ಗ್ಯಾಜೆಟ್

ನಿಮ್ಗೆ ವಾಟ್ಸ್ಯಾಪ್ ಇಲ್ಲದೆ ನಿದ್ದೆ ಬರೋದಿಲ್ಲ ಅಂತ ಗೊತ್ತು..!ಆದ್ರೆ ಇದ್ರಿಂದ ನಿಮ್ಗೆ ಏನೆಲ್ಲಾ ಬಾರಿ ನಷ್ಟ ಆಗುತ್ತಿದೆ ಗೊತ್ತಾ..?

506

ಇಲ್ಲ, ನಾನು ವಾಟ್ಸ್ಯಾಪ್ ಯೂಸ್‌ಮಾಡ್ತಿಲ್ಲ… ಹಾಗಂತ  ಯಾರಾದರು ಹೇಳಿದರೆ , ಇವನ್ಯಾರೋ ಗುಗ್ಗು  ಅಂತ ನೋಡೋ ಕಾಲ ಇದು.ಯಾಕಂದ್ರೆ, ಹಳ್ಳಿ ಯಿಂದ ದಿಲ್ಲಿಯವರಿಗೆ, ಹೈದನಿಂದ ವೃದ್ಧರವರೆಗೆ ಎಲ್ಲರೂ ವಾಟ್ಸ್ಯಾಪ್ ಬಳಸುವವರೇ. ಆದರೆ, ಜನರನ್ನು ಬೆಸೆಯುವ ವಾಟ್ಸ್ಯಾಪ್‌ಈಗ ಹಳಿ ತಪ್ಪಿದ ರೈಲಿನಂತಾಗಿರುವುದು ಸುಳ್ಳಲ್ಲ. ವಾಟ್ಸ್ಯಾಪ್‌ಅನ್ನೋದು ಗೀಳು ರೋಗವಾಗಿ ಬದುಕನ್ನು ಆವರಿಸುತ್ತಿರೋದು ಹೆಚ್ಚಿನವರ ಗಮನಕ್ಕೆ ಬಂದಿಲ್ಲ.

ಒಂದೆರಡು ಗಂಟೆ ಇಂಟರ್ನೆಟ್‌ಆಫ್ ಮಾಡಿ ಸುಮ್ಮನೆ ಕುಳಿತುಕೊಳ್ಳಿ. ವಾಟ್ಸ್ಯಾಪ್ ಕಡೆಗೆ ನಿಮ್ಮ ಗಮನ ಎಳೆಯದಿದ್ದರೆ, ನೀವು ಈ ಗೀಳಿನಿಂದ ಸೇಫ್ ಅಂತ ಅರ್ಥ. ಹಾಗಾದ್ರೆ, ಅತಿಯಾದ ವಾಟ್ಸ್ಯಾಪ್‌ಬಳಕೆಯಿಂದ ನಿಮಗೆ ಏನೇನು ನಷ್ಟ ಆಗ್ತಿದೆ ಗೊತ್ತಾ? ನಿಮ್ಮನ್ನು ವೇಸ್ಟ್‌ಆಗಿಸ್ತಿದೆ ವಾಟ್ಸ್ ಆಪ್!

1. ಸಮಯ ಹಾಳು:-

ನೋಡೋಣ, ಯಾರಾದ್ರೂ ಆನ್‌ಲೈನ್‌ಇದ್ದಾರ ಅಂತ ಚೆಕ್ ಮಾಡುವುದರಲ್ಲೆ  30 ನಿಮಿಷ ವ್ಯರ್ಥವಾಗುತ್ತದೆ. ದಿನಕ್ಕೆ ಅರ್ಧ ಗಂಟೆ ಅಂತಾದ್ರೆ  ತಿಂಗಳಿಗೆ ಎಷ್ಟಾಗುತ್ತೆ ಲೆಕ್ಕ ಹಾಕಿ? ಪ್ರತಿ ಸಲ ಆನ್ ಲೈನ್‌ಗೆ ಬಂದಾಗ , ಯಾರಾದ್ರೂ ಚಾಟ್‌ಗೆ ಸಿಗ್ತಾರಾ ಅಂತ ಹುಡುಕೋದು ಕೂಡ ಕೆಲವರಿಗೆ ಚಟವಾಗಿಬಿಟ್ಟಿದೆ. ಹೀಗೆ ಮಾಡೂ ದಿಂದ  ಆಗೂ ಪ್ರಯೋಜನವಾದ್ರೂ ಏನು? ಅಂತಿಮವಾಗಿ ನಿಮಗೆ ಸಿಕ್ಕಿದ್ದಾದರೂ ಏನು? ಸೊನ್ನೆ! 00000000000000000000000000000000000000000

2. ಡಿಪಿ: ಪೋಟೂ ಅಷ್ಟೇ ಅಲ್ಲ!

ವಾಟ್ಸ್ವಾಪ್‌ ಡಿಪಿ ಅಥವಾ ಡಿಸ್‌ಪ್ಲೇ ಪಿಕ್ಚರ್‌ಈಗ ಕೇವಲ ಪೋಟೂ ಮಾತ್ರ ಆಗಿ ಉಳಿದಿಲ್ಲ. ನಿಮ್ಮ ಬದುಕನ್ನು ಎಲ್ಲರೆದುರು ಬಿಂಬಿಸುವ ಸಾಧನವಾಗಿ ಬದಲಾಗಿದೆ. ಎಲ್ಲರೂ ಮೆಚ್ಚುವಂಥ ಫೋಟೊವನ್ನು ಸೆಲೆಕ್ಟ್ ಮಾಡುವುದೇ ದೊಡ್ಡ ಸವಾಲು. ಈಗಂತೂ ನಿಮ್ಮ ಡಿಪಿಯನ್ನು ಯಾರ್ಯಾರು ನೋಡಿದ್ದಾರೆ, ನೋಡಿಲ್ಲ ಅಂತಲೂ ಗೊತ್ತಾಗುತ್ತೆ. ಅಯ್ಯೋ ಅವನು/ ಅವಳು ನನ್ನ ಡಿಪಿ ಚೆಕ್‌ಮಾಡಿಲ್ಲ. ಇನ್ನೂ ಚೆಂದದ ಪೋಟೂ ಹಾಕ್ತೀನಿ ಅಂತ ಅರ್ಧ ಗಂಟೆಗೊಮ್ಮೆ ಡಿಪಿ ಬದಲಿಸುತ್ತಾರೆ. ಜಗ ಮೆಚ್ಚುವ ಡಿಪಿಗಾಗಿ  ಹಂಬಲಿಸುತ್ತಾ, ಅದಕ್ಕಾಗಿಯೇ ಫೋಟೊ ಕ್ಲಿಕ್ಕಿಸಿಕೊಳ್ಳುವವರೂ ಇದ್ದಾರೆ. ಇದರಿಂದ ನಿಮ್ಮೊಳಗೆ ಆತ್ಮರತಿ ಬೆಳೆಯುತ್ತಿದೆ. ಹೊರಜಗತ್ತಿಗೆ ನಿಮ್ಮ ಮೇಲಿನ ಗಂಭೀರತೆ ಹೊರಟುಹೋಗುತ್ತಿದೆ.

3. ಪೋನೆ ಇಲ್ಲ, ಮೆಸೇಜೆ ಎಲ್ಲಾ…

ವಾಟ್ಸ್ಯಾಪ್‌ಬರುವುದಕ್ಕಿಂತಲೂವು  ಮುಂಚೆ, ಪ್ರೀತಿ ಪಾತ್ರರಿಗೆ  ಆಗೂಮ್ಮೆ , ಈಗೊಮ್ಮೆಯಾದರೂ ಫೋನ್ ಮಾಡುತ್ತಿದ್ದೆವು. ಆದರೆ, ಈಗ ವಾಟ್ಸ್ಯಾಪ್‌ನಲ್ಲಿ ಮೆಸೇಜ್‌ಕಳಿಸಿದರೆ ಮುಗಿಯಿತು. ಇನ್ನೂ ದುರಂತವೆಂದರೆ, ಮದುವೆ ಕರೆಯೋಲೆಗಳೂ ವಾಟ್ಸ್ಯಾಪ್‌ನಲ್ಲೇ ತಲುಪುತ್ತಿವೆ,  ಸಂಭಂದಗಳು ಗಟ್ಟಿಯಾಗಿಸಬೇಕಿದ್ದ ವಾಟ್ಸ್ಯಾಪ್‌ನಿಂದಲೇ ಮನುಷ್ಯ- ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ವ್ಯಕ್ತಿ ತನಗೆ ಗೊತ್ತಿಲ್ಲದಂತೆ, ಆತ್ಮೀಯನೊಂದಿಗೆ ದೂರವಾಗುತ್ತಿದ್ದಾನೆ.

4. ಟಿಕ್‌ಟಿಕ್‌ಬ್ಲೂ ಟಿಕ್….

ನಾನು ಮೆಸೇಜ್‌ಕಳಿಸಿ ಆಗಲೇ ಅರ್ಧ ಗಂಟೆಯಾಯ್ತು. ಇನ್ನೂ ಸಿಂಗಲ್‌ಟಿಕ್‌ಇದೆ, ಬ್ಲೂ ಟಿಕ್ ಬಂದಿದೆ, ಆದ್ರೂ ರಿಪ್ಲೆ ಮಾಡಿಲ್ಲ, ಆನ್‌ಲೈನ್‌ಇದ್ದಾನೆ, ಆದ್ರೂ ನನ್ನ ಮೆಸೇಜ್‌ನೋಡದೆ ನಿರ್ಲಕ್ಷಿಸುತ್ತಿದ್ದಾನೆ, ಸಿಂಗಲ್‌ಟಿಕ್‌ಅಷ್ಟೇ ಇದೆ ಅವಳೇನಾದ್ರೂ ನನ್ನನ್ನ ಬ್ಲಾಕ್ ಮಾಡಿದ್ಲಾ..? ಮೆಸೇಜ್‌ಮಾಡಿದಾಗ ಮೂಡುವ ಟಿಕ್‌ಗಳು ಇಂಥವೆಲ್ಲಾ ಟೆನನ್‌ಗಳನ್ನು ಸೃಷ್ಟಿಸುತ್ತಿವೆ. ನಿಮ್ಮನ್ನು ಅನುಮಾನದ ಗೂಡಾಗಿಸುತ್ತಿದೆ.

5. ನಿಮ್ಮ ಫೋನು, ಕಸದ ಬುಟ್ಟಿ..!

ಪ್ರೈಮರಿ ದೂಸ್ತಾಗಳು , ಕ್ರೇಝಿ ಕ್ಲಾಸ್‌ಮೇಟ್ಸ್, ಓಲ್ಡ್‌ಫ್ರೆಂಡ್ಸ್ ಅಸೋಸಿಯೇ?ನ್… ಎಂಬ ಇತ್ಯಾದಿ ವಾಟ್ಸ್ಯಾಪ್‌ಗ್ರೂಪಿಗೆ ನೀವು ಸದಸ್ಯರಾಗಿರುತ್ತೀರಿ. ಅಲ್ಲಿ ಬೆಳಗ್ಗೆ, ರಾತ್ರಿ ಬರುವ ಗುಡ್‌ಮಾರ್ನಿಂಗ್, ಗುಡ್ನೈಟ್‌ಮೆಸೇಜ್‌ಗಳು, ಮೀಮ್ಸ್, ಹಳಸಲು ಜೋಕ್‌ಗಳಿಂದಲೇ ಪೋನ್‌ ಮೆಮೋರಿ ತುಂಬಿ ಮೋಬೈಲ್ ದಿನಕ್ಕೊಮ್ಮೆ ಹ್ಯಾಂಗ್‌ಆಗುತ್ತದೆ. ಎಷ್ಟೇ ಬೇಡ ಬೇಡ ಅಂದರೂ, ಇಂಥ ಗ್ರೂಪ್‌ಗ್ಳಿಂದ ದೂರ ಉಳಿಯುವುದು ಕಷ್ಟದ ವಿಷಯ. ವಾಟ್ಸ್ಯಾಪ್‌ಕಾರಣದಿಂದಲೇ ನಿಮ್ಮ ಪೋನು ಕಸದ ಬುಟ್ಟಿ ಆಗಿರುತ್ತೆ.

ನಿಮ್ಮ ಫೋನ್ ಚಾರ್ಜ್ ಮಾಡಬೇಕಾದ್ರೆ, ಈ 5 ತಪ್ಪುಗಳನ್ನು ಮಾಡಲೇಬೇಡಿ..!

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • govt, Sports

    ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದರೇನು?

    ಕ್ರೀಡಾ ಮತ್ತು ಕ್ರೀಡಾಕೂಟದಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಅಧಿಕೃತವಾಗಿ ಕರೆಯಲ್ಪಡುವ ರಾಜೀವ್ ಗಾಂಧಿ ಖೇಲ್ ರತ್ನ, ಇದು ಭಾರತದ ಗಣರಾಜ್ಯದ ಅತ್ಯುನ್ನತ ಕ್ರೀಡಾ ಗೌರವವಾಗಿದೆ. 1984 ರಿಂದ 1989 ರವರೆಗೆ ಕಚೇರಿಯಲ್ಲಿ ಸೇವೆ ಸಲ್ಲಿಸಿದ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ಈ ಪ್ರಶಸ್ತಿಗೆ ಇಡಲಾಗಿದೆ.  ಇದನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ವಾರ್ಷಿಕವಾಗಿ ನೀಡಲಾಗುತ್ತದೆ. ಸ್ವೀಕರಿಸುವವರನ್ನು (ಗಳು) ಸಚಿವಾಲಯವು ರಚಿಸಿದ ಸಮಿತಿಯಿಂದ ಆಯ್ಕೆಮಾಡಲಾಗುತ್ತದೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ…ಇಂದು ನಿಮಗೆ ಗುರು ಒಲಿಯುತ್ತಾನೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ..

    ಗುರುವಾರ, 05/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ… ಮೇಷ:– ಬಹುದಿನದ ನೀರಿಕ್ಷಿತ ಕನಸು ಕೈಗೂಡುವುದು. ಎಲ್ಲರಂತೆ ನೀವು ಕೂಡಾ ಸಮಾಜ ಮುಖಿಯಾಗಿ ಉ  ನ್ನತ ಅಧಿಕಾರವನ್ನು ಹೊಂದುವಿರಿ. ಇದರೊಂದಿಗೆ ಸಕಾರಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಂಡಲ್ಲಿ ಒಳಿತಾಗುವುದು. ವೃಷಭ:- ಇವತ್ತಿನ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಈ ಬಗ್ಗೆ ಈ ಅನುಭೂತಿ ನಿಮ್ಮ ಮನದಲ್ಲಿರಲಿ. ಹೊರಗಡೆ ಸಂತೋಷವನ್ನು ವ್ಯಕ್ತಪಡಿಸಿದಲ್ಲಿ ಹಣಕಾಸಿನ ವಿಷಯದಲ್ಲಿ ನೀವು ಪರರಿಗೆ ಸಹಾಯ ಮಾಡಬೇಕಾಗುವುದು. ಶತ್ರುವನ್ನು ಕೂಡಾ…

  • ಸುದ್ದಿ

    ಶಾಸಕರ ಮುಂದೆಯೆ ವಿದ್ಯಾರ್ಥಿನಿಯರಿಂದ ಬಿಇಓಗೆ ಸಕತ್ ಕ್ಲಾಸ್…! ಯಾಕೆ ಗೊತ್ತಾ?

    ನಿಮ್ಮನ್ನು ನಂಬಿ ಎಷ್ಟು ದಿನ ನಾವೂ ಹೀಗೆ ಶಾಲೆಗೆ ಬರಬೇಕು. ಅದೇಗೆ ಕಲಿತು ತಂದೆ ತಾಯಿಗೆ ಒಳ್ಳೆಯ ಹೆಸರು ತರೊಕಾಗುತ್ತದೆ? ಎಂದು ಶಾಸಕನ ಮುಂದೆ ವಿದ್ಯಾರ್ಥಿನಿ ಪೋನ್ ಮಾಡಿ ಬಿಇಓ ವೆಂಕಟೇಶ ಗುಡಿಯಾಳಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಬಗ್ಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಮೊದಲು ವಿದ್ಯಾರ್ಥಿಗಳು ಶಾಸಕರಿಗೆ ನಮ್ಮ ಶಾಲೆಗೆ ಭೇಟಿ ಕೊಡಿ ಎಂದಿದ್ದರು. ವಿದ್ಯಾರ್ಥಿಗಳ ಕರೆಗೆ ಶಾಲೆಗೆ ಭೇಟಿ ನೀಡಿದ ಮಾನವಿ ಶಾಸಕ ರಾಜಾ…

  • ಕ್ರೀಡೆ

    ಪಾಕ್ ಕ್ರಿಕೆಟ್ ತಂಡವನ್ನು ಕಂಡರೆ, ಭಾರತ ಕ್ರಿಕೆಟ್ ತಂಡಕ್ಕೆ ಹೆದರಿಕೆಯಂತೆ!ಹೀಗೆ ಹೇಳಿದವರು ಯಾರು ಗೊತ್ತಾ?

    ಭಾರತ ಮತ್ತು ಪಾಕಿಸ್ತಾನ ನಡುವೆ ಇಂಗ್ಲೆಂಡ್’ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ ನಡೆದಿದ್ದು, ಭಾರತ ಪಾಕಿಸ್ತಾನ ವಿರುದ್ದ ಸೋಲನುಭವಿಸಬೇಕಾಯಿತು.

  • ಸುದ್ದಿ

    ಆನ್‍ಲೈನ್ ಫುಡ್ ಪ್ರಿಯರೆ ದಯವಿಟ್ಟು ಇದನ್ನೊಮ್ಮೆ ಓದಿ, ಇದನ್ನು ನೀವು ತಪ್ಪದೇ ತಿಳಿದುಕೊಳ್ಳಬೇಕು,.!

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ. ಇಂದಿನ ಬ್ಯುಸಿ ಶೆಡ್ಯೂಲ್ ನಲ್ಲಿ ಜನರಿಗೆ ಅಡುಗೆ ಮಾಡಿಕೊಂಡು ಊಟ ಮಾಡಲು ಸಹ ಸಮಯ ಇಲ್ಲ. ಸಿಲಿಕಾನ್ ಸಿಟಿಯಂತಹ ಮಹಾನಗರಗಳಲ್ಲಿ ಬಹುತೇಕರು ಆನ್‍ಲೈನ್ ಫುಡ್ ತರಿಸೋ ಮೂಲಕ ಸಮಯ ಉಳಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಒಮ್ಮೆ ನೀವು ಆರ್ಡರ್ ಮಾಡುವ ಆಹಾರ ತಯಾರಾಗುವ ಸ್ಥಳ ನೋಡಿದ್ರೆ ಬೇಡಪ್ಪ ಬೇಡ ಅನ್‍ಲೈನ್ ಅನ್ನೋದು ಗ್ಯಾರೆಂಟಿ. ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನ ಕರಾವಳಿ…

  • ಸುದ್ದಿ

    ಹೊಸ ಸಂಚಾರಿ ನಿಯಮದಡಿ ಎತ್ತಿನ ಗಾಡಿಗೂ ದಂಡ….!

    ಬೈಕಿನಲ್ಲಿ ಹೆಲ್ಮೆಟ್ ಹಾಕದೆ ಹೋಗುತ್ತಿದ್ದರೆ ಟ್ರಾಫಿಕ್ ಪೊಲೀಸರು ದಂಡ ಹಾಕಿದರೆ ಸರಿ, ಕಾರಿನಲ್ಲಿ ಸೀಟ್ ಬೆಲ್ಟ್ ಹಾಕದಿದ್ದರೆ ದಂಡ ಬೀಳುತ್ತೆ…..ಅದು ಸಹ ಸರಿ. ಆದರೆ ತನ್ನದೇ ಹೊಲದಲ್ಲಿ ನಿಲ್ಲಿಸಿದ್ದ ಎತ್ತಿನ ಬಂಡಿಗೆ ದಂಡ ಹಾಕುವುದೆಂದರೆ…? ಅದೂ ಒಂದು ಸಾವಿರ ರೂಪಾಯಿ…! ಇಂಥದ್ದೊಂದು ಘಟನೆ ಉತ್ತರ ಪ್ರದೇಶದ ಡೆಡ್ರಾಡೂನ್ ವ್ಯಾಪ್ತಿಯ ಶಹಾಪುರ ಹೊರವಲಯದಲ್ಲಿರುವ ಚಾರ್ಬಾ ಗ್ರಾಮದ ಹಸನ್ ಎಂಬಾತನಿಗೆ ಒಂದು ಸಾವಿರ ರೂಪಾಯಿ ದಂಡ ಹಾಕಲಾಗಿದೆ. ಸಬ್ ಇನ್ಸ್ ಪೆಕ್ಟರ್ ಪಂಕಜ್ ಕುಮಾರ್ ಮತ್ತವರ ತಂಡ ನೂತನ ಸಾರಿಗೆ…