ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರತಿದಿನ ಬೆಳಿಗ್ಗೆದ್ದಾಗ ಅದು ದೇವರು ನಮಗೆ ನೀಡಿದ ಜೀವನದ ಇನ್ನೊಂದು ಅವಕಾಶವಂತೆ. ರಾತ್ರಿಯ ಅನೈಚ್ಛಿಕ ಚಟುವಟಿಕೆಗಳಿಂದ ನಮ್ಮ ಬಾಯಿಯಲ್ಲಿಯೂ ಕೆಲವಾರು ಬದಲಾವಣೆಗಳು ಕಂಡುಬರುತ್ತದೆ. ವಿಶೇಷವಾಗಿ ಆಹಾರ ಕೊಳೆತು ಬಾಯಿಯಿಂದ ಹೊರಡುವ ದುರ್ವಾಸನೆ. ಆದ್ದರಿಂದ ಬೆಳಿಗ್ಗೆದ್ದ ತಕ್ಷಣ ಹಲ್ಲುಜ್ಜಿಕೊಳ್ಳುವುದನ್ನು ಪ್ರಥಮ ಕಾರ್ಯವಾಗಿಸುವುದು ಅಗತ್ಯ. ಒಂದು ವೇಳೆ ಈ ನಿತ್ಯಕರ್ಮದಲ್ಲಿ ನಮ್ಮ ಹಲ್ಲುಜ್ಜುವ ಬ್ರಶ್ ನಲ್ಲಿ ರಕ್ತ ಕಂಡುಬಂದರೆ? ರಕ್ತ ನೋಡಿದಾಕ್ಷಣ ನಮಗೆ ತಲೆ ತಿರುಗಬಹುದು. ವಾಸ್ತವದಲ್ಲಿ ನಮ್ಮಲ್ಲಿ ಹೆಚ್ಚಿನವರು ತಮ್ಮ ಬಾಯಿ, ಹಲ್ಲು, ಒಸಡುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವುದಿಲ್ಲ.

ಹಲ್ಲು ಮತ್ತು ಒಸಡುಗಳ ನಡುವೆ ಇರುವ ಅತಿ ಸೂಕ್ಷ್ಮ ಅಂಚುಗಳಲ್ಲಿ ಆಹಾರಕಣಗಳು ಉಳಿದುಕೊಳ್ಳುತ್ತವೆ. ಇದಕ್ಕೆ ಹಲ್ಲಿನ ಪಿಟ್ಟು ಎಂದು ಕರೆಯುತ್ತಾರೆ. ಈ ಪಿಟ್ಟು ನಮ್ಮ ಒಸಡುಗಳಲ್ಲಿ ಸದಾ ಅಂಟಿಕೊಳ್ಳುತ್ತಲೇ ಇರುತ್ತದೆ. ಇದನ್ನು ನಿವಾರಿಸಲು ಆಗಾಗ ಮುಕ್ಕಳಿಸಿಕೊಳ್ಳುವುದು ಹಾಗೂ ದಿನಕ್ಕೆರಡು ಬಾರಿ ಹಲ್ಲುಜ್ಜಿಕೊಳ್ಳಬೇಕು.

ಅಂದ ಹಾಗೆ ದಿನಕ್ಕೆರಡು ಬಾರಿಗಿಂತ ಹೆಚ್ಚು ಬ್ರಶ್ ಮೂಲಕ ಹಲ್ಲುಜ್ಜಿದರೂ ಇದು ಒಸಡುಗಳನ್ನು ಸವೆಸಬಹುದು! ಈ ಪಿಟ್ಟನ್ನು ಆಗಾಗ ತೆಗೆಯದೇ ಇದ್ದರೆ ಇಲ್ಲಿ ಬ್ಯಾಕ್ಟೀರಿಯಾಗಳು ಆಹಾರವನ್ನು ಕೊಳೆಸಿ ಒಸಡುಗಳ ಅಂಚುಗನ್ನು ಹಲ್ಲಿನಿಂದ ಬೇರ್ಪಡಿಸಿ ಅಲ್ಲಿನ ಸೂಕ್ಷ್ಮ ರಕ್ತನಾಳಗಳು ತೆರೆದುಕೊಳ್ಳುವಂತೆ ಮಾಡುತ್ತವೆ. ಇದೇ ರಕ್ತ ಒಸರಲು ಕಾರಣ.
ಉಪ್ಪುನೀರಿನ ಮುಕ್ಕಳಿಕೆ:-
ಎಲ್ಲಕ್ಕೂ ಮೊದಲು ಮಾಡಬೇಕಾದ ಕಾರ್ಯವೆಂದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಉಪ್ಪು (ಕಲ್ಲುಪ್ಪು ಆದರೆ ಉತ್ತಮ) ಹಾಕಿ ಬಾಯಿಯನ್ನು ಮುಕ್ಕಳಿಸುವುದು.

ಇದರಿಂದ ತೆರೆದುಕೊಂಡಿದ್ದ ರಕ್ತನಾಳಗಳು ಮುಚ್ಚಲು ಹಾಗೂ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.
ಪುದಿನಾ ಎಣ್ಣೆ:-
ಈ ಎಣ್ಣೆ ಒಸಡುಗಳ ತೊಂದರೆಗಳಿಗೆ ಹೇಳಿ ಮಾಡಿಸಿದಂತಹ ಔಷಧಿಯಾಗಿದೆ. ಇದೇ ಕಾರಣಕ್ಕೆ ಹಲವಾರು ದಂತ ಪ್ರಸಾದನಗಳಲ್ಲಿ ಇದನ್ನು ಬಳಸಲಾಗುತ್ತದೆ.

ವಿಶೇಷವಾಗಿ ಈ ಎಣ್ಣೆ ಬ್ಯಾಕ್ಟೀರಿಯಾಗಳನ್ನು ಕೊಂದು ಊತವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಅಲ್ಲದೇ ಇದರ ಸುವಾಸನೆ ಬಾಯಿಯ ದುರ್ವಾಸನೆಯನ್ನು ದೂರವಾಗಿಸುತ್ತದೆ.
ಹಾಲಿನ ಉತ್ಪನ್ನಗಳನ್ನು ಸೇವಿಸಿ:-

ಹಲ್ಲು ಮತ್ತು ಮೂಳೆಗಳಿಗೆ ಕ್ಯಾಲ್ಸಿಯಂ ಹೆಚ್ಚು ಅಗತ್ಯವಿರುತ್ತದೆ. ಅಲ್ಲದೇ ಒಸಡು ಮತ್ತು ಹಲ್ಲುಗಳ ಅಂಚುಗಳು ಬಿಗಿಯಾಗಿ ಹಿಡಿದುಕೊಂಡಿರಲು ಸಹಾ ಕ್ಯಾಲ್ಸಿಯಂ ಅಗತ್ಯ. ಇದು ಸಡಿಲವಾದರೆ ಇಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹಗೊಳ್ಳುತ್ತವೆ.
ಲ್ಯಾವೆಂಡರ್ ಎಣ್ಣೆ:-
ಇದು ಉತ್ತಮ ಬ್ಯಾಕ್ಟೀರಿಯಾ ನಿರೋಧಕವಾಗಿದೆ. ಈ ಎಣ್ಣೆಯನ್ನು ಒಸಡುಗಳ ಮೇಲೆ ಮಸಾಜ್ ಮಾದುವ ಮೂಲಕ ರಕ್ತಪರಿಚಲನೆ ಹೆಚ್ಚುತ್ತದೆ ಹಾಗೂ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.

ಅಲ್ಲದೇ ತೆರೆದುಕೊಂಡಿದ್ದ ಒಸಡುಗಳ ಅಂಚುಗಳು ಮತ್ತೆ ಕೂಡಿಕೊಳ್ಳಲು ನೆರವಾಗುತ್ತದೆ
ಗೊಂಡೆಹೂವಿನ ದಳಗಳು:-
ಗೊಂಡೆಹೂವು ಗಳಲ್ಲಿಯೂ ಉತ್ತಮ ಔಷಧೀಯ ಗುಣಗಳಿವೆ. ಇದರ ಉರಿಯೂತ ನಿವಾರಕ ಹಾಗೂ ಪರಾವಲಂಬಿ ನಿವಾರಕ ಗುಣ ಹಲ್ಲುಗಳನ್ನು ಸೋಂಕಿನಿಂದ ರಕ್ಷಿಸುತ್ತದೆ ಹಾಗೂ ಪಿಟ್ಟ ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ.

ಅಲ್ಲದೇ ಇದರಲ್ಲಿ ದೇಹದ ಕಲ್ಮಶಗಳನ್ನು ನಿವಾರಿಸುವ ಹಾಗೂ ರಕ್ತವನ್ನು ಶುದ್ದೀಕರಿಸುವ ಗುಣವಿದೆ. ಒಸಡುಗಳನ್ನು ಬಲಪಡಿಸಿ ಹಲ್ಲುಗಳನ್ನು ಗಟ್ಟಿಯಾಗಿಸಲೂ ಈ ಹೂವು ನೆರವಾಗುತ್ತದೆ.
ಎಣ್ಣೆಯಿಂದ ಮುಕ್ಕಳಿಸುವ ಚಿಕಿತ್ಸೆ :-
ಇದು ಭಾರತದ ಅತ್ಯಂತ ಪುರಾತನಾ ಚಿಕಿತ್ಸಾ ವಿಧಾನವಾಗಿದ್ದು ಬಾಯಿಯ ಆರೋಗ್ಯವನ್ನು ಉಳಿಸಿಕೊಳ್ಳಲು ಬಳಸಲ್ಪಡುತ್ತಾ ಬಂದಿದೆ. ಇದರಲ್ಲಿ ಕೆಲವಾರು ಅವಶ್ಯಕ ತೈಲಗಳನ್ನು ಬಾಯಿಯೊಳಗೆ ಸುಮಾರು ಐದು ನಿಮಿಷಗಳ ಕಾಲ ಮುಕ್ಕಳಿಸಿಕೊಳ್ಳುತ್ತಾ ಇರುವ ಮೂಲಕ ಹಲ್ಲುಗಳ ನಡುವೆ ಸಿಲುಕಿರುವ ಕಣಗಳನ್ನು ನಿವಾರಿಸಲಾಗುತ್ತದೆ.

ಇದರಿಂದ ಹಲ್ಲುಗಳ ನಡುವೆ ಅಡಗಿದ್ದ ಬ್ಯಾಕ್ಟೀರಿಯಾಗಳೂ ದೂಡಲ್ಪಡುತ್ತವೆ ಹಾಗೂ ಹಲ್ಲುಗಳು ಗಟ್ಟಿಯಾಗುತ್ತವೆ. ಬಾಯಿಯ ದುರ್ವಾಸನೆ ಇಲ್ಲವಾಗಿ ಒಸಡುಗಳೂ ಆರೋಗ್ಯಕರವಾಗಿರುತ್ತವೆ.
ಕ್ಯಾರೆಟ್ ಮೊದಲಾದ ಆಹಾರ ಜಗಿಯಿರಿ:-
ಕ್ಯಾರೆಟ್, ಹಸಿ ಪೇರಲೆ, ಗಟ್ಟಿಯಗಿರುವ ಸೇಬು ಮೊದಲಾದವನ್ನು ಜಗಿಯುವಾಗ ಕರಕುರ ಸದ್ದು ಬರುತ್ತದೆ. ಈ ಬಗೆಯ ಆಹಾರಗಳನ್ನು ಹಸಿಯಾಗಿ ಜಗಿದು ನುಂಗುವ ಮೂಲಕ ಹಲ್ಲುಗಳ ನಡುವೆ ಇರುವ ಆಹಾರಕಣಗಳೂ ಸಡಿಲವಾಗಿ ನಿವಾರಣೆಯಾಗುತ್ತವೆ.

ಅಲ್ಲದೇ ಬಾಯಿಯ ದುರ್ವಾಸನೆಯೂ ಇಲ್ಲವಾಗುತ್ತದೆ. ಈ ಹಸಿ ತರಕಾರಿಗಳಲ್ಲಿ ವಿಟಮಿನ್ ಸಿ ಮತ್ತು ಡಿ ಉತ್ತಮ ಪ್ರಮಾಣದಲ್ಲಿವೆ. ಇವು ಜಿಂಜಿವೈಟಿಸ್ ಸಾಧ್ಯತೆಯನ್ನು ಕಡಿಮೆಯಾಗಿಸುತ್ತದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಥ್ಯಾಂಕ್ಯೂ ಟೀಮ್ ಇಂಡಿಯಾ.. ಗೆಲ್ತಾನೆ ಇರೋಣ.. ಬೀಗ್ತಾನೇ ಇರೋಣ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ ಕೋಲಾರ:- ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ, ಅತ್ತಿಗಿರಿಕೊಪ್ಪ ಗ್ರಾಮದ ನಾಗೇಂದ್ರ @ ಚಿನ್ನಿ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿಕೊಂಡು ಹೋಗಿ, ಅತ್ಯಾಚಾರ ಎಸಗಿರುವುದು ರುಜುವಾತಾದ ಹಿನ್ನಲೆ ಪೋಕ್ಸೊ ನ್ಯಾಯಾಲದಯದ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ರವರು ಆರೋಪಿಗೆ 20 ವರ್ಷ ಸಜೆ ತೀರ್ಪು ನೀಡಿದ್ದಾರೆ. ಸದರಿ ಆರೋಪಿಯ ವಿರುದ್ದ ಬೂದಿಕೋಟೆ ಪೊಲೀಸ್ ಠಾಣೆ ವೃತ್ತ ನಿರೀಕ್ಷಕರು ಕಲಂ 6 ಪೋಕ್ಸೋ ಕಾಯ್ದೆ ಹಾಗೂ…
ಭಗವಂತನ ಸಾನಿಧ್ಯದಲ್ಲಿ ಅಗರ್ಬತ್ತಿ ಹಚ್ಚುವುದು ಪೂಜೆ ಮತ್ತು ಪ್ರಾರ್ಥನೆಯ ಮಹತ್ವದ ಅಂಶ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಧ್ಯಾನದ ವೇಳೆ ಊದಿನಕಡ್ಡಿ ಹಚ್ಚುವ ಸಂಪ್ರದಾಯವಿದೆ. ಇದೊಂದು ಪುರಾತನ ಆಚರಣೆ. ಊದಿನಕಡ್ಡಿ ಮನೆ ತುಂಬ ಸುಗಂಧ ಪಸರಿಸುವುದು ಮಾತ್ರವಲ್ಲ, ಇದನ್ನು ಹಚ್ಚುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪುರಾತನ ಕಾಲದಲ್ಲಿ ಹಲವು ಔಷಧೀಯ ವಸ್ತುಗಳನ್ನು ಊದಿನಕಡ್ಡಿಯಲ್ಲಿ ಅಳವಡಿಸಲಾಗುತ್ತಿತ್ತು. ಲೋಬಾನ ಹಾಗೂ ಗುಗ್ಗಲ್ ಅತ್ಯಂತ ಜನಪ್ರಿಯವಾಗಿದ್ದವು. ಅದನ್ನು ಇಂದಿಗೂ ಬಳಸಲಾಗುತ್ತದೆ. ಲೋಬಾನವನ್ನು ಬಾಸ್ವೆಲ್ಲಿಯಾ ಎಂಬ ಮರದ ಅಂಟಿನಿಂದ ತಯಾರಿಸಲಾಗುತ್ತದೆ. ನಾವು ಅದರ ಸುಗಂಧವನ್ನು…
ಕುರುಕ್ಷೇತ್ರ’ ಸಿನಿಮಾದ ಆಡಿಯೋ ಬಿಡುಗಡೆ ಇದೇ ಭಾನುವಾರ (ಜುಲೈ 7) ನಡೆಯಲಿದೆ. ಈ ವಿಶೇಷವಾಗಿ ಸಿನಿಮಾದ ಹೊಸ ಪೋಸ್ಟರ್ ಹೊರ ಬಂದಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮದ ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಆದರೆ, ಇದೀಗ ದರ್ಶನ್ ಪೋಸ್ಟರ್ ಮೂಲಕವೇ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಸ್ವಾಗತ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ಒಂದು ವಿಶೇಷ ಇದೆ. ಇದು ದರ್ಶನ್ ಅವರ 50 ಸಿನಿಮಾ. ಆದರೆ, ಈ ಹಿಂದೆ ಬಂದ ಪೋಸ್ಟರ್…
ಸಾರು, ಸಾಂಬಾರಿಗೆ ಮಾತ್ರವಲ್ಲ, ಕೊತ್ತಂಬರಿ ಸೊಪ್ಪನ್ನು ಸೌಂದರ್ಯವರ್ಧಕವಾಗಿಯೂ ಬಳಸಬಹುದು. ಚರ್ಮದ ಕಾಂತಿಗೆ ಕೊತ್ತಂಬರಿ ಸೊಪ್ಪನ್ನು ಹೇಗೆ ಬಳಸಬೇಕು. ನೀವೇ ಓದಿ.
ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರಿಂದ ಉದ್ಯಮಿ ಸಿದ್ಧಾರ್ಥ್ ಅವರು ಮಾನಸಿಕವಾಗಿ ಕುಗ್ಗಿದ್ದರು ಎಂದು ಶೃಂಗೇರಿ ಶಾಸಕ ರಾಜೇಗೌಡ ಹೇಳಿದ್ದಾರೆ. ಶಾಸಕರು ಕಾಫಿ ಡೇ ಎಂಡಿ ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತ ಹಾಗೂ ಹಿತೈಷಿಯಾಗಿದ್ದಾರೆ. ಸಿದ್ಧಾರ್ಥ್ ಅವರು ನಾಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಕಾರ್ಯಾಚರಣೆ ವೀಕ್ಷಿಸಿದರು. ಈ ವೇಳೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಶಾಸಕರು, ಸಿದ್ಧಾರ್ಥ್ ಅವರು ಲಕ್ಷಾಂತರ ಜನರಿಗೆ ಆಸರೆ, ಬದುಕು ಕೊಟ್ಟಿದ್ದಾರೆ. ಅವರು ಯಾವುದಕ್ಕೂ ಹೆದರಿದವರೇ ಅಲ್ಲ ಎಂದು ಕಣ್ಣೀರು…