ಸುದ್ದಿ

ತನ್ನ ಸ್ವಂತ ಮನೆಯವರೇ ‘ಮತ’ ಹಾಕಿಲ್ಲವೆಂದು ಕಣ್ಣೀರಿಟ್ಟ ಅಭ್ಯರ್ಥಿ…!

689

ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅಲೆಯ ಎದುರು ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೆಲ ರಾಜ್ಯಗಳಲ್ಲಿ ಖಾತೆಯನ್ನೇ ತೆರೆಯಲು ವಿಫಲವಾಗಿದೆ.

ಇದರ ಮಧ್ಯೆ ಬಹು ನಿರೀಕ್ಷೆಯಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇವಲ ಐದು ಮತಗಳನ್ನು ಪಡೆದಿದ್ದಾರೆ. ಆ ಬಳಿಕ ಎಲ್ಲರ ಮನ ಕರಗುವಂತೆ ಅವರು ಕಣ್ಣೀರಿಟ್ಟಿದ್ದು, ಇದರ ನೈಜ ಕಾರಣ ತಿಳಿದ ಸಾರ್ವಜನಿಕರು ದಂಗಾಗಿದ್ದಾರೆ.

ಪಂಜಾಬ್ ನ ಜಲಂಧರ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ಈ ರೀತಿ ಕಣ್ಣೀರಿಟ್ಟಿದ್ದು, ಅವರು ಐದು ಮತ ಗಳಿಸಿದ್ದಕ್ಕಿಂತ ಹೆಚ್ಚಾಗಿ ತಮ್ಮ ಮನೆಯಲ್ಲಿ ಒಂಬತ್ತು ಮಂದಿ ಮತದಾರರಿದ್ದು, ಅವರೂ ಕೂಡ ಮತ ಹಾಕಿಲ್ಲವೆಂಬುದು ಈ ಅಭ್ಯರ್ಥಿಯ ದುಃಖಕ್ಕೆ ಕಾರಣವಾಗಿದೆ. ಇದರ ಜೊತೆಗೆ ಅವರು ವಿದ್ಯುನ್ಮಾನ ಮತಯಂತ್ರಗಳ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ