ಆರೋಗ್ಯ

ಸುಮ್ಮನೆ ನೀರು ಕುಡಿಯೋದಲ್ಲ, ಇಲ್ಲಿ ಸ್ವಲ್ಪ ನೋಡಿ….

196

ಜೀವ ಜಲವೆಂದೇ ಕರೆಯಲ್ಪಡುವ ನೀರು, ಮನುಷ್ಯನ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ನಮ್ಮ ದೇಹದ ಪ್ರತಿ ಜೀವಕೋಶವೂ ಉತ್ತಮ ಆರೋಗ್ಯದಿಂದ ಇರಬೇಕಾದರೆ, ನೀರು ಅತ್ಯಗತ್ಯ.

ವಿಶೇಷವಾಗಿ ತಣ್ಣೀರಿನಲ್ಲಿ ಹಲವು ರೋಗರುಜಿನಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ.

ದೇಹದಿಂದ ತ್ಯಾಜ್ಯ ವಸ್ತು ಹಾಗೂ ಕಲ್ಮಶಗಳನ್ನು ಹೊರಹಾಕಲೂ ನೀರು ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರಲೇಬೇಕು. ಕೆಲವಾರು ಖಾಯಿಲೆಗಳ ನಿವಾರಣೆಗೆ ನೀರು ಔಷಧಿಯಂತೆ ಕೆಲಸ ಮಾಡುತ್ತದೆ.

ನಮ್ಮ ಭೂಮಿಯಲ್ಲಿ ಶೇ. 71 ರಷ್ಟು ನೀರು ಇರುವಂತೆ, ನಮ್ಮ ದೇಹವೂ ಶೇ. 71 ರಷ್ಟು ನೀರಿನಿಂದ ಕೂಡಿದೆ ಎಂದು ಹೇಳಲಾಗಿದೆ.

ನಮ್ಮ ದೇಹದ ಆರೋಗ್ಯ ಉತ್ತಮ ರೀತಿ ಇರಬೇಕಾದರೆ, ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು. ನೀರಿನಿಂದ ಆಗುವ ಪ್ರಯೋಜನಗಳನ್ನು ನೋಡಿ :-

  • ನಮ್ಮ ತ್ವಚೆ ಉತ್ತಮವಾಗಿರಲು,
  • ಚರ್ಮದಡಿ ಸಂಗ್ರಹವಾಗಿರುವ ವಿಷಕಾರಿ ವಸ್ತುಗಳನ್ನು ಮತ್ತು ಸೋಂಕುಕಾರಕ ಕಣಗಳನ್ನು ನಿವಾರಿಸಲೂ ನೀರುಬೇಕು.
  • ವಿಶೇಷವಾಗಿ ಜೀವರಾಸಾಯನಿಕ ಪ್ರಕ್ರಿಯೆ ಉತ್ತಮವಾಗಿ ನಡೆಯಲು,
  • ತಿಂದ ಆಹಾರವನ್ನು ಪಚನಗೊಳಿಸಲು,
  • ಶಕ್ತಿವೃದ್ಧಿಸಲು,
  • ಏಕಾಗ್ರತೆ ಪ‌ಡೆಯಲು ನೀರು ಅತ್ಯಗತ್ಯ.

ಕುಡಿಯುವ ನೀರು ಸ್ವಚ್ಛವಾಗಿರುವುದನ್ನು ಖಚಿತಪ‌ಡಿಸಿಕೊಂಡು ಕುಡಿಯುವುದು ಒಳ್ಳೆಯದು.

ಸ್ವಚ್ಛ ನೀರನ್ನು ಪಡೆಯುವ ಸುಲಭ ವಿಧಾನವೆಂದರೆ ಕುದಿಸಿ, ತಣ್ಣಗೆ ಕುಡಿಯುವುದು ನಮ್ಮ ಆರೋಗ್ಯಕ್ಕೆ ಉತ್ತಮವೆಂದರೆ, ಸಾಮಾನ್ಯ ತಾಪಮಾನದಲ್ಲಿರುವ ತಣ್ಣೀರು.

ತಣ್ಣೀರು ಎಂದ ಮಾತ್ರಕ್ಕೆ ಫ್ರಿಜ್‌ನಲ್ಲಿರುವ ನೀರು ಎಂದು ತಿಳಿಯಬಾರದು.
ತಣ್ಣೀರನ್ನು ಕುಡಿಯುವುದು ಹಾಗೂ ಬೆಳಿಗ್ಗೆ ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಗರಿಷ್ಠ ಪ್ರಯೋಜನ ಪಡೆಯಬಹುದಾಗಿದೆ. ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವುದು ಒಳ್ಳೆಯದು. ಇದರಿಂದ ರಕ್ತಸಂಚಲನೆ ಉತ್ತಮಗೊಂಡು, ಆ ಮೂಲಕ ಹಲವಾರು ಖಾಯಿಲೆಗಳ ಶಮನಕ್ಕೆ ದಾರಿ ಮಾಡಿಕೊಡುತ್ತದೆ.

ನಾವು ತಿಂದ ಆಹಾರ ಜೀರ್ಣಗೊಂಡ ಬಳಿಕ ಕೆಲವು ಕಾರಣಗಳಿಂದ ಆಮ್ಲ ಬಳಕೆಯಾಗದೆ, ಉಳಿಯುವುದರಿಂದ ಹೊಟ್ಟೆಯಲ್ಲಿ ಉರಿ ಪ್ರಾರಂಭವಾಗುತ್ತದೆ. ಹೊಟ್ಟೆಯುರಿಯಿಂದ ಎದೆಭಾಗದಲ್ಲಿ ಉರಿ, ಹುಳಿ ತೆಗು ಮುಂತಾದ ತೊಂದರೆಗಳು ಎದುರಾಗುತ್ತವೆ.

ಇವುಗಳಿಂದ ಮುಕ್ತಿ ಪಡೆಯಬೇಕಾದರೆ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣವೇ ಒಂದು ಲೋಟ ತಣ್ಣೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ದೇಹದ ಚರ್ಮ ಒಣಗಲು ಒಣ ಹವೆ ಪ್ರಮುಖ ಕಾರಣ. ಬಿಸಿ ನೀರಿನಿಂದ ಸ್ನಾನ, ಬಿಸಿ ನೀರನ್ನು ಕುಡಿಯುವುದರಿಂದಲ್ಲೂ ಚರ್ಮ ಒಣಗದಂತೆ ಒಣ ಚರ್ಮಕ್ಕೆ ತಣ್ಣೀರು ಅತ್ಯುತ್ತಮ ಪರಿಹಾರ.

ಚರ್ಮದಲ್ಲಿ ತುರಿಕೆ, ಪರೆ ಏಳುವುದು ಮುಂತಾದ ತೊಂದರೆಗಳಿದ್ದರೆ ತಣ್ಣೀರಿನಿಂದ ತೊಳೆದು ಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.

ಮತ್ತೊಂದು ವಿಶೇಷವೆಂದರೆ, ಪುರುಷರ ಫಲವತ್ತತೆಯಲ್ಲಿ ತಣ್ಣೀರು ಪ್ರಮುಖ ಪಾತ್ರ ವಹಿಸುತ್ತದೆ. ಪುರುಷರಲ್ಲಿ ವೀರ್ಯಾಣುಗಳು, ದೇಹದ ತಾಪಮಾನಕ್ಕಿಂತಲೂ ಕೊಂಚ ಕಡಿಮೆ ಇರಬೇಕು. ಇದೇ ಕಾರಣಕ್ಕೆ ಎಲ್ಲಾ ಸಸ್ತನಿಗಳ ವೃಷ್ಣಗಳು ದೇಹದಿಂದ ಹೊರಗಿರುತ್ತವೆ.

ನಾವು ಧರಿಸುವ ಬಟ್ಟೆಗಳು, ದೀರ್ಘಕಾಲ ಕುಳಿತುಕೊಳ್ಳುವುದು, ವಾಹನ ಚಾಲನೆ ಮೊದಲಾದ ಕಾರಣಗಳಿಂದ ಸೂಕ್ತ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಹಾಗಾಗಿ ಸಾಕಷ್ಟು ತಣ್ಣೀರು ಕುಡಿಯುವ ಮೂಲಕ ತಾಪಮಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ಮೂಲಕ ಫಲವತ್ತತೆ ಉಳಿಸಿಕೊಳ್ಳಲು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.

ಕಣ್ಣುಗಳ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಲು ಆಗಿಂದಾಗ್ಗೆ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಇದರಿಂದ ಕಣ್ಣುಗಳಿಗೆ ಆರಾಮ ಎನಿಸುತ್ತದೆ. ಕಣ್ಣುಗಳಿಗೆ ಅಂಟಿಕೊಂಡಿದ್ದ ಧೂಳು ಮತ್ತಿತರ ಕಣಗಳು ದೂರವಾಗುತ್ತವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ