ಆರೋಗ್ಯ

ನೀವು ಬ್ರೇಕ್‌ಫಾಸ್ಟ್ ತಪ್ಪಿಸಿದರೆ ಈ ಗಂಭೀರ ಆರೋಗ್ಯ ಸಮಸ್ಯ ನಿಮಗೆ ಗ್ಯಾರೆಂಟಿ..!ತಿಳಿಯಲು ಈ ಲೇಖನ ಓದಿ..

212

ಬೆಳಗಿನ ತಿಂಡಿಯನ್ನು ತಿನ್ನಲೂ ಹೆಚ್ಚಿನವರಿಗೆ ಪುರಸೊತ್ತು ಇರುವುದಿಲ್ಲ. ಹೆಚ್ಚಿನ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೂ ಇದಕ್ಕೆ ಹೊರತಲ್ಲ. ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ ನೀಡಿದಂತಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಆರೋಗ್ಯ ಸಮಸ್ಯೆಗಳು..

ಹೃದಯದ ಮೇಲೆ ಪರಿಣಾಮ :-

ಬೆಳಿಗ್ಗೆ ಆರೋಗ್ಯಕರ ಆಹಾರ ಸೇವನೆಯಿಂದ ದಿನವನ್ನು ಆರಂಭಿಸುವವರಿಗೆ ಹೋಲಿಸಿದರೆ ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳುವವರು ಹೃದಯ ಕಾಯಿಲೆಗಳಿಗೆ ಗುರಿಯಾಗುವ ಅಪಾಯ ಹೆಚ್ಚು ಎನ್ನುವುದನ್ನು ಅಧ್ಯಯನವೊಂದು ಸಾಬೀತುಗೊಳಿಸಿದೆ.

ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ರಕ್ತದೊತ್ತಡ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತವೆ.

ಗ್ಯಾಸ್ಟ್ರಿಕ್ ತೊಂದರೆಗಳು:-

ಬ್ರೇಕ್‌ಫಾಸ್ಟ್ ತಪ್ಪಿಸುವುದರಿಂದ ಊಟದ ವೇಳೆ ಹೆಚ್ಚಿನ ಆಹಾರ ಹೊಟ್ಟೆಯನ್ನು ಸೇರುತ್ತದೆ. ಪರಿಣಾಮವಾಗಿ ಆಹಾರವನ್ನು ಜೀರ್ಣಿಸುವ ಕರುಳುಗಳ ಮೇಲೆ ಅಧಿಕ ಹೊರೆ ಬೀಳುತ್ತದೆ ಮತ್ತು ಇದು ಅಲ್ಸರ್,ಗ್ಯಾಸ್ಟ್ರಿಕ್ಸ್, ಅಜೀರ್ಣ ಮತ್ತು ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ.

ಮಧುಮೇಹದ ಹೆಚ್ಚಿನ ಅಪಾಯ:-

ಬ್ರೇಕ್‌ಫಾಸ್ಟ್ ತಪ್ಪಿಸುವವರಿಗೆ ಹೋಲಿಸಿದರೆ ಬೆಳಿಗ್ಗೆ ಆರೋಗ್ಯಕರ ತಿಂಡಿ ತಿನ್ನುವವವರು ಟೈಪ್-2 ಮಧುಮೇಹಕ್ಕೆ ತುತ್ತಾಗುವ ಅಪಾಯವು ಕಡಿಮೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಹಿಳೆಯರು ತಮ್ಮ ಕೆಲಸದ ಭರಾಟೆಯಲ್ಲಿ ಹೆಚ್ಚಿನ ಸಲ ಬೆಳಗಿನ ತಿಂಡಿಯನ್ನು ಕಡೆಗಣಿಸುವುದರಿಂದ ಮಧುಮೇಹಕ್ಕೆ ತುತ್ತಾಗುವುದು ಹೆಚ್ಚು.

ರಾತ್ರಿ ಮಲಗಿದ ಬಳಿಕ ಬೆಳಿಗ್ಗೆ ಏಳುವವರೆಗೆ ಉಪವಾಸವಿರುವುದರಿಂದ ಬ್ರೇಕ್‌ಫಾಸ್ಟ್ ತಪ್ಪಿಸುವುದು ಈ ಉಪವಾಸದ ಅವಧಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಮತ್ತು ಇನ್ಸುಲಿನ್ ಉತ್ಪಾದನೆಯಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು.

ತಲೆಗೂದಲು ನಷ್ಟವಾಗಬಹುದು:-

ಸುಂದರ ತಲೆಗೂದಲನ್ನು ಹೊಂದಿರಲು ಪೌಷ್ಟಿಕ ಬ್ರೇಕ್‌ಫಾಸ್ಟ್ ಅಗತ್ಯವಾಗಿದೆ. ಪ್ರೋಟಿನ್‌ಭರಿತ ಬ್ರೇಕ್‌ಫಾಸ್ಟ್ ಕೆರಾಟಿನ್ ಉತ್ಪತ್ತಿಗೆ ನೆರವಾಗುತ್ತದೆ ಮತ್ತು ಕೆರಾಟಿನ್ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಬೊಜ್ಜು ಹೆಚ್ಚುತ್ತದೆ:-

ಇದನ್ನು ಓದಿದರೆ ಅಚ್ಚರಿಯೆನ್ನಿಸಬಹುದು. ನೀವು ದೇಹತೂಕ ಇಳಿಸಲು ಬಯಸಿದ್ದೀರಾದರೆ ಕಡಿಮೆ ತಿನ್ನುವುದರಿಂದ ತೂಕ ಕಡಿಮೆಯಾಗುತ್ತದೆ ಎಂದು ಭಾವಿಸಿರಬಹುದು. ಆದರೆ ಇದು ಬ್ರೇಕ್‌ಫಾಸ್ಟ್ ತಪ್ಪಿಸಿಕೊಳ್ಳುವುದಕ್ಕೆ ಅನ್ವಯಿಸುವುದಿಲ್ಲ. ಅಲ್ಲದೆ ಊಟದ ವೇಳೆ ಹಸಿವು ತೀವ್ರವಾಗಿರುತ್ತದೆ.

ಪರಿಣಾಮವಾಗಿ ಹೆಚ್ಚಿನ ಊಟ ಮಾಡುವಂತಾಗುತ್ತದೆ ಮತ್ತು ದಿನದ ಅತ್ಯಂತ ಹೆಚ್ಚು ಜಡತೆಯ ಸಮಯದಲ್ಲಿ ಹೆಚ್ಚಿನ ಕ್ಯಾಲರಿಗಳು ಶರೀರದಲ್ಲಿ ಸೇರಿಕೊಂಡು ಅಂತಿಮವಾಗಿ ತೂಕ ಹೆಚ್ಚುತ್ತದೆ.

ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ:-

ಬ್ರೇಕ್‌ಫಾಸ್ಟ್ 12 ಗಂಟೆಗಳ ಸುದೀರ್ಘ ಉಪವಾಸದ ಬಳಿಕ ನಾವು ಸೇವಿಸುವ ಮೊದಲ ಆಹಾರವಾಗಿದೆ ಮತ್ತು ಇದನ್ನು ತಪ್ಪಿಸಿದರೆ ನಮ್ಮ ಶರೀರಕ್ಕೆ ಉತ್ತಮ ಆರಂಭ ದೊರೆಯುವುದಿಲ್ಲ. ನಮ್ಮ ಜೈವಿಕ ಯಂತ್ರ ನಿಧಾನಗೊಳ್ಳುತ್ತದೆ ಮತ್ತು ಇದರಿಂದ ಇಡೀ ದಿನ ಆಲಸ್ಯ ಕಾಡುತ್ತದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    7 ಕೋಟಿ ರೂ ಬೆಲೆಬಾಳುವ ಕ್ಯಾರವ್ಯಾನ್ ಖರೀದಿ ಮಾಡಿದ ಅಲ್ಲು ಅರ್ಜುನ್….ನೋಡಿದರೆ ಅಚ್ಚರಿ ಪಡುತ್ತಿರಿ…!

    ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರು  ಕ್ಯಾರವ್ಯಾನ್ ಖರೀದಿಸಿದ್ದು,  ಅದರ  ಬೆಲೆ 7 ಕೋಟಿ ರೂ. ಎಂದು ತಿಳಿದು ಬಂದಿದೆ.  ಇದು ನೋಡಲು ಬಹಳ ಆಕರ್ಷಣಿಯವಾಗಿದೆ ಎಂದು ತಿಳಿದುಬಂದಿದೆ. ಮತ್ತು ತಾವೂ ಖರೀದಿಸಿರುವ ಹೊಸ ಕ್ಯಾರವ್ಯಾನ್ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ತಮಗೆ ಬೇಕಾದಂತೆ ಡಿಸೈನ್ ಮಾಡಿಸಿಕೊಂಡಿದ್ದಾರೆ. ಇದು ಕಪ್ಪು ಬಣ್ಣದ ಬಸ್ ಆಗಿದ್ದು, ಒಳಗೆ ಅತ್ಯಂತ ಸ್ಟೈಲಿಶ್ ಆಗಿ ವಿನ್ಯಾಸ ಮಾಡಲಾಗಿದೆ. ವಿಶೇಷವೆಂದರೆ ಈ ಕ್ಯಾರವ್ಯಾನ್ ಮೇಲೆ ಮತ್ತು ಒಳಗೆ ಅಲ್ಲು ಅರ್ಜುನ್ ತಮ್ಮ ಹೆಸರನ್ನ…

  • ದೇಗುಲ ದರ್ಶನ

    ಮೊದಲ ದಿನವೇ ಅಯ್ಯಪ್ಪ ಸ್ವಾಮಿ ಹುಂಡಿಗೆ ದಾಖಲೆಯ ಹಣ . ಮೊದಲ ದಿನ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಭಕ್ತರು ಎಷ್ಟು ಗೊತ್ತಾ?

    ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದ ಶನಿವಾರ 3.32 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಮೊದಲ ದಿನ ಗಳಿಸಿದ 1.28 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಾದಂತಾಗಿದೆ. ದೇವಾಲಯದ ಬಾಗಿಲು ತೆಗೆದ ನಂತರ ಇದುವರಗೆ 70000 ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಈ ವಿಷಯವನ್ನು ತಿಳಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಪ್ರತಿದಿನ 4೦,೦೦೦ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ…

  • ಆರೋಗ್ಯ

    ನೀವು ಕಾಫಿ ಪ್ರಿಯರಾ? ಹಾಗೇನಾದರೂ ಆಗಿದ್ದರೆ ಹುಷಾರು.

    ಗರ್ಭಿಣಿಯರು ಹೆಚ್ಚಾಗಿ ಕಾಫಿ ಸೇವಿಸುವುದು ಅವರ ಆರೋಗ್ಯಕ್ಕೆ ಒಳ್ಳೆಯದಲ್ಲ. ಹೃದಯದ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ದಿನಕ್ಕೊಮ್ಮೆಯೋ, ಎರಡು ಬಾರಿಯೋ ಕಾಫಿ ಸೇವಿಸಿದರೆ ಅದು ಚೈತನ್ಯ ನೀಡುವುದಲ್ಲದೆ, ಚಟುವಟಿಕೆಯಿಂದ ಇರಲು ಸಹಕರಿಸುತ್ತದೆ. ಆದರೆ ಇದೇ ಅಭ್ಯಾಸ ಅತಿಯಾಗಿ, ದಿನಕ್ಕೆ ಐದಾರು ಬಾರಿ ಅಥವಾ ಇನ್ನೂ ಹೆಚ್ಚು ಬಾರಿ ಕಾಫಿ ಸೇವಿಸುತ್ತಲೇ ಇರುವುದರಿಂದ ಶರೀರದ ಆರೋಗ್ಯ ಸಂಪೂರ್ಣ ಹದಗೆಡುವುದು ಖಂಡಿತ. ಮಾನಸಿಕ ಆರೋಗ್ಯದ ಮೇಲೂ ಇದು ಪ್ರಭಾವ ಬೀರುತ್ತದೆ ಎಂಬುದೂ ಸಹ ಇತ್ತೀಚೆಗೆ ದೃಢಪಟ್ಟಿದೆ. ಅತಿಯಾಗಿ ಕಾಫಿ ಸೇವಿಸುವ ವ್ಯಕ್ತಿ…

  • ಮನೆ

    ಮನೆಯ ವಾಸ್ತು ಖರ್ಚಿಲ್ಲದೇ ಅಳವಡಿಸಿಕೊಳ್ಳಿ. ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ವಾಸ್ತು ಪ್ರಕಾರ ಮನೆ ಕಟ್ಟಬೇಕು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ.. ಆದರೆ ಯಾವುದೋ ಕಾರಣದಿಂದ ಸಾಧ್ಯವಾಗಿರುವುದಿಲ್ಲ.. ಅಷ್ಟು ತಲೆ ಕೆಡಿಸಿಕೊಳ್ಳುವ ಅವಷ್ಯಕತೆ ಇಲ್ಲ.. ಇಲ್ಲಿ ನೋಡಿ ನಿಮಗಾಗಿ ಸಿಂಪಲ್ ವಾಸ್ತು.

  • ಜ್ಯೋತಿಷ್ಯ

    ಬರೋಬ್ಬರಿ 75 ವರ್ಷಗಳ ನಂತರ ಭೇಟಿಯಾದ ಪ್ರೇಮಿಗಳು….!

    75 ವರ್ಷಗಳ ಬಳಿಕ 97 ವಯಸ್ಸಿನ ವೃದ್ಧ 92 ವರ್ಷದ ತನ್ನ ಪ್ರೇಯಸಿಯನ್ನು ಫ್ರಾನ್ಸ್ ನಲ್ಲಿ ಭೇಟಿ ಮಾಡಿದ ಸುದ್ದಿಯೊಂದು ವೈರಲ್ ಆಗುತ್ತಿದೆ.ಕೇಟಿ ರಾಬಿನ್ಸ್ ಹಾಗೂ ಜೇನಿನ್ ಪಿಯರ್‍ಸನ್ 75 ವರ್ಷಗಳ ಬಳಿಕ ಭೇಟಿ ಆಗಿದ್ದಾರೆ. 75 ವರ್ಷದ ಬಳಿಕ ರಾಬಿನ್ಸ್ ಡಿ-ಡೇ ಲ್ಯಾಂಡಿಂಗ್ಸ್‍ನ 75ನೇ ವಾರ್ಷಿಕೋತ್ಸವ ಆಚರಿಸಲು ಫ್ರಾನ್ಸ್ ಗೆ ಬಂದಿದ್ದರು. ಈ ವೇಳೆ ರಾಬಿನ್ಸ್, ಜೇನಿನ್‍ರನ್ನು ಭೇಟಿ ಆಗಿದ್ದಾರೆ. ಪ್ರೀತಿ ಶುರುವಾಗಿದ್ದು ಹೇಗೆ? 1944 ಅಂದರೆ ಎರಡನೇ ವಿಶ್ವ ಯುದ್ಧ ನಡೆಯುತ್ತಿದ್ದಾಗ ಇವರಿಬ್ಬರ ಪ್ರೀತಿ…