Uncategorized, ರಾಜಕೀಯ

ತಾಜ್‌ ಮಹಲ್‌ ನಿರ್ಮಿಸಿದವರು ದ್ರೋಹಿಗಳು ಎಂದು ಹೇಳಿದ ಶಾಸಕ..!ತಿಳಿಯಲು ಈ ಲೇಖನ ಓದಿ..

279

ಅತ್ಯುನ್ನತ ಪ್ರೇಮದ ಐತಿಹಾಸಿಕ ಸ್ಮಾರಕವಾಗಿರುವ ಆಗ್ರಾದ ವಿಶ್ವ ಪ್ರಸಿದ್ಧ ತಾಜ್ ಮಹಲ್ ಈಚಿನ ದಿನಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಸುದ್ದಿಗಳಿಗಾಗಿ ಮುಖ್ಯ ಶೀರ್ಷಿಕೆಯಲ್ಲಿ ರಾರಾಜಿಸುವಂತಾಗಿದೆ.ಉತ್ತರ ಪ್ರದೇಶ ಸರಕಾರ ಈಚೆಗಷ್ಟೇ ಬಿಡುಗಡೆ ಮಾಡಿದ್ದ ಪ್ರವಾಸೋದ್ಯಮ ಪುಸ್ತಿಕೆಯಲ್ಲಿ ತಾಜ್ ಮಹಲ್ ಉಲ್ಲೇಖವನ್ನು ಕೈಬಿಡಲಾಗಿತ್ತು. ತತ್ಪರಿಣಾಮವಾಗಿ ಭಾರೀ ಟೀಕೆ, ಟಿಪ್ಪಣಿ, ವಿವಾದ ಸೃಷ್ಟಿಯಾಗಿತ್ತು.

ಅದಾಗಿ ಇದೀಗ ccc ಅವರು ‘ಐತಿಹಾಸಿಕ ತಾಜ್ಮಹಲ್ ಕಟ್ಟಡವನ್ನು ನಿರ್ಮಿಸಿದವರು ದ್ರೋಹಿಗಳು’ ಎಂದು ಹೇಳುವ ಮೂಲಕ ಇನ್ನೊಂದು ವಿವಾದವನ್ನು ಸೃಷ್ಟಿಸಿದ್ದಾರೆ.

ಸರ್ಧಾನಾ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರಾಗಿರುವ ಸೋಮ್ ಅವರು, “ಐತಿಹಾಸಿಕ ತಾಜ್ ಮಹಲ್ ಕಟ್ಟಡವನ್ನು ಕಟ್ಟಿದವರು ದ್ರೋಹಿಗಳು; ಆದುದರಿಂದ ಅದಕ್ಕೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನ ಇಲ್ಲ’ ಎಂದು ಗುಡುಗಿದ್ದಾರೆ.

“ತಾಜ್ಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ; ಅದನ್ನು ಕಟ್ಟಿದ್ದ ಶಹಜಹಾನ್ ತನ್ನ ತಂದೆಯನ್ನೇ ಜೈಲಿಗೆ ಹಾಕಿದ್ದ’ ಎಂದು ಸೋಮ್ ಹೇಳಿದ್ದಾರೆ.

ಮೀರತ್ ಜಿಲ್ಲೆಯ ಸಿಸೋಲಿ ಗ್ರಾಮದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಜನರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಸೋಮ್ ತಾಜ್ ಮಹಲ್ ಕುರಿತಾಗಿ ತನ್ನ ಅಭಿಪ್ರಾಯಗಳನ್ನು ನಿಷ್ಠುರ ಮಾತುಗಳಲ್ಲಿ ಹೇಳಿದರು.

ಇದೇ ವೇಳೆ ಸೋಮ್, “ಮೊಹಮ್ಮದ ಅಲಿ ಜೌಹರ್ ವಿಶ್ವವಿದ್ಯಾಲಯವು ಭಯೋತ್ಪಾಕರ ಕಾರಸ್ಥಾನವಾಗಿದೆ’ ಎಂದು ಆರೋಪಿಸಿದರು.

ಸೋಮ್ ಅವರು ಈ ಹಿಂದೆಯೂ ಕೋಮು ಸಂಘರ್ಷಕ್ಕೆ ಕಾರಣವಾಗುವ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲ ಉರಿನಾಲಗೆಯ ಬಿಜೆಪಿ ಶಾಸಕ ಎಂದೇ ಪರಿಚಿತರಾಗಿದ್ದರು.

ತಾಜ್ ಮಹಲ್ ಮತ್ತು ಮೊಹಮ್ಮದ್ ಅಲಿ ಜೌಹರ್ ವಿವಿ ಕುರಿತಾದ ಸೋಮ್ ಅವರ ವಿವಾದಾತ್ಮಕ ಹೇಳಿಕೆಯಿಂದ ಬಿಜೆಪಿ ದೂರ ಸರಿದಿದೆ.

“ಸೋಮ್ ಹೇಳಿರುವುದೆಲ್ಲ ಅವರ ವೈಯಕ್ತಿಕ ನೆಲೆಯಲ್ಲಿ; ಅದು ಬಿಜೆಪಿಯ ಅಭಿಪ್ರಾಯವಲ್ಲ’ ಎಂದು ಬಿಜೆಪಿ ವಕ್ತಾರ ಅನಿಲ್ ಸಿಂಗ್, ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ನೋಡಿ ಪ್ರತಿಕ್ರಿಯಿಸಿದ್ದಾರೆ.

ಹಾಗಿದ್ದರೂ ಈಚೆಗೆ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, “ಐತಿಹಾಸಿಕ ತಾಜ್ ಮಹಲ್ ಕಟ್ಟಡಕ್ಕೂ ಭಾರತೀಯ ಸಂಸ್ಕತಿ ಮತ್ತು ಪರಂಪರೆಗೂ ಯಾವುದೇ ಸಂಬಂಧ ಇಲ್ಲ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ‘ಪೊಲೀಯೋ ಡ್ರಾಪ್ಸ್’ ನೀಡಲಾದ ಆ ಹುಡುಗನಿಗೆ ಆದ ದಾರುಣ ಘಟನೆ ಏನು..? ತಿಳಿಯಲು ಇದನ್ನು ಓದಿ ..

    ಲೂಧಿಯಾನದ ಅಬ್ದುಲ್ಲಾಪುರ ಬಸ್ತಿ ಪ್ರದೇಶದಲ್ಲಿ ಮಕ್ಕಳಿಗೆ ಬಲವಂತವಾಗಿ ಪೊಲೀಯೋ ಡ್ರಾಪ್ಸ್ ನೀಡಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಒಂದೂವರೆ ವರ್ಷ ಪ್ರಾಯದ ಬಾಲಕ, ಪೊಲೀಯೋ ಡ್ರಾಪ್ಸ್ ನೀಡಲಾದ ಅರ್ಧ ತಾಸಿನೊಳಗೆ ಮೃತಪಟ್ಟ ದಾರುಣ ಘಟನೆ ನಡೆದಿದೆ.

  • ಸುದ್ದಿ

    36 ಗಂಟೆಯಲ್ಲಿ ದುಬೈ ತೋರಿಸುವ ಹೊಸ ಸ್ಟಾಪ್‍ಓವರ್ ಪಾಸ್…!

    ಬೆಂಗಳೂರು, : ದುಬೈನ ಪ್ರವಾಸೋದ್ಯಮಮತ್ತು ವಾಣಿಜ್ಯ ಮಾರುಕಟ್ಟೆ (ದುಬೈ ಟೂರಿಸಂ) ತನ್ನ ದೇಶದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವನಿಟ್ಟಿನಲ್ಲಿ ಹೊಸ ಯೋಜನೆಯಾದ ದುಬೈ ಸ್ಟಾಪ್‍ಓವರ್ ಪಾಸ್ ಅನ್ನು ಪ್ರಕಟಿಸಿದೆ. ಇದು ವಿಶೇಷವಾಗಿ ದುಬೈನಲ್ಲಿಕಡಿಮೆ ಅವಧಿವರೆಗೆ ಭೇಟಿ ನೀಡಲಿರುವ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಯೋಜನೆಯಾಗಿದೆ.ಅಲ್ಲಿನ ಆಕರ್ಷಕ ತಾಣಗಳನ್ನು ಕಡಿಮೆ ದರದಲ್ಲಿ ವೀಕ್ಷಿಸಿ ಕಣ್ತುಂಬಿಕೊಳ್ಳುವ ಯೋಜನೆ ಇದು. ಅರೇಬಿಯನ್ಟ್ರಾವೆಲ್ ಮಾರ್ಕೆಟ್ 2019 (ಎಟಿಎಂ)ನಲ್ಲಿ ಈ ಹೊಸ ಯೋಜನೆಯನ್ನು ಪ್ರಕಟಿಸಲಾಗಿದೆ. ದುಬೈ ಸ್ಟಾಪ್‍ಓವರ್ ಪಾಸ್ ಪ್ರವಾಸಿಗರಿಗೆ ಸಮಯ ಮತ್ತು ಹಣವನ್ನು ಉಳಿತಾಯ ಮಾಡಲಿದೆ.ಈ ಮೂಲಕ…

  • ಜ್ಯೋತಿಷ್ಯ

    ದಿನ ಭವಿಷ್ಯ ಗುರುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ ಇಟ್ಟಗುರಿ ಬಿಟ್ಟಬಾಣ ನೇರವಾಗಿ ಇರಬೇಕು. ಆದರೆ ಗ್ರಹಗತಿಗಳು ನಿಮಗೆ ಸ್ವಲ್ಪ ಆಲಸ್ಯವನ್ನು ತುಂಬುವರು. ಹಾಗಾಗಿ ನಿರ್ದಿಷ್ಟ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಕುಲದೇವತಾ ಸ್ಮರಣೆ ಮಾಡಿ.  .ನಿಮ್ಮ ಸಮಸ್ಯೆ.ಏನೇ .ಇರಲಿ…

  • ಸುದ್ದಿ

    ಮೋದಿ ಅಧಿಕಾರಕ್ಕೆ ಬಂದ ನಂತರ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ…!

    ನವದೆಹಲಿ, ಮೇ 02: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳ ಏರಿಕೆ ಮಾಡದೆ ನಷ್ಟ ಅನುಭವಿಸಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಈಗ ಹೊಸ ಸರ್ಕಾರ ಸ್ಥಾಪನೆಯಾದ ಬಳಿಕ, ಹಂತ ಹಂತವಾಗಿ ಬೆಲೆ ಏರಿಕೆ ಮಾಡಲು ಆರಂಭಿಸಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದುವರೆದಿದೆ. ಈಗ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ…

  • ಜ್ಯೋತಿಷ್ಯ

    ದಿನ‌ ಭವಿಷ್ಯ ಸೋಮವಾರ, ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…

    ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಅವಸರದ ನಿರ್ಣಯ ಕೈಗೊಳ್ಳದಿರಿ. ಅನೇಕ ರೀತಿಯ ಅಸಂಗತ ಪರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಆದಷ್ಟು ಆಂಜನೇಯ ಸ್ವಾಮಿ ಸ್ತೋತ್ರ ಪಠಿಸುವುದು ಒಳ್ಳೆಯದು. ಬಡವರಿಗೆ ಆಹಾರ ನೀಡಿ.ನಿಮ್ಮ ಸಮಸ್ಯೆ.ಏನೇ .ಇರಲಿ…