ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪಾರಿಜಾತಕ ಎಂಬ ರಾಜಕುಮಾರಿ ಸೂರ್ಯನೊಡನೆ ಪ್ರೀತಿಗೆ ಬಿದ್ದಳು. ಆದರೆ, ಸೂರ್ಯ ಮುಲಾಜಿಲ್ಲದೆ ಅವಳ ಪ್ರೀತಿಯನ್ನು ತಿರಸ್ಕರಿಸಿದ. ಇದರಿಂದ ನೊಂದ ಪಾರಿಜಾತಕ ಆತ್ಮಹತ್ಯೆ ಮಾಡಿಕೊಂಡಳು. ಅವಳ ದೇಹದ ಬೂದಿಯಿಂದ ಉದಯಿಸಿದ್ದೇ ಸುಂದರವಾದ ಪಾರಿಜಾತದ ಗಿಡ. ಹೀಗೆ ಗಿಡವಾಗಿ ಹುಟ್ಟಿದ ಪಾರಿಜಾತಕಳಿಗೆ ದಿನ ಬೆಳಗಾದರೆ ಕಣ್ಣಿಗೆ ಬೀಳುವ ತನ್ನ ಪ್ರೇಮಿಯ ನೋಟ ನೋವನ್ನು ನೀಡುತ್ತದೆ. ಅದಕ್ಕಾಗಿಯೇ ಪಾರಿಜಾತದ ಹೂವುಗಳು ಬೆಳಗಿನ ಹೊತ್ತು ಬಾಡಿದ್ದು, ಸಂಜೆಯ ನಂತರ ಅರಳುತ್ತವೆ ಎನ್ನುತ್ತದೆ ಪುರಾಣ. ಸಸ್ಯದ ಸ್ವಭಾವಕ್ಕೆ ತಕ್ಕಂತಿದೆ ಈ ಕತೆ. ಇದೇ ಕಾರಣಕ್ಕೆ ಸಸ್ಯಕ್ಕೆ ಪ್ರೇಮಿಗಳ ಮರ, ದುಃಖದ ಮರ, ಸಂಜೆಮಲ್ಲಿಗೆ, ರಾತ್ರಿರಾಣಿ ಮುಂತಾದ ಹೆಸರುಗಳಿವೆ.
ಮಲ್ಲಿಗೆಯಂಥ ದಳಗಳು, ಕೇಸರಿ ಬಣ್ಣದ ತೊಟ್ಟುಗಳನ್ನು ಹೊಂದಿ ಮರದ ತುಂಬಾ ನಕ್ಷತ್ರಗಳಂತೆ ಹೊಳೆಯುವ ಪಾರಿಜಾತದ ಚೆಲುವು ಬಹಳ ಆಕರ್ಷಕ.
ಭಾರತ, ಪಾಕಿಸ್ತಾನ, ಥೈಲ್ಯಾಂಡ್, ನೇಪಾಳ, ಇಂಡೋನೇಶ್ಯಾಗಳಲ್ಲಿ ಕಂಡುಬರುವ ಪಾರಿಜಾತ ಏಷ್ಯಾದ ಎಗ್ಗಿಲ್ಲದ ಚೆಲುವೆ. ಸ್ವರ್ಗದ ಐದು ವೃಕ್ಷಗಳಲ್ಲಿ ಪಾರಿಜಾತವೂ ಇದೆ. ಹೌದು, ಪುರಾಣ ಪುಣ್ಯ ಕತೆಗಳಲ್ಲಿ ಪಾರಿಜಾತ ಹಲವೆಡೆ ಸ್ಥಾನ ಪಡೆದುಕೊಂಡಿದೆ. ಪಾವಿತ್ರತೆಯ ಕಾರಣದಿಂದಲೇ ಮೊನ್ನೆ ರಾಮಜನ್ಮಭೂಮಿಯಲ್ಲಿ ಭೂಮಿಪೂಜೆ ನೆರವೇರಿಸುವಾಗ ಪ್ರಧಾನಿ ನರೇಂದ್ರ ಮೋದಿ ಕೂಡಾ ಪಾರಿಜಾತದ ಸಸ್ಯ ನೆಟ್ಟು ಪೂಜೆ ನೆರವೇರಿಸಿದರು.
ಸಮುದ್ರ ಮಂಥನ ಸಮಯದಲ್ಲಿ ಉದಯಿಸಿದ ಐದು ವೃಕ್ಷಗಳಲ್ಲೊಂದು ಪಾರಿಜಾತ. ಪತ್ನಿ ಸತ್ಯಭಾಮೆಗೆ ಪಾರಿಜಾತವನ್ನು ತಂದು ಕೊಡುವ ಸಲುವಾಗಿ ಕೃಷ್ಣನು ಇಂದ್ರನೊಡನೆ ಯುದ್ಧ ಮಾಡಿದ ಕತೆಯೂ ಇದೆ. ಹರಿವಂಶ ಪುರಾಣದಲ್ಲಿ ಈ ವೃಕ್ಷವನ್ನು ಕೇಳಿದ್ದೆಲ್ಲ ಕೊಡುವ ಕಲ್ಪವೃಕ್ಷ ಎಂದು ಕರೆಯಲಾಗಿದೆ. ಸಾಮಾನ್ಯವಾಗಿ ಕೆಳಗೆ ಬಿದ್ದ ಹೂವುಗಳನ್ನು ದೇವರಿಗೇರಿಸುವುದಿಲ್ಲ. ಆದರೆ, ಸ್ವರ್ಗದ ವೃಕ್ಷಗಳಾದ ಕಾರಣ ಪಾರಿಜಾತ ಹಾಗೂ ಬಕುಳದ ಹೂವುಗಳು ನೆಲಕ್ಕೆ ಬಿದ್ದರೂ ದೇವರ ಮುಡಿಗೇರಲು ಅರ್ಹವಾಗಿವೆ ಎಂಬ ನಂಬಿಕೆ ಇದೆ.
ಶ್ವಾಸಕೋಶ ಸಮಸ್ಯೆಗೆ ರುದ್ರಾಕ್ಷಿ ಮದ್ದು
ಹೀಗೆ ಪವಿತ್ರವೆಂದು ಭಾವಿಸಿದ ಪಾರಿಜಾತ ಹೂವು ಮತ್ತು ಎಲೆಗಳಿಂದ ಹಲವಾರು ಆರೋಗ್ಯ ಲಾಭಗಳಿವೆ. ಏನೇನು ನೋಡೋಣ.
– ತಂಪು
ಪಾರಿಜಾತದ ಎಲೆಗಳು ತಂಪಾಗಿರುವ ಕಾರಣ ದೇಹದ ಎಲ್ಲೇ ಉರಿ, ಗಾಯ, ಊತಗಳಿದ್ದರೂ ಇದರಿಂದ ತಯಾರಿಸಿದ ಎಣ್ಣೆ ಬಳಸುವುದರಿಂದ ಉರಿ ತಗ್ಗುತ್ತದೆ. ಇದರಲ್ಲಿರುವ ಬೆಂಜೋಯಿಕ್ ಆಯಸಿಡ್ ಹಾಗೂ ಕೆರೋಟಿನ್ ಪಾರಿಜಾತದ ಎಲೆಗೆ ಈ ಗುಣ ನೀಡಿದೆ.
ಅಷ್ಟಕ್ಕೂ ರುದ್ರಾಕ್ಷಿಗೇಕೆ ಪೂಜೆಯಲ್ಲಿ ಇಷ್ಟು ಮಹತ್ವ
– ಜ್ವರ ಚಿಕಿತ್ಸಕ
ಆಯುರ್ವೇದ ಔಷಧಿಗಳಲ್ಲಿ ಪಾರಿಜಾತದ ಎಲೆಗಳನ್ನು ಮಲೇರಿಯಾ ಹಾಗೂ ಡೆಂಘೆ ಜ್ವರಗಳ ಚಿಕಿತ್ಸೆಗೆ ಔಷಧವಾಗಿ ಬಳಸಲಾಗುತ್ತದೆ. ಜ್ವರದ ಚಿಕಿತ್ಸೆಗೆ ಇದರ ತೊಗಟೆಯೂ ಉಪಯೋಗವಾಗುತ್ತದೆ. ಪಾರಿಜಾತದ ಎಣ್ಣೆಯನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಅಂಗಾಲಿಗೆ ತಿಕ್ಕುವುದರಿಂದ ಜ್ವರ ಕಡಿಮೆಯಾಗುತ್ತದೆ.
– ನೋವು ನಿವಾರಕ
ಮಂಡಿನೋವಿದ್ದಾಗ ಪಾರಿಜಾತದ ಎಲೆಗಳನ್ನು ಪೇಸ್ಟ್ ಮಾಡಿ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚಿಕೊಳ್ಳುವುದರಿಂದ ಉಪಶಮನ ದೊರೆಯುತ್ತದೆ.
– ಕ್ಯಾನ್ಸರ್ ತಡೆ
ದೇಹದಲ್ಲಿ ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗದಂತೆ ನೋಡಿಕೊಳ್ಳುವ ಗುಣ ಪಾರಿಜಾತದ ಎಲೆಗಳಿಗಿದೆ. ಇದರಲ್ಲಿರುವ ಅತ್ಯಧಿಕ ಆಯಂಟಿ ಆಕ್ಸಿಡೆಂಟ್ ಗುಣ ಇದಕ್ಕೆ ಕಾರಣವಾಗಿದೆ. 20-25 ಎಲೆಗಳನ್ನು ಗ್ರೈಂಡ್ ಮಾಡಿ ನೀರಿನಲ್ಲಿ ಅರ್ಧದಿಂದ 1 ಗಂಟೆಗಳ ಕಾಲ ಕುದಿಸಿ. ನಂತರ ಶೋಧಿಸಿ ಪ್ರತಿದಿನ ಕುಡಿಯುವ ಅಭ್ಯಾಸ ಉತ್ತಮ.
– ಕೆಮ್ಮಿಗೆ ಮುಕ್ತಿ
ಪಾರಿಜಾತ ಹೂವು ಹಾಗೂ ಎಲೆಗಳಲ್ಲಿರುವ ಎಥನಾಲ್ ಎಂಬ ಕಾಂಪೌಂಡ್ ಕೆಮ್ಮನ್ನು ಗುಣ ಮಾಡುತ್ತದೆ. ಈ ಗುಣವೇ ಅಸ್ತಮಾ ನಿವಾರಣೆಗೆ ಕೂಡಾ ಸಹಕಾರಿಯಾಗಿದೆ. ಪಾರಿಜಾತ ಎಲೆಗಳನ್ನು ಕುದಿಸಿದ ನೀರಿಗೆ ಸ್ವಲ್ಪ ಶುಂಠಿ ಅಥವಾ ಜೇನುತುಪ್ಪ ಸೇರಿಸಿ ಸೇವಿಸಿ.
ಮಲಬದ್ಧತೆ ನಿವಾರಣೆ
ಪಾರಿಜಾತದ ಎಲೆಗಳಲ್ಲಿರುವ ಮಿನರಲ್‌ಗಳು ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ. ಪಾರಿಜಾತದ ಟೀ(ಕಷಾಯ) ದಿನಕ್ಕೊಮ್ಮೆ ಸೇವಿಸಿದರೆ ಸಾಕು.
ಮೂಳೆ ಸವೆತ ತಪ್ಪಿಸುತ್ತದೆ
ದೇಹದಲ್ಲಿ ಮೂಳೆ ಸವೆತ ಸಮಸ್ಯೆಯನ್ನು ನಿವಾರಣೆ ಮಾಡುವ ಶಕ್ತಿ ಪಾರಿಜಾತ ಕಷಾಯಕ್ಕಿದೆ. ಏಕೆಂದರೆ ಪಾರಿಜಾತ ಎಲೆಯ ಕಷಾಯದಲ್ಲಿ ಕಾರ್ಟಿಲೆಜ್ ಎಂಬ ಅಂಶವಿದ್ದು, ಮೂಳೆ ಸವೆದು ಹೋದಾಗ ಮತ್ತೆ ಮೂಳೆಗಳಿಗೆ ಕಾರ್ಟಿಲೆಜ್ ಅಂಶವನ್ನು ಪಾರಿಜಾತ ಕಷಾಯ ನೀಡುತ್ತದೆ
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇವುಗಳನ್ನು ಸೇವಿಸುವುದರಿಂದ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿತ ಕಾಯಿಲೆಗಳು, ಕಿಡ್ನಿಯ ಸಮಸ್ಯೆಗಳು ಸೇರಿದಂತೆ ಸಕ್ಕರೆ ಅಂಶವಿರುವ ಪದಾರ್ಥಗಳ ಸೇವನೆಯಿಂದ ಬರುವ ಯಾವುದೇ ರೋಗಗಳು ಬರುವುದಿಲ್ಲ.
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದು ನಿಮಗೆ ಸರಕಾರದಿಂದ ಸಂದೇಶ ಬರಲಿದೆ ಹಾಗೂ ಈ ಲಿಂಕ್ ಮುಖಾಂತರ ತಿಳಿದುಕೊಳ್ಳಬಹುದು 8147500500 ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ ನೋಂದಣಿ ಸ್ಥಳ ದಿನಾಂಕ ಮತ್ತು ಸಮಯ ತಿಳಿಯ ಬಹುದು ಈ ಲಿಂಕ್ ತೆರೆದು ರೇಷನ್ ಕಾರ್ಡ್ ನಂಬರ್ ಹಾಕಿದರೆ ದಿನಾಂಕ ಸ್ಥಳ ಮತ್ತು ಸಮಯವನ್ನು ತಿಳಿಯ ಬಹುದು ಅಥವಾ 8147500500 ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ…
ದೇಶದ ಎರಡನೇ ಅತಿ ದೊಡ್ಡ ರೈಲ್ವೆ ಓವರ್ ಬ್ರಿಡ್ಜ್ ಈ ತಿಂಗಳ ಅಂತ್ಯಕ್ಕೆ ಉದ್ಘಾಟನೆಯಾಗುತ್ತಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ಜಂಕ್ಷನ್ ನಲ್ಲಿ ನಾಲ್ಕು ಪಥದ ಕೇಬಲ್ ಸ್ಟೇಯಡ್ ರೈಲ್ವೆ ಮೇಲು ಸೇತುವೆ ನಿರ್ಮಾಣವನ್ನು ಭಾರತೀಯ ರೈಲ್ವೆ ಪೂರ್ಣಗೊಳಿಸಿದೆ. ಇದನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಸೆಪ್ಟೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ಸಂಚಾರಕ್ಕೆ ಒಂದು ದಿನವೂ ವ್ಯತ್ಯಯವಾಗದಂತೆ 188.43 ಮೀಟರ್ ಕೇಬಲ್ ಸ್ಟೇಯ್ಡ್ ಓವರ್ ಬಿಡ್ಜ್ ಕಾಮಗಾರಿಯನ್ನು 197 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ…
ಚರಕ ಸಂಹಿತೆ ಇಂದಿಗೂ ವೈದ್ಯಕೀಯ ಕ್ಷೇತ್ರದ ಅತ್ಯುನ್ನತ ಗ್ರಂಥ ಎಂದು ಎಲ್ಲ ವೈದ್ಯರು ಒಕ್ಕೊರಲಿನಿಂದ ಒಪ್ಪುತ್ತಾರೆ , ಹೊಸ ಆರೋಗ್ಯ ಸಮಸ್ಯೆಗಳು , ಜಟಿಲ ಕಾಯಿಲೆಗಳು ಉತ್ಪತ್ತಿ ಆದಾಗ ವೈಜ್ಞಾನಿಕ ಪ್ರಪಂಚ ಆಸೆ ಭರವಸೆಗಳಿಂದ ನೋಡುವುದು ಈ 2ನೇ ಶತಮಾನದ ಗ್ರಂಥದೆಡೆಗೆ , ಚರಕ ಸಂಹಿತೆಯಲ್ಲಿ ಅಗ್ನಿವೇಶ ಎಂಬ ವಿದ್ಯಾರ್ಥಿಯು ಗುರುವಾದ ಅತ್ರೇಯರಲ್ಲಿ ನಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನೇ ಕೇಳಿದ್ದಾನೆ -ಹಿತಕರವಾದ ಅಥವಾ ಅಹಿತಕರವಾದ ಆಹಾರ ಸೇವಿಸುವ ಎರಡು ತರಹದ ಜನರಲ್ಲಿ ಕೂಡ ಕೆಲವರು ಆರೋಗ್ಯದಿಂದ ಇರುತ್ತಾರೆ ,ಕೆಲವರು…
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಜ್ಯೋತಿಷ್ಯರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು9901077772 ದೇವಿ ಉಪಾಸನೆಯ ಪ್ರಮುಖ ಭಾಗವೇ ದುರ್ಗಾಸಪ್ತಶತಿ ಪಾರಾಯಣ. ದುರ್ಗಾಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಚಂಡಿಕಾಯಾಗದ ಮೂಲಕ ಮಹಾಲಕ್ಷ್ಮಿ,…
ಜಿಲ್ಲೆಯ ನವಲಗುಂದದಲ್ಲಿ ಮುಂಗಾರು ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಈಗ ತಮ್ಮ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ಗಳು ಮೊರೆ ಹೋಗಿದ್ದಾರೆ. ಹೌದು. ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬಾಡಿಗೆ ನೀರು ತರಿಸಿ ತಮ್ಮ ಬೆಳೆಗಳು ಉಸಿರಾಡುವಂತೆ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ನವಲಗುಂದ ತಾಲೂಕಿನಲ್ಲಿ ಭೀಕರ ಬರ ಇದೆ. ಈ ಸಲ ಮೇ ಅಂತ್ಯದಲ್ಲಿ ಸ್ವಲ್ಪ ಮಳೆಯಾಗಿತ್ತು. ಇದನ್ನು ನಂಬಿದ ರೈತರು, ಬಿ.ಟಿ. ಹತ್ತಿ ಮತ್ತು ಹೆಸರು ಬಿತ್ತನೆ ಮಾಡಿದ್ದರು. ಬೆಳೆ ಮೊಳಕೆಯೊಡೆದು ಈಗ ನೆಲ…