕಂಚಿನ ಪದಕ (ಮಹಿಳಾ ಸಿಂಗಲ್ಸ್) 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • Sports

    Multiple Layout Options

    A number of such two-sided contests may be arranged in a tournament producing a champion. Many sports leagues make an annual champion by arranging games in a regular sports season, followed in some cases by playoffs. Hundreds of sports exist, from those between single contestants, through to those with hundreds of simultaneous participants, either in…

  • ಸಿನಿಮಾ

    ಟಾಲಿವುಡ್ ಸ್ಟಾರ್ ಪ್ರಭಾಸ್ ಚಿರಂಜೀವಿ ಫ್ಯಾಮಿಲಿಯ ಅಳಿಯನಾಗ್ತಾರಾ ..?ತಿಳಿಯಲು ಈ ಲೇಖನ ಓದಿ…

    ಬಾಹುಬಲಿ -2’ ಬಂದಿದ್ದೇ ಬಂದಿದ್ದು ಟಾಲಿವುಡ್ ಸ್ಟಾರ್ ಪ್ರಭಾಸ್ ಮನೆ ಮಾತಾಗಿದ್ದಾರೆ. ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುದ್ದಿಯಾದ ವಿಷಯಗಳಲ್ಲಿ ಪ್ರಭಾಸ್ ಮದುವೆ ಸುದ್ದಿ ಕೂಡ ಪ್ರಮುಖವಾಗಿದೆ. ಟಾಲಿವುಡ್ ಇಂಡಸ್ಟ್ರಿಯ ಮೋಸ್ಟ್ ಬ್ಯಾಚುಲರ್ ಹೀರೋ ಅಂದ್ರೆ ಪ್ರಭಾಸ್. ಕೆಲವು ದಿನಗಳಿಂದ ಈ ನಟನ ಮದುವೆಯ ಬಗ್ಗೆ ಗಾಸಿಪ್ ಗಳು ಕೇಳಿ ಬರುತ್ತಿದೆ. ಆದರೆ ಈಗ ಟಾಲಿವುಡ್ ಅಂಗಳದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರಿ ನಿಹಾರಿಕಾ ಅವರೊಂದಿಗೆ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳತೊಡಗಿದೆ….

  • ಉದ್ಯೋಗ

    ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ 2020

    ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ 2020 ರಲ್ಲಿ ಜೂನಿಯರ್ ಎಂಜಿನಿಯರ್ ಹುದ್ದೆ ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಪ್ರಾಧಿಕಾರವು ಜೂನಿಯರ್ ಎಂಜಿನಿಯರ್ ಉದ್ಯೋಗ ಖಾಲಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸುತ್ತದೆ, ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಆಗಸ್ಟ್ 2020 ಅಧಿಸೂಚನೆ ವಿವರಗಳು  ಜೂನಿಯರ್ ಎಂಜಿನಿಯರ್ ಬಿ.ಟೆಕ್ / ಬಿ.ಇ. ಉದ್ಯೋಗದ ಸ್ಥಳ ನವದೆಹಲಿ, ಬೆಂಗಳೂರು ಒಟ್ಟು ಖಾಲಿ ಹುದ್ದೆಗಳು 4 ದಿನಾಂಕ ಸೇರಿಸಲಾಗಿದೆ 17/08/2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 13/10/2020 ಕಾವೇರಿ ವಾಟರ್ ಮ್ಯಾನೇಜ್ಮೆಂಟ್ ಅಥಾರಿಟಿ ನೇಮಕಾತಿ…

  • ಸುದ್ದಿ

    ಸ್ಟೇಷನ್‌ ಮಾಸ್ಟರ್‌ ನಿರ್ಲಕ್ಷ್ಯಕ್ಕೆ ರೈಲ್ವೇ ಸಿಬ್ಬಂದಿ ಬಲಿ…!

    ರೈಲ್ವೆ ಹಳಿಯಲ್ಲಿ ನಿರ್ವಹಣೆ ಕೆಲಸ ಮಾಡುತ್ತಿದ್ದ ವೇಳೆ ಹೌರಾ- ಜಗದಾಲ್ಪುರ ಸಮಲೇಶ್ವರಿ ಎಕ್ಸ್‌ಪ್ರೆಸ್‌ ರೈಲು ಆಗಮಿಸಿದ್ದು ಅಪಘಾತಕ್ಕೆ ಕಾರಣವಾಗಿದೆ. ರೈಲ್ವೆ ಹಳಿ ನಿರ್ವಹಣೆ ಮಾಡುವ ನಿರ್ವಹಣಾ ಕಾರಿನಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾಗಲೇ ಅದೇ ದಾರಿಯಲ್ಲಿ ಸಮಲೇಶ್ವರಿ ಎಕ್ಸ್ ಪ್ರೆಸ್ ಬಂದಿದೆ. ಈ ಘಟನೆಯಿಂದ ಸಮಲೇಶ್ವರಿ ಎಕ್ಸ್ಪ್ರೆಸ್ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿದ್ದು ಎಂಜಿನ್ ಗೆ ಹಾನಿಯಾಗಿದೆ. ಆದರೆ ರೈಲು ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎನ್ನಲಾಗಿದೆ. ರೈಲ್ವೆ ಹಳಿ ನಿರ್ವಹಣೆ ನಡೆಯುವಾಗಲೇ ರೈಲು ಸಂಚಾರಕ್ಕೆ…