ಸುದ್ದಿ

ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಓರ್ವ ಆಸ್ಪತ್ರೆಗೆ ದಾಖಲು…….!

26

ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಭೀತಿ ಎದುರಾಗಿದೆ, 23 ವರ್ಷದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವರ್ಷ ನಿಪಾಹ್ ವೈರಸ್‌ನಿಂದಾಗಿ 17 ಮಂದಿ ಮೃತಪಟ್ಟಿದ್ದರು. ವೈರಲ್ ಇನ್‌ಫೆಕ್ಷನ್ ಹಾಗೂ ನಿಪಾಹ್ ವೈರಸ್ ಲಕ್ಷಣಗಳಿದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಎರ್ನಾಕುಲಮ್ ಜಿಲ್ಲೆಯ ವೈದ್ಯಾಧಿಕಾರಿ ಡಾ. ಎಂ.ಕೆ.ಕುಟ್ಟಪ್ಪನ್ ತಿಳಿಸಿದ್ದಾರೆ.

ಈಗಾಗಲೇ ವ್ಯಕ್ತಿಯ ರಕ್ತದ ಸ್ಯಾಂಪಲ್ ತೆಗೆದು ಎರಡು ಇನ್‌ಸ್ಟಿಟ್ಯೂಟ್‌ ಗಳಿಗೆ ಕಳುಹಿಸಲಾಗಿದೆ.ಯಾರೂ ಆತಂಕಪಡುವ ಅಗತ್ಯವಿಲ್ಲ ವರದಿ ಇಂದು ಕೈಸೇರಲಿದೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ ಸಾಕಷ್ಟು ಮಂದಿ ಚಿಕಿತ್ಸೆಗೆಂದು ಬಂದಿದ್ದರು ಆದರೆ ವರದಿಯಲ್ಲಿ ನಿಪಾಹ್ ವೈರಸ್ ಇಲ್ಲ ಎಂದು ಬಂದಿತ್ತು.

ಎರ್ನಾಕುಲ್ ವಿದ್ಯಾರ್ಥಿ ಇಡುಕಿಗೆ ತರಬೇತಿಗಾಗಿ ಬಂದಿದ್ದ, ಮನೆಗೆ ವಾಪಸಾದಾಗ ತೀವ್ರ ಜ್ವರ ಕಾಣಿಸಿಕೊಂಡಿತ್ತು ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ