ಸುದ್ದಿ

ಪಾಕಿಸ್ತಾನಕ್ಕೆ ಟೊಮೆಟೊ ಬ್ಯಾನ್ ಮಾಡಿದ್ದಕ್ಕೆ, ಭಾರತದ ಮೇಲೆ ಅಣು ಬಾಂಬ್ ಹಾಕ್ತೀವಿ ಎಂದ ಪಾಪಿ ಪಾಕ್ ನಿರೂಪಕ ಹೇಳಿದ್ದೇನು ಗೊತ್ತಾ?

311

ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆದ ದಾಳಿ ಇತಿಹಾಸದಲ್ಲೇ ಅತ್ಯಂತ ಭೀಕರವಾದ ದಾಳಿ. ಇದ್ರಿಂದಾಗಿ ಪ್ರತಿಯೊಬ್ಬ ಭಾರತೀಯನ ಎದೆಯಲ್ಲೂ ಪಾಕ್‍ ಮೇಲೆ ಪ್ರತೀಕಾರದ ಕಿಚ್ಚು ಹೆಚ್ಚಿದೆ. ಈ ದಾಳಿಯ ನಂತರ ಪಾಕಿಸ್ತಾನವನ್ನು ಹೊಸಕಿ ಹಾಕಲು ಭಾರತ ಇನ್ನಿಲ್ಲದ ಕ್ರಮ ಕೈಗೊಳ್ಳುತ್ತಿದೆ. ಅದ್ರಲ್ಲಿ ಪ್ರಮುಖವಾಗಿ ಆಮದು ಸುಂಕ ಏರಿಕೆ, ಟೊಮೆಟೊ ರಫ್ತು ಸ್ಥಗಿತ, ಇವೆಲ್ಲದರ ಪರಿಣಾಮ ಪಾಕ್‍ ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ.

ಈ ಬಗ್ಗೆ ಅಲ್ಲಿನ ಮಾಧ್ಯಮಗಳು ಕಿಡಿಕಾರಿವೆ. ಟೊಮೆಟೊ ರಫ್ತು ಬಂದ್‍ ಮಾಡಿದ್ದಕ್ಕೆ ಪ್ರತಿಯಾಗಿ ಅಣುಬಾಂಬ್‍ ದಾಳಿ ಮಾಡುತ್ತೇವೆ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿದೆ.

ಕರ್ನಾಟಕದ ಕೋಲಾರ ಜಿಲ್ಲೆಯ ಎಪಿಎಂಸಿ ಮಾರುಕಟ್ಟೆ ಏಷ್ಯಾದಲ್ಲೇ 2ನೇ ಅತಿದೊಡ್ಡ ಟೊಮೆಟೊ ವಹಿವಾಟು ನಡೆಸುವ ಕೇಂದ್ರ. ಪಾಪಿ ಪಾಕ್‍ಗೆ ಬುದ್ದಿ ಕಲಿಸಲು ರೈತರು ಮತ್ತು ಎಪಿಎಂಸಿ ಒಗ್ಗೂಡಿ ಪಾಕಿಸ್ತಾನಕ್ಕೆ ಟೊಮೆಟೊ ರಫ್ತು ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಪಾಕ್‍ ನಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮಾಧ್ಯಮವೊಂದರ ನಿರೂಪಕನೊಬ್ಬ ಲೈವ್‍ ನಲ್ಲೇ ಭಾರತದ ವಿರುದ್ಧ ಅಣುಬಾಂಬ್‍ ದಾಳಿ ಮಾಡುವುದಾಗಿ ಹೇಳಿದ್ದಾನೆ.

“ ಭಾರತ ಕೊಳಕು ತುಂಬಿದ ರಾಷ್ಟ್ರ. ಟೊಮೆಟೋವನ್ನ ರಾಹುಲ್‍ ಅಥವಾ ಮೋದಿ ಮುಖಕ್ಕೆ ಎಸೆಯುತ್ತೇವೆ. ಅಲ್ಲದೆ ಟೊಮೆಟೊಗೆ ಪ್ರತಿಯಾಗಿ ಅಣುಬಾಂಬ್‍ ಮೂಲಕ ಉತ್ತರ ಕೊಡುವ ಸಮಯ ಬಂದಿದೆ” ಎಂದು ಮಾಧ್ಯಮದಲ್ಲಿ ಘಂಟಾಘೋವಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಸಮಯ ಬಂದರೆ ಯಾವುದೇ ಕಾರಣಕ್ಕೂ ಅಣುಬಾಂಬ್‍ ದಾಳಿ ಮಾಡಲು ಹಿಂಜರಿಯಲ್ಲ ಅಂತಾ ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ ಈ ಭೂಪ…!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಮದುವೆಯಾಗೋಲ್ಲ ಎಂದ ಪ್ರಿಯತಮನ ವಿರುದ್ಧ ಕ್ರೂರವಾಗಿ ಸೇಡು ತೀರಿಸಿಕೊಂಡ ಯುವತಿ…!

    ನವದೆಹಲಿ: ಈ ಯುವಕ-ಯುವತಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಅದೇನಾಯಿಯೋ ಯುವಕ ಮದುವೆಯಾಗಲು ನಿರಾಕರಿಸಿದ. ನಮ್ಮ ಸಂಬಂಧವನ್ನು ಮುರಿದುಕೊಳ್ಳೋಣ ಎಂದು ಯುವತಿ ಬಳಿ ಹೇಳಿದ. ಅದನ್ನು ಕೇಳಿದ ಯುವತಿ ಅಳಲಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಬದಲಿಗೆ ಕ್ರೂರವಾಗಿ ಸೇಡು ತೀರಿಸಿಕೊಂಡಳು. ಘಟನೆ ನಡೆದಿದ್ದು ದೆಹಲಿಯ ವಿಕಾಸಪುರಿಯಲ್ಲಿ. ಜೂನ್​ 11ರಂದು ಬೈಕ್​ನಲ್ಲಿ ಹೋಗುತ್ತಿದ್ದರು. ಯುವಕ ಅದಾಗಲೇ ಮದುವೆ ಬೇಡ ಎಂದಿದ್ದ. ಬೈಕ್​ನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ಆತನ ಬಳಿ ಹೆಲ್ಮೆಟ್​ ತೆಗೆಯುವಂತೆ ಕೇಳಿದ್ದಾಳೆ. ಆತ ತೆಗೆದಕೂಡಲೇ ಮುಖಕ್ಕೆ ಆ್ಯಸಿಡ್​ ಎರಚಿದ್ದಾಳೆ….

  • ಸುದ್ದಿ

    ಥ್ರೆಡ್ಡಿಂಗ್ ನಂತರ ಉಂಟಾಗುವ ಮೊಡವೆಗಳ ಪರಿಹಾರಕ್ಕೆ ಇಲ್ಲಿದೆ ಸುಲಭ ‘ಉಪಾಯ’…!

    ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ.ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಮೊಡವೆಗಳು ಏಳುತ್ತವೆ. ಒಂದು ಮಾಡಲು ಹೋಗಿ ಇನ್ನೊಂದಾಯ್ತು ಅಂತಾ ಗೊಣಗ್ತಾರೆ. ಇನ್ನು ಈ ಬಗ್ಗೆ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಈ ಮೊಡವೆಗಳಿಂದ ಸುಲಭವಾಗಿ ಮುಕ್ತಿ ಹೊಂದುವ ಉಪಾಯ ಇಲ್ಲಿದೆ.ಥ್ರೆಡ್ಡಿಂಗ್ ಮಾಡಿಸಿಕೊಳ್ಳುವ ಮೊದಲು ಚರ್ಮವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಥ್ರೆಡ್ಡಿಂಗ್ ಮಾಡುವ ವೇಳೆ ನೋವಾಗುವುದಿಲ್ಲ. ನಂತರ ಕಾಟನ್ ಬಟ್ಟೆಯಿಂದ ಚರ್ಮವನ್ನು ಮೃದುವಾಗಿ…

  • ಉಪಯುಕ್ತ ಮಾಹಿತಿ

    ಹದವಾದ ಸಿಹಿ ಪೊಂಗಲ್ ಸಂಕ್ರಾಂತಿ ಹಬ್ಬದ ವಿಶೇಷ ರೆಸಿಪಿ ಹುಗ್ಗಿ ಮಾಡುವ ವಿಧಾನ.

    ಸುಗ್ಗಿ ಹಬ್ಬವಾದ ಸಂಕ್ರಾಂತಿಯನ್ನು ಕರ್ನಾಟಕದಲ್ಲಷ್ಟೇ ಅಲ್ಲದೆ ಕೇರಳ, ತಮಿಳುನಾಡು ಮತ್ತು ದೇಶದ ಹಲವೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಆದ್ದರಿಂದ ನಿಮಗಾಗಿ ಸಿಹಿ ಪೊಂಗಲ್ ಮಾಡುವ ವಿಧಾನ ಇಲ್ಲಿದೆ… ಬೇಕಾಗುವ ಸಾಮಗ್ರಿಗಳು:1. ಹೆಸರುಬೇಳೆ 1 ಕಪ್2. ಅಕ್ಕಿ 1 ಕಪ್3. ಪುಡಿ ಮಾಡಿದ ಬೆಲ್ಲ, ಸಕ್ಕರೆ 1 ಕಪ್4. ಏಲಕ್ಕಿ – 45. ದ್ರಾಕ್ಷಿ , ಗೋಡಂಬಿ 50 ಗ್ರಾಂ6. ತುಪ್ಪ 4 ಚಮಚ ಮಾಡುವ ವಿಧಾನಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು…

  • ಸುದ್ದಿ, ಸ್ಪೂರ್ತಿ

    70 ನಿಮಿಷದಲ್ಲಿ 90 ಕಿ.ಮೀ ಸಂಚರಿಸಿ, 3 ವರ್ಷದ ಬಾಲಕನ ಪ್ರಾಣ ಉಳಿಸಿದ ಅಂಬುಲೆನ್ಸ್ ಚಾಲಕ.

    21 ವರ್ಷದ ತಿರುಪುರ್ ಮೂಲಕದ  ಅಂಬುಲೆನ್ಸ್ ಚಾಲಕ ಆಕಾಶ್ ಜ್ವರದಿಂದ ಬಳಲುತ್ತಿದ್ದ ಬಾಲಕ ಸಂತೋಷ್‍ನನ್ನು ಗುರುವಾರ ರಾತ್ರಿ ವೆಲ್ಲಾಕೋಯಿಲ್‍ನಿಂದ ಕೊಯಮತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೇವಲ 70 ನಿಮಿಷದಲ್ಲಿ 90 ಕಿ.ಮೀ ಸಂಚರಿಸಿ ತಲುಪಿದ್ದಾರೆ. ಆಕಾಶ್ 3 ವರ್ಷದ  ಬಾಲಕನನ್ನು ಆಸ್ಪತ್ರೆಗೆ ತಲುಪಿಸಿದ ಬಳಿಕ ಅಂಬುಲೆನ್ಸ್ ಮುಂದೆ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ಅವರು ಪೋಸ್ಟ್ ಮಾಡಿದ ತಕ್ಷಣ ಸಾಕಷ್ಟು ವೈರಲ್ ಆಗಿದ್ದು ಇವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವರದಿಗಳ ಪ್ರಕಾರ, ಸಂತೋಷ್ ತೀವ್ರ ಜ್ವರದಿಂದ ಬಳಲುತ್ತಿದ್ದು,…

  • ವಿಚಿತ್ರ ಆದರೂ ಸತ್ಯ

    10 ವರ್ಷಗಳ ಹಿಂದೆ 16 ಕೆಜಿ ತೂಕವಿದ್ದ ಈ ಯುವತಿ ಈಗ ಹೇಗಿದ್ದಾಳೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಅಜ್ಜನೇ ಉಪವಾಸದಿಂದ ನರಳುವಂತೆ ಮಾಡಿ ತನಗೆ ಹಿಂಸೆ ನೀಡಿದ್ದ ಬಗ್ಗೆ ಜಪಾನಿನ ಯುವತಿಯೊಬ್ಬಳು ಹೇಳಿಕೊಂಡಿದ್ದು ಈಗ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ.

  • ಮನರಂಜನೆ

    ಬಿಗ್ ಬಾಸ್ ಕಿರೀಟ ಧರಿಸಿದ ಆಧುನಿಕ ರೈತ..!ಬಿಗ್ ಬಾಸ್ ನಲ್ಲಿ ಅನ್ಯಾಯ ಆಗಿದೆ ಎಂದ ವೀಕ್ಷಕರು…

    ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ಮಾಡರ್ನ್ ರೈತ ಶಶಿಕುಮಾರ್ ಹೊರಹೊಮ್ಮಿದ್ದಾರೆ. ಇವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಗಾಯಕ ನವೀನ್ ಸಜ್ಜು ಎರಡನೇ ಸ್ಥಾನ ಪಡೆದಿದ್ದಾರೆ. ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯ ಕೊನೆಯಲ್ಲಿ ಉಳಿದಿದ್ದ ಗಾಯಕ ನವೀನ್ ಸಜ್ಜು ಮತ್ತು ಶಶಿಕುಮಾರ್ ನಡುವೆ ವಿನ್ನರ್ ಆಗಲು ಬಿಗ್‍ಫೈಟ್ ನಡೆದಿತ್ತು. ಕಡೆಯದಾಗಿ ಜನಾಭಿಪ್ರಾಯದ ಮೇಲೆ ಶಶಿಯನ್ನು ಬಿಗ್‍ಬಾಸ್ ನಿರೂಪಕ ಕಿಚ್ಚ ಸುದೀಪ್ ವಿನ್ನರ್ ಎಂದು ಘೋಷಿಸಿದರು. ನವೀನ್ ಸಜ್ಜು ರನ್ನರ್ ಆಗಿ ಹೊರಹೊಮ್ಮಿದ್ರು. ದಿ…