ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ತಾನು ಇನ್ನೊಬ್ಬರಿಗೆ ಚೆನ್ನಾಗಿ ಕಾಣಬೇಕು ಎಂದು ಯಾರಿಗೆ ತಾನೇ ಅನ್ನಿಸೋದಿಲ್ಲ ಹೇಳಿ.ಉತ್ತಮ ತ್ವಚೆ ಹೊಂದುವುದು ಪ್ರತಿಯೊಬ್ಬ ಯುವತಿಯರ ಮತ್ತು ಹೆಂಗಳೆಯರ ಆಸೆಯಾಗಿರುತ್ತದೆ. ಇದರಲ್ಲಿ ಯುವಕರು ಸಹ ಹಿಂದೆ ಬಿದ್ದಿಲ್ಲ. ಇದಕ್ಕಾಗಿ ಬಳಸುವ ಸೌಂದರ್ಯ ವರ್ಧಕಗಳು 100 ರೂಪಾಯಿಯಿಂದ ಸಾವಿರಾರು ರೂಪಾಯಿಗಳವರೆಗೂ ಇರುತ್ತದೆ.
ಸ್ಟೆರಾಯ್ಡ್ ಆಧಾರಿತ ಸೌಂದರ್ಯವರ್ಧಕಗಳು 100 ರೂಪಾಯಿಗಿಂತಲೂ ಕಡಿಮೆಗೆ ಸಿಗುತ್ತದೆ. ಮುಖ ಸೌಂದರ್ಯ ಕಾಣಲೆಂದು ಕಡಿಮೆ ಬೆಲೆಯ ಸೌಂದರ್ಯ ವರ್ಧಕ ಬಳಸುವ ಮುನ್ನ ಎಚ್ಚರ.
ಕಾಲೇಜಿಗೆ ಹೋಗುವ ಯುವಕ ಯುವತಿಯರು ಇಂತಹ ಸೌಂದರ್ಯವರ್ಧಕಗಳನ್ನು ಖರೀದಿಸಲು ಬಯಸುತ್ತಾರೆ. ಸ್ವಲ್ಪ ದಿನಗಳವರೆಗೆ ಇದು ಸುಂದರವಾಗಿ ಏನೋ ಕಾಣುತ್ತದೆ. ಆದರೆ ಸೌಂದರ್ಯವರ್ಧಕಗಳನ್ನು ಹಾಕಲು ಆರಂಭಿಸಿ 15 ದಿನಗಳ ನಂತರ ಅದರಿಂದಾಗುವ ಅಪಾಯಗಳ ಸೂಚನೆ ಕಂಡುಬರುತ್ತದೆ.
ಒಬ್ಬ ಯುವತಿ, ಆಕೆಯ ಮದುವೆ ದಿನ ಸೊಗಸಾಗಿ ಕಾಣಬೇಕೆಂದು ಬಯಸಿದಳು. ಬ್ಯೂಟಿ ಪಾರ್ಲರ್ ಗೆ ಫೇಶಿಯಲ್ ಕ್ಲೀನ್ ಅಪ್ ಗೆಂದು ಹೋದಳು. ಅಲ್ಲಿ ಬ್ಯೂಟಿಷಿಯನ್ ಕೆಲವೇ ದಿನಗಳಲ್ಲಿ ಉತ್ತಮ ಫಲಿತಾಂಶ ತೋರುವ ಫೇರ್ ನೆಸ್ ಕ್ರೀಮ್ ಬಳಸಲು ಹೇಳಿದಳು.
ಅದರಂತೆ ಆ ಯುವತಿ ಕ್ರೀಮ್ ಬಳಸಲು ಆರಂಭಿಸಿದ ಒಂದು ತಿಂಗಳ ಬಳಿಕ ಅವಳ ಮುಖದಲ್ಲಿ ಮೊಡವೆ, ಕೂದಲು ಬೆಳೆಯಲು ಆರಂಭಿಸಿತು. ಅದೇ ಬ್ಯೂಟಿ ಪಾರ್ಲರ್ ಗೆ ಹೋಗಿ ಆ ಯುವತಿ ಕೇಳಿದಾಗ ತಮ್ಮ ಸೂಕ್ಷ್ಮ ಚರ್ಮದಿಂದ ಹೀಗಾಗಿದೆ ಎಂದು ಹೇಳಿ ಬ್ಯೂಟಿಷಿಯನ್ ಜಾರಿಕೊಂಡುಬಿಟ್ಟಳು.
ಚರ್ಮರೋಗ ತಜ್ಞರಲ್ಲಿ ಹೋಗಿ ಕೇಳಿದಾಗ ಮುಖಕ್ಕೆ ಸ್ಟಿರಾಯ್ಡ್ ಬಳಸುತ್ತಿದ್ದ ಕಾರಣ ಕೂದಲು ಬೆಳೆದಿದೆ ಎಂದರು. ಹೊಳೆಯುವ ಚರ್ಮದ ಕಾಂತಿಗೆಂದು ಸ್ಟಿರಾಯ್ಡ್ ನ್ನು ಜನರು ಬಳಸುತ್ತಾರೆ. ಅದನ್ನು ಸರಿಯಾಗಿ ಬಳಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಚರ್ಮರೋಗ ತಜ್ಞರು.
ಸ್ಟಿರಾಯ್ಡ್ ನಿಜಕ್ಕೂ ಚರ್ಮಕ್ಕೆ ಹಾನಿ ಎನ್ನುತ್ತಾರೆ ತಜ್ಞರು. ಒಬ್ಬ ಮಹಿಳೆ ಕಳೆದ ವರ್ಷ ಬೆಂಗಳೂರಿಗೆ ಬಂದು ನೆಲೆಸಿದ್ದರು. ಕಡಿಮೆ ಕ್ರಯದ ಫೇಶಿಯಲ್ ಕ್ರೀಮ್ ಬಳಸಿದ್ದರು. ಒಂದು ತಿಂಗಳು ಆಗುವಾಗ ಮುಖದಲ್ಲಿ ಸಣ್ಣ ಸಣ್ಣ ಕಲೆಗಳು ಬರಲಾರಂಭಿಸಿದವು. ಜನರು ಬೇಗನೆ ತಮ್ಮ ತ್ವಚೆ ಸುಂದರವಾಗಬೇಕೆಂದು ಸ್ಟಿರಾಯ್ಡ್ ಮಾದರಿಯ ಕ್ರೀಮ್ ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಆ ಮೇಲೆ ಸಮಸ್ಯೆಗಳು ತಲೆದೋರುತ್ತವೆ. ಸ್ನೇಹಿತರು, ಅಕ್ಕಪಕ್ಕದ ಮನೆಯವರು, ಜಾಹಿರಾತು ಮತ್ತು ಸೌಂದರ್ಯತಜ್ಞರನ್ನು ಸಂಪರ್ಕಿಸುವ ಮುನ್ನ ನುರಿತ ವೃತ್ತಿಪರರ ಸಲಹೆ ಪಡೆದು ಸೌಂದರ್ಯ ವರ್ಧಕಗಳನ್ನು ಬಳಸಬೇಕು ಎನ್ನುತ್ತಾರೆ ಚರ್ಮರೋಗ ತಜ್ಞರು.
ಸ್ಚಿರಾಯ್ಡ್ ಗೆ ಸಂಬಂಧಪಟ್ಟಂತೆ 15ರಿಂದ 23 ವರ್ಷಗಳವರೆಗೆ ಮತ್ತು 35ರಿಂದ 45 ವರ್ಷಗಳವರೆಗಿನವರಿಗೆ ಚರ್ಮದಲ್ಲಿ ತೊಂದರೆ ಕಾಣಿಸಿಕೊಳ್ಳುವುದು ಹೆಚ್ಚು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಶನಿವಾರ ‘ವಾರದ ಕತೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಬಿಗ್ ಬಾಸ್ ಮನೆಯ ಮೊದಲನೇ ದಿನದ ಅನುಭವವನ್ನು ಕೇಳುತ್ತಿರುತ್ತಾರೆ. ಸುದೀಪ್, ಚಂದನ್ ಅವರನ್ನು ಕೇಳಿದಾಗ ಅವರು ಮಹಿಳಾ ಸ್ಪರ್ಧಿಗಳ ರಹಸ್ಯ ಬಿಚ್ಚಿಟ್ಟಿದ್ದಾರೆ. ಚಂದನ್ ಅವರ ಮಾತು ಕೇಳಿ ದೀಪಿಕಾ, ಪ್ರಿಯಾಂಕಾ ಹಾಗೂ ಭೂಮಿ ಮೊದಲು ಮುಜುಗರಕ್ಕೆ ಒಳಗಾದರು. ನಂತರ ದೀಪಿಕಾ ನನ್ನ ಮರ್ಯಾದೆ ಹೋಗುತ್ತಿದೆ ಎಂದು ತಮ್ಮ ಮುಖವನ್ನು ಮುಚ್ಚಿಕೊಂಡರು. ಬಿಗ್ ಬಾಸ್ ಮನೆಗೆ ಬಂದ ಮೊದಲನೇ ದಿನ ನಾನು ಮಹಿಳಾ ಸ್ಪರ್ಧಿಗಳನ್ನು ಮಾತನಾಡಿಸಿ ಮಲಗಿದ್ದೆ. ಮರುದಿನ…
ಪ್ರಧಾನಿ ನರೇಂದ್ರ ಮೋದಿಯವರು 2016ರಲ್ಲಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಕ್ಷೇಮಾಭಿವೃದ್ಧಿ ಕಾರ್ಯಕ್ರಮವನ್ನು ಲಾಂಚ್ ಮಾಡಿದ್ದಾರೆ. ಈ ಯೋಜನೆ ಮೂಲಕ ಐದು ಕೋಟಿ ಎಲ್ಪಿಜಿ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ.
ಬ್ರಹ್ಮಾವರ ತಾಲೂಕಿನೆಲ್ಲೆಡೆ ಕುಂಭ ದ್ರೋಣ ಮಳೆಯ ಅಬ್ಬರ ಜೋರಾಗಿದ್ದು, ಮಂಗಳವಾರ ಬೆಳಗ್ಗಿನಿಂದಲೇ ಸುರಿದ ಮಳೆಯಿಂದಾಗಿ ಹಲವೆಡೆಗಳಲ್ಲಿ ನೆರೆ ಆವರಿಸಿದೆ. ಕೆಲವೆಡೆ ಮನೆಯೊಳಗೆ ನೀರು ನುಗ್ಗಿದ್ದರೆ, ಅನೇಕ ಕಡೆಗಳಲ್ಲಿ ಗದ್ದೆ, ಅಡಿಕೆ, ತೆಂಗಿನ ತೋಟ ಸಹಿತ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ. ಬ್ರಹ್ಮಾವರ ಪರಿಸರದ ಮಟಪಾಡಿ, ನೀಲಾವರ, ನಂದನಕುದ್ರು, ರಾಮನಕುದ್ರು, ಬಲ್ಜಿ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು ಇದರಿಂದಾಗಿ ವಾಹನ ಸವಾರರು ಕೂಡ ಸಮಸ್ಯೆಯನ್ನು ಅನುಭವಿಸಿದರು. ಅನೇಕ ಕಡೆಗಳಲ್ಲಿ ಭತ್ತದ ಕೃಷಿ ಬೆಳೆದಿರುವ ಗದ್ದೆ ಜಲಾವೃತಗೊಂಡಿದ್ದರೆ, ಅಡಿಕೆ ತೋಟಗಳಲ್ಲಿ ನೀರು ನಿಂತಿದೆ….
ಜನ ಸೇವೆಗೆಂದು ತೆರೆಯುವ ಆಸ್ಪತ್ರೆಗಳು ಈಗ ತೀರಾ ವಿರಳ. ಯಾವುದಾದರು ಕಾಯಿಲೆ ಎಂದು ಖಾಸಗಿ ಆಸ್ಪತ್ರೆಗೆ ಸೇರಿದರೆ ರೋಗಿಯು, ರೋಗದಿಂದಲ್ಲ, ಆಸ್ಪತೆರ್ಗಳು ನೀಡುವ ಬಿಲ್ಲಿನಿಂದ ಸಾಯುತ್ತಾನೆ. ಇನ್ನು ಆಸ್ಪತ್ರೆ ಯಾವ ರೀತಿ ವ್ಯವಹಾರ ಮಾಡುತ್ತಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಸರ್ಕಾರಿ ಪ್ರಾಥಮಿಕ ಮತ್ತುಪ್ರೌಢಶಾಲಾ ಶಿಕ್ಷಕರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದಾರೆ. ಶಿಕ್ಷಕರಕಡ್ಡಾಯ ವರ್ಗಾವಣೆಯನ್ನು ತಡೆ ಹಿಡಿದಿರುವುದಾಗಿ ಸುರೇಶ್ ಕುಮಾರ್ ಹೇಳಿದ್ದು, ಇದರ ಬಗ್ಗೆ ಅಂತಿಮತೀರ್ಮಾನವನ್ನು ನಾಳೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದಾಗಿ ಒಂದು ಸ್ಥಳದಲ್ಲಿ ಮತ್ತೊಂದು ಸ್ಥಳಕ್ಕೆಇಷ್ಟವಿಲ್ಲದಿದ್ದರೂ ಹೋಗಬೇಕಾಗಿತ್ತು. ಸದ್ಯಕ್ಕೆ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದ್ದು, ಪ್ರಸ್ತುತಶಿಕ್ಷಕರು ನಿರಾಳರಾಗಿದ್ದಾರೆ. ಶಿಕ್ಷಕರು ಪರಸ್ಪರ ವರ್ಗಾವಣೆ ಸಹ ಮಾಡಿಕೊಳ್ಳಬಹುದಾಗಿತ್ತು, ಆದರೆ ಇದಕ್ಕೂಸದ್ಯ ತಡೆ ಬಿದ್ದಿದೆಯೋ ಅಥವಾ ಪರಸ್ಪರ ವರ್ಗಾವಣೆ ಚಾಲ್ತಿಯಲ್ಲಿದೆಯೋ ಮಾಹಿತಿಯನ್ನು…
ಕರ್ನಾಟಕ ಸರ್ಕಾರದ ಹೊಸ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆ ಆರಂಭವಾಗಿದ್ದು, ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಇದು ರ್ರಾಜ್ಯ ಸರ್ಕಾರದ ನೂತನ ಯೋಜನೆಯಾಗಿದ್ದು, ಬೆಂಗಳೂರು ನಗರದಲ್ಲಿ ಬಡ ಹಾಗೂ ಕೆಳ ಮಧ್ಯಮ ವರ್ಗ ದವರಿಗೆ ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಇಂದಿರಾ ಕ್ಯಾಂಟೀನ್’ ಎಂಬ ಹೆಸರಿನಲ್ಲಿ ಆರಂಭಿಸಿದೆ.