ಮಾಡ್ರನ್ ಬೇಸಾಯ

ನೀವ್ ಕೂಡ ಹಣಬೆಯನ್ನು ಬೆಳೆದು ಉತ್ತಮ ಲಾಭಗಳಿಸಬಹುದು!ಹಾಗಾದ್ರೆ ಹಣಬೆ ಬೆಳೆಯುವುದು ಹೇಗೆ ಗೊತ್ತಾ?ತಿಳಿಯಲು ಈ ಲೇಖನಿ ಓದಿ…

3112

ಮಳೆಯ ಸಿಂಚನ ಇಳೆಯನ್ನು ಸ್ಪರ್ಶಿಸುತ್ತಿದ್ದಂತೆ, ಭೂಗರ್ಭದಿಂದ ಹೊರಬಂದು ಎಲ್ಲರಿಗೂ ಅಚ್ಚರಿ ಮೂಡಿಸುವ ಬೆಳೆ ಎಂದರೆ ಅಣಬೆ. ಇದು ನಿಸರ್ಗದ ಚಮತ್ಕಾರವಾದರೂ ಈ ಪೈಕಿ ಬಹಳಷ್ಟು ಅಣಬೆಗಳು ವಿಷಪೂರಕವಾದವು. ಆದರೆ ಮನೆ ಬಳಕೆಗೆ ಉಪಯೋಗ ಆಗುವಂತಹ ಅಣಬೆಯನ್ನು ನೈಸರ್ಗಿಕ ವಿಧಾನದಲ್ಲಿ ಬೆಳೆದು ಅದರಿಂದ ಲಾಭ ಗಳಿಸಬಹುದು.

ಭಾರತದಲ್ಲಿ ಪ್ರತಿ ವರ್ಷ 1.44 ಕೋಟಿ ಟನ್ ಕೃಷಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದನ್ನು ಸುಡಲಾಗುತ್ತಿದೆ ಇಲ್ಲವೇ ಪರಿಸರದಲ್ಲಿ ಕೊಳೆಯಲು ಬಿಡುವ ಮೂಲಕ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ.

ಇದರಲ್ಲಿ ಶೇ 10ರಷ್ಟು ಅಂದರೆ 14.4 ಲಕ್ಷ ಟನ್ ಕೃಷಿ ತ್ಯಾಜ್ಯವನ್ನು ಸದುಪಯೋಗ ಮಾಡಿಕೊಂಡರೆ ಸುಮಾರು 72 ಲಕ್ಷ ಟನ್ ಅಣಬೆಯನ್ನು ಉತ್ಪಾದಿಸಬಹುದು. ಇದು 1.44 ಟನ್ ಪ್ರೋಟಿನ್ ಉತ್ಪಾದನೆಗೆ ಸಮವಾಗಿದೆ. ಇಷ್ಟು ಪ್ರಮಾಣದ ಅಣಬೆ ಬೇಸಾಯ 43 ಲಕ್ಷ ಜನರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಒದಗಿಸುತ್ತದೆ.

ಹಾಗಾದ್ರೆ ಅಣಬೆ ಹೇಗೆ ಬೆಳೆಯಬೇಕು? ಬೆಳೆಯುವ ಜಾಗ ಹೇಗಿರಬೇಕು?ತಿಳಿಯಲು ಮುಂದೆ ಓದಿ…

  • ಹುಲ್ಲು ಛಾವಣಿಯ ಗುಡಿಸಲು 16 ಚದರ ಮೀ. ಇರುವುದುಅಗತ್ಯ.ಅದನ್ನು ಸ್ಪಾನ್ ರನ್ನಿಂಗ್ ಕೋಣೆ ಮತ್ತು ಬೆಳೆಯ ಕೋಣೆ ಎಂದು ವಿಭಾಗಿಸಬೇಕು.

ಸ್ಪಾನ್ ರನ್ನಿಂಗ್ ಕೋಣೆ :-

25-300C ಉಷ್ಣತೆ ಇರಬೇಕು.ಗಾಳಿ ಬಂದು ಹೋಗು ವಂತಿರಬೆಕು. ಬೆಳಕು ಬೇಕಿಲ್ಲ

ಬೆಳೆಯ ಕೋಣೆ :-

23-250C ಉಷ್ಣತೆ ಇರಬೇಕು.ಸಾಪೇಕ್ಷ ತೇವಾಂಶ 75-80% ಇರಬೇಕು ಬೆಳಕು ಮತ್ತು ಗಾಳಿಯವ್ಯವಸ್ಥೆ ಸಾಧಾರಣ ಇರಬೇಕು

(ಡಿಜಿಟಲ್ ಥರ್ಮಾ ಮಿಟರ್ ಮತ್ತು ಹ್ಯುಮಿಡಿಫೈಯರ್ ಮೀಟರುಗಳು ಮಾರುಕಟ್ಟೆಯಲ್ಲ ದೊರಕುತ್ತವೆ)

ಸ್ಪಾನು (ಅಣಬೆ ಬೀಜೊತ್ಪತ್ತಿ):-

  • ಸೂಕ್ತವಾದ ಕೆಳ ಪದರ ಜೋಳ, ಮೆಕ್ಕೆ ಜೋಳ,ಗೋದಿ, ಮೊದಲಾದ ಧಾನ್ಯಗಳು
  • ಸ್ಫಾನು ತಯಾರಿ ಧಾನ್ಯಗಳನ್ನು ಅರ್ಧ ಬೇಯಿಸಿ. ಗಾಳಿಯಲ್ಲಿ ಒಣಗಿಸಿ, 2% ಕ್ಯಾಲ್ಷಿಯಂ ಕಾರ್ಬೊನೇಟ್ಮಿಶ್ರಣ ಮಾಡಿ. ಧಾನ್ಯವನ್ನು ಖಾಲಿ ಗ್ಲೂಕೋಸು ಡ್ರಿಪ್ ಬಾಟಲಿಯಲ್ಲಿ ತುಂಬಿ ಹತ್ತಿಯಿ0ದ ಮುಚ್ಚಿರಿ. ಕುಕ ರ್ ನಲ್ಲಿ 2 ತಾಸು ಪೂತಿನಾಶನ ಮಾಡಿ.
  • ಶುದ್ಧವಾದ ಫಂಗಸ್ ಕಲ್ಚರನ್ನು ಸೇರಿಸಿರಿ(ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾಲಯಗಲಲ್ಲಿ ಸಿಗುವುದು) ಮತ್ತು ಅದನ್ನು ಕೋನೆಯ ಉಷ್ನತೆಯಲ್ಲಿ 15 ದಿನ ಇನ್ ಕುಬೇಟ್ ಮಾಡಿ. 15-18 ದಿನಗಳ ಸ್ಪಾನುಗಳನ್ನು ಸ್ಪಾನಿಂಗಗೆ ಬಳಸಿ .

ಅಣಬೆಯ ಹಾಸಿಗೆ ತಯಾರಿ:-

  • ಸೂಕ್ತವಾದ ಕೆಳ ಪದರ ನೆಲ್ಲು / ಗೋದಿ ಹುಲ್ಲು , ಕಬ್ಬಿನ ಒಗಡು, ಮೆಕ್ಕೆಜೋಲದ ರವದಿ ಇತ್ಯಾದಿ
  • ಕತ್ತರಿಸಿದ ಗೋದಿ ಹುಲ್ಲು ಗಳ 5ಸೆಮಿ ತುಂಡುಗಳನ್ನು5 ತಾಸು ಕುಡಿಯುವ ನೀರಿನಲ್ಲಿ ನೆನಸಿರಿ. ನಂತರ ಒಂದು ತಾಸು ಕುದಿಸಿ. ನೀರನ್ನು ಬಸಿಯಿರಿ ಗಾಳಿಯಲ್ಲಿ ಒಣಗಿಸಿ 65% ತೇವಾಂಶ ವಿರಲಿ ( ಕೈಯಿಂದ ಹಿಂಡಿದಾಗ ನೀರಹನಿ ಬರಬಾರದು)
  • ಚೀಲದ ತಯಾರಿ
  • 60×30ಸೆಮಿ ಅಳತೆಯ ಪಾಲಿತಿನ್ ಚೀಲ ಬಳಸಿ(ಎರಡು ಕಡೆ ತೆರದಿರಲಿ).
  • ಒಂದು ತುದಿಯನ್ನು ಕಟ್ಟಿ ಎರಡು 1 ಸೆಮಿ ವ್ಯಾಸ ದ ರಂದ್ರಗಳನ್ನು ಮಧ್ಯದಲ್ಲಿ ಮಾಡಿ
  • ಒಂದು ಮುಷ್ಟಿಯಷ್ಟು ಬೇಯಿಸಿದ ಹುಲ್ಲನ್ನು 5 ಸೆ.ಮಿ ಎತ್ತರಕ್ಕೆ ಹಾಕಿ ಅದರಲ್ಲ 25ಗ್ರಾಂ ಬೀಜವನ್ನು ಹಾಕಿ.
  • ಹುಲ್ಲಿನ ಪದರವನ್ನು 25 ಸೆಮಿ. ಎತ್ತರ ಕ್ಕೆ ಹಾಕಿರಿ .ಈ ಪ್ರಕ್ರಿಯೆಯನ್ನು ನಾಲಕ್ಕು ಪದರ ಸ್ಪಾನ್ಮತ್ತು ಐದು ಪದರ ಹುಲ್ಲು ಬರುವಂತೆಹಾಕಿರಿ.
  • ಬಾಯಿ ಕಟ್ಟಿ ಮತ್ತು ಬೆಡ್ಡುಗಳನ್ನು ಸ್ಪಾನಿಘ್ ಕೋಣೆಯಲ್ಲಿ ಹಂತಹಂತವಾಗಿ ಜೋಡಿಸಿರಿ.
  • 15-20 ದಿನಗಳ ನಂತರ ,ಪಾಲಿತಿನ್ ಚೀಲವನ್ನು ಕತ್ತರಿಸಿ ತೆಗೆಯಿರಿ ಮತ್ತು ಬೆಡ್ ಅನ್ನು ಬೇರೆ ಕೋಣೆಗೆ ವರ್ಗ ಮಾಡಿ.
  • ಬೆಡ್ ಅನ್ನು ಒದ್ದೆ ಯಾಗಿಡಲು ಅಗಾಗ ನೀರು ಹಾಕುತ್ತಿರಿ.

ಉತ್ಪನ್ನ:-

  • ಅಣಬೆಯ ಸೂಜಿಮೊನೆ ತಲೆ ಗಳು 3ನೆ ದಿನ ಬೆಡ್ಡಿನ ಲ್ಲಿಂದ ಹೊರಬರುವವು.ಮತ್ತು 3 ದಿನಗಳಲ್ಲಿ ಪಕ್ವ ವಾಗುವವು.
  • ಪಕ್ವವಾದ ಅಣಬೆಗಳನ್ನು ಪ್ರತಿ ದಿನ ಅಥವ ದಿನ ಬಿಟ್ಟು ದಿನ ನೀರು ಸ್ಪ್ರೇ ಮಾಡುವ ಮುನ್ನ ಹಾರವೆಸ್ಟ ಮಾಡಿ
  • ಎರಡನೆ ಮತ್ತ ಮೂರನೆ ಬೆಳೆಯನ್ನು ಬೆಡ್ಡಿನ ತಳವನ್ನು ಕೆರೆದು ತೆಗೆದ ನಂತರ ಮಾಡಬೇಕು.

ಮೂಲ:

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ರೈಲಿನ ಪ್ರಯಾಣದ ಮಧ್ಯೆ ಹೆರಿಗೆ ಮಾಡಿಸಿದ ಧರಣಿಗೆ ಹೊರಟಿದ್ದ ಅಂಗನವಾಡಿ ಕಾರ್ಯಕರ್ತೆಯರು.!

    ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ಎಂಬುವರು ಉದ್ಯಾನ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದವರು.  ಬೆಂಗಳೂರಿಗೆ ಪತಿ ಜೊತೆ ಹೊರಟಿದ್ದ ಗೀತಾ ಅವರಿಗೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು.‌ ಚಿತ್ತಾಪುರ ತಾಲೂಕು ನಾಲವಾರದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ, ಹಾಲಾಬಾಯಿ ಮತ್ತಿತರರು ಸುಲಭ ಹೆರಿಗೆ ಮಾಡಿಸಿದ್ದಾರೆ. ವಿಷಯ ತಿಳಿದ ಕಾರ್ಯಕರ್ತೆಯರು ಗೀತಾ ಅವರಿಗೆ ಸುಲಭ ಹೆರಿಗೆ ಮಾಡಿಸಿದರು.  ರಾಯಚೂರು…

  • ರೆಸಿಪಿ

    15 ನಿಮಿಷಗಳಲ್ಲಿ ಫಟಾಫಟ್ ‘ಎಗ್ ಪಲಾವ್’ ಮಾಡೋದು ಹೇಗೆ ಗೊತ್ತಾ..?

    ಬಾಯಲ್ಲಿ ನೀರೂರಿಸುವ ಖಾದ್ಯವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅದರಲ್ಲೂ ಫಟಾಫಟ್ ಎಂದು ತಯಾರಿಸಲಾಗುವ ಖಾದ್ಯಗಳು ನಮ್ಮ ಜಂಜಾಟಗಳಿಂದ ಕೂಡಿದ ಜೀವನ ಶೈಲಿಗೆ ಅತ್ಯಂತ ಸಹಕಾರಿ.ಅದರಲ್ಲೂ ಎಗ್ ಪಲಾವ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಕೇವಲ 15 ನಿಮಿಷಗಳಲ್ಲಿ ಎಗ್ ಪಲಾವ್ ಮಾಡಿ…

  • ರಾಜಕೀಯ

    ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?

    ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್ !!! ಬಿಪಿಎಲ್ (BPL) ಕುಟುಂಬಗಳಿಗೆ ಪ್ರತಿವರ್ಷ ಯುಗಾದಿ, ಗಣೇಶ ಚತುರ್ಥಿ ಮತ್ತು ದೀಪಾವಳಿಗೆ ತಲಾ ಒಂದರಂತೆ 3 ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತೇವೆ ಎಂದು ಬಿಜೆಪಿ (BJP) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ರಾಜ್ಯದ ವಿಧಾನ ಸಭೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ…

  • ಸುದ್ದಿ

    39ನೇ ವಸಂತಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟುಹಬ್ಬಕ್ಕೆ ಗೀತಾ ಟೀಸರ್ ರಿಲೀಸ್…!

    ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ‘ಗೀತಾ’ ಚಿತ್ರದ ಟೀಸರ್ ಬಿಡುಗಡೆ ಆಗಿದೆ.ಗಣೇಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿಲ್ಲ. ಈ ಬಗ್ಗೆ ಅವರು ತಮ್ಮ ಟ್ವಿಟ್ಟರಿನಲ್ಲಿ ಸ್ಪಷ್ಟನೆ ಕೂಡ ನೀಡಿದ್ದರು. ಇಂದು ಗಣೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತವಾಗಿ ಅವರು ಅಭಿನಯದ ‘ಗೀತಾ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಗೀತಾ ಚಿತ್ರದ ಟೀಸರ್ ನಲ್ಲಿ ಗಣೇಶ್ ಕನ್ನಡ ಭಾಷೆಗಾಗಿ ಹೋರಾಟ ನಡೆಸಿದ್ದಾರೆ. ಅಲ್ಲದೆ ಗಣೇಶ್ ‘ಕರ್ನಾಟಕದಲ್ಲಿ ಕನ್ನಡಿಗನೇ…

  • ಸುದ್ದಿ

    ಜನರ ಆರೋಗ್ಯ ರಕ್ಷಣೆ, ಪ್ರವಾಸೋದ್ಯಮಕ್ಕೆ ಒತ್ತು ಮತ್ತು ಕೆಫೀನ್​ ಪೇಯಗಳ ತೆರಿಗೆ ಹೆಚ್ಚಿಸಿದಂತಹ ಜಿಎಸ್​ಟಿ ಮಂಡಳಿ,.!

    ಪಣಜಿ,  ದೇಶದ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಜಿಎಸ್​ಟಿ ಮಂಡಳಿ ಕೆಫೀನ್​ ಆಧಾರಿತ ಪೇಯಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದೆ. ಇದೇ ವೇಳೆ ಪ್ರವಾಸೋದ್ಯಮಕ್ಕೆ ಒತ್ತು ಕೊಡಲು ಹೋಟೆಲ್​ ಕೋಣೆಗಳ ಬಾಡಿಗೆ ಮೇಲಿನ ತೆರಿಗೆಯನ್ನು ಇಳಿಸಿದೆ. ಜಿಎಸ್​ಟಿ ಮಂಡಳಿ ಸಭೆಯ ಬಳಿಕ ಶುಕ್ರವಾರ ರಾತ್ರಿ ಸುದ್ದಿಗಾರರ ಜತೆ ಮಾತನಾಡಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಒಂದು ರಾತ್ರಿ ತಂಗಲು 1 ಸಾವಿರ ರೂ.ವರೆಗಿನ ಹೋಟೆಲ್​ ಕೋಣೆಗಳ ಬಾಡಿಗೆ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಒಂದು…

  • inspirational, ಉಪಯುಕ್ತ ಮಾಹಿತಿ

    ಉತ್ತಮ ಆರೋಗ್ಯ ಟಿಪ್ಸ್

    ಇಂದು ವಿಶ್ವ ಆರೋಗ್ಯ ದಿನ ನಾನು ಅನುಸರಿಸುವ ಕೆಲವೊಂದು ಆರೋಗ್ಯ ಟಿಪ್ಸ್ ನಿಮಗೂ ತಿಳಿಸುತ್ತಿದ್ದೇನೆ ತಾವು ಅನುಭವಿಸಿ ಉತ್ತಮವಾದ ಜೀವನಶೈಲಿಗೆ ಹತ್ತು ಆಚರಣೆಗಳು 1. ಪ್ರತಿನಿತ್ಯ 20 ನಿಮಿಷಗಳ ವರೆಗೆ ಧ್ಯಾನ ಮತ್ತು ವ್ಯಾಯಾಮ ಅಥವಾ ವಾಕಿಂಗ್ ಮಾಡೋಣ 2. ಮಿತ ಆಹಾರ ಸೇವನೆ ಮಾಡೋಣ 3. ಸಸ್ಯಾಹಾರಕ್ಕೆ ಬದಲಾಗೋಣ 4. ನಮ್ಮ ನೀರು ಸೇವನೆ ಪ್ರಮಾಣವನ್ನು ಕಾಪಾಡಿಕೊಳ್ಳೋಣ. 5. ಮಲಗುವುದಕ್ಕೆ ಮೂರು ಗಂಟೆ ಮುಂಚೆ ಆಹಾರ ಸೇವನೆ ಮಾಡಲು ಪ್ರಯತ್ನಿಸೋಣ. 6. ನಮ್ಮ ಮಾತುಗಳನ್ನು ಮತ್ತು…