ಸ್ಪೂರ್ತಿ

ತನ್ನ ತಂದೆಯ ಜೀವ ಉಳಿಸಲು ತನ್ನ ಲೀವರ್ ಅನ್ನೇ ದಾನ ಮಾಡಿದ 19ವರ್ಷದ ಮಗಳು..!

192

19 ವರ್ಷದ ಚಿಕ್ಕ ವಯಸ್ಸಿನ ಮಗಳೊಬ್ಬಳು ತಂದೆಯ ಜೀವ ಉಳಿಸಲು ತನ್ನ ಲಿವರ್ ದಾನ ಮಾಡಿ ಆದರ್ಶ ಮಗಳೆನಿಸಿಕೊಂಡಿದ್ದಾಳೆ.

ರಾಖಿ ದತ್ತ ತಂದೆಗಾಗಿ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಹಾಗೆ ಉಳಿದುಕೊಳ್ಳುತ್ತದೆ, ತನ್ನ ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾತ್ತದೆ ಎನ್ನುವುದನ್ನೂ ಲೆಕ್ಕಿಸದೇ ಈ ಯುವತಿ ತನ್ನ ತಂದೆಯ ಜೀವ ಉಳಿಸಲು ತನ್ನ 65% ಲಿವರ್‍ನನ್ನು ದಾನ ಮಾಡಿ, ತಂದೆಗೆ ಪುನರ್ಜನ್ಮ ನೀಡಿದ್ದಾಳೆ.

ಈ ಬಗ್ಗೆ ವಾಣಿಜ್ಯೋದ್ಯಮಿ ಹರ್ಷ ಗೋಯೆಂಕಾ ಅವರು ಯುವತಿ ತಂದೆ ಮೇಲಿಟ್ಟಿರುವ ಪ್ರೀತಿಗೆ ಮನಸೋತಿದ್ದು, ಟ್ವೀಟ್ ಮಾಡಿ ಯುವತಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

೧೯ ವರ್ಷದ ರಾಖಿ ದತ್ತ ಲಿವರ್‍ನ ಕಾಯಿಲೆಯಿಂದ ಬಳಲುತ್ತಿದ್ದ 65 ವರ್ಷದ ತಂದೆಗೆ ತನ್ನ ಲಿವರ್ ದಾನ ಮಾಡಿದ್ದಾಳೆ. ದೇಹದ ಮೇಲೆ ಲಿವರ್ ಶಸ್ತ್ರಚಿಕಿತ್ಸೆಯ ಕಲೆ ಉಳಿದುಕೊಳ್ಳುತ್ತದೆ, ಮುಂದಿನ ಜೀವನದಲ್ಲಿ ಇದರಿಂದ ತೊಂದರೆಯಾಗಬಹುದು ಎನ್ನುವುದನ್ನೂ ಯೋಚಿಸದೇ ತಂದೆಯ ಜೀವ ಉಳಿಸಿದ್ದಾಳೆ. ಹೆಣ್ಣು ಮಕ್ಕಳಿಗೆ ತಂದೆ ಎಂದರೆ ವಿಶೇಷ ಪ್ರೀತಿ ಇರುತ್ತೆ. ಹೆಣ್ಣು ಮಕ್ಕಳು ಎಂದರೆ ಮೂಗು ಮುರಿಯುವರಿಗೆ ಇದೊಂದು ಉತ್ತಮ ಉದಾಹರಣೆ ಎಂದು ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

ಸದ್ಯ ಈ ಟ್ವೀಟ್ ಸಖತ್ ವೈರಲ್ ಆಗಿದ್ದು, ಈ ಟ್ವೀಟ್ ಅನ್ನು 22 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೇ 5 ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ