ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಯಾವ ವೈದ್ಯಕೀಯ ಪದ್ಧತಿ ಇಲ್ಲದಿದ್ದರೂ. ಎಲ್ಲಾ ಔಷಧಿ ಅಂಗಡಿಗಳು, ದವಾಖಾನೆಗಳು ಮುಚ್ಚಿ ಹೋದರೂ 24 ಗಂಟೆ, 365ದಿನವೂ ಔಷಧಿ ದೊರಕುವ ಏಕೈಕ ಕ್ಲಿನಿಕ್ ಎಂದರೆ ಅಡುಗೆ ಮನೆ.

ಅಡುಗೆ ಮನೆ: ಅಲ್ಲಿ ದೊರೆಯುವ ನೀರು, ಸಾಸಿವೆ, ಏಲಕ್ಕಿ, ಅರಿಶಿನ. ಜೀರಿಗೆ, ಮೆಂತ್ಯ, ಶುಂಠಿ, ಗಸಗಸೆ. ಕೊತ್ತಂಬರಿ ಬೀಜ, ಇಂಗು, ಬೆಳ್ಳುಳ್ಳಿ, ಬೆಲ್ಲ, ಉಪ್ಪು, ಕರಿ, ಬೇವು. ಅಂಜೂರ, ದ್ರಾಕ್ಷಿ, ಬಾದಾಮಿ, ಹಣ್ಣು, ತರಕಾರಿ, ಹೇಳುತ್ತಾ ಹೋದರೆ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ. ಅಡಿಗೆ ಮನೆಯಲ್ಲಿ ದೊರೆಯುವ ಪ್ರತಿಯೊಂದೂ ಪದಾರ್ಥ ತನ್ನದೇ ಆದ ಔಷಧೀಯಗುಣಗಳನ್ನು ಹೊಂದಿವೆ. ಕ್ಯಾನ್ಸರ್, ಜಾಂಡೀಸ್, ಅರ್ಥೋರೈಟೀಸ್ ನಂತಹ ಕಾಯಿಲೆಗಳಿಗೂ ಉತ್ತಮ ಔಷಧಿಗಳು ಅಡುಗೆ ಮನೆಯಲ್ಲಿವೆ.

ಭಾರತೀಯ ಆಹಾರ ಪದ್ಧತಿಯಲ್ಲಿ ಪ್ರತಿನಿತ್ಯ ಇವುಗಳನ್ನು ಬಳಸುತ್ತಾರೆ. ಪಾಶ್ಚಾತ್ಯರ ಪ್ರಭಾವ ಹಾಗೂ ಆಧುನಿಕತೆಯಿಂದ ಆಹಾರ ಪದ್ಧತಿಯಲ್ಲಿ ವ್ಯತ್ಯಯವಾಯಿತು.ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಿತು. ಅಡುಗೆ ಮನೆಯ ಸಾಮಾನುಗಳ ವಿಶಿಷ್ಟ ತಿಳಿದವರಿಗೆ ಅದರ ಮಹತ್ವದ ಅರಿವಿರುತ್ತದೆ. ಸಿಹಿ,ಹುಳಿ,ಉಪ್ಪು,ಖಾರ, ಒಗರು ಮತ್ತು ಕಹಿ ಎಂಬ ಆರು ರುಚಿಗಳೇ ಷಡ್ರಸಗಳು.
ಪ್ರತಿ ನಿತ್ಯ ನಮ್ಮ ಅಡುಗೆ ಮನೆಯಲ್ಲಿ ಬಳಸುವಬೆಲ್ಲ, ಹುಣಸೆ ಹಣ್ಣು, ಅಡಿಗೆ ಉಪ್ಪು, ಮೆಣಸಿನ ಕಾಯಿ ಮತ್ತು ಕಾಳುಮೆಣಸು, ಜೀರಿಗೆ ಮತ್ತು ಸಾಸಿವೆ ಹಾಗು ಮೆಂತ್ಯ ಈ ಆರೂ ಪದಾರ್ಥಗಳೂ ಔ?ಂಯ ಗುಣದೊಂದಿಗೆ ವಿಭಿನ್ನ ರುಚಿಯನ್ನು ಹೊಂದಿವೆ. ಆರೂ ಪದಾರ್ಥಗಳನ್ನು ಬಳಸಿ ತಯಾರಿಸುವ ಬೇಳೆ ಸಾರು ಷಡ್ರಸ ಪಾಕಕ್ಕೆ ಉತ್ತಮ ಉದಾಹರಣೆಯಾಗಿದೆ. ನಾಲಿಗೆಗೆ ರುಚಿ. ಶರೀರಕ್ಕೆ ಸೌಖ್ಯ.

ಸಾಸಿವೆ ತೀಕ್ಷ ದ್ರವ್ಯವಾಗಿದ್ದು ಖಾರ ಹೆಚ್ಚಿಸುವುದು. ಆಮ್ಲತೆಯನ್ನು ಹೆಚ್ಚಿಸುವುದು. ಹೈಡ್ರೋಕ್ಲೋರಿಕ್ ಆಸಿಡ್ ಇರುವುದರಿಂದ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ನೋವುನಿವಾರಕವಾಗಿಯೂ ಕೆಲಸಮಾಡುವುದು. ಹಿಡಿ ಸಾಸಿವೆ ಅರೆದು ಪೇಸ್ಟನ್ನು ಮಾಡಿಕೊಂಡು ಬಿಸಿಮಾಡಿ ನೋವು ಇರುವ ಭಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದು. ಭುಜದ ನೋವಿಗೆ ಅತ್ಯಂತ ಸೂಕ್ತ ಔಷಧ, ಸಾಸಿವೆ ಎಣ್ಣೆಯನ್ನೂ ಸಹ ಬಳಸಬಹುದು.

ಏಲಕ್ಕಿ ಪಾಯಸ ಮೊದಲಾದ ಸಿಹಿ ತಿನಿಸುಗಳಿಗೆ ಪರಿಮಳ ನೀಡುತ್ತದೆ. ಅಜೀರ್ಣವಾಗದಂತೆ ಮಾಡುತ್ತದೆ. ಅಜೀರ್ಣದಿಂದುಂಟಾಗುವ ಹೊಟ್ಟೆ ತೊಳಸನ್ನು ತಪ್ಪಿಸುತ್ತದೆ, ತಲೆಸುತ್ತನ್ನು ನಿವಾರಿಸುತ್ತದೆ. ಸಮಾರಂಭಗಳಲ್ಲಿ ಊಟಮಾಡಿದ ನಂತರ ಏಲಕ್ಕಿಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಆಹಾರ ಜೀರ್ಣವಾಗುವುದು.

ಆಮ್ಲತೆ ಕಡಿಮೆ ಮಾಡಿ, ಪಿತ್ತಹರ, ಪಿತ್ತದಿಂದ ಉಂಟಾದ ಕಾಯಿಲೆ ರೋಗವನ್ನು ಕಡಿಮೆ ಮಾಡುತ್ತದೆ. ಅಸಿಡಿಟಿಯನ್ನೂ ಕಡಿಮೆಮಾಡುತ್ತದೆ. ಅರ್ಧ ಚಮಚ ಜೀರಿಗೆ 1 ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಆರಿಸಿ ಪ್ರತಿನಿತ್ಯ ಕುಡಿಯುವುದರಿಂದ ರಕ್ತಶುದ್ಧಿಯಾಗುತ್ತದೆ. 15 ರಿಂದ 20 ದಿನದವರೆಗೆ ಸೇವಿಸುವುದರಿಂದ ಚರ್ಮರೋಗವು ಕಡಿಮೆ ಯಾಗುತ್ತದೆ. ಅರ್ಧ ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯವನ್ನು ತಯಾರಿಸಿ ಕುಡಿಯುವುದರಿಂದ ಆರೋಗ್ಯ ಸುಧಾರಿಸುತ್ತದೆ.

ಒಂದು ಚಮಚ ನೀರನ್ನು ಒಂದು ಲೋಟ ನೀರಿನಲ್ಲಿ ನೆನೆಸಿ ಬೆಳಗ್ಗೆ ಕುಡಿಯುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ. ಅರ್ಧ ಚಮಚ ಈ ಕೊತ್ತಂಬರಿ ಮಿಶ್ರಣವನ್ನು ಅರ್ಧಲೋಟ ಹಾಲಿಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಅಲ್ಸರ್ ಮತ್ತು ಅಸಿಡಿಟಿ ಕಡಿಮೆಯಾಗುತ್ತದೆ.

ಬಡವರ ಕಸ್ತೂರಿ, ಶೀತಹರ. ವಾಯುಹರ. 2-3 ಬೆಳ್ಳುಳ್ಳಿಯನ್ನು ಅರ್ಧಲೋಟ ಹಾಲಿನಲ್ಲಿ ಹಾಕಿ ಚೆನ್ನಾಗಿ ಬೇಯಿಸಿ ಕುಡಿಯುವುದರಿಂದ ರೋಗ ನಿರೋಧಕ ಗುಣ ಹೆಚ್ಚುತ್ತದೆ. ಶೀತ ಕಡಿಮೆಯಾಗುತ್ತದೆ.

ಅಡುಗೆ ಮನೆಯಲ್ಲಿ ಸದಾಕಾಲ ಲಭ್ಯವಿರುವ ಸರ್ವ ರೋಗಗಳಿಗೆ ಮದ್ದು ಎಂದು ಕರೆಸಿಕೊಳ್ಳುವ ಅರಿಶಿನ ಆರೋಗ್ಯದ ವಿಷಯವಲ್ಲದೇ ಸೌಂದರ್ಯದ ವಿಷಯಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದೆ. ಅರಿಶಿನ ಮತ್ತು ಹಳದಿ ಎಂದು ಕರೆಯಲ್ಪಡುವ ಈ ಮಸಾಲೆ ಪದಾರ್ಥವನ್ನು ಹಲವಾರು ಖಾದ್ಯಗಳಿಗೆ ಬಳಸುತ್ತಾರೆ. ಕೆಲವೊಂದು ಭಾರತೀಯ ಖಾದ್ಯಗಳ ರುಚಿಯನ್ನು ಹೆಚ್ಚಿಸುವುದರಲ್ಲಿ ಇದರ ಕೈವಾಡ ಇದೆ.
ಆದ್ದರಿಂದಲೇ ಶತ ಶತಮಾನಗಳಿಂದ ಭಾರತೀಯ ಹೆಂಗಸರು ಅರಿಶಿನವನ್ನು ಮುಖಕ್ಕೆ ಬಳಿದುಕೊಳ್ಳುತ್ತಿದ್ದರು. ಇದರಲ್ಲಿರುವ ಆಂಟಿಸೆಪ್ಟಿಕ್ ಗುಣಗಳಿಂದಾಗಿ ಇದನ್ನು ಆಂತರಿಕವಾಗಿ (ಅಡುಗೆಯಲ್ಲಿ) ಮತ್ತು ಬಾಹ್ಯವಾಗಿ (ತ್ವಚೆಗೆ) ನಾವು ಬಳಸುತ್ತಿದ್ದೇವೆ. ಸೂಕ್ಷ್ಮ ತ್ವಚೆ ಇರುವವರನ್ನು ಹೊರತುಪಡಿಸಿ ಯಾರು ಬೇಕಾದರು ಅರಿಶಿನ ಬಳಸಬಹುದು. ಅರಿಶಿನದಲ್ಲಿರುವ ಆಂಟಿ-ಸೆಪ್ಟಿಕ ಮತ್ತು ಆಂಟಿ-ಬ್ಯಾಕ್ಟೀರಿಯಾ ಗುಣಗಳು ಮೊಡವೆಗಳನ್ನು ನಾಶ ಮಾಡುತ್ತವೆ.
ಹಾಗಾಗಿಯೇ ಭಾರತೀಯ ಮಹಿಳೆಯರು ಇದನ್ನು ಮುಖಕ್ಕೆ ಕ್ರೀಮ ಮತ್ತು ಫೇಸ್ ಪ್ಯಾಕ್‌ನಂತೆ ಹಚ್ಚಿಕೊಳ್ಳುವುದು. ಅರಿಶಿನ ಹಾಲು ಬ್ಯಾಕ್ಟಿರಿಯಾ ಮತ್ತು ವೈರಸ್ ಸೊಂಕುಗಳು ಆಕ್ರಮಿಸುವುದನ್ನು ವಿರೊಧಿಸುತ್ತದೆ. ಇದು ಉಸಿರಾಟ ಸಂಬಂಧಿ ತೊಂದರೆಗಳನ್ನು ನಿವಾರಿಸುತ್ತದೆ. ನಿಮ್ಮ ದೇಹ ಉ?ಂUವಾಗಿದ್ದರೆ ಮತ್ತು ಉಸಿರಾಟ ಹಾಗೂ ಸೈನೆಸ್ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ.
ಅಲ್ಲದೇ ಅಸ್ತಮಾ ಹಾಗೂ ಗಂಟಲೂತದಿಂದ ಕೂಡ ನಿವಾರಣೆ ಹೊಂದಬಹುದು. ನೈಸರ್ಗಿಕವಾಗಿ ದೊರೆಯುವ ಅರಿಶಿನಕ್ಕೆ ನಮ್ಮಲ್ಲಿ ಬಹಳ ಬೇಡಿಕೆ. ಪೂಜೆ-ಪುನಸ್ಕಾರ, ಅಡುಗೆಯಲ್ಲಿ ಅರಿಶಿಣವನ್ನು ಬಳಸುತ್ತೇವೆ. ಮಾತ್ರವಲ್ಲ ಆರಿಶಿಣಕ್ಕೆ ನಮ್ಮಲ್ಲಿ ಒಂದು ಪವಿತ್ರ ಸ್ಥಾನ ಕಲ್ಪಿಸಿಕೊಟ್ಟಿದ್ದೇವೆ. ಮದುವೆಯಲ್ಲಿ ಅರಿಶಿಣ ಕೊಂಬನ್ನು ಕಟ್ಟುವ ಪದ್ಧತಿ ಹಲವು ಕಡೆ ಇದೆ. ಹಾಗಾಗಿ ಅರಿಶಿಣಕ್ಕೆ ಚಿನ್ನದ ಸ್ಥಾನಮಾನ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನವದೆಹಲಿ, ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ (ಎಸ್ ಬಿಐ) ಗೃಹ ಸಾಲ, ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಿದೆ. ಎಸ್‍ಬಿಐ ಎಲ್ಲ ಅವಧಿಯ ಸಾಲದ ಮೇಲಿನ ಮಾರ್ಜಿನಲ್ ಕಾಸ್ಟ್ ಆಫ್ ಲ್ಯಾಂಡಿಂಗ್ ರೇಟ್ 10 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದು, ಹೊಸ ಬಡ್ಡಿ ದರಗಳು ಸೆ.10ರಿಂದ ಅನ್ವಯವಾಗಲಿದೆ. ಜೊತೆಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ಇಳಿಕೆಯಾಗಲಿದೆ. ಎಲ್ಲ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಮೊತ್ತದ ಮೇಲೆ 20-25 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿದೆ. ಬಲ್ಕ್ ಡೆಪಾಸಿಟ್ ಮೇಲಿನ ದರವನ್ನು 10-20…
ದೇಶದಲ್ಲಿ ಆರೋಗ್ಯಕರ ರಾಜ್ಯಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಕೇರಳ ಮೊದಲ ಸ್ಥಾನ ಪಡೆದುಕೊಂಡರೆ ಕರ್ನಾಟಕ 8 ನೇ ಸ್ಥಾನದಲ್ಲಿದೆ.ಮಂಗಳವಾರ ನೀತಿ ಆಯೋಗವು ದೇಶದ ಆರೋಗ್ಯಕರ ರಾಜ್ಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳ ಟಾಪರ್ ಆದರೆ ಕರ್ನಾಟಕ 8ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೊನೆಯ ಸ್ಥಾನ ಸಿಕ್ಕಿದೆ. 23 ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಆಧಾರದ ಮೇಲೆ ತಯಾರು ಮಾಡಿದ್ದ ‘ಆರೋಗ್ಯಕರ ರಾಜ್ಯಗಳು ಮತ್ತು ಪ್ರಗತಿಶೀಲ ಭಾರತ’ “Healthy States, Progressive India”…
ಕೆಲ ರೈತರು ಹೊಂದಲ್ಲ ಒಂದು ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಈ ಹೊಸ ಪ್ರಯೋಗಗಳನ್ನು ಮಾಡಿ ತಮ್ಮ ಕೃಷಿಯಲ್ಲಿ ಲಾಭವನ್ನು ಗಳಿಸುತ್ತಾರೆ. ರಾಯಚೂರು ಜಿಲ್ಲೆ ಒಂದೆಡೆ ಪ್ರವಾಹಕ್ಕೆ ಸಿಲುಕಿ ಬರಗಾಲದಿಂದ ತತ್ತರಿಸಿ ಹೋಗಿದೆ. ಇಂತಹ ಸಮಯದಲ್ಲೂ ಕೂಡ ಜಿಲ್ಲೆಯ ದೇವದುರ್ಗ ತಾಲೂಕಿನ ರೈತರು ಅಡುಗೆ ಎಣ್ಣೆಯನ್ನು ಬಳಸಿ ಉತ್ತಮ ಕೃಷಿ ಮಾಡಿ ರೈತರ ಪಾಲಿಗೆ ಸ್ಫೂರ್ತಿಯಾಗಿದ್ದಾರೆ. ನಾರಾಯಣಪುರ ಬಲದಂಡೆ ಎಂಬುವ ಕಾಲುವೆಯ ನೀರನ್ನು ನಂಬಿಕೊಂಡು ಕೃಷಿ ಮಾಡುತ್ತಿರುವ ಅನೇಕ ರೈತರ ಮುಖ್ಯ ಬೆಳೆಗಳೆಂದರೆ ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ. ಆದರೆ…
ವೆಂಕಟ ಎಂದರೆ ಸಂಕಟ ಒಂದಿಷ್ಟಿಲ್ಲಾ ಎನ್ನುವ ಹಾಗೆ.. ಹರಿ ನಾಮ ಸ್ಮರಣೆಯಿಂದ ಅನೇಕ ರೋಗಗಳು ವಾಸಿಯಾಗುತ್ತವೆ ಎಂದು ಹಿರಿಯರು ಹೇಳುತ್ತಾರೆ.. ಈಗ ವೈಜ್ಞಾನಿಕವಾಗಿಯೂ ಸಾಭೀತಾಗಿದೆ ನೋಡಿ..ಈ ಒಂದು ಮಂತ್ರದಿಂದ ಹಾರ್ಟ್ ಅಟ್ಯಾಕ್ ಅನ್ನು ಕೂಡ ತಡೆಯಬಹುದು ಇಲ್ಲಿದೆ ನೋಡಿ ಪುರಾವೆ.. ವಿಠ್ಠಲನ ನಾಮ ಸ್ಮರಣೆಯಿಂದ ಹೃದಯಾಘಾತವಾಗಲ್ಲ, ಹೌದು ಇಂತಹದೊಂದು ಸಂಗತಿಯನ್ನು ಪುಣೆ ಮೂಲದ ತಜ್ಞರ ತಂಡವೊಂದು ಹಲವಾರು ಜನರನ್ನು ಪರೀಕ್ಷೆಗೆ ಒಳಪಡಿಸಿ ಹೇಳಿದೆ. ವಿಠ್ಠಲ ವಿಠ್ಠಲ ಎಂದು ನಾಮಸ್ಮರಣೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಹೃದಯ ಸಮಸ್ಯೆಗಳೇ…
ಪ್ರತಿವರ್ಷ ಚೈತ್ರ ಮಾಸದ ಶುಧ್ಧ ನವಮಿಯಂದು ಶ್ರೀರಾಮ ನವಮಿ ಮಾಡುತ್ತೇವೆ. ಆದರೆ ಶ್ರೀರಾಮನವಮಿ ಎಂಬುದು ಯಾಕೆ ಬಂದಿದೆ ಎಂದರೆ, ಇದೇ ನವಮಿಯಂದು ಶ್ರೀ ರಾಮಚಂದ್ರ ಹುಟ್ಟಿದ್ದು, ಇದೇ ನವಮಿಯಂದು ಸೀತಾ ಮಾತೆಯನ್ನು ಮದುವೆ ಮಾಡಿಕೊಂಡು ಸೀತರಾಮನಾದ. ಹಾಗೆಯೇ 14 ವರ್ಷಗಳ ವನವಾಸದ ನಂತರ ಸೀತಾದೇವಿಯನ್ನು ರಾವಣನನಿಂದ ಬಿಡಿಸಿ ಅದೇ ದಿನ ಅಯೋಧ್ಯೆ ಮಹಾರಾಜನಾಗಿ ಶ್ರೀರಾಮನು ಪಟ್ಟಾಭಿಷೇಕ ಆದ ದಿನ. ಹಾಗಾಗಿ ಅದೇ ನವಮಿಯ ದಿನ ರಾಮನ ಜನ್ಮದಿನದ ಜೊತೆಗೆ ಸೀತಾರಾಮ ಕಲ್ಯಾಣ ಮಹೋತ್ಸವ ನೋಡಿದರೆ ಜನ್ಮಜನ್ಮದ ಪುಣ್ಯ…
ಇತ್ತೀಚೆಗಷ್ಟೇ 1.5 ಕೋಟಿ ರೂಪಾಯಿ ಮೊತ್ತದ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗೆ ಪಾತ್ರರಾದ ವನ್ಯಜೀವಿ ತಜ್ಞೆ ಕೃತಿ ಕಾರಂತ್ ಅವರು, ಪ್ರಶಸ್ತಿಗಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಅರಣ್ಯ ಇಲಾಖೆ ಆರೋಪಿಸಿದೆ. ಖ್ಯಾತ ವನ್ಯಜೀವಿ ತಜ್ಞ ಉಲ್ಲಾಸ್ ಕಾರಂತ್ ಅವರ ಮಗಳು ಮತ್ತು ಖ್ಯಾತ ಸಾಹಿತಿ ದಿ. ಶಿವರಾಮ ಕಾರಂತ್ ಅವರ ಮೊಮ್ಮಗಳಾದ ಕೃತಿ ಕಾರಂತ್, ಆಧಾರ ರಹಿತ ಮತ್ತು ನಕಲಿ ದಾಖಲೆಗಳನ್ನು ನೀಡಿ ಈ ಪ್ರಶಸ್ತಿ ಪಡೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಗಂಭೀರ ಆರೋಪ ಮಾಡಿದೆ. ಈ…