ರಾಜಕೀಯ

ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಸಂಸದ ಹಾಗೂ ಶಾಸಕ!ಈ ಸುದ್ದಿ ನೋಡಿ

84

ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಎಷ್ಟರ ಮಟ್ಟಿಗೆ ಹಾಳೆದ್ದು ಹೋಗಿದೆ ಎಂದರೆ ಜನಪ್ರತಿನಿಧಿಗಳು ತಮ್ಮ ಘನತೆ ಗಾಂಭೀರ್ಯ , ಗೌರವ ಜವಾಬ್ದಾರಿಗಳನ್ನು ಮರೆತು ಸಾರ್ವಜನಿಕವಾಗಿ ಕೀಳು ವರ್ತನೆ ತೋರಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕರ್ನಾಟಕದ ಕಾಂಗ್ರೆಸ್ ಶಾಸಕರು ಹೊಡೆದಾಡಿಕೊಂಡು ಸುದ್ದಿಯಾಗಿದ್ದರು. ಈಗ ಬಿಜೆಪಿಯಲ್ಲಿ ಅಂತಹದೇ ಘಟನೆ ನಡೆದಿದೆ.

ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿ ತಲೆ ತಗ್ಗಿಸುವಂತಹ ಕೆಲಸವನ್ನು ಬಿಜೆಪಿ ಸಂಸದ ಹಾಗೂ ಶಾಸಕ ಮಾಡಿದ್ದಾರೆ. ಇವರಿಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿಕೊಂಡು ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುವ ದಲ್ಲದೆ ಪಕ್ಷದ ಮರ್ಯಾದೆಯನ್ನು ಬೀದಿಪಾಲು ಮಾಡಿದ್ದಾರೆ.

ಉತ್ತರ ಪ್ರದೇಶದ ಸಂತ ಕಬೀರ ನಗರ ಕ್ಷೇತ್ರದ ಸಂಸದ ಶರದ್ ತ್ರಿಪಾಠಿ ಹಾಗೂ ಸ್ಥಳೀಯ ಶಾಸಕ ರಾಕೇಶ್ ಸಿಂಗ್ ಇಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿ ಕೊಂಡಿದ್ದಾರೆ. ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದ ಮೇಲ್ವಿಚಾರಣೆ ಹಾಗೂ ನಿಗಾ ಸಮಿತಿ ಸಭೆಯಲ್ಲಿ ಈ ಘಟನೆ ನಡೆದಿದೆ.

ಸಂತ ಕಬೀರ ನಗರದ ರಸ್ತೆಯೊಂದರ ಉದ್ಘಾಟನೆ ವೇಳೆ ತಮ್ಮ ಹೆಸರು ಏಕೆ ಇಲ್ಲ ಎಂದು ಸಂಸದ ಶರತ್ ಕೃ ಪಾರ್ಟಿ ಕೇಳಿದಾಗ ಸ್ಥಳೀಯ ಶಾಸಕರು ತಮ್ಮ ಇಷ್ಟ ಎಂದು ಹೇಳಿದ್ದಾರೆ. ಈ ಮಾತಿಗೆ ಮಾತು ಮುಂದುವರೆದು ಇಬ್ಬರ ನಡುವೆ ಜಗಳ ಆರಂಭವಾಗಿ ಕೊನೆಗೆ ಅದು ಅವಾಚ್ಯ ಶಬ್ದಗಳ ಬಳಕೆಗೆ ಕಾರಣವಾಗಿ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಮೊದಲು ಸಂಸದ ಶರತ್ ತ್ರಿಪಾಠಿ , ಶಾಸಕ ರಾಕೇಶ್ ಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಕೇಶ್ ಕೂಡ ಸಂಸದನಿಗೇ ಚಪ್ಪಲಿಯಲ್ಲಿ ಹೊಡೆದಿದ್ದಾರೆ.
ಕೆಲವು ನಿಮಿಷಗಳ ಕಾಲ ಇಬ್ಬರೂ ಪರಸ್ಪರ ಚಪ್ಪಲಿಯಲ್ಲಿ ಹೊಡೆದಾಡಿ ಕೊಂಡಿದ್ದಾರೆ ನಂತರ ಮಧ್ಯಪ್ರವೇಶಿಸಿದ ಪೊಲೀಸರು ಅವರನ್ನು ತಡೆದಿದ್ದಾರೆ.

ಈ ಘಟನೆ ಕೇವಲ ಅವರಿಬ್ಬರ ಘನತೆಗೆ ಧಕ್ಕೆ ತರುವುದಲ್ಲ ದೆ ಇಡೀ ಪಕ್ಷವೇ ತಲೆತಗ್ಗಿಸುವಂತೆ ಮಾಡಿದೆ.ಜನಪ್ರತಿನಿಧಿಗಳು ಯಾವಾಗಲೂ ವರ್ತನೆಯಲ್ಲಿ ನಡೆ ನುಡಿಯಲ್ಲಿ ಜನತೆಗೆ ಸ್ಪೂರ್ತಿ ಆಗಿರಬೇಕು. ಅವರು ತಾವು ತಮ್ಮ ಕ್ಷೇತ್ರದ ಜನರನ್ನು ಪ್ರತಿನಿಧಿಸುತ್ತಿದ್ದೇನೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಸಾರ್ವಜನಿಕವಾಗಿ ವರ್ತಿಸಬೇಕು. ಇದೆಲ್ಲಾ ಮರೆತು ಈ ರೀತಿ ಜನಪ್ರತಿನಿಧಿಗಳೇ ವರ್ತಿಸುವಾಗ ಜನರು ತಾವು ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂಬುದನ್ನು ವಿಮರ್ಶಿಸಿ ಕೊಳ್ಳಬೇಕಾಗಿದೆ.

ಇನ್ನು ಮುಂದಾದರೂ ಒಳ್ಳೆಯ ಜನಪ್ರತಿನಿಧಿಯನ್ನು ಆರಿಸುವ ಕೆಲಸವನ್ನು ಮತದಾರರು ಮಾಡಬೇಕಾಗಿದೆ. ಪಕ್ಷ ಯಾವುದೇ ಇರಲಿ ಸಮಾಜದಲ್ಲಿ ಉತ್ತಮ ಗೌರವ ಸನ್ನಡತೆ ಉಳ್ಳ ವ್ಯಕ್ತಿಯನ್ನು ಜನರು ತಮ್ಮ ಪ್ರತಿನಿಧಿಯನ್ನಾಗಿ ಆರಿಸುವಂತಹ ಅನಿವಾರ್ಯತೆ ಈಗ ಎದುರಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ