ಜ್ಯೋತಿಷ್ಯ

ದಿನ ಭವಿಷ್ಯ ಬುಧವಾರ..ಪಂಡಿತ್ ಸುದರ್ಶನ್ ಭಟ್’ರವರಿಂದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ..

264

ಬುಧವಾರ , 04/04/2018  ಇಂದಿನ ದಿನ ಭವಿಷ್ಯ, ಖ್ಯಾತ ಆಧ್ಯಾತ್ಮಿಕ ಚಿಂತಕರು, ದೈವಜ್ಞ ಜ್ಯೋತಿಷ್ಯರು ಪಂಡಿತ್ ಸುದರ್ಶನ್ ಭಟ್‘ರವರಿಂದ…

ಮೇಷ:

ಮನಃಕಾರಕ ಚಂದ್ರ ಚತುರ್ಥಸ್ಥಾನದಲ್ಲಿ ಸಂಚರಿಸುವ ಮೂಲಕ ಈ ದಿನ ಮಾನಸಿಕ ಖಿನ್ನತೆಯನ್ನು ಹೆಚ್ಚು ಮಾಡುವರು. ಶಿವನ ಸ್ತುತಿ ಪಠಿಸಿರಿ. ಅಕ್ಕಿ ಮತ್ತು ಬೆಲ್ಲವನ್ನು ಹಸುವಿಗೆ ನೀಡಿರಿ ಮಹತ್ತರ ಕೆಲಸವನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.

ವೃಷಭ:-

ನೀವೇ ಮುಂದಾಗಿ ನಿಂತು ನಡೆಸುವ ಕೆಲಸಕ್ಕೆ ಮನಸ್ಸಿನ ಸಿದ್ಧತೆ ಬೇಕಾಗುವುದು. ಈ ದಿನ ಏಕಾಗ್ರತೆಯಿಂದ ಕೆಲಸವನ್ನು ಆರಂಭಿಸಿರಿ. ಮನೋಕಾಮನೆಗಳು ಪೂರ್ಣಗೊಳ್ಳುವುದು. ಆದಷ್ಟು ಈ ದಿನ ತಾಳ್ಮೆಯಿಂದಿರಿ.

ಮಿಥುನ:

ಆರಾಧನಾ ದೃಷ್ಟಿಯಿಂದಲೇ ಅತಿಥಿಯನ್ನು ಸ್ವೀಕರಿಸಿರಿ ಮತ್ತು ಅವರ ಸೇವೆಯನ್ನು ಮಾಡಿರಿ. ಇದರಿಂದ ಈ ದಿನ ನಿಮ್ಮ ಮನಃಕ್ಷೋಭೆಯು ತಿಳಿಗೊಳ್ಳುವುದು. ಆರ್ಥಿಕ ಪರಿಸ್ಥಿತಿ ಸಾಧಾರಣವಿದ್ದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿರಿ..

ಕಟಕ :-

ಕಚೇರಿಯ ಕೆಲಸ ಕಾರ್ಯಗಳನ್ನು ವಿವೇಚನೆಯಿಲ್ಲದೆ ಸರ್ರನೆ ಮಾಡಬೇಡಿ. ಇದರಿಂದ ಹೊಸ ಸಮಸ್ಯೆಯೊಂದು ಉದ್ಭವ ಆಗುವ ಸಾಧ್ಯತೆ ಇದೆ. ಹಾಗಾಗಿ ಇಂದು ಮಾಡುವ ಕೆಲಸವನ್ನು ಮುಂದೂಡುವುದು ಒಳ್ಳೆಯದು.

 ಸಿಂಹ:

ಅಧಿಕ ಗಳಿಕೆಗೆ ಇಂದು ಶುಭ ದಿನವಾಗಿದೆ. ಅದು ಹಣ ಗಳಿಕೆಯಾಗಿರಬಹುದು, ಇಲ್ಲವೇ ವಿದ್ಯೆಯ ಗಳಿಕೆ ಆಗಿರಬಹುದು. ಇದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ ಮತ್ತು ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುವುದು.

ಕನ್ಯಾ :-

ಕೆಲ ಗ್ರಹಗಳ ಸಂಚಾರದಿಂದ ಇಂದಿನ ನಿಮ್ಮ ಕಾರ್ಯಗಳು ಅಡೆ-ತಡೆಯಿಲ್ಲದೆ ಮುಂದೆ ಸಾಗುವುದು. ಸಾರ್ವಜನಿಕ ಕ್ಷೇತ್ರಗಳಲ್ಲಿ ಸಂಘ ಸಂಸ್ಥೆಗಳಿಂದ ಸನ್ಮಾನ ದೊರೆಯುವ ಸಾಧ್ಯತೆ ಇರುವುದು. ಹಣಕಾಸು ಸ್ಥಿತಿ ಉತ್ತಮವಾಗಿರುತ್ತದೆ.

ತುಲಾ:

ಕೆಲವು ನಾಟಕೀಯ ಘಟನೆಗಳು ನಿಮ್ಮ ಸುತ್ತಮುತ್ತ ನಡೆಯುವ ಸಾಧ್ಯತೆ ಇದ್ದು, ಅದನ್ನೇ ನಿಜವೆನ್ನುವ ಭ್ರಮೆಗೆ ಒಳಗಾಗುವಿರಿ. ಈ ಭ್ರಮಾಲೋಕದಿಂದ ಹೊರಬಂದಲ್ಲಿ ನೈಜ ಜೀವನದ ದರ್ಶನವಾಗುವುದು. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಶ್ಚಿಕ :-

ಅನೇಕ ರಕ್ಷ ಣಾವ್ಯೂಹಗಳನ್ನು ಹೆಣೆದು ಬಿಡಬೇಡಿ. ದೇವಿ ಆರಾಧನೆಯ ಜತೆಗೆ ಆಂಜನೇಯ ಸ್ತೋತ್ರವನ್ನು ಪಠಿಸಿರಿ. ಪ್ರಯಾಣಕಾಲದಲ್ಲಿ ಎಚ್ಚರಿಕೆ ಅಗತ್ಯ. ಖರ್ಚಿಗೆ ತಕ್ಕಷ್ಟು ಹಣ ಬರುವುದರಿಂದ ಈ ದಿನ ತೊಂದರೆ ಇರುವುದಿಲ್ಲ.

ಧನಸ್ಸು:

ನೇರ ಮಾತುಗಾರರಾದ ನೀವು ಇಂದು ತಮಾಷೆಗಾಗಿ ಆಡಿದ ಮಾತಿನಿಂದ ಸಂಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಈ ಬಗ್ಗೆ ಎರಡು ಬಾರಿ ಚಿಂತಿಸಿ ಕಾರ್ಯಪ್ರವೃತ್ತರಾಗಿರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.

ಮಕರ :-

ಅಧಿಕ ಶ್ರಮಕ್ಕೆ ತಕ್ಕಷ್ಟು ಆದಾಯವೂ ಬರುವುದರಿಂದ ಈ ದಿನ ಹಣಕಾಸಿನ ತೊಂದರೆಯಿರುವುದಿಲ್ಲ. ಹೊಸದೇನೋ ಒಂದು ನಿಮ್ಮ ಜೀವನವನ್ನು ಪ್ರವೇಶಿಸಲಿದ್ದು, ಇದರಿಂದ ಉತ್ತಮವಾಗುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿರಿ.

ಕುಂಭ:-

ಆರೋಗ್ಯದ ಎಚ್ಚರ ಇದ್ದರೆ ಸಾಕು. ಉಳಿದ ಕಿರಿಕಿರಿಗಳನ್ನು ನಿಯಂತ್ರಿಸಬಹುದು. ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಂಕಷ್ಟ ದೂರವಾಗುವುದು. ಕಾರ್ಯಸಿದ್ಧಿಯ ಭಾವನಾತ್ಮಕ ದುಗುಡತೆಯಿಂದ ದೂರ ಉಳಿಯುವುದು ಒಳ್ಳೆಯದು. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು.

ಮೀನ:-

ಉತ್ತಮವಾದ ವಿಚಾರದಲ್ಲಿ ಕ್ಲಿಷ್ಟತೆ ಇದ್ದರೂ ಸರಳವಾಗಿ ನಿಭಾಯಿಸಿಕೊಂಡು ಹೋಗುವ ಶಕ್ತಿಯನ್ನು ಭಗವಂತ ನಿಮಗೆ ಒದಗಿಸಿದ್ದಾನೆ. ನಿಮ್ಮಿಂದ ಮಾರ್ಗದರ್ಶನ ಪಡೆಯುವವರಿಗೆ ಬೇಕಾದ ನಿಮ್ಮ ಸಲಹೆ, ಸೂಚನೆಗಳನ್ನು ನೀಡಿರಿ.

ಪಂಡಿತ್ ಸುದರ್ಶನ್ ಭಟ್

ಆಧ್ಯಾತ್ಮಿಕ ಚಿಂತಕರು ದೈವಜ್ಞ ಜ್ಯೋತಿಷ್ಯರು  ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗೆ ಪರಿಹಾರ ಸೂಚಿಸುವರು.

 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9663542672

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಸೋಮವಾರ…..ಪಂಡಿತ್ ವಿಶ್ವರೂಪ ಆಚಾರ್ಯರವರಿಂ7ದ..ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಶೇರ್ ಮಾಡಿ.

    ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುವವು. ಕೆಲವರಿಗೆ ಬಡ್ತಿ ಸಿಗುವುದು. ದೂರದ ಊರುಗಳಿಗೆ ವರ್ಗಾವಣೆಗೆ ಹೋಗುವುದಕ್ಕಿಂತ ಇದ್ದಲ್ಲೇ ಇದ್ದರೆ ಬಡ್ತಿ ದೊರೆಯುವುದು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ…

  • ಸಿನಿಮಾ

    ಹುಟ್ಟಿದ ಊರಿನಲ್ಲಿ 80ಎಕರೆ ತೋಟ ಖರಿದಿಸಿದ ರಾಕಿಂಗ್ ಸ್ಟಾರ್…ಕಾರಣ ಕೇಳಿದ್ರೆ ಸಲಾಂ ರಾಕಿ ಭಾಯ್ ಅಂತೀರಾ…

    ನಟ ರಾಕಿಂಗ್ ಸ್ಟಾರ್ ಯಶ್ ಹಾಸನದಲ್ಲಿ ಮನೆ ಹಾಗೂ 80 ಎಕರೆ ತೋಟ ಖರೀದಿಸಿದ್ದಾರೆ. ಹಾಸನ ದೊಡ್ಡಕೊಂಡಗೋಳ ಯಶ್ ತಾಯಿ ಪುಷ್ಪಾ ಅವರ ತವರಾಗಿದೆ.ಯಶ್ ಜನಿಸಿದ್ದು ಹಾಸನ ಜಿಲ್ಲಾಸ್ಪತ್ರೆಯಲ್ಲಿ. ಈ ನಂಟಿನಿಂದ ಹುಟ್ಟೂರು ಹಾಸನದಲ್ಲಿ ಮನೆ ಹಾಗೂ ತೋಟವನ್ನು ಅವರು ಖರೀದಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ತನ್ನುರಿನ ಕೆರೆಯನ್ನು ಕೋಟಿಗಳ ವೆಚ್ಛದಲ್ಲಿ ಹೂಳು ತೆಗೆಸಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯನ್ನು ಹೋಗಲಾಡಿಸಿದ್ದರು. ಈಗ ಅದರ ಜೊತೆಗೆ ತನ್ನ ಹುಟ್ಟೂರಿನಲ್ಲಿ ಜಮೀನು ಮತ್ತು…

  • ರೆಸಿಪಿ

    ಒಮ್ಮೆ ಈ ರೀತಿ ಮಾಡಿ ನೋಡಿ ರುಚಿಯಾದ ಮೆಂತೆ ಸೊಪ್ಪಿನ ದೋಸೆ.

    ಮೆಂತ್ಯ ಸೊಪ್ಪಿನ ದೋಸೆ.ಈ ದೋಸೆ ಮಾಡಲು ಮೊದಲು ಮಾಮೂಲಿ ದೋಸೆ ಹಿಟ್ಟು ತಯಾರಿಸ ಬೇಕು.ನಂತರ ಈ ಹಿಟ್ಟಿಗೆ ಮೆಂತೆ ಸೊಪ್ಪಿನ ರುಬ್ಬಿದ ಮಸಾಲೆ ಮಿಶ್ರಣ ವನ್ನು ಎಷ್ಟು ಬೇಕೋ ಅಷ್ಟು ಸೇರಿಸಿ ದೋಸೆ ಮಾಡಬೇಕು. ದೋಸೆ ಹಿಟ್ಟು ಮಾಡಲು ಬೇಕಗುವ ಪದಾರ್ಥಗಳು. ದೋಸೆ ಅಕ್ಕಿ ಒಂದು ಬಟ್ಟಲು, ಉದ್ದಿನ ಬೇಳೆ ಕಾಲು ಬಟ್ಟಲು, ಮೆಂತ್ಯ ಕಾಳು ಕಾಲು ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ದೋಸೆ ಕಾಯಿಸಲು ಬೇಕಾಗುವಷ್ಟು.ಮಾಡುವ ವಿಧಾನ. ದೋಸೆ ಅಕ್ಕಿ . ಉದ್ದಿನ…

  • ಸುದ್ದಿ

    ಕಾರ್ನಾಡ್ ಅವರ ಕೊನೆಯ ಇಚ್ಚೆಯಂತೆ ಅಂತ್ಯಸಂಸ್ಕಾರ…….

    ಗಿರೀಶ್ ಕಾರ್ನಾಡ್ ಅವರ ಆಸೆಯಂತೆ ಅವರ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಸಿದ್ಧತೆ ನಡೆಸುತ್ತಿದ್ದಾರೆ. ನನ್ನ ಅಂತ್ಯ ಸಂಸ್ಕಾರಕ್ಕೆ ಯಾವುದೇ ರಾಜಕಾರಣಿ, ಸಾರ್ವಜನಿಕರು ಬರಬಾರದು. ಸರ್ಕಾರಿ ಗೌರವ, ಸರ್ಕಾರಿ ಜಾಗದ ಅಗತ್ಯವಿಲ್ಲ. ಕುಟುಂಬದ ಸದಸ್ಯರು ಮಾತ್ರ ಬರಬೇಕು. ಯಾವುದೇ ವಿಧಿವಿಧಾನವನ್ನು ಅನುಸರಿಸಬಾರದು. ಅಂತಿಮ ನಮನವನ್ನು ಸಲ್ಲಿಸಬಾರದು ಎಂದು ಗಿರೀಶ್ ಕಾರ್ನಾಡ್ ತಮ್ಮ ಪತ್ನಿ ಸರಸ್ವತಿ ಜೊತೆ ಹೇಳಿದ್ದರು. ಮನೆ ಬಳಿ ಯಾರೂ ಬಂದು ನಮನ ಸಲ್ಲಿಸಬಾರದು. ಯಾವುದೇ ಸಂಪ್ರದಾಯ, ವಿಧಿ ವಿಧಾನ ಇಲ್ಲದೇ ಸಂಸ್ಕಾರ ಮಾಡಬೇಕು ಎಂದು ಕೊನೆಯ…

  • ಸಿನಿಮಾ

    ಉಪೇಂದ್ರ ಸ್ಥಾಪಿಸಲು ಹೊರಟಿರುವ ಪಕ್ಷ ಪ್ರಜಾಕೀಯ ಅಲ್ವಂತೆ!ಹಾಗಾದ್ರೆ ಉಪ್ಪಿ ಪಕ್ಷದ ಹೆಸರು ಏನು ಗೊತ್ತಾ..?

    ಕನ್ನಡ ಚಿತ್ರ ರಂಗದ ನಟ ಉಪೇಂದ್ರರವರ ರಾಜಕೀಯ ಸುದ್ದಿಗಳು ದಿನಕ್ಕೊಂದಂತೆ ತಿರುವು ಪಡೆದುಕೊಳ್ಳುತ್ತಿವೆ.ಈಗ ಬಂದಿರುವ ಹೊಸ ಸುದ್ದಿ ಏನಪ್ಪಾ ಅಂದ್ರೆ, ನಿಮಗೆಲ್ಲ ಗೊತ್ತಿರುವಂತೆ ಅವರು ಸ್ಥಾಪಸಲು ಹೊರಟಿರುವ ಪಕ್ಷದ ಹೆಸರು ಪ್ರಜಾಕೀಯ ಎಂದು. ಆದ್ರೆ ಮೂಲಗಳ ಪ್ರಕಾರ ಅವರ ಪಕ್ಷದ ಹೆಸರು ಪ್ರಜಾಕೀಯ ಅಲ್ಲ..!

  • ಉಪಯುಕ್ತ ಮಾಹಿತಿ, ಗ್ಯಾಜೆಟ್

    ಈ ಅಪಾಯಕಾರಿ ಆಪ್ಸ್ ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿವೆಯೇ.?ಇದ್ರೆ ಈ ಕೂಡಲೆ ತೆಗೆದುಬಿಡಿ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಉಪಯೋಗವಾಗಲಿ…

    *ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್‌ನಲ್ಲೂ ಹಲವು ಮಾಲ್‌ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್…