ವಿಸ್ಮಯ ಜಗತ್ತು

ತಲೆ ಇಲ್ಲದೆ ಜೀವಂತವಾಗಿ ಒಂದು ವಾರದಿಂದ ಓಡಾಡುತ್ತಿರುವ ಈ ಕೋಳಿ ವೈದ್ಯ ಲೋಕಕ್ಕೆ ಸವಾಲಾಗಿದೆ.!ತಿಳಿಯಲು ಈ ಲೇಖನ ಓದಿ…

778

ಒಂದು ಕೋಳಿ ತಲೆ ತೆಗೆದ ಮೇಲೆ ಎಷ್ಟು ಕಾಲ ಬದುಕಬಹುದು..? ಈ ಪ್ರಶ್ನೆ ನಿಮ್ಮನ್ನು ಕೇಳಿದ್ರೆ, ನೀವು ಹೇಳೋದು ಒಂದೇ ನಿನ್ನಷ್ಟು ಮೂರ್ಖ ಬೇರೆ ಯಾರು ಇಲ್ಲ ಅಂತ.ನೀವು ಹಾಗೆ ಅನ್ನೋದ್ರಲ್ಲಿ ಏನೂ ಅಚ್ಚರಿಯಿಲ್ಲ ಬಿಡಿ. ಯಾಕಂದ್ರೆ ಕೋಳಿ ತಲೆ ತೆಗೆದ ಮೇಲೆ ಕೋಳಿ ಬದುಕೋಕೆ ಹೇಗೆ ಸಾಧ್ಯ ಅಲ್ವ.

ಆದ್ರೆ, ನೀವೂ ಹಾಗೆ ಅನ್ಕೊಂಡಿದ್ರೆ ಅದು ಸುಳ್ಳು.ಯಾಕಂದ್ರೆ ಇಲ್ಲಿ ಕೋಳಿ ಒಂದರ ಬದುಕಿಗಾಗಿ ನಡೀತಿರುವ ಹೋರಾಟವೋ ಅಥವಾ ಪವಾಡವೋ ಗೊತ್ತಿಲ್ಲ, ತಲೆ ತೆಗೆದ ಮೇಲೇನೂ ಒಂದು ವಾರದಿಂದ ಬದುಕುತ್ತಿದೆ.

ಹೌದು, ತಲೆ ಇಲ್ಲದ ಕೋಳಿ ಒಂದು ವಾರದಿಂದ ಓಡಾಡುತ್ತಾ ಎಲ್ಲರ ಗಮನ ಸೆಳೆಯುತ್ತಿದೆ.ಥೈಲಾಂಡ್’ನ ರಚ್ಚಾರಿ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ..

ಈ ಕೋಳಿ ತಲೆ ಕಳೆದುಕೊಂಡು ಸುಮಾರು ಒಂದು ವಾರ ಕಳೆದಿದ್ದರೂ ಕೂಡ  ಜೀವಂತವಾಗಿದೆ. ಈ ಬಗ್ಗೆ ಇಂಟರ್ನೆಟ್’ನಲ್ಲಿ ಕೋಳಿಯ ಫೊಟೊ ಸಾಕಷ್ಟು ವೈರಲ್ ಆಗುತ್ತಿದೆ. ಇದು ವೈದ್ಯ  ಲೋಕವನ್ನೇ ತಲೆಕೆಳಗೆ ಮಾಡುವಂತೆ ಮಾಡಿದೆ.

ತಲೆ ಪ್ರತಿ ಜೀವಿಗೂ ಪ್ರಧಾನ ಅಂಗ. ಶರೀರಕ್ಕೆ ಆಧಾರವಾಗಿರುವ ದೇಹವೊಂದು ಇಲ್ಲದೇ ಕೋಳಿ ಬದುಕುತ್ತಿದೆ ಅಂದರೆ ಅದು ಪವಾಡವೇ ಸರಿ. ಕೋಳಿಯನ್ನು ಮಾಲಿಕರಿಂದ ದತ್ತು ಪಡೆದಿರುವ ವೈದ್ಯರು ಕೋಳಿಯ ಕುತ್ತಿಗೆಗೆ ಆಗಿರುವ ಗಾಯ ವಾಸಿಯಾಗಲು ಔಷಧವನ್ನು ಕೊಡಿಸುತ್ತಿದ್ದಾರೆ.. ಜೊತೆಗೆ ಕುತ್ತಿಗೆಯಲ್ಲಿರುವ ನಾಳಗಳ ಮೂಲಕ ಆಹಾರವನ್ನು ಕೊಡುತ್ತಿದ್ದಾರೆ..

 

ಆ ಕೋಳಿ ಬದುಕುವ ಕೊನೆ ದಿನದವರೆಗೂ ಪೋಷಿಸುವುದಾಗಿ ವೈದ್ಯರು ತಿಳಿಸಿದ್ದಾರೆ.ತಲೆ ಹೇಗೆ ಕತ್ತರಿಸಿ ಹೋಯಿತು ಎಂದು ತಿಳಿದು ಬಂದಿಲ್ಲ.. ಸ್ಥಳಿಯರು ಹೇಳುವ ಪ್ರಕಾರ ಯಾವುದೋ ಪ್ರಾಣಿ ಕಚ್ಚಿ ಕತ್ತರಿಸಿರಬಹುದು ಎನ್ನಲಾಗಿದೆ..

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ