Uncategorized

ತುಂಬಾ ನಕ್ಕರೆ ಹೀಗೂ ಆಗುತ್ತೆ..! ಈ ಲೇಖನಿ ಓದಿ ಶಾಕ್ ಆಗ್ತೀರಾ…

240

ಯಾರನ್ನೇ ಆಗಲಿ ಅಳಿಸುವುದು ತುಂಬಾ ಸುಲಭ, ಆದರೆ ನಗಿಸುವುದು ಕಷ್ಟ.ಜಾಸ್ತಿ ನಕ್ಕರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆಯಸ್ಸು ಜಾಸ್ತಿಯಾಗುತ್ತೆ ಅಂತ ಹೇಳುತ್ತಾರೆ.ಅದು ನಿಜಾ ಕೂಡ.ಆದರೆ ಅದೇ ನಗುವಿನಿಂದ ಸಾವಾಗಬಹುದೆಂದು ಎಂದರೆ ನೀವು ನಂಬುತ್ತೀರಾ! ನಂಬಲ್ಲ ಆಲ್ವಾ ಹಾಗಾದ್ರೆ ಮುಂದೆ ಓದಿ…

ಹೌದು. ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಶಿಕ್ಷಕಿಯೊಬ್ಬರು ಜೋರಾಗಿ ನಗುತ್ತಾ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಚಾರ್ಲ್ಸ್ ಎ ಹುಸ್ಟನ್ ಮಿಡ್ಲೆ ಸ್ಕೂಲ್‍ನಲ್ಲಿ ಶಿಕ್ಷಕಿಯಾಗಿರುವ ಶಾರೋನ್ ರೆಗೋಲಿ ಸಿಫೆರ್ನೋ(50) ಸಾವನ್ನಪ್ಪಿದ ಶಿಕ್ಷಕಿ.

ಶಾರೋನ್ ಮೆಕ್ಸಿಕೋ ನಗರದ ಸ್ನೇಹಿತರ ಮನೆಗೆ ತನ್ನ ಮಗಳೊಂದಿಗೆ ಹೋಗಿದ್ದರು. ಈ ವೇಳೆ ಕಟ್ಟಡದ ಮೇಲೆ ನಿಂತು ಜೋರಾಗಿ ನಗುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪರಿಣಾಮ ದೇಹ ಮತ್ತು ಮೆದುಳಿಗೆ ಗಂಭೀರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವ ಉಂಟಾಗಿತ್ತು.

ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೇ ಶರೋನ್ ಕೊನೆಯುಸಿರೆಳೆದರು. ಸಾವಿಗೆ ಬರೀ ಮದ್ಯಪಾನ ಮಾಡಿರುವುದು ಕಾರಣವಲ್ಲ. ಬಿಲ್ಡಿಂಗ್‍ನ ಅಂಚಿಗೆ ಹೋದಾಗ ಆಯತಪ್ಪಿ ಬಿದ್ದಳು.

ಶಾರೋನಳನ್ನು ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬದಲ್ಲಿ ದುಃಖ ಆವರಿಸಿದೆ ಎಂದು ಆಕೆಯ ಸಹೋದರ ಡೇವಿಡ್ ರೆಗೋಲಿ ದುಃಖ ವ್ಯಕ್ತಪಡಿಸಿದರು.

ತಮ್ಮ ನೆಚ್ಚಿನ ಶಿಕ್ಷಕಿಯ ಸಾವಿನ ವಿಷಯ ತಿಳಿದ ಮಕ್ಕಳು ರಜೆಯಿದ್ದರೂ ಸಹ ಶಾಲೆಗೆ ಬಂದು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥನೆ ಮಾಡಿದರು. ಶಾರೋನ್ ಅವರು ಪತಿ ರೆಗೋಲಿ ಸಿಫೆರ್ನೋ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಯೋಧ್ಯೆ ತೀರ್ಪಿಗೆ 27 ವರ್ಷ ಉಪವಾಸ ಮಾಡಿ ಕಾದ ಆಧುನಿಕ ಶಬರಿ.

    ರಾಮಾಯಣದಲ್ಲಿ ಉಲ್ಲೇಖವಾಗಿರುವಂತೆ ರಾಮನ ಆಗಮನಕ್ಕಾಗಿ ಕಾದಿದ್ದ ಶಬರಿಯ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಮಧ್ಯ ಪ್ರದೇಶದಲ್ಲೊಬ್ಬರು ಆಧುನಿಕ ಶಬರಿ ಇದ್ದಾರೆ. ಅವರು ರಾಮನ ಬದಲಿಗೆ ಅಯೋಧ್ಯೆ ಜಮೀನು ವಿವಾದ ಪರಿಹಾರವಾಗಿ ತೀರ್ಪು ಹೊರಬರಲಿ ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ 27 ವರ್ಷದಿಂದ ಅನ್ನ ಬಿಟ್ಟು ಉಪವಾಸ ಮಾಡಿದ್ದಾರೆ. ಕಲಿಯುಗದ ಈ ಶಬರಿ ಉರ್ಮಿಳಾ ಚತುರ್ವೇದಿ. ಮಧ್ಯಪ್ರದೇಶದ ಜಬಲಪುರ ನಿವಾಸಿಯಾಗಿರು ಉರ್ಮಿಳಾ 1992ರಿಂದ ಕೇವಲ ಹಣ್ಣು ಮತ್ತು ಹಾಲು ಕುಡಿದು ಊರ್ಮಿಳಾ ಬದುಕಿದ್ದಾರೆ. ಶಬರಿ ರಾಮನಿಗಾಗಿ ಕಾದಂತೆ ಶಿಕ್ಷಕಿ ಅಯೋಧ್ಯೆ ತೀರ್ಪಿಗಾಗಿ…

  • ಆರೋಗ್ಯ, ಉಪಯುಕ್ತ ಮಾಹಿತಿ

    ಹಾರ್ಟ್ ಅಟ್ಯಾಕ್ ಆದ 5 ನಿಮಿಷದ ಒಳಗಡೆ ಈ ಕೆಲಸ ಮಾಡಿದ್ರೆ ಆ ವ್ಯಕ್ತಿ ಬದುಕುವ ಸಾಧ್ಯತೆ ಹೆಚ್ಚು…

    ಮನುಧ್ಯನಿಗೆ ಆರೋಗ್ಯವೇ ಮಹಾ ಭಾಗ್ಯ ಎಂದು ಹೇಳಲಾಗುತ್ತೆ. ಆದ್ರೆ ಅಂತಹ ಆರೋಗ್ಯದ ಬಗ್ಗೆ ನಾವು ನಿರ್ಲಕ್ಷ್ಯ ಮಾಡಲೇಬಾರದು.ಅದರಲ್ಲೂ ಕೆಲವೊಂದು ಕಾಯಿಲೆಗಳ ಬಗ್ಗೆ ಎಚ್ಚರಿಕೆ ಇರಲೇಬೇಕು.ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರಕೆ ಇಂದ ಇರಲೇ ಬೇಕು. ಆದರೆ ಅನೇಕರಿಗೆ ಯಾವುದೇ ಮನುಷ್ಯನಿಗೆ ಹಾರ್ಟ್ ಅಟ್ಯಾಕ್ ಆದ ಕೂಡಲೇ ಪ್ರಥಮ ಚಿಕಿತ್ಸೆಯಾಗಿ ಏನು ಮಾಡಬೇಕು ಎಂದು ಗೊತ್ತಿರುವುದಿಲ್ಲ. ಗೊತ್ತಿದ್ದರೂ ಗಾಬರಿಯಿಂದ ಮಾಡಲು ಹೋಗುವುದಿಲ್ಲ.ಆದರೆ ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ ಸಾಧ್ಯತೆ ಹೆಚ್ಚಿರುತ್ತದೆ. *ಹಾರ್ಟ್…

  • ಸುದ್ದಿ

    ಪುಲ್ವಾಮಾದಲ್ಲಿ ಎನ್‍ಕೌಂಟರ್- ಇಬ್ಬರು ಉಗ್ರರನ್ನು ವಡೆದುರುಳಿಸಿದ ನಮ್ಮ ಭದ್ರತಾ ಪಡೆ!

    ಜಮ್ಮು-ಕಾಶ್ಮೀರದ ಪ್ರದೇಶಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಉಗ್ರರ ಮೇಲೆ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪುರದ ಪಂಜ್ಗಾಮ್ ಗ್ರಾಮದಲ್ಲಿ ನಡೆದ ಎನ್‍ಕೌಂಟರ್ ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಅವಂತಿಪುರದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆ ನೆಲಸಮ ಮಾಡಿದೆ. ಸಿಆರ್​ಪಿಎಫ್​ ನ 130ನೇ ಬೆಟಾಲಿನ್‍ನ 55 ರಾಷ್ಟ್ರೀಯ ರೈಫಲ್(ಆರ್‍ಆರ್) ಹಾಗೂ ವಿಶೇಷ ಕಾರ್ಯಾಚರಣೆ ಗುಂಪಿನ(ಎಸ್‍ಓಜಿ) ಜಂಟಿ…

  • ಸುದ್ದಿ

    ಮಂಗಳಮುಖಿಯರು ನಿಮ್ಮ ಮನೆ ಬಾಗಿಲಿಗೆ ಬಂದರೆ ಯಾವತ್ತೂ ಯಾವುದೇ ಕಾರಣಕ್ಕೂ ಆ ವಸ್ತುಗಳನ್ನು ದಾನ ಮಾಡಬೇಡಿ,ಯಾಕೆ ಗೊತ್ತಾ?

    ಮಂಗಳಮುಖಿಯರು ಕೂಡ ನಮ್ಮ ಸಮಾಜದ ಒಂದು ಭಾಗವಾಗಿದ್ದಾರೆ, ಆದರೆ ಎಷ್ಟೋ ಮಂದಿ ಇಂದು ಅವರಿಗೆ ಸಲ್ಲಬೇಕಾದ ಸ್ಥಾನಮಾನ ನೀಡಲು ಒಪ್ಪಿಕೊಳ್ಳುವುದಿಲ್ಲ ಮತ್ತು ಅವರನ್ನು ಕೀಳಾಗಿ ಅಥವಾ ಕೆಟ್ಟ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿರಲಿ ಹಿಂದೊಂದುದಿನ ಅಂದರೆ ಪುರಾಣ ಕಾಲದಲ್ಲಿಯೂ ಕೂಡ ಮಂಗಳ ಮುಖಿಯರಿಗೆ ಉತ್ತಮ ಸ್ಥಾನ ನೀಡಲಾಗಿತ್ತು,ಶಾಸ್ತ್ರಗಳ ಪಕಾರ ಮಂಗಳಮುಖಿಯರಿಗೆ ದಾನಮಾಡುವುದರಿಂದ ಭಗವಾನ್ ವಿಷ್ಣುವಿನ ಕ್ರಪೆಸಿಗುತ್ತದೆ ಎಂದು ಹೇಳಲಾಗುತ್ತದೆ ಮತ್ತುವಿಷ್ಣುವಿನ ಆಶೀರ್ವಾದ ಮತ್ತು ಗ್ರಹಗಳ ಸಂಚಾರದಲ್ಲಿಸಿಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲದೆ ಇವರಿಗೆ ಯಾವವಸ್ತುಗಳನ್ನು…

  • ಸುದ್ದಿ

    ರೈಲಿನಲ್ಲಿ ಮೃತ ಆತ್ಮಗಳಿಗೂ ಆಗುತ್ತದೆ ಟಿಕೆಟ್ ಬುಕ್ಕಿಂಗ್ …!

    ಸದ್ಯ ಪಿತೃಪಕ್ಷ ನಡೆಯುತ್ತಿದೆ. ಹಿಂದೂ ಧರ್ಮದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಪೂರ್ವಜರ ಆತ್ಮಕ್ಕೆ ಶಾಂತಿ ನೀಡಲು ಪಿತೃ ಪಕ್ಷದಲ್ಲಿ ಶ್ರಾದ್ಧ ಮಾಡಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಜನರು ಗಯಾಕ್ಕೆ ಬಂದು ಪಿಂಡದಾನ ಮಾಡ್ತಾರೆ. ಒಡಿಸಾದ ಕಠ್ಮಂಡುವಿನಿಂದ ಬಂದ ಪಿಂಡದಾನಿಗಳ ತಂಡವೊಂದು ಗಮನ ಸೆಳೆದಿದೆ. ಅವ್ರು ರೈಲಿನಲ್ಲಿ ಪೂರ್ವಜರಿಗೂ ಟಿಕೆಟ್ ಬುಕ್ ಮಾಡಿದ್ದಾರೆ. ಪೂರ್ವಜರ ಬಗ್ಗೆ ಇವರಿಗೆ ನಂಬಿಕೆಯಿಂದೆಯಂತೆ. ಪಿಂಡದಾನಕ್ಕೆ ಬರುವ ಏಳು ದಿನಗಳ ಮೊದಲು ಭಗವದ್ಗೀತೆ ಪಠಣ ಮಾಡ್ತಾರಂತೆ. ನಂತ್ರ ಪೂರ್ವಜರ ವಸ್ತುಗಳನ್ನು ಕಟ್ಟಿ ಪಿತೃದಂಡ ಸಿದ್ಧಪಡಿಸುತ್ತಾರಂತೆ….