ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನೀವು ಈ ರೀತಿಯ ಸ್ಟೋರಿಯನ್ನು ಸಿನಿಮಾದಲ್ಲಿ ಅಥವಾ ಕಥೆ ಬರಹಗಳಲ್ಲಿ ನೋಡಿರುತ್ತೀರಿ ಆದರೆ ನಿಜ ಜೀವನದಲ್ಲಿ ಇವರು ಮಾಡಿರುವಂತ ಕೆಲಸಕ್ಕೆ ನೀವು ಹೆಮ್ಮೆ ಪಡುತ್ತೀರ. ಪ್ರಸ್ತುತ ದಿನಗಳಲ್ಲಿ ಜನರು ತಮ್ಮ ಬಗ್ಗೆ ಹಾಗು ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಾರೆ ವಿನಃ ತಾವು ವಾಸಿಸುವಂತ ಅಕ್ಕ ಪಕ್ಕದ ವಾತಾವರಣದ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ ಅಂತಹದರಲ್ಲಿ ಇವರು ಮಾಡಿರುವಂತ ಕೆಲಸ ನಿಜಕ್ಕೂ ಅದ್ಭುತವಾದದ್ದು ಅನ್ನಬಹುದು.
ಹೆಸರು ಭಗೂರಾಮ್ ಮೌರ್ಯ ವಾರಣಾಸಿಯಿಂದ 20 ಕಿ.ಮೀ ದೂರದಲ್ಲಿರುವ, ಝಾನ್ಸ ಜಿಲ್ಲೆಯ ರಾಮೇಶ್ವರ ಗ್ರಾಮದವರು ಇವರು ಸೇನೆಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ಪ್ರಾವಿಡೆಂಟ್ ಫಂಡ್ ಆಗಿ ಸ್ವೀಕರಿಸಿದ ನಾಲ್ಕು ಲಕ್ಷ ರೂ ಗಳನ್ನು ತಮ್ಮ ಗ್ರಾಮದಲ್ಲಿ 1 ಕಿಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಸಂಪೂರ್ಣ ಮೊತ್ತವನ್ನು ದಾನ ಮಾಡಿದ್ದಾರೆ.
ತನ್ನ ಮನೆ ಮುಂದಿನ ರಸ್ತೆಯು ತುಂಬಾನೇ ಕೆಟ್ಟಿದ್ದು ದ್ವಿಚಕ್ರಗಳು ಕೂಡ ಓಡಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬೇಸತ್ತ ಜನರು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದರು. ಇದರ ಬಗ್ಗೆ ತಲೆ ಕೆಡಿಸಿ ಕೊಳ್ಳದ ಸರ್ಕಾರ. ಅಂತಹ ಸಮಯದಲ್ಲಿ ಆ ರಸ್ತೆಯಲ್ಲಿ ಬೈಸಿಕಲ್ ಸವಾರಿ ಮಾಡುವ ಸವಾಲಾಗಿತ್ತು.
ಆಗಾಗಿ ಮೌರ್ಯ ಅವ್ರು ತಮ್ಮ ಪ್ರಾವಿಡೆಂಟ್ ಫಂಡ್ ನ 4 ಲಕ್ಷ ಮೊತ್ತವನ್ನು ತನ್ನ ಹಳ್ಳಿಯ ರಸ್ತೆಯ ನಿರ್ಮಾಣಕ್ಕೆ ಕೊಟ್ಟಿದ್ದಾರೆ.ಈಗ ಆ ರಸ್ತೆಯಲ್ಲಿ ಬರಿ ದ್ವಿಚಕ್ರ ಮಾತ್ರ ಅಲ್ಲ ಎಲ್ಲ ರೀತಿಯ ವಾಹನಗಳು ಓಡಾಡುತ್ತಿವೆ. ಇದರಿಂದ ತನ್ನ ಗ್ರಾಮಕ್ಕೆ ಅತ್ಯಮೂಲ್ಯವಾದ ಕೆಲಸವನ್ನು ಮಾಡಿದ್ದೇನೆ ಎಂಬುದಾಗಿ ಹೇಳುತ್ತಾರೆ. ಈ ರಸ್ತೆಯನ್ನು ನಿರ್ಮಿಸಲು ಸತತ ಏಳು ತಿಂಗಳು ತೆಗೆದುಕೊಂಡಿದ್ದರು ಉತ್ತಮ ಗುಣ ಮಟ್ಟದ ರಸ್ತೆಯ ನಿರ್ಮಾಣವಾಗಿದೆ.
ಮೌರ್ಯ ಅವರನ್ನು ಎಪಿಜೆ ಅಬ್ದುಲ್ ಕಲಾಂ ಮತ್ತು ಪ್ರಣಬ್ ಮುಖರ್ಜಿ ಅವರಿಂದ ಪ್ರಶಂಸನೀಯ ಸೇವೆಗಾಗಿ ಎರಡು ಬಾರಿ ರಾಷ್ಟ್ರಪತಿ ಪದಕ ನೀಡಲಾಗಿದೆ. ಇವರಲ್ಲದೆ ಅವರು ಹಲವಾರು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.
ಅದೇನೇ ಇರಲಿ ಇಂತಹ ಕೆಲಸವನ್ನು ಸರ್ಕಾರಗಳು ಮಾಡಬೇಕು ಅಲ್ಲವೇ? ಆದರೆ ಇವರು ತಮ್ಮ ಜೀವನಕ್ಕೆ ಬಳಸಿಕೊಳ್ಳ ಬೇಕಾದ ಹಣವನ್ನು ಸಾಮಾಜಿಕ ಕಾರ್ಯಕ್ಕೆ ಬಳಸಿರೋದು ಹೆಮ್ಮೆಯ ವಿಚಾರವೇ. ಹಾಗು ಇವರ ಈ ಒಂದು ಉತ್ತಮ ಕೆಲಸದಿಂದ ಅದೆಷ್ಟೋ ಜನಕ್ಕೆ ಸ್ಪೂರ್ತಿದಾಯಕವಾಗಿದೆ ಅನ್ನಬಹುದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇಂದಿನ ದಿನದಲ್ಲಿ ಸಾಮಾನ್ಯವಾದ ವಿಚಾರವಾಗಿಬಿಟ್ಟಿದೆ. ಮಾಲಿನ್ಯ, ನೀರಿನಲ್ಲಿ ಬೆರೆಸುವ ರಾಸಾಯನಿಕ ಸೇರಿ, ನಗರಗಳಲ್ಲಿಪುರುಷರು ಹಾಗೂ ಮಹಿಳೆಯರಿಬ್ಬರಲ್ಲೂ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗುತ್ತಿದೆ. ಕೂದಲು ಉದುರುವಿಕೆ ತಡೆಗಟ್ಟಲು ಮನೆಯಲ್ಲೇ ಏನು ಮಾಡಬಹುದು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ ಕೂದಲನ್ನು ಉದ್ದ ಬಿಡದಿರಿ ಪ್ರತಿ 8 ಅಥವಾ 10 ವಾರಗಳಿಗೊಮ್ಮೆ ಕೂದಲನ್ನು ಸಣ್ಣದಾಗಿ ಕಟ್ಟಿಂಗ್ ಮಾಡಿಸಿರುವುದರಿಂದ ಕೂದಲು ಉದುರುವಿಕೆ ತಡೆಯಲು ಸಾಧ್ಯ. ಇದರಿಂದ ಕೂದಲಿನ ಬೆಳವಣಿಗೆ ಕೊಂಚ ವೇಗ ಪಡೆದುಕೊಳ್ಳುತ್ತದೆ. ಉದ್ದ ಕೂದಲಿಗೆ ಬೇಗನೆ ನಾಶವಾಗುತ್ತದೆ, ತುಂಡಾಗುತ್ತದೆ. ಇದಕ್ಕಾಗಿ…
ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಧ್ಯ ಪ್ರದೇಶದಲ್ಲೊಬ್ಬರು ಆಧುನಿಕ ಶಬರಿ ಇದ್ದಾರೆ. ಅವರು ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ತೀರ್ಪು ಹೊರಬರಲಿ ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷದಿಂದ ಅನ್ನ ಬಿಟ್ಟು ಉಪವಾಸ ಮಾಡಿದ್ದಾರೆ. ಕಲಿಯುಗದ ಈ ಶಬರಿ ಉರ್ಮಿಳಾ ಚತುರ್ವೇದಿ. ಮಧ್ಯಪ್ರದೇಶದ ಜಬಲಪುರ ನಿವಾಸಿಯಾಗಿರು ಉರ್ಮಿಳಾ 1992ರಿಂದ ಕೇವಲ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ…
ಶಾಲಾ ಹಾಸ್ಟೆಲ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪುಟ್ಟ ಮಕ್ಕಳಿರುವ ಶಾಲೆ, ಹಾಸ್ಟೆಲ್ಗಳಲ್ಲಿ ಎಷ್ಟು ಮುಂಜಾಗ್ರತೆ ವಹಿಸಿದರೂ ಸಾಲದು. ಹಾಗಿರುವಾಗ ಬೆಂಕಿ, ಶಿಥಿಲ ಕಟ್ಟಡಗಳ ಬಗ್ಗೆ ನಿಗಾ ಇಡಬೇಕಾಗಿರುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಶಾಲಾ ಹಾಸ್ಟೆಲ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ 10 ವರ್ಷದ ವಿದ್ಯಾರ್ಥಿ ಬೆಂಕಿಯಲ್ಲೇ ಬೆಂದು ಮೃತಪಟ್ಟಿದ್ದಾನೆ. ತೆಲಂಗಾಣಾದ ಖಮ್ಮಮ್ನಲ್ಲಿ ಈ ಘಟನೆ ನಡೆದಿದೆ. ಬಾಲಕನಿಗೆ ಹಾಸ್ಟೆಲ್ನಿಂದ ಹೊರಬರಲು ಸಾಧ್ಯವಾಗದೆ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಹಾಸ್ಟೆಲ್…
ನವದೆಹಲಿ, ದೇಶಾದ್ಯಂತ ಮುಂಗಾರು ಮಳೆ ಆರ್ಭಟದಿಂದಾಗಿ ಪೂರೈಕೆ ಕುಸಿತವಾದ ಬೆನ್ನಲ್ಲೇ, ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳವಾಗಿದ್ದು, 20-30 ರು.ಗೆ ಬಿಕರಿಯಾಗುತ್ತಿದ್ದ ಈರುಳ್ಳಿ ದರ ಒಂದೇ ವಾರದಲ್ಲಿ 70-80ರು.ಗೆ ಏರಿಕೆಯಾಗಿದೆ. ಈರುಳ್ಳಿ ಬೆಳೆಯವ ರಾಜ್ಯಗಳಲ್ಲಿ ವಿಪರೀತ ಮಳೆ ಹಾಗೂ ಪೂರೈಕೆ ಕೊರತೆಯಿಂದಾಗಿ ಬೆಲೆ ಹೆಚ್ಚಾಗಿದೆ. ಅತೀ ಹೆಚ್ಚು ಈರುಳ್ಳಿ ಬೆಳೆಯುವ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪೂರ್ವ ರಾಜಸ್ತಾನ ಹಾಗೂ ಪಶ್ಚಿಮ ಮಧ್ಯಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಬೆಳೆ ನಾಶ ಹಾಗೂ ಸಾಗಣೆ ಸ್ಥಗಿತದಿಂದಾಗಿ…
ಮತಗಟ್ಟೆಗೆ ಹೋಗುವ ನಾವು, ನಮಗೆ ಇಷ್ಟವಾದ ಪಕ್ಷಕ್ಕೋ, ಅಭ್ಯರ್ಥಿಗೋ ವೋಟ್ ಹಾಕಿ ಬಂದುಬಿಡ್ತಿವಿ.ಆದರೆ ನಾವು ಹಾಕಿದ ವೋಟ್, ನಾವು ಚುನಾಯಿಸಿದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಬಿದ್ದಿದೆಯೇ ಎಂಬುವ ಗ್ಯಾರಂಟಿ ಯಾರು ಕೊಡುತ್ತಾರೆ..? ಹೌದು, ಇದು ಸಹಜವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಹಾಗಾದ್ರೆ ನಾವು ಚುನಾಯಿಸಿದ ಅಭ್ಯರ್ಥಿ ಅಥವಾ ಪಕ್ಷಕ್ಕೆ ನಮ್ಮ ವೋಟ್ ಬಿದ್ದಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಹೇಗೆ..? ವಿವಿಪ್ಯಾಟ್ ಅಂದ್ರೆ ಏನು..? ವಿವಿಪ್ಯಾಟ್ ಅಂದರೆ “ವೋಟರ್ ವೆರಿಫಯಬಲ್ ಆಡಿಟ್ ಟ್ರಯಲ್” ಎಂದು. ಇದನ್ನು ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್’ಗೆ ಜೋಡಿಸಲಾಗಿರುತ್ತದೆ.ಇದರಿಂದ…
ದುಬಾರಿ ಟ್ರಾಫಿಕ್ ದಂಡದಿಂದ ಸಾಕಷ್ಟು ಬದಲಾವಣೆಗಳಾಗಿದ್ದು, ದಂಡ ಕಟ್ಟೋ ಬದಲು ಟ್ರಾಫಿಕ್ ರೂಲ್ಸನ್ನ ಫಾಲೋ ಮಾಡಿಬಿಡೋಣ ಎಂದು ಜನರು ನಿರ್ಧರಿಸಿದಂತಿದೆ ಎನ್ನುತ್ತಿದೆ ಇತ್ತೀಚೆಗೆ ಬಂದ ಮಾಹಿತಿ. ನೂತನ ಟ್ರಾಫಿಕ್ ನಿಯಮದಿಂದ ವಾಹನ ಸವಾರರು ಎಚ್ಚೆತ್ತಿದ್ದು, ದಂಡದಿಂದ ತಪ್ಪಿಸಿಕೊಳ್ಳಲು ಟ್ರಾಫಿಕ್ ನಿಯಮ ಪಾಲಿಸುವವರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಅಲ್ಲದೇ, ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ಅಪಘಾತ ಪ್ರಕರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ನೂತನ ಟ್ರಾಫಿಕ್ ದಂಡ ಸಂಹಿತೆ ಜಾರಿಯಾಗಿ ಇಂದಿಗೆ ಒಂದು ತಿಂಗಳಾಗಿದ್ದು, ಸಂಗ್ರಹಿಸಿದ ದಂಡದ ಮೊತ್ತ…