ಸುದ್ದಿ

ಪಬ್‌ಜಿಗೆ ಆಡ್ತಿದ್ದ ಯುವಕ ಮಾಡಿದ್ದೇನು ಗೊತ್ತಾ..?

29

ಪಬ್‌ಜಿ ಎಂಬ ಮಹಾಮಾರಿ ಗೇಮ್ ಎಷ್ಟೊಂದು ಡೇಂಜರಸ್ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದ್ರೂ ಸಹ ಇಂದಿನ ಯುವ ಪೀಳಿಗೆ ಈ ಗೇಮ್‌ಗೆ ಬಲಿಯಾಗುತ್ತಿದ್ದಾರೆ. ಸಾಕಷ್ಟು ಪ್ರಾಣ ಹಾನಿಗಳು ಸಹ ಆಗಿವೆ. ಅದೇ ರೀತಿ ಪಬ್‌ಜಿ ಗೇಮ್ ದಾಸನಾಗಿದ್ದ ಹದಿಹರೆಯದ ಯುವಕನೊಬ್ಬ ಮಾನಸಿಕ ಅಸ್ವಸ್ಥನಾಗಿ ಚರಂಡಿ ನೀರಲ್ಲಿ ಬಿದ್ದು ಒದ್ದಾಡಿದ್ದಾನೆ.ಕಳೆದ ಮೂರ್ನಾಲ್ಕು ದಿನಗಳ ಹಿಂದೆ ವಿಜಯಪುರದ ಮಧ್ಯಭಾಗದಲ್ಲಿರುವ ಗಗನ್ ಮಹಲ್ ಎಂಬ ಬೃಹತ್ ಕಂದಕದಲ್ಲಿನ ಗಲೀಜು ಗಟಾರ್ ನೀರಿನಲ್ಲಿ ಬಿದ್ದು ಹೊರಳಾಡಿದ್ದಾನೆ.

ಇದನ್ನು ವಿಡಿಯೋ ಮಾಡಿಕೊಂಡ ಸ್ಥಳೀಯರು ಈತ ಮೊದಲು ಚೆನ್ನಾಗಿಯೇ ಇದ್ದ. ಇತ್ತೀಚೆಗೆ ಪಬ್‌ಜಿ ಗೇಮ್‌ಗೆ ಅಡಿಕ್ಟ್ ಆಗಿ ಹೀಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದದಲ್ಲಿ ಹರಿಬಿಟ್ಟಿದ್ದಾರೆ. ಆದ್ರೆ ಇದು ಯಾವಾಗ ನಡೆದಿದ್ದು?, ಆತ ಯಾರು?ನಿಜವಾಗಿಯೂ ಪಬ್‌ಜಿಯಿಂದಲೇ ಹೀಗಾಗಿದೆಯಾ ಎಂಬುದರ ಬಗ್ಗೆ ಖಚಿತ ಮಾಹಿತಿ ಮಾತ್ರ ಯಾರಿಗೂ ಸಿಕ್ಕಿಲ್ಲ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಪಬ್‌ಜಿಯಿಂದಲೇ ಹೀಗಾಗಿದೆ ಎಂಬುದು ಅವರ ಮನೆಯವರಿಂದ ಗೊತ್ತಾಗಬೇಕಾಗಿದೆ, ಆತ ಯಾರು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಯಾರೂ ಸಹ ಪಬ್‌ಜಿ ಗೇಮ್‌ಗೆ ದಾಸರಾಗಬಾರದು ಎಂದು ವಿಜಯಪುರ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಇಡಿ ವಿಶ್ವದಲ್ಲೇ ಬಹುತೇಕ ಯುವ ಪೀಳಿಗೆಯನ್ನು ತನ್ನ ದಾಸರನ್ನಾಗಿಸಿಕೊಂಡಿರುವ ಪಬ್‌ಜಿ ಗೇಮ್ ಅದೆಷ್ಟೋ ಜೀವಗಳನ್ನು ಹಾಗೂ ಕುಟುಂಬಗಳನ್ನು ಬಲಿ ತೆಗೆದುಕೊಂಡಿದೆ. ಇಂತಹ ಸಮಯದಲ್ಲಿ ವಿಜಯಪುರದ ಕಂದಕದಲ್ಲಿ ಬಿದ್ದು ಹೊರಳಾಡಿದ ಯುವಕನ ವಿಡಿಯೋ ನೋಡಿದವರಿಗೆಲ್ಲ ಆತಂಕ ಶುರುವಾಗಿದೆ. ಹಾಗಾಗಿ ಈ ಗೇಮ್ ಅನ್ನು ನಿಷೇಧಿಸಬೇಕು ಎಂದು ಒತ್ತಾಯಗಳು ಜೋರಾಗಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    2020ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ದ ಕಣಕ್ಕಿಳಿಯಲಿರುವ ಪ್ರಥಮ ಹಿಂದು ಸಂಸದೆ ತುಳಸಿ..!

    ಈಗ ಬರಲಿರುವ 2020ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಅವರು ಅಮೆರಿಕದ ಮಾಧ್ಯಮವೊಂದಕ್ಕೆ ಅಧಿಕೃತವಾಗಿ ಹೇಳಿದ್ದಾರೆ. ಇವರು ಅಮೇರಿಕದ ಕಾಂಗ್ರೆಸ್ ನಮಹ ಮೊದಲ ಮಹಿಳಾ ಹಿಂದೂ ಕಾರ್ಯಕರ್ತೆ ಯಾಗಿದ್ದಾರೆ. ಹೆಸರು ತುಳಸಿ ಗಬ್ಬಾರ್ಡ್. ಈಗ ಇವರು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದ್ದಾರೆ. ತುಳಸಿ ಅವರು ಸದ್ಯ ಅಮೆರಿಕ ವಿದೇಶಾಂಗ ಇಲಾಖೆಯ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಇವರ ನಿರ್ಧಾರವು ಎಲ್ಲರೂ ಆಶ್ಚರ್ಯಪಡುವಂತೆ ಮಾಡಿದೆ. ಗಬ್ಬಾರ್ಡ್​ ಇರಾಕ್​…

  • ಸಿನಿಮಾ

    ರಾಕಿಂಗ್ ಸ್ಟಾರ್ ಮತ್ತು ಆಕ್ಷನ್ ಪ್ರಿನ್ಸ್ ಗೇ ಖಡಕ್ ವಾರ್ನಿಂಗ್ ಕೊಟ್ಟಿದ್ದ ರೆಬೆಲ್ ಸ್ಟಾರ್!ಏನು ಗೊತ್ತಾ?

    ರೆಬೆಲ್ ಸ್ಟಾರ್ ಅಂಬರೀಶ್ ಸ್ಯಾಂಡಲ್‍ವುಡ್ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಗೆ ಖಡಕ್ ವಾರ್ನಿಂಗ್ ನೀಡಿದ್ದರು.ಯಶ್ ‘ಕೆಜಿಎಫ್’ ಚಿತ್ರಕ್ಕಾಗಿ ಗಡ್ಡ ಬಿಟ್ಟಿದ್ದರು. ಆಗ ಅಂಬರೀಶ್ ಯಶ್‍ಗೆ ಗಡ್ಡ ತೆಗೆಯುವಂತೆ ಅಂಬರೀಶ್ ವಾರ್ನ್ ಮಾಡಿದ್ದರು. ಯಶ್ ಸದಾ ಕ್ಲೀನ್ ಶೇವ್ ಲುಕ್‍ನಲ್ಲಿ ಇರುತ್ತಿದ್ದರು. ಆದರೆ ಕೆಜಿಎಫ್ ಸಿನಿಮಾಗಾಗಿ ಸ್ಟೈಲಿಶ್ ಆಗಿ ಗಡ್ಡ ಮೀಸೆ ಬಿಟ್ಟು ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದರು. ಯಶ್ ಅವರನ್ನು ಗಡ್ಡದಲ್ಲಿ ನೋಡಿ ಅಂಬರೀಶ್‍ಗೆ ಬೇಜಾರಾಗಿ ಹೋದಲ್ಲಿ ಬಂದಲ್ಲಿ ಯಶ್‍ಗೆ…

  • ಸುದ್ದಿ

    ಮರ ಕತ್ತರಿಸುವಾಗ ಆ ತುಂಡಿನಲ್ಲಿ ಸಿಕ್ಕಿದೇನು? ನೋಡಿ.

    ಇತ್ತೀಚಿಗೆ ಜಗತ್ತಿನಲ್ಲಿ ಗ್ಲೋಬಲ್ ವಾರ್ಮಿಂಗ್ ಎಂಬುದು ಹೆಚ್ಚುತ್ತಿದೆ.ಆದರೂ ಸಹ ಕೆಲವು ಕಡೆ ಈಗಲೂ ಸಹ ಜನರು ಮರಗಳನ್ನು ಕಡಿದು ಫ್ಯಾಕ್ಟರಿಗಳಿಗೆ ಕಳುಹಿಸುತ್ತಿದ್ದಾರೆ .ಹೀಗೆ ಮರವನ್ನು ಕತ್ತರಿಸುತ್ತಿದ್ದಾಗ ಅಲ್ಲಿ ಕಂಡ ದೃಶ್ಯವನ್ನು ನೋಡಿ ಜನರ ಕೈಯಲ್ಲಿ ನಂಬಲು ಅಸಾಧ್ಯವಾಗಿದೆ. ಇನ್ನು ಸ್ವಲ್ಪ ದಶಕಗಳ ಹಿಂದೆ ಹೋಗೋಣ ಬನ್ನಿ .. ಜಾರ್ಜಿಯಾ ಕ್ರಾಪ್ ನಲ್ಲಿ ಜನರು ಪ್ರತಿದಿನದಂತೆ ಮರಗಳನ್ನು ಕತ್ತರಿಸುವ ಕೆಲಸ ಮಾಡುತ್ತಿದ್ದರು.ದಿನನಿತ್ಯದಂತೆ ತಮ್ಮ ಕೆಲಸ ಕಾರ್ಯಗಳೆಲ್ಲವೂ ಸಾಮಾನ್ಯವಾಗಿ ನಡೆಯುತ್ತಿತ್ತು.ಮರಗಳನ್ನು ಕತ್ತರಿಸಿ ಸುರಕ್ಷಿತವಾಗಿ ಫ್ಯಾಕ್ಟರಿಗೆ ಕಳೆಸುವ ಕೆಲಸ ಅವರದ್ದು.ಹಾಗೇ ಒಂದು…

  • ಉಪಯುಕ್ತ ಮಾಹಿತಿ

    ಜೀವನದಲ್ಲಿ ಯಶಸ್ಸು ಸಿಗಬೇಕಂದ್ರೆ,ಈ ಅಂಶಗಳನ್ನು ಅನುಸರಿಸಿ…

    ಯಶಸ್ಸು ಯಾರಿಗೆ ಬೇಡ ಹೇಳಿ? ಎಷ್ಟೇ ಶ್ರಮವಹಿಸಿದ್ರೂ ಕೆಲವರಿಗೆ ಯಶಸ್ಸು ಲಭಿಸುವುದಿಲ್ಲ. ಜೀವನದಲ್ಲಿ ಒಂದಾದ ಮೇಲೆ ಒಂದು ಕಷ್ಟಗಳು ಬರ್ತಾನೆ ಇರುತ್ವೆ. ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸ್ತಾರೆ. ಯಶಸ್ಸಿನ ವಿಧಾನ ಹಾಗೂ ವಿಷಯಗಳು ಬೇರೆ ಬೇರೆಯಾದರೂ ಹೋರಾಟ ಮಾತ್ರ ತಪ್ಪಿದ್ದಲ್ಲ. ಕೆಲವರಿಗೆ ಬೇಗನೆ ಯಶಸ್ಸು ದೊರೆತರೆ ಇನ್ನು ಕೆಲವರು ಪಡಬಾರದ ಪಾಡೆಲ್ಲ ಪಡುತ್ತಾರೆ.

  • ಆರೋಗ್ಯ, ಸೌಂದರ್ಯ

    ಕರಿಬೇವಿನ ಈ ಆರೋಗ್ಯಕಾರಿ ಲಾಭಗಳ ಬಗ್ಗೆ ನಿಮ್ಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ….

    ಕೂದಲು ಸೊಂಪಾಗಿ ಬೆಳೆಯಲು ಮತ್ತು ಅಕಾಲಿಕ ನೆರೆ ತಡೆಗಟ್ಟಲು ಕರಿಬೇವು ತುಂಬಾ ಸಹಾಯಕಾರಿ. ಅದನ್ನು ಹಾಗೇ ತಿನ್ನಲು ಇಷ್ಟವಿಲ್ಲದಿದ್ದರೆ ಕರಿಬೇವಿನ ಎಲೆಯನ್ನು ಹುರಿದು ಪುಡಿ ಮಾಡಿ ಅದನ್ನು ದೋಸೆ ಜೊತೆ ತಿನ್ನಬಹುದು.