ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದ ಜನರಿಗೆ, ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಾಗೂ ನೆಲ-ಜಲ, ನಾಡು-ನುಡಿ ರಕ್ಷಣೆಗಾಗಿ ಹಾಗೂ ನೀರಾವರಿ ಯೋಜನೆಗಳು ಹಾಗೂ ಸಾಲ ಮನ್ನಾಕ್ಕೆ ಆಗ್ರಹಿಸಿ ಅನೇಕ ಬೇಡಿಕೆಗಳನ್ನ ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಸೋಮವಾರ ನಡೆಯುವ ಬಂದ್ ಗೆ ಬೆಂಬಲ ನೀಡುವಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ.
ಆದರೆ, ಬಂದ್ ಗೆ ಕೆಲ ಸಂಘಟನೆಗಳ ವಿರೋಧವಿದೆ. ಹೀಗಾಗಿ ನಾಳೆ ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲ ಹುಟ್ಟಿಕೊಂಡಿದೆ. ಹಾಗಾಗಿ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೊಂದಲ್ಲಿದೆ. ಯಾಕೆಂದರೆ ಬಂದ್’ಗೆ ಬೆಂಬಲ ನೀಡಲು ಹಲವು ಸಂಘಟನೆಗಳು ನಿರಾಕರಿಸಿವೆ.
ಕನ್ನಡ ಒಕ್ಕೂಟದ ಪರವಾಗಿ ವಾಟಾಳ್ ನಾಗರಾಜ್, ರಾಜ್ಯ ಬಂದ್’ಗೆ ಕರೆ ನೀಡಿದ್ದಾರೆ. ಆದರೆ, ನಾರಾಯಣ ಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ಕೆಎಸ್ ಆರ್ ಟಿಸಿ, ಬಿಎಂಟಿಸಿ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳೇ ಬೆಂಬಲ ನೀಡಲು ನಿರಾಕರಿಸಿವೆ. ಆಟೋ ಚಾಲಕರ ಸಂಘದಿಂದಲೂ ಬೆಂಬಲ ಇಲ್ಲ ಎಂದು ಹೇಳಲಾಗಿದೆ. ಹಾಗಾಗಿ ಜೂನ್ 12ರ ಬಂದ್ ಗೆ ವಾಟಾಳ್ ನಾಗರಾಜ್ ಅವರು ಎಲ್ಲಾ ಸಂಘಟನೆಗಳ ಮನವೊಲಿಸಿ ಬೆಂಬಲ ಪಡೆದುಕೊಳ್ಳುತ್ತಾರೋ ಅಥವಾ ಬಂದ್ ಗೆ ನೀರಸ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜೂನ್ 12ರಂದು ರಾಜ್ಯ ಬಂದ್ ಇದೆಯೋ ಇಲ್ಲವೋ ಎಂಬ ಬಗ್ಗೆ ಇವತ್ತು ಅಂತಿಮ ನಿರ್ಧಾರ ಹೊರಬೀಳಬಹುದು. ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ, ಕಳಸಾ ಬಂಡೂರಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕನ್ನಡ ಪರ ಒಕ್ಕೂಟ ಬಂದ್ಗೆ ಕರೆ ನೀಡಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟ ಬಂದ್ಗೆ ನೈತಿಕ ಬೆಂಬಲ ವ್ಯಕ್ತಪಡಿಸಿದೆ. ಆದರೆ, ಚಾಲಕರು ಮತ್ತು ನಿರ್ವಾಹಕರು ಎಂದಿನಂತೆ ಕರ್ತವ್ಯ ನಿರ್ವಹಿಸಲಿದ್ದು, ಬಸ್ಗಳ ಸಂಚಾರದಲ್ಲಿ ವ್ಯತ್ಯಯವಾಗುವುದಿಲ್ಲ ಎಂದೂ ಸಂಘ ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ, ಆಟೋರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘ, ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘ, ಎಪಿಎಂಸಿ ವರ್ತಕರ ಸಂಘ, ರಾಜ್ಯ ತೈಲ ವರ್ತಕರ ಸಂಘಗಳು ತಮ್ಮ ಬೆಂಬಲ ಇಲ್ಲ ಎಂದು ತಿಳಿಸಿವೆ. ಬಸ್ಗಳು ಮತ್ತು ಆಟೋರಿಕ್ಷಾಗಳ ಎಂದಿನಂತೆ ಸಂಚರಿಸುತ್ತವೆ. ಪೆಟ್ರೋಲ್ ಬಂಕ್ಗಳು, ಶಾಲಾ ಕಾಲೇಜುಗಳು, ಹೋಟೆಲ್ಗಳು, ಅಂಗಡಿಗಳು ಸಹ ಕಾರ್ಯನಿರ್ವಹಿಸುತ್ತವೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಾಮಾನ್ಯವಾಗಿ ಎಲ್ಲರೂ ಯಾವುದೊ ಒಂದು ಕಡೆ ಅಥವಾ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ . ಮುಖ್ಯವಾಗಿ ಹೆಚ್ಚಿನ ಆದಾಯ ಬರುವ ಭರವಸೆಗಳನ್ನು ನೀಡುವ ಕಡೆ ಮೊರೆ ಹೋಗುತ್ತಾರೆ. ಆದಾಯವನ್ನು ನೋಡುತ್ತಾರೆ ಹೊರತು ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ, ಮತ್ತು ಏಜೆಂಟ್ಗಳ ಮೂಲಕ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಮಾಡಿರುವ ಕಂಪನಿಗಳ ಉದಾಹರಣೆಯು ಸಹ ಸಾಕಷ್ಟಿದೆ.ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ. ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ಆಗಬೇಕೆಂದು…
ದುಡ್ಡಿನ ಅಗತ್ಯ ಯಾವಾಗ ಹೇಗೆ ಬೀಳುತ್ತದೆ ಎಂದು ಹೇಳಲು ಅಸಾಧ್ಯ. ಬದುಕಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ದುಡ್ಡಿನ ಅನಿವಾರ್ಯತೆ ಎದುರಾಗಬಹುದು. ಅದನ್ನು ಇಷ್ಟೇ ಅಂತ ಹೇಳಲು ಬರುವುದಿಲ್ಲ. ಹೀಗಾಗಿ ಎಲ್ಲಾ ಉಳಿಕೆ, ಹೂಡಿಕೆಗಳ ಬಳಿಕವೂ ತುರ್ತು ಸಂದರ್ಭದಲ್ಲಿ ಅನುಕೂಲವಾಗಲು ನಿಮ್ಮಲ್ಲಿ ಹಣ ಇರಲೇ ಬೇಕಾಗುತ್ತದೆ. ಆರೋಗ್ಯ ವಿಮೆ, ವಾಹನ ವಿಮೆಗಳನ್ನೆಲ್ಲಾ ಅಂದುಕೊಂಡ ಕಾಲಕ್ಕೆ ಪಾವತಿಯಾಗುವುದಿಲ್ಲವಾದದ್ದರಿಂದ ಟರ್ನ್ ಓರ್ವ ಮಾಡಲು ಸಾಧ್ಯವಾಗುವಂತಹ ಪ್ಲಾನ್ ಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಉಳಿಕೆಯನ್ನು ನಿರ್ದಿಷ್ಟವಾಗಿ ಇಷ್ಟೇ ಎಂದು ಹೇಳಲು…
ಅತ್ಯಾಚಾರ ಪ್ರಕರಣದಲ್ಲಿ ದೋಷಿಯಾಗಿರುವ ರೇಪಿಸ್ಟ್, ಡೇರಾ ಸಚ್ಛಾ ಸೌಧ ಮುಖ್ಯಸ್ಥ ಬಾಬಾ ರಾಮ್ ರಹೀಂಗೆ ಸಿಬಿಐ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆಯಾಗಿದೆ.
ಇನ್ನು ಮುಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಟ್ರಕ್ ಲೋಡ್ ಮರಳು ಖರೀದಿಸುವುದು ಬೇರೆ ವಸ್ತುಗಳನ್ನು ಖರೀದಿಸಿದಂತೆಯೇ ಸುಲಭ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರಾಯಿತು. ಜನರು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಸುಲಭವಾಗಿ ಮರಳು ಸಿಗುವಂತಾಗಲು ದಕ್ಷಿಣ ಕನ್ನಡ ಜಿಲ್ಲಾಡಳಿತ dksandbazaar.com ಎಂಬ ಆನ್ ಲೈನ್ ಪೋರ್ಟಲ್ ನ್ನು ಆರಂಭಿಸಿದೆ. ಈ ಆನ್ ಲೈನ್ ಪೋರ್ಟಲ್ ಆರಂಭವಾದ ಕೆಲವೇ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ಜನರಿಂದ ಸಿಕ್ಕಿದೆ. 50ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಈಗಾಗಲೇ ಕಂಡಿದೆ. ಜಿಲ್ಲಾಧಿಕಾರಿ ಎಸ್…
ಅನಿರ್ಧಿಷ್ಟಾವಧಿ ಧರಣಿಗಾಗಿ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯರು ಮಹಿಳೆಯೊಬ್ಬರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ನಿವಾಸಿ ಗೀತಾ ಎಂಬುವರು ಉದ್ಯಾನ ಎಕ್ಸ್ಪ್ರೆಸ್ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದವರು. ಬೆಂಗಳೂರಿಗೆ ಪತಿ ಜೊತೆ ಹೊರಟಿದ್ದ ಗೀತಾ ಅವರಿಗೆ ಪ್ರಯಾಣದ ಮಧ್ಯೆ ಹೆರಿಗೆ ನೋವು ಕಾಣಿಸಿತ್ತು. ಚಿತ್ತಾಪುರ ತಾಲೂಕು ನಾಲವಾರದ ಅಂಗನವಾಡಿ ಕಾರ್ಯಕರ್ತೆಯರಾದ ಮಲ್ಲಿಕಾ, ಹಾಲಾಬಾಯಿ ಮತ್ತಿತರರು ಸುಲಭ ಹೆರಿಗೆ ಮಾಡಿಸಿದ್ದಾರೆ. ವಿಷಯ ತಿಳಿದ ಕಾರ್ಯಕರ್ತೆಯರು ಗೀತಾ ಅವರಿಗೆ ಸುಲಭ ಹೆರಿಗೆ ಮಾಡಿಸಿದರು. ರಾಯಚೂರು…
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ (ಎಸ್ಎಸ್ಎಲ್ಸಿ)ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಂತಿಮ ಗಡುವನ್ನು ವಿಸ್ತರಿಸಿದೆ.ಇದರಂತೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಯಸುವವರಿಗೆ ಮೇ 20 ಕಡೆಯ ದಿನವಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾ ಅಂತಿಮ ದಿನಾಂಕವನ್ನು ಮುಂದೂಡಿದ್ದಾಗಿ ಹೇಳಲಾಗಿದ್ದು ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಮುಖ್ಯೋಪಾಧ್ಯಾಯರ ಸಮೂಹವು ದಿನಾಂಕ ಮುಂದುಡುವಂತೆ ಇಲಾಖೆಗೆ ಮನವಿ ಸಲ್ಲಿಸಿತ್ತು. “ಹೆಚ್ಚಿನ ವಿದ್ಯಾರ್ಥಿಗಳು ಇದಾಗಲೇ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಹಾಗಾಗಿ ಪೂರಕ ಪರೀಕ್ಷೆಯ ಲ್ಕುರಿತ ಗಡುವಿನ ವಿಚಾರ ನಮಗೆ…